Editor

ಉಪ್ಪಿನಂಗಡಿ: ಬುಡೋಳಿ ಸಮೀಪ ಸರಣಿ ಅಪಘಾತ

ಸಮಗ್ರ ನ್ಯೂಸ್: ಮಂಗಳೂರು- ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಕಾರು, ಬಸ್ ಮತ್ತು ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಮುಂಭಾಗದಲ್ಲಿ ತೆರಳುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೂ ಡಿಕ್ಕಿ ಹೊಡೆದು ರಸ್ತೆ ಮಧ್ಯದಲ್ಲಿ ಹೋಗಿ ನಿಂತಿದೆ. ಘಟನೆಯಲ್ಲಿ ಬಸ್ಸಿಗೆ ಮತ್ತು ಲಾರಿಗೆ ಹಾನಿಯಾಗಿದೆ. 6 ಗಂಟೆಗೆ ಈ ಘಟನೆ ನಡೆದಿದ್ದು, ಘಟನೆಯಿಂದ ಹೆದ್ದಾರಿ ಸಂಪೂರ್ಣವಾಗಿ ಬ್ಲಾಕ್ ಆಗಿದೆ. ಹೆದ್ದಾರಿಯೂದ್ದಕ್ಕೂ ವಾಹನಗಳು ಸಾಲು

ಉಪ್ಪಿನಂಗಡಿ: ಬುಡೋಳಿ ಸಮೀಪ ಸರಣಿ ಅಪಘಾತ Read More »

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ

ವಿಜಯಪುರ : ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಹಿನ್ನೆಲೆ ಗೃಹ ಸಚಿವರು ತೋರುತ್ತಿರುವ ಸಾಫ್ಟ್​ ಕಾರ್ನರ್ ನೋಡಿದರೆ ರಾಜ್ಯಕ್ಕೆ ಗೃಹಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ಹೊರಡಿಸುವುದು ಉತ್ತಮ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದು,​ ಸ್ವಪಕ್ಷಿಯ ಸಚಿವರ ಮೇಲೆಯೇ ವ್ಯಂಗ್ಯವಾಡಿದ್ದಾರೆ. ರಾಜ್ಯದಲ್ಲಿ ಒಂದಲ್ಲ ಒಂದು ಗಲಭೆಗಳು ನಡೆಯುತ್ತಲೇ ಇದೆ. ಎಲ್ಲೂ ಗಲಾಟೆ ಆಗ್ತಿಲ್ಲ ರಾಜ್ಯದಲ್ಲಿ ಮಾತ್ರ ಗಲಾಟೆ ಆಗ್ತಿದೆ. ಗೃಹ ಇಲಾಖೆ ಎಲ್ಲೆಲ್ಲಿ ವೀಕ್ ಇದೆಯೋ ಅಲ್ಲಲ್ಲಿ ಗಲಾಟೆಗಳು ನಡೆಯುತ್ತೆ. ನಿನ್ನೆ ಹೊಸಪೇಟೆಯಲ್ಲಿ ನಡೆದ ಬಿಜೆಪಿ

ಕರ್ನಾಟಕಕ್ಕೆ ಒಬ್ಬ ಸ್ಟ್ರಾಂಗ್ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಜಾಹಿರಾತು ನೀಡ್ಬೇಕು| ಸ್ವಪಕ್ಷೀಯ ಸಚಿವರ ವಿರುದ್ಧವೇ ಯತ್ನಾಳ್ ವ್ಯಂಗ್ಯ Read More »

ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ: ಸಿಎಂ ಇಬ್ರಾಹಿಂ ಕಿಡಿ

ಬೆಂಗಳೂರು : ಹುಬ್ಬಳ್ಳಿ ಗಲಭೆ ಹಿನ್ನೆಲೆ ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಕೂಡ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಮಾತನಾಡಿದ ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ. ಗಲಭೆಗೆ ಕಾರಣಕರ್ತರನ್ನು ಬಂಧಿಸಿ ನಿರಪರಾಧಿಗಳಿಗೆ ವಿಚಾರಣೆ ಮಾಡಿ ಬಿಡಬೇಕು ಎಂದು ಸಿ.ಎಂ ಇಬ್ರಾಹಿಂ ಹೇಳಿದ್ದಾರೆ. ಅಧಿಕಾರ ಶಾಶ್ವತ ಅಲ್ಲ ,ನಿಮ್ಮ ತಂದೆ ಒಳ್ಳೆ ಹೆಸರು ಪಡೆದು ಹೋಗಿದ್ದಾರೆ .ಮನುಷ್ಯ ಹೋದ ಮೇಲೂ ಜನ ಅವರನ್ನು ಹೊಗಳಬೇಕು. ರೌಡಿಗಳು ಸತ್ತರೆ

ಚುನಾವಣೆ ಸಂದರ್ಭದಲ್ಲಿ ಇಂತಹ ಘಟನೆಗಳು ಹುಟ್ಟಾಕ್ತಾರೆ: ಸಿಎಂ ಇಬ್ರಾಹಿಂ ಕಿಡಿ Read More »

ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್‌ ಅಧಿಕಾರಿ ಸಾವು; ಚಾಲಕ ಪರಾರಿ

ಬೆಂಗಳೂರು: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್ ಅಧಿಕಾರಿಯೊಬ್ಬರು ಮೃತಪಟ್ಟ ದಾರುಣ ಘಟನೆ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ಆರ್‌.ಆರ್‌.ನಗರ ನಿವಾಸಿ ಪದ್ಮಿನಿ(40)ಎಂದು ಗುರುತಿಸಲಾಗಿದೆ. ಇವರು ಖಾಸಗಿ ಬ್ಯಾಂಕ್‌ವೊಂದರ ಡೆಪ್ಯೂಟಿ ಮ್ಯಾನೇಜರ್‌ ಆಗಿದ್ದು, ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಸಂಜೆ 7.10ರ ಸುಮಾರಿಗೆ ಮನೆಗೆ ತೆರಳುತ್ತಿದ್ದರು. ಈ ವೇಳೆ ನಾಯಂಡಹಳ್ಳಿ ರಿಂಗ್‌ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ಬಿಬಿಎಂಪಿ ಕಸದ ಲಾರಿ, ನಾಯಂಡಹಳ್ಳಿ ರೈಲ್ವೆ ಅಂಡರ್‌ ಪಾಸ್‌ ಬಳಿ

ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್‌ ಅಧಿಕಾರಿ ಸಾವು; ಚಾಲಕ ಪರಾರಿ Read More »

ದೇಶದಲ್ಲಿ ಕೋವಿಡ್ 4ನೇ ಅಲೆ ಆತಂಕ| ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾಗಿದ್ದು, ನಿನ್ನೆ ಒಂದೇ ದಿನ ದೇಶದಲ್ಲಿ 2,183 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಹೊಸ ಪ್ರಕರಣಗಳಲ್ಲಿ ಶೇ. 89.8 ಏರಿಕೆಯಾಗಿದ್ದು, ಕೊರೊನಾ 4 ನೇ ಅಲೆ ಆತಂಕ ಎದುರಾಗಿದೆ. ಸೋಮವಾರ ದೇಶದಲ್ಲಿ ಕೊರೊನಾ ಸೋಂಕಿನಿಂದ 214 ಜನರು ಮೃತಪಟ್ಟಿದ್ದು, ಆ ಪೈಕಿ ಕೇರಳದಲ್ಲೇ 212 ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಸೋಂಕು ಹರಡುವ ಪ್ರಮಾಣದ ಸೂಚಕವಾದ ದೈನಿಕ ಪಾಸಿಟಿವಿಟಿ ದರ ಶೇ. 0.83 ಕ್ಕೆ ಜಿಗಿದಿದೆ. ಸೋಮವಾರ

ದೇಶದಲ್ಲಿ ಕೋವಿಡ್ 4ನೇ ಅಲೆ ಆತಂಕ| ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ Read More »

ಮಂಗಳೂರು: ಜ್ಯೂಸ್ ಮೆಷಿನ್ ಒಳಗಿಟ್ಟು ಅಕ್ರಮ ಚಿನ್ನ ಸಾಗಾಟ| ದುಬೈನಿಂದ ಮರಳಿದಾತ ಪೊಲೀಸ್ ಬಲೆಗೆ

ಸಮಗ್ರ ನ್ಯೂಸ್: ಜ್ಯೂಸ್ ಮೆಷಿನ್ ಒಳಗಡೆ ಚಿನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ದುಬೈನಿಂದ ಮರಳುತ್ತಿದ್ದ ಓರ್ವನನ್ನು ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ಕಾಸರಗೋಡು ಮೂಲದವನೆಂದು ತಿಳಿದು ಬಂದಿದೆ. ಈತನಿಂದ ಸುಮಾರು 10,62,660 ರೂ.ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಸೋಮವಾರ ರಾತ್ರಿ ದುಬೈಯಿಂದ ಆಗಮಿಸಿದ್ದ.‌ ಈತನ ಬಳಿ ಇದ್ದ ಜ್ಯೂಸ್ ಮೆಶಿನ್ ಒಂದನ್ನು ತಪಾಸಣೆಗೆ ಒಳಪಡಿಸಿದಾಗ ಅದರ ಒಳಭಾಗದಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು

ಮಂಗಳೂರು: ಜ್ಯೂಸ್ ಮೆಷಿನ್ ಒಳಗಿಟ್ಟು ಅಕ್ರಮ ಚಿನ್ನ ಸಾಗಾಟ| ದುಬೈನಿಂದ ಮರಳಿದಾತ ಪೊಲೀಸ್ ಬಲೆಗೆ Read More »

ಹುಬ್ಬಳ್ಳಿ ಹಿಂಸಾಚಾರ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಘಟನೆ| ಅಕ್ರಮ ಕಸಾಯಿಖಾನೆ ಕೇಸ್ ನಲ್ಲಿ ಪೊಲೀಸರಿಗೆ ಕಲ್ಲೇಟು|

ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕೂಡಿ ಹಾಕಿ ಕಸಾಯಿಖಾನೆಗೆ ಬಳಸಲಾಗುತ್ತಿದೆ ಎಂದು ಮಂಚೇನಹಳ್ಳಿ ಗೋ ಸಂರಕ್ಷಣಾ ಸಂಘಟನೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲು ಹೋದ‌ ಪೊಲೀಸರಿಗೆ ಕಲ್ಲೇಟು ಬಿದ್ದಿದೆ. ಪೋಲೀಸ್ ಠಾಣಾ ಪಿಎಸ್ ಐ ಹರೀಶ್ ಅವರು ಗೋ ಸಂರಕ್ಷಣಾ ಸಂಘಟನೆಯ ಕಾರ್ಯಕರ್ತರೊಂದಿಗೆ ಘಟನಾ ಸ್ಥಳ ಅಲ್ಲಿಪುರಕ್ಕೆ ತೆರಳಿದ್ದರು. ಗ್ರಾಮದ ಗ್ರೇವ್ ಯಾರ್ಡ್ ರಸ್ತೆಯಲ್ಲಿ ಅಕ್ರಮವಾಗಿ ಕೂಡಿ ಹಾಕಲಾಗಿದ್ದ ಜಾನುವಾರುಗಳ ಕಂಡು ವಾರಸುದಾರರ ಪತ್ತೆಗೆ ಮುಂದಾಗಿತ್ತು.

ಹುಬ್ಬಳ್ಳಿ ಹಿಂಸಾಚಾರ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಮತ್ತೊಂದು ಘಟನೆ| ಅಕ್ರಮ ಕಸಾಯಿಖಾನೆ ಕೇಸ್ ನಲ್ಲಿ ಪೊಲೀಸರಿಗೆ ಕಲ್ಲೇಟು| Read More »

ಕೊರೊನಾ ಭಯಕ್ಕೆ ಕ್ವಾರಂಟೈನ್ ಆದ ಡೆಲ್ಲಿ ಕ್ಯಾಪಿಟಲ್ಸ್| ಮತ್ತೆ ಐಪಿಎಲ್ ಕ್ಯಾನ್ಸಲ್ ಆಗುತ್ತಾ?

ಕೊರೊನಾ ಭಯ ಐಪಿಎಲ್ 2021ನೇ ಆವೃತ್ತಿಯಲ್ಲಿ ಆಕ್ರಮಿಸಿ ಐಪಿಎಲ್‌ ಸ್ಥಗಿತಕ್ಕೆ ಕಾರಣವಾಗಿದ್ದ ಕೊರೊನಾ ಕಾಟ ಇದೀಗ ಮತ್ತೊಮ್ಮೆ ವಕ್ಕರಿಸುವ ಲಕ್ಷಣಗಳು ಕಂಡುಬರುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇದೀಗ ಕೊರೊನಾ ಭೀತಿಗೆ ಒಳಗಾಗಿದ್ದು, ಅಭ್ಯಾಸ ಪಂದ್ಯವನ್ನ ತ್ಯಜಿಸಿ ಸಂಪೂರ್ಣ ತಂಡದ ಆಟಗಾರರು ಕ್ವಾರಂಟೈನ್ ಆಗಿದ್ದಾರೆ. ಪುಣೆಗೆ ತೆರಳಬೇಕಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಯಾಣವನ್ನ ರದ್ದುಗೊಳಿಸಿದ್ದು, ಹೋಟೆಲ್ ರೂಂಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ. ಪ್ರತಿ ರೂಂಗಳಲ್ಲಿ ಆಟಗಾರರ ಕೋವಿಡ್-19 ಟೆಸ್ಟ್ ಮಾಡಲಾಗುವುದು. ತಂಡದ ಫಿಸಿಯೋ ಪ್ಯಾಟ್ರಿಕ್ ಪರ್ಹಾರ್ಟ್‌ ಕೋವಿಡ್-19 ಪಾಸಿಟಿವ್ ಆಗಿದ್ದರ

