Editor

ಯುದ್ದರಂಗಕ್ಕೆ ಎಂಟ್ರಿ ಕೊಡ್ತಾ ಅಮೇರಿಕ? ಉಕ್ರೇನ್ ಗೆ ನೆರವಿನ ಮಹಾಪೂರ ಹರಿಸಿದ ದೊಡ್ಡಣ್ಣ!

ಸಮಗ್ರ ನ್ಯೂಸ್: ಅಮೆರಿಕಉಕ್ರೇನ್​​ಗೆ ಆರ್ಥಿಕ ನೆರವು ಘೋಷಿಸಿದ್ದು. 350 ಮಿಲಿಯನ್​​ ಡಾಲರ್​​ ನೆರವು ದಾಖಲೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​​​ ಸಹಿ ಮಾಡಿದ್ದಾರೆ. ರಕ್ಷಣಾ ನೆರವು ನೀಡುವ ದಾಖಲೆಗಳಿಗೆ ಬೈಡನ್​ ಸಹಿ ಮಾಡಿದ್ದು, ಅಮೆರಿಕ ವೈಟ್​ಹೌಸ್​ನಿಂದ ಹೇಳಿಕೆ ರಿಲೀಸ್​ ಮಾಡಲಾಗಿದೆ. 250 ಮಿಲಿಯನ್​ ಡಾಲರ್​​ ರಿಲೀಸ್​ಗೆ ಯುಎಸ್​ ಕಾಂಗ್ರೆಸ್​ ಅನುಮತಿ ಸರ್ಕಾರ ಕೇಳಿದೆ.

ಯುದ್ದರಂಗಕ್ಕೆ ಎಂಟ್ರಿ ಕೊಡ್ತಾ ಅಮೇರಿಕ? ಉಕ್ರೇನ್ ಗೆ ನೆರವಿನ ಮಹಾಪೂರ ಹರಿಸಿದ ದೊಡ್ಡಣ್ಣ! Read More »

ಬಂಟ್ವಾಳ: ಕಾರಿಂಜದ ಅಕ್ರಮ ಗಣಿಗಾರಿಕೆಗೆ ಶಾಶ್ವತ ಬೀಗ ಜಡಿದ‌ ದ.ಕ ಜಿಲ್ಲಾಧಿಕಾರಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಜನರ ಶ್ರದ್ಧಾ ಭಕ್ತಿಯ ಆರಾಧ್ಯ ಕೇಂದ್ರ ಕಾರಿಂಜ ದೇವಸ್ಥಾನಕ್ಕೆ ಮಾರಕವಾಗಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಶಾಶ್ವತ ಬೀಗ ಜಡಿಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡಿದ್ದು, ಅಕ್ರಮ ಗಣಿಗಾರಿಕೆಗೆ ಬೀಗ ಹಾಕಿ ಅಕ್ರಮ ಎಸಗಿದವರ ವಿರುದ್ಧ ಲಕ್ಷಾಂತರ ರೂಪಾಯಿ ದಂಡ ಹಾಕಿದ್ದಾರೆ. ಪ್ರಭಾವಿಗಳ ಒತ್ತಡದ ನಡುವೆಯೂ ಜಿಲ್ಲಾಧಿಕಾರಿಗಳು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಕ್ಷೇತ್ರದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಾರು ವರ್ಷಗಳ

ಬಂಟ್ವಾಳ: ಕಾರಿಂಜದ ಅಕ್ರಮ ಗಣಿಗಾರಿಕೆಗೆ ಶಾಶ್ವತ ಬೀಗ ಜಡಿದ‌ ದ.ಕ ಜಿಲ್ಲಾಧಿಕಾರಿ Read More »

‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ’ | ಉಕ್ರೇನ್ ಮಿಲಿಟರಿ ಪಡೆಗೆ ಪುಟಿನ್ ಸೂಚನೆ| ಒಡೆದು ಆಳುವ ನೀತಿ ಪ್ರಯೋಗಿಸಿದ ರಷ್ಯಾ|

ಸಮಗ್ರ ನ್ಯೂಸ್: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮಿಲಿಟರಿಗೆ ದೇಶದ ಅಧಿಕಾರವನ್ನು ವಶಪಡಿಸಿಕೊಳ್ಳಲು ಕರೆ ನೀಡಿದ್ದಾರೆ. ಪುಟಿನ್ ತಮ್ಮ ದೇಶವನ್ನು ಉದ್ದೇಶಿಸಿ ಉಕ್ರೇನ್ ಸೇನೆಗೆ ಈ ಸಂದೇಶವನ್ನು ಕಳುಹಿಸಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನ್ ಅನ್ನು ವಶಪಡಿಸಿಕೊಳ್ಳುವ ಉದ್ದೇಶವನ್ನು ಹೊಂದಿಲ್ಲ ಮತ್ತು ಉಕ್ರೇನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ನಾವು ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಅಧಿಕಾರದಿಂದ ತೆಗೆದುಹಾಕಲು ಮತ್ತು ಅಲ್ಲಿ ಮಿಲಿಟರಿ ಆಡಳಿತವನ್ನು ಸ್ಥಾಪಿಸಲು ಬಯಸುತ್ತಾರೆ. ರಷ್ಯಾ

