ಬಂಟ್ವಾಳ: ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಸದಸ್ಯನಿಗೆ ಹಲ್ಲೆ ನಡೆಸಿ ಚೂರಿ ಇರಿಯಲು ಯತ್ನಿಸಿದ ಗ್ರಾ.ಪಂ ಅಧ್ಯಕ್ಷ
ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ. ಸದಸ್ಯನ ಮೇಲೆ ಅಧ್ಯಕ್ಷನಿಂದ ಹಲ್ಲೆ ನಡೆಸಿದ್ದಲ್ಲದೆ ಚೂರಿ ಇರಿಯಲು ಯತ್ನಿಸಿದ ಘಟನೆ ಗ್ರಾ.ಪಂ. ಸಭಾಂಗಣದೊಳಗೆ ನಡೆದಿದೆ. ಗಾಯಗೊಂಡ ಸದಸ್ಯ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಾವೂರ ಗ್ರಾ.ಪಂ.ಸದಸ್ಯ ಜನಾರ್ಧನ ಎಂಬವರ ಮೇಲೆ ಇಲ್ಲಿನ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಗ್ರಾ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ









