Editor

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು|

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಆರ್.ಎಸ್.ಎಸ್. ಪ್ರಮುಖ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳಿಗೆ ಗ್ರಾಮದ ದೇವಂದಬೆಟ್ಟು ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ರಾಷ್ಟ್ರಧ್ವಜಕ್ಕೆ ಅವಮಾನವಾಗುವ ರೀತಿ ಭಾಷಣ ಮಾಡಿರುವ ಜತೆಗೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಮಾಜದ ಶಾಂತಿ ಕದಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಬಂಟ್ವಾಳ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ

ರಾಷ್ಟ್ರಧ್ವಜಕ್ಕೆ ಅವಮಾನ| ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲು| Read More »

ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ| 2 ಸಾವಿರ ಗಡಿ ದಾಟಿದ ಅನಿಲ ದರ

ಸಮಗ್ರ ನ್ಯೂಸ್: ಮಾರ್ಚ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆಯನ್ನು 105 ರೂ. ಹೆಚ್ಚಿಸಲಾಗಿದೆ. ಇದರೊಂದಿಗೆ ಮಂಗಳವಾರದಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 2,012 ರೂ.ಆಗಲಿದೆ. 5 ಕೆಜಿ ಸಿಲಿಂಡರ್ ಬೆಲೆಯೂ 27 ರೂ.ನಷ್ಟು ಏರಿಕೆಯಾಗಿದೆ. ಈಗ ದೆಹಲಿಯಲ್ಲಿ 5 ಕೆಜಿ ಸಿಲಿಂಡರ್ ಬೆಲೆ 569 ರೂ. ಆಗಲಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನಲ್ಲಿ ಯಾವುದೇ ಹೆಚ್ಚಳವಿಲ್ಲ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ

ಎಲ್ ಪಿಜಿ ಸಿಲಿಂಡರ್ ದರ ಮತ್ತೆ ಏರಿಕೆ| 2 ಸಾವಿರ ಗಡಿ ದಾಟಿದ ಅನಿಲ ದರ Read More »

ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ

ಸಮಗ್ರ ನ್ಯೂಸ್: ಕೋವಿಡ್‌ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ. ಆದರೆ, ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳು 2020ರ ಜುಲೈ ತಿಂಗಳಿನಿಂದ ಸುಮಾರು 45 ದೇಶಗಳಿಗೆ ಭಾರತದಿಂದ ಸಂಚಾರ ನಡೆಸುತ್ತಿವೆ. ಏರ್‌ ಬಬಲ್‌ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಮಾನಗಳಿಗೆ ಮತ್ತು ಡಿಜಿಸಿಎ ಅನುಮತಿ ಪಡೆದ ಸರಕು ಸಾಗಣೆಯ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಈ ನಿರ್ಬಂಧ

ನವದೆಹಲಿ: ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ಹಾರಾಟ ನಿರ್ಬಂಧ ವಿಸ್ತರಣೆ Read More »

ಧರ್ಮಸ್ಥಳ: ಶಿವರಾತ್ರಿ ಹಿನ್ನೆಲೆ; ಕ್ಷೇತ್ರಕ್ಕೆ ಹರಿದು ಬಂದ ಭಕ್ತರ ಪಾದಯಾತ್ರೆ

ಸಮಗ್ರ ನ್ಯೂಸ್: ಮಹಾ ಶಿವರಾತ್ರಿ ಆಚರಣೆಗೆ ನಾಡಿನೆಲ್ಲೆಡೆ ವಿಶೇಷ ತಯಾರಿ ನಡೆಸಲಾಗುತ್ತಿದ್ದು, ರಾಜ್ಯದ ಪ್ರಸಿದ್ದ ಶಿವಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರಿಗಳ ದಂಡು ಹರಿದುಬಂದಿದೆ. ಶಿವನ ದೇವಾಲಯಗಳಲ್ಲಿ ಪಾರಾಯಣ ಜಾಗರಣೆ ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ. ಅದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶಿವರಾತ್ರಿಗೆ ವಿಶೇಷ ಪೂಜೆಗಳು ಜರುಗುತ್ತವೆ. ಶಿವರಾತ್ರಿ ಸಂದರ್ಭ ರಾಜ್ಯದ ವಿವಿಧ ಕಡೆಗಳಿಂದ ಪಾದಯಾತ್ರೆಯ ಮೂಲಕ ಭಕ್ತರು ಧರ್ಮಸ್ಥಳ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಭಾನುವಾರ, ಸೋಮವಾರದಂದು ಚಾರ್ಮಾಡಿ ಕಡೆಯಿಂದ ಹೆಚ್ಚಿನ ಪಾದಯಾತ್ರಿಗಳು ಆಗಮಿಸಿದರು. ಹಗಲಲ್ಲಿ ಒಂದಿಷ್ಟು ಬಿಸಿಲಿನ ತಾಪ ಅಧಿಕ