‘ಅಧಿಕಾರವನ್ನು ನಿಮ್ಮ ಕೈಗೆ ತಗೊಳ್ಳಿ’ | ಉಕ್ರೇನ್ ಮಿಲಿಟರಿ ಪಡೆಗೆ ಪುಟಿನ್ ಸೂಚನೆ| ಒಡೆದು ಆಳುವ ನೀತಿ ಪ್ರಯೋಗಿಸಿದ ರಷ್ಯಾ| Read More »

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು

ಸಮಗ್ರ ನ್ಯೂಸ್: ಉಕ್ರೇನ್‌ನ ರಾಜಧಾನಿ ಕೀವ್‌ ಅನ್ನು ರಷ್ಯಾ ವಶಪಡಿಸಿಕೊಂಡಿದೆ ಎಂಬ ವರದಿಗಳ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಜೆಲೆನ್‌ಸ್ಕಿ ತನ್ನ ದೇಶವನ್ನುದ್ದೇಶಿಸಿ ಭಾವನಾತ್ಮಕ ಭಾಷಣ ಮಾಡಿದ್ದು, ಜಗತ್ತಿನ ನಂ.1 ಶಕ್ತಿಶಾಲಿ ದೇಶ ಅಮೆರಿಕ ದೂರದಿಂದ ಸುಮ್ಮನೆ ನೋಡುತ್ತಿದೆ ಎಂದು ಅಲವತ್ತುಕೊಂಡಿದ್ದಾರೆ. ನಾನು ರಷ್ಯಾದ ನಂ.1 ಗುರಿ, ನನ್ನ ಕುಟುಂಬ ನಂ.2 ಗುರಿ. ನಿನ್ನೆಯಂತೆ ಇಂದೂ ಕೂಡ ನಾವು ಏಕಾಂಗಿಯಾಗಿ ನಮ್ಮ ದೇಶವನ್ನು ರಕ್ಷಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ. ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶ ದೂರದಿಂದ ನೋಡುತ್ತಿದೆ ಎಂದು

ರಷ್ಯಾ ಕಬಳಿಸುತ್ತಿದ್ದರೂ ಅಮೇರಿಕಾ ಸುಮ್ಮನಿದೆ| ಪೇಸ್ ಬುಕ್ ಲೈವ್ ನಲ್ಲಿ ಉಕ್ರೇನ್ ಅಧ್ಯಕ್ಷನ ಅಳಲು Read More »

ಪ್ರೋ ಕಬಡ್ಡಿ ಸೀಸನ್8| ದಬಂಗ್ ಮಡಿಲಿಗೆ ಚಾಂಪಿಯನ್ ಕಿರೀಟ| ಪಾಟ್ನಾಗೆ 1 ಅಂಕದ ವೀರೋಚಿತ ಸೋಲು|

ಸಮಗ್ರ‌ ನ್ಯೂಸ್: ಎಂಟನೇ ಆವೃತ್ತಿ ಪ್ರೋ ಕಬಡ್ಡಿ ಫೈನಲ್ ರೋಚಕತೆ ಹುಟ್ಟಿಸಿತ್ತು. ಎರಡೂ ತಂಡಗಳು ಅಂಕಗಳನ್ನು ಸುಲಭವಾಗಿ ನೀಡಲಿಲ್ಲ. ಪರಿಣಾಮ ಕೊನೆಯ ಹಂತದವರೆಗೂ ನಡೆದ ಪಂದ್ಯದಲ್ಲಿ ದಬಾಂಗ್ ದೆಹಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಈ ಮೂಲಕ ದಬಾಂಗ್ ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿ ಸಂಭ್ರಮಿಸಿದೆ. ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ದಬಾಂಗ್ 37-36 ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು. ಪಾಟ್ನಾ ರಕ್ಷಣಾ ವಿಭಾಗವನ್ನು ವಂಚಿಸಿ ಅಂಕಗಳಿಸಿದ ನವೀನ್ ಕುಮಾರ್ಮೊದಲಾವಧಿಯ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡ

ಪ್ರೋ ಕಬಡ್ಡಿ ಸೀಸನ್8| ದಬಂಗ್ ಮಡಿಲಿಗೆ ಚಾಂಪಿಯನ್ ಕಿರೀಟ| ಪಾಟ್ನಾಗೆ 1 ಅಂಕದ ವೀರೋಚಿತ ಸೋಲು| Read More »

