ತುಳುವಿಗೆ ಎರಡನೇ ರಾಜ್ಯ ಭಾಷೆ ಮಾನ್ಯತೆ; ಮಂದಿರ ಮಸೀದಿಗಳಿಗೆ ಅನುದಾನ| ದ.ಕ ಜಿಲ್ಲೆಯ ಮರುನಾಮಕರಣಕ್ಕೆ ಅಭಿಪ್ರಾಯ ಸಂಗ್ರಹ| ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ತೀರ್ಮಾನ

ಸಮಗ್ರ ನ್ಯೂಸ್: ರಾಜ್ಯದ ಹೆಚ್ಚುವರಿ ಭಾಷೆಯಾಗಿ ತುಳುವಿಗೆ ಸ್ಥಾನಮಾನ ನೀಡಲು ಸಚಿವ ಸಂಪುಟ ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಜತೆಗೆ ಶೀಘ್ರದಲ್ಲಿಯೇ ದಕ್ಷಿಣ ಕನ್ನಡವನ್ನು ಮಂಗಳೂರು ಜಿಲ್ಲೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

. Ad Widget . Ad Widget

ತುಳು ಭಾಷೆ ಎರಡು ಸಾವಿರ ವರ್ಷಗಳಿಗೂ ಹಳೆಯದು. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ತುಳು ಭಾಷೆಯ ಸರ್ವತೋಮುಖ ಅಭಿವೃದ್ಧಿಗೆ ಸಚಿವ ಸಂಪುಟ ಸಭೆಯು ಆಡಳಿತದಲ್ಲಿ ಕನ್ನಡ ಭಾಷೆಯ ಜೊತೆಗೆ ತುಳು ಭಾಷೆಯನ್ನು ಸರ್ಕಾರಿ ಉದ್ದೇಶಗಳಿಗಾಗಿ ಕರ್ನಾಟಕ ರಾಜ್ಯದ ಹೆಚ್ಚುವರಿ ಆಡಳಿತ ಭಾಷೆ ಎಂದು ಘೋಷಣೆ ಮಾಡಲು ಅನುಮೋದನೆ ನೀಡಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯವಾಗುವಂತೆ ಈ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಜಿಲ್ಲಾಡಳಿತವನ್ನು ಅನುಷ್ಠಾನ ಕೇಂದ್ರವಾಗಿ ಮಾಡಲಾಗುವುದು. ಅನುವಾದ, ತರಬೇತಿ ಮತ್ತು ಭಾಷಾ ಬಳಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಪ್ರತಿ ವರ್ಷ 82 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ.

. Ad Widget . . Ad Widget . Ad Widget

ಇದರ ಜತೆಗೆ ಕರಾವಳಿ ಭಾಗದ ಸಾಂಸ್ಕೃತಿಕ ಪರಂಪರೆ, ಮೂಲಸೌಕರ್ಯ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ, ಕೈಗಾರಿಕಾ ಪ್ರಗತಿ, ಮೀನುಗಾರಿಕೆ ಉತ್ತೇಜನ ಹಾಗೂ ಜಾನಪದ ಕ್ರೀಡೆ ಕಂಬಳಕ್ಕೆ ವಿಶೇಷ ಅನುದಾನ ಘೋಷಣೆ ಮಾಡಲಾಗಿದೆ.

ಪುತ್ತೂರು ತಾಲೂಕಿನಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ

2025-26 ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಪುತ್ತೂರು ತಾಲ್ಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ಬಳಿ ಗುರುತಿಸಿರುವ ನಿವೇಶನದಲ್ಲಿ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ಹಾಸ್ಟೆಲ್ ಮತ್ತಿತರ ಮೂಲಸೌಲಭ್ಯಗಳನ್ನು 549.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲವಾಗಲಿದೆ.
ಕಂದಾಯ ಇಲಾಖೆ: ಧಾರ್ಮಿಕ ಕ್ಷೇತ್ರಗಳು ಮತ್ತು ಸಂಸ್ಥೆಗಳಿಗೆ ಅನುದಾನ

ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಪ್ರಮುಖ ದೇವಾಲಯಗಳು ಮತ್ತು ಮಠಗಳ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 12 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.

ಇದರ ಜತೆಗೆ ಕರಾವಳಿ ಭಾಗದ ಸಾಂಸ್ಕೃತಿಕ ಪರಂಪರೆ, ಮೂಲಸೌಕರ್ಯ ಮತ್ತು ಆರ್ಥಿಕ ಪ್ರಗತಿಗೆ ವೇಗ ನೀಡುವ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ, ಕೈಗಾರಿಕಾ ಪ್ರಗತಿ, ಮೀನುಗಾರಿಕೆ ಉತ್ತೇಜನ ಹಾಗೂ ಜಾನಪದ ಕ್ರೀಡೆ ಕಂಬಳಕ್ಕೆ ವಿಶೇಷ ಅನುದಾನ ಘೋಷಣೆ ಮಾಡಲಾಗಿದೆ.