ಧರ್ಮಸ್ಥಳ: ಶಿವರಾತ್ರಿ ಹಿನ್ನೆಲೆ; ಕ್ಷೇತ್ರಕ್ಕೆ ಹರಿದು ಬಂದ ಭಕ್ತರ ಪಾದಯಾತ್ರೆ Read More »

“ಶಿವನೇ ನಾ ನಿನ್ನಾ ಸೇವಕನಯ್ಯಾ”| ಮಹಾಶಿವರಾತ್ರಿ ಆಚರಣೆ ಏಕೆ? ಹೇಗೆ?

ಸಮಗ್ರ ವಿಶೇಷ: ಭಾರತೀಯ ಪರಂಪರೆಯಲ್ಲಿ ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ದಿನಾಚರಣೆ, ಜಯಂತಿ, ಉತ್ಸವಗಳು ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಹಿನ್ನೆಲೆಯಿದೆ, ಅನೇಕ ಕಥೆಗಳಿವೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ

“ಶಿವನೇ ನಾ ನಿನ್ನಾ ಸೇವಕನಯ್ಯಾ”| ಮಹಾಶಿವರಾತ್ರಿ ಆಚರಣೆ ಏಕೆ? ಹೇಗೆ? Read More »

ಮೇಕೆದಾಟು ಪಾದಯಾತ್ರೆ 2.0| ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕೊರೊನಾ ಕಾರಣದಿಂದ ಕಳೆದ ಬಾರಿ ಅರ್ಧಕ್ಕೆ ಮೊಟಕುಗೊಂಡ ಮೇಕೆದಾಟು ಪಾದಯಾತ್ರೆಯನ್ನು ಈ ಬಾರಿ ಯಶಸ್ವಿಯಾಗಿ ನಡೆಸಲು ಕಾಂಗ್ರೆಸ್​ ಮುಂದಾಗಿದೆ. ಆದರೆ ರಾಮನಗರ ಜಿಲ್ಲೆಯಲ್ಲಿ ಫೆಬ್ರವರಿ 28ರವರೆಗೆ ಜಿಲ್ಲೆಯಾದ್ಯಂತ ಕೊರೊನಾ ಮಾರ್ಗಸೂಚಿ ಪಾಲನೆಗೆ ಮಾರ್ಗಸೂಚಿ ನೀಡಲಾಗಿತ್ತು. ಆದರೆ ಕಾಂಗ್ರೆಸ್ ಸಾವಿರಾರು ಜನರನ್ನು ಗುಂಪು ಸೇರಿಸಿ ಪಾದಯಾತ್ರೆ ನಡೆಸುತ್ತಿದೆ. ಎಲ್ಲಾ ಕೊರೊನಾ

ಮೇಕೆದಾಟು ಪಾದಯಾತ್ರೆ 2.0| ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ Read More »

ಮಡಿಕೇರಿ: ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ. ಅರೆಭಾಷೆ ಕಥಾ ಸ್ಪರ್ಧೆ ವಿಜೇತರು:ಪ್ರಥಮ: ಕಥೆ ಶೀರ್ಷಿಕೆ: ಕಾಲ್ ದಾರಿಲಿ ಹೆಜ್ಜೆ ಮೂಡಿಕನ- ಕುಕ್ಕುನೂರು ರೇಷ್ಮ ಮನೋಜ್ದ್ವಿತೀಯ: ಕಥೆ ಶೀರ್ಷಿಕೆ : ಬದ್ಕಿಗೆ ಅರ್ಥ ಬಾಕನ – ವಿಶ್ವನಾಥ್ ಎಡಿಕೇರಿ.ಜಿ, ತೃತೀಯ: ಕಥೆ: ಶೀರ್ಷಿಕೆ : ಸಿಟ್ಟೆನೂ ಇಲ್ಲೆ ಸೀತೆಗೆ- ಲೀಲಾ ದಾಮೋದರ, ತೃತೀಯಕಥೆ:

ಮಡಿಕೇರಿ: ಅರೆಭಾಷೆ ಕಥೆ, ಕವಿತೆ ಮತ್ತು ಲಲಿತ ಪ್ರಬಂಧ ಸ್ಪರ್ಧೆ ವಿಜೇತರ ಪಟ್ಟಿ ಪ್ರಕಟ Read More »

ರಾಯಚೂರು: ಮೃತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಧನ ಸಹಾಯ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಅವರ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಪ್ರಸಾದ ರೂಪದಲ್ಲಿ ₹ 50 ಸಾವಿರ ನೀಡಲಾಗುತ್ತಿದೆ ಎಂದು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ‘ಸನಾತನ ಧರ್ಮ ಸಂರಕ್ಷಿಸುವ ಸಲುವಾಗಿ ಭಜರಂಗದಳದ ಕಾರ್ಯಕರ್ತ ತನ್ನ ಪ್ರಾಣ ಅರ್ಪಿಸಿದ್ದು, ಆತನ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಧ್ಯೋತಕವಾಗಿ ಭಕ್ತರ ಮೂಲಕ ನೆರವು ನೀಡಲಾಗುತ್ತಿದೆ’ ಎಂದು ಶ್ರೀಗಳು ತಿಳಿಸಿದ್ದಾರೆ.

ರಾಯಚೂರು: ಮೃತ ಹರ್ಷ ಕುಟುಂಬಕ್ಕೆ ಮಂತ್ರಾಲಯ ಮಠದಿಂದ ಧನ ಸಹಾಯ Read More »

ಚಿಕ್ಕಬಳ್ಳಾಪುರ : ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ‌ಮೂವರು ಸಾವು

ಸಮಗ್ರ ನ್ಯೂಸ್: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಕ್ರಾಸ್ ಬಳಿ ನಡೆದಿದೆ. ಬೆಂಗಳೂರು ಮೂಲದ ನಿವಾಸಿಗಳಾದ ಗೌಸ್ (35), ಅವರ ಪತ್ನಿ ಅಮ್ಮಾಜಾನ್ (25) ಮತ್ತು ಪುತ್ರ ರಿಯಾಜ್ (13) ಎಂಬುವರು ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಗೌಸ್ ಮೂಲತಃ ಹೊಸಕೋಟೆ ನಿವಾಸಿಯಾಗಿದ್ದು, ಅಮ್ಮಾಜಾನ್ ಆಂಧ್ರ ಮೂಲದವರು. ಇವರು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನಿಂದ ಆಂಧ್ರ ಪ್ರದೇಶದ ಕದ್ರಿ ಕಡೆಗೆ

ಚಿಕ್ಕಬಳ್ಳಾಪುರ : ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ‌ಮೂವರು ಸಾವು Read More »

ಮಂಗಳೂರು: ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಭವಾನಿ

ಸಮಗ್ರ ನ್ಯೂಸ್: ಮಂಗಳೂರಿನ 64 ವರ್ಷದ ಮಹಿಳಾ ಕ್ರೀಡಾಪಟು ಭವಾನಿ ಜೋಗಿ ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ 35ನೇ ವಾರ್ಷಿಕ ಮಾಸ್ಟರ್ಸ್ (ಒಪನ್) ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆಲ್ಲುವುದರೊಂದಿಗೆ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ಇದುವರೆಗೆ ಫೀಲ್ಡ್ ಮತ್ತು ಟ್ರ್ಯಾಕ್ ಸ್ಪರ್ಧೆಗಳಲ್ಲಿ 200ಕ್ಕೂ ಅಧಿಕ ಪದಕಗಳನ್ನು ಗೆದಿದ್ದಾರೆ. ವೃತ್ತಿಯಲ್ಲಿ ನರ್ಸ್ ಆಗಿರುವ ಭವಾನಿ ಮೂಲತ: ಹಾಸನ ಜಿಲ್ಲೆ ಸಕಲೇಶಪುರದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಲ್ಯದಿಂದಲೂ ಕ್ರೀಡೆಯಲ್ಲಿ

ಮಂಗಳೂರು: ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಭವಾನಿ Read More »