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ

ಸಮಗ್ರ ನ್ಯೂಸ್ ಡೆಸ್ಕ್ : ಉಕ್ರೇನ್ ಮೇಲೆ ವಿಪರೀತ ದಾಳಿ ನಡೆದಿದ್ದರಿಂದ ಅಲ್ಲಿ ವಾಸವಿರುವ ಕನ್ನಡಿಗರು ಆತಂಕದಿಂದ ದಿನಗಳೆಯುತ್ತಿದ್ದಾರೆ. ಅವರನ್ನು ಕರೆತರಲು ಏನೆಲ್ಲ ಪ್ರಯತ್ನಗಳು ನಡೆದರೂ, ಅವು ವಿಫಲವಾಗುತ್ತಿದೆ. ಹಾಗಾಗಿ ಉಕ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರು ವಿಡಿಯೋ ಮತ್ತು ಫೋನ್ ಕರೆಗಳ ಮೂಲಕ ತಮ್ಮನ್ನು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ ಕೂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವಿಟ್ ಮಾಡಿದ್ದಾರೆ. “ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಅವರನ್ನು

ವಿದ್ಯಾರ್ಥಿಗಳ ರಕ್ಷಣೆ ಹೇಗೆ? ಮತ್ತು ಯಾವಾಗ?: ಸಿಎಂ ಬಸವರಾಜ ಬೊಮ್ಮಾಯಿಗೆ ನಟಿ ರಮ್ಯಾ ಪ್ರಶ್ನೆ Read More »

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್|

ಸಮಗ್ರ ನ್ಯೂಸ್: ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು 11ನೇ ದಿನದ ಹಿಜಾಬ್ ಅನುಮತಿ ಕೋರಿದ ಅರ್ಜಿಯ ವಿಚಾರಣೆ ನಡೆಸಲಾಯಿತು. ಹಿಜಾಬ್ ವಿವಾದ ವಾದ ಮಂಡನೆ ಮುಕ್ತಾಯಗೊಂಡಿದ್ದು, ಹೈಕೋರ್ಟ್ ತ್ರಿಸದಸ್ಯ ಪೂರ್ಣಪೀಠವು, ತನ್ನ ತೀರ್ಪನ್ನು ಕಾಯ್ದಿರಿಸಿದೆ. ಹಿಜಾಬ್ ಧರಿಸಿದ್ದಕ್ಕಾಗಿ ಸರ್ಕಾರಿ ಪಿಯು ಕಾಲೇಜಿನ ಪ್ರವೇಶವನ್ನು ನಿರಾಕರಿಸಿದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಗಳಲ್ಲಿ ಕರ್ನಾಟಕ ಹೈಕೋರ್ಟ್ ನ ಪೂರ್ಣ ಪೀಠವು ಇಂದು ತನ್ನ ತೀರ್ಪನ್ನು ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್

ಹಿಜಾಬ್ ವಿವಾದ ವಿಚಾರಣೆ ಅಂತ್ಯ| ತೀರ್ಪು ಕಾಯ್ದಿರಿಸಿದ ಕರ್ನಾಟಕ ಹೈಕೋರ್ಟ್| Read More »

ಬೆಳ್ತಂಗಡಿ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ‌ವಿವಾಹ ಮಾಡಿಸಿದ ಅರ್ಚಕ| ಪ್ರಕರಣದ ಹಿಂದೆ ಪ್ರಭಾವಿ ಹಿಂದೂ ಮುಖಂಡನ ಕೈವಾಡ!?

ಸಮಗ್ರ ನ್ಯೂಸ್: ಬೆಳ್ತಂಗಡಿ ಗ್ರಾಮೀಣ ಭಾಗದ ದೇವಾಲಯವೊಂದರಲ್ಲಿ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ವಿವಾಹ ನಡೆಸಿದ ಬಗ್ಗೆ ಹಿಂದೂ ಸಂಘಟನೆಗಳು ಒಟ್ಟಾಗಿ ನ್ಯಾಯಕ್ಕೆ ಪೊಲೀಸರ ಮೊರೆ ಹೋದ ಬಳಿಕ ಪ್ರಕರಣ ತಿರುವು‌ ಪಡೆದುಕೊಳ್ಳುತ್ತಿದೆ. ತಾಲೂಕಿನ ನಡ ಎಂಬ ಗ್ರಾಮೀಣ ಭಾಗದಲ್ಲಿನ ಸತ್ಯನಾರಾಯಣ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುಸ್ಲಿಂ ಯುವಕ ಹಾಗೂ ಹಿಂದೂ ಯುವತಿ ವಿವಾಹವಾಗಿದ್ದರು. ಈ ವಿವಾಹ ಕಾರ್ಯ ನೆರವೇರಿಸಿ ಸಾಮರಸ್ಯ ಕದಡಿದ್ದಾರೆ ಎಂದು ದೇವಾಲಯದ ಅರ್ಚಕ ರಾಧಾಕೃಷ್ಣ ಹೊಳ್ಳ ಅವರ ಮೇಲೆ