2025-26 ರ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಪುತ್ತೂರು ತಾಲ್ಲೂಕಿನ ಬನ್ನೂರು ಗ್ರಾಮದ ಸೇಡಿಯಾಪು ಬಳಿ ಗುರುತಿಸಿರುವ ನಿವೇಶನದಲ್ಲಿ ಜಿಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜು, ಬೋಧನಾ ಆಸ್ಪತ್ರೆ, ಹಾಸ್ಟೆಲ್ ಮತ್ತಿತರ ಮೂಲಸೌಲಭ್ಯಗಳನ್ನು 549.79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲವಾಗಲಿದೆ.

ಐತಿಹಾಸಿಕ ದೇವಾಲಯಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯ ಪ್ರತೀಕವಾಗಿರುವ ಪ್ರಮುಖ ದೇವಾಲಯಗಳು ಮತ್ತು ಮಠಗಳ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 12 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.

ಕರಾವಳಿ ತೀರದಲ್ಲಿ ತೀವ್ರ ಸಮಸ್ಯೆಯಾಗಿರುವ ಕಡಲ ಕೊರೆತ ತಡೆ ಕಾಮಗಾರಿಗಳಿಗಾಗಿ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅಡಿಯಲ್ಲಿ 208.94 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಮತ್ತೊಮ್ಮೆ ಒತ್ತಾಯಿಸಲಾಗಿದೆ.

ಕರಾವಳಿಯ ರೈತಾಪಿ ಜನರ ಸಾಂಸ್ಕೃತಿಕ ಹೆಮ್ಮೆಯಾಗಿರುವ, ಕೋಣಗಳ ಓಟದ ವೀರ ಕ್ರೀಡೆ ‘ಕಂಬಳ’ವನ್ನು ಜಾಗತಿಕ ಮಟ್ಟದಲ್ಲಿ ಪ್ರೋತ್ಸಾಹಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಕಂಬಳ ಕ್ರೀಡೆಗಾಗಿ ನೀಡಲಾಗುತ್ತಿದ್ದ 40 ಲಕ್ಷ ರೂ,ಗಳ ಅನುದಾನವನ್ನು ಬರೋಬ್ಬರಿ 1 ಕೋಟಿ ರೂ. ಹೆಚ್ಚಿಸಲಾಗಿದೆ.

ಒಟ್ಟಾರೆಯಾಗಿ ಮಂಗಳೂರಿನಲ್ಲಿ ನಡೆದ ಈ ಸಂಪುಟ ಸಭೆಯು ಕರಾವಳಿಯ ಧಾರ್ಮಿಕ ಪರಂಪರೆ, ಕೈಗಾರಿಕೆ, ಮೀನುಗಾರಿಕೆ ಹಾಗೂ ಸಾಂಪ್ರದಾಯಿಕ ಕ್ರೀಡೆಗಳಿಗೆ ನವಚೈತನ್ಯ ತುಂಬುವ ನಿಟ್ಟಿನಲ್ಲಿ ಐತಿಹಾಸಿಕ ಹೆಜ್ಜೆಯಾಗಿದೆ.

ಎಲ್ಲೆಲ್ಲಿಗೆ ಎಷ್ಟು ಅನುದಾನ?
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು: 5 ಕೋಟಿ ರೂ.
ಒಡಿಯೂರು ಮಠ, ವಿಟ್ಲ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
ಶ್ರೀ ಧಾಮ ಮಾಣಿಲ ಮಠ (ಬಂಟ್ವಾಳ/ಪುತ್ತೂರು ಕ್ಷೇತ್ರ): 1 ಕೋಟಿ ರೂ.
ಮಾಣಿಲಾ ಗ್ರಾಮ ಕುಕ್ಕಾಜೆ ಕಾಳಿಕಾಂಬ ಆಂಜನೇಯ ಸ್ವಾಮಿ ಕ್ಷೇತ್ರ: 1 ಕೋಟಿ ರೂ.
ಕಾಣಿಯೂರು ಚಾಮುಂಡೇಶ್ವರಿ ಕ್ಷೇತ್ರ, ಕನ್ಯಾ ಗ್ರಾಮ: 1 ಕೋಟಿ ರೂ.
ಪಿಳ್ಳಿ ಚಾಮುಂಡಿ ದೈವಸ್ಥಾನ ಕೊಂಡನ, ಕೋಟೆಕಾರ್ (ಉಳ್ಳಾಲ): 1 ಕೋಟಿ ರೂ.
ಶ್ರೀ ರಾಮ ಕ್ಷೇತ್ರ, ಕನ್ಯಾಡಿ (ದಕ್ಷಿಣ ಕನ್ನಡ): 1 ಕೋಟಿ ರೂ.
ಕೇಮಾರು ಮಠ, ಶ್ರೀ ಸಾಂದೀಪನಿ ಸಾಧನಾಶ್ರಮ: 1 ಕೋಟಿ ರೂ.

ಸೈಯದ್ ಮದನಿ ಜುಮ್ಮಾ ಮಸೀದಿ (ಉಳ್ಳಾಲ ದರ್ಗಾ): 5.00 ಕೋಟಿ ರೂ.
ದಾರುನ್ನೂರು ಎಜುಕೇಶನಲ್ ಸೆಂಟರ್, ಕಾಶಿಪಟ್ಣ (ಬೆಳ್ತಂಗಡಿ): 1.50 ಕೋಟಿ ರೂ.
ಅಲ್-ಮರ್ಕಜುಲ್ ಇಸ್ಲಾಮಿ (ರಿ), ಅಡ್ಯಾರ್ (ಮಂಗಳೂರು): 1.50 ಕೋಟಿ ರೂ.
ಶಾಂತಿ ಎಜುಕೇಶನಲ್ ಟ್ರಸ್ಟ್, ಕುತ್ತಾರು/ಬಬ್ಬುಕಟ್ಟೆ (ಉಳ್ಳಾಲ): 1 ಕೋಟಿ ರೂ.
ಮರಿಕ್ಕಳ ಜುಮ್ಮಾ ಮಸೀದಿ, ನರಿಂಗಾನ ಗ್ರಾಮ (ಸ್ಟಡಿ ಸೆಂಟರ್ & ವಾಚನಾಲಯ): 1 ಕೋಟಿ ರೂ.
ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ (KIA), ಕುಂಬ್ರ (ಪುತ್ತೂರು): 1 ಕೋಟಿ ರೂ.
ಮರ್ಕಜುಲ್ ಹುದಾ ಮಹಿಳಾ ಕಾಲೇಜು, ಕುಂಬ್ರ (ಪುತ್ತೂರು): 1 ಕೋಟಿ ರೂ.
ಸೌತ್ ಕರ್ನಾಟಕ ಸಲಾಫಿ ಮೂವ್‌ಮೆಂಟ್, ಮಂಗಳೂರು: 1 ಕೋಟಿ ರೂ.
ಸಂತ ಜೋಸೆಫ್ ವಾಜ್ ಶ್ರೈನ್, ಮುಡಿಪು (ಉಳ್ಳಾಲ):1 ಕೋಟಿ ರೂ.
ಇನ್‌ಫೆಂಟ್ ಜೀಸಸ್ ಶ್ರೈನ್, ಬಿಕರ್ನಕಟ್ಟೆ (ಮಂಗಳೂರು): 50 ಲಕ್ಷ ರೂ.
ಸೇಂಟ್ ಲಾರೆನ್ಸ್ ಶ್ರೈನ್, ಬೊಂದೇಲ್ (ಮಂಗಳೂರು): 50 ಲಕ್ಷ ರೂ.

ಮುಲ್ಕಿಯಲ್ಲಿ 150 ಎಕರೆಯಲ್ಲಿ ಬೃಹತ್ ‘ಫಿಶರೀಸ್ ಪಾರ್ಕ್’.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 343.30 ಕಿ.ಮೀ. ಕರಾವಳಿ ತೀರವು ವಾರ್ಷಿಕ ಸುಮಾರು ₹7,000 ಕೋಟಿಗೂ ಅಧಿಕ ಸಾಗರೋತ್ಪನ್ನ ವಹಿವಾಟು ನಡೆಸುತ್ತಿದ್ದು, ರಾಜ್ಯದ ಬೊಕ್ಕಸಕ್ಕೆ ಅಪಾರ ತೆರಿಗೆ ಆದಾಯ ತರುತ್ತಿದೆ.
ಮೀನುಗಾರಿಕೆಗೆ ಇನ್ನಷ್ಟು ಕೈಗಾರಿಕಾ ಸ್ಪರ್ಶ ನೀಡಲು ರಾಜ್ಯ ಸರ್ಕಾರವು ‘Fisheries Park’ ಸ್ಥಾಪಿಸಲು ನಿರ್ಧರಿಸಿದೆ.
ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಳುಂಜೆ ಮತ್ತು ಉಳಿಪಾಡಿ ಗ್ರಾಮಗಳಲ್ಲಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ 316.79 ಎಕರೆ ಜಮೀನಿನ ಪೈಕಿ 150 ಎಕರೆ ಜಾಗವನ್ನು ಫಿಶರೀಸ್ ಪಾರ್ಕ್‌ಗಾಗಿ ಅಧಿಕೃತವಾಗಿ ಕಾಯ್ದಿರಿಸಲಾಗಿದೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನ ಕೆರೆಬೆಟ್ಟು ಮತ್ತು ಶಿವಪುರ ಗ್ರಾಮಗಳಲ್ಲಿ 113.89 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶವನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಭೂಮಾಲೀಕರಿಗೆ ಈಗಾಗಲೇ ಪರಿಹಾರ ವಿತರಿಸಲಾಗುತ್ತಿದ್ದು, ಹೆಚ್ಚುವರಿ ಜಮೀನು ಸ್ವಾಧೀನ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಈ ಪ್ರದೇಶವನ್ನು ಕೈಗಾರಿಕೋದ್ಯಮಿಗಳ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿಪಡಿಸಿ ಡೇಟಾ ಸೆಂಟರ್‌ಗಳು, ನೂತನ ಕಾರ್ಖಾನೆಗಳು ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.

Leave a Comment

Your email address will not be published. Required fields are marked *