ಬೆಳ್ತಂಗಡಿ: ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯ ‌ವಿವಾಹ ಮಾಡಿಸಿದ ಅರ್ಚಕ| ಪ್ರಕರಣದ ಹಿಂದೆ ಪ್ರಭಾವಿ ಹಿಂದೂ ಮುಖಂಡನ ಕೈವಾಡ!? Read More »

ಮಂಗಳೂರು: ಹಿಜಾಬ್ ವಿರುದ್ದ ಹೇಳಿಕೆ ನೀಡಿದ ಸುರಯ್ಯಗೆ ಬೆದರಿಕೆ

ಸಮಗ್ರ ನ್ಯೂಸ್: ಹಿಜಾಬ್‌ ಸಂಬಂಧಿಸಿ ಹೇಳಿಕೆ ನೀಡಿದ ಕಾಂಗ್ರೆಸ್‌ ಮುಖಂಡರಾದ ಸುರಯ್ಯ ಅಂಜುಮ್‌ ಅವರಿಗೆ ಅಪರಿಚಿತರು ಜೀವ ಬೆದರಿಕೆಯೊಡ್ಡಿದ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರಯ್ಯ ಅಂಜುಮ್‌ ಅವರು ಇತ್ತೀಚೆಗೆ ಹಿಜಾಬ್‌ ಧರಿಸುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಧರ್ಮಕ್ಕಿಂತ ದೇಶ ಮೊದಲು, ಶಿಕ್ಷಣಕ್ಕಿಂತ ದೊಡ್ಡ ಧರ್ಮವಿದೆಯಾ?ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧರಿಸಿ ಸಮಾನತೆ ಕಾಪಾಡ ಬೇಕು ಎಂದು ಲೈವ್‌ ವೀಡಿಯೋ ಪ್ರಸಾರ ಮಾಡಿದ್ದರು. ಇದಾದ ಕೆಲವು ದಿನಗಳ ಬಳಿಕ ಅಪರಿಚಿತರ ಫೋನ್‌, ವೀಡಿಯೋ ಮುಖಾಂತರ ಮಾನಕ್ಕೆ

ಮಂಗಳೂರು: ಹಿಜಾಬ್ ವಿರುದ್ದ ಹೇಳಿಕೆ ನೀಡಿದ ಸುರಯ್ಯಗೆ ಬೆದರಿಕೆ Read More »

ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್| ಅಭಿಮಾನಿಗಳಿಗೆ ಭರ್ಜರಿ ಸುದ್ದಿ

ಸಮಗ್ರ ಫಿಲಂ ಡೆಸ್ಕ್ : ಇದೇ ಮೊದಲ ಬಾರಿಗೆ ಧ್ರುವ ಹೊಸ ರೂಪದ ಕಥೆಯನ್ನು ಒಪ್ಪಿಕೊಂಡಿದ್ದಾರಂತೆ. ಅಲ್ಲದೇ, ಈ ಸಿನಿಮಾದಲ್ಲಿ ಅವರು ಅಂಡರ್ ವರ್ಲ್ಡ್ ಡಾನ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದು ನೈಜ ಘಟನೆ ಮತ್ತು ವ್ಯಕ್ತಿಗಳನ್ನು ಆಧರಿಸಿದ ಸಿನಿಮಾವಾಗಿದೆ ಎನ್ನುವುದು ವಿಶೇಷ. ಎಪ್ಪತ್ತರ ದಶಕದ ಕಥೆ:ಮದ್ರಾಸ್ ಪ್ರಾಂತ್ಯದ 70ರ ದಶಕದಲ್ಲಿ ನಡೆದ ಘಟನೆಯನ್ನು ಈ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕರು. ಈ ದಶಕವನ್ನು ಕಟ್ಟಿಕೊಡುವುದಕ್ಕಾಗಿ ಈಗಾಗಲೇ ಸೆಟ್‍ಗಳು ಕೂಡ ನಿರ್ಮಾಣವಾಗುತ್ತಿವೆಯಂತೆ. ಸೀಗೆಹಳ್ಳಿ ಸಮೀಪದಲ್ಲಿ ಈ ಬೃಹತ್ ಸೆಟ್

ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್| ಅಭಿಮಾನಿಗಳಿಗೆ ಭರ್ಜರಿ ಸುದ್ದಿ Read More »