ಕೊರೊನಾ ಭಯಕ್ಕೆ ಕ್ವಾರಂಟೈನ್ ಆದ ಡೆಲ್ಲಿ ಕ್ಯಾಪಿಟಲ್ಸ್| ಮತ್ತೆ ಐಪಿಎಲ್ ಕ್ಯಾನ್ಸಲ್ ಆಗುತ್ತಾ? Read More »

ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೊಜ್ ಪಾಂಡೆ ನೇಮಕ

ಸಮಗ್ರ ನ್ಯೂಸ್: ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಅವ್ರನ್ನ ಸೇನಾ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಿಸಿದೆ. ಪಾಂಡೆ ಅವರು ಜನರಲ್ ಎಂ.ಎಂ ನರವಾನೆ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಅವರು ಈ ತಿಂಗಳ ಅಂತ್ಯದ ವೇಳೆಗೆ ನಿವೃತ್ತರಾಗಲಿದ್ದಾರೆ. ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಪದವೀಧರರಾಗಿದ್ದ ಪಾಂಡೆ, ಡಿಸೆಂಬರ್ 1982ರಲ್ಲಿ ಕಾರ್ಪ್ಸ್ ಆಫ್ ಎಂಜಿನಿಯರ್ಸ್ʼಗೆ ಸೇರಿದರು. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಲ್ಲನ್ವಾಲಾ ಸೆಕ್ಟರ್ನಲ್ಲಿ ಆಪರೇಷನ್ ಪರಾಕ್ರಮ್ ಸಂದರ್ಭದಲ್ಲಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಎಂಜಿನಿಯರ್ ರೆಜಿಮೆಂಟ್‌ನ ನೇತೃತ್ವ

ನೂತನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೊಜ್ ಪಾಂಡೆ ನೇಮಕ Read More »

ಡಿ ಕೆ ಶಿವಕುಮಾರ್ ಗೆ ನಿಂದಿಸಿದ ಸಾಯಿಗಿರಿಧರ್ ಗೆ ಜೈಲುಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್

ಸಮಗ್ರ ನ್ಯೂಸ್: ಕರ್ನಾಟಕ ಸರ್ಕಾರದ ಇಂಧನ ಸಚಿವರಾಗಿದ್ದ ಡಿ. ಕೆ. ಶಿವಕುಮಾರ್ ಅವರಿಗೆ ಫೋನ್ ನಲ್ಲಿ ಬೈದು ನಿಂದಿಸಿದ್ದಾರೆಂಬ ಕಾರಣಕ್ಕಾಗಿ ಕೇಸಿಗೊಳಗಾಗಿದ್ದ ಬೆಳ್ಳಾರೆಯ ಸಾಯಿ ಗಿರಿಧರ್ ರೈಯವರಿಗೆ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸುಳ್ಯದ ಅನಿಯಮಿತ ವಿದ್ಯುತ್ ಕಡಿತದ ಪರಿಸ್ಥಿತಿಯಿಂದ ರೋಷಗೊಂಡಿದ್ದ ಬೆಳ್ಳಾರೆಯ ವಿದ್ಯುತ್ ಬಳಕೆದಾರ ಸಾಯಿ ಗಿರಿಧರ ರೈಯವರು 2016 ಫೆಬ್ರವರಿ 28 ರಂದು ಆಗಿನ ವಿದ್ಯುತ್ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಈ ವೇಳೆ ಸುಳ್ಯದ ವಿದ್ಯುತ್ ಸಮಸ್ಯೆ

ಡಿ ಕೆ ಶಿವಕುಮಾರ್ ಗೆ ನಿಂದಿಸಿದ ಸಾಯಿಗಿರಿಧರ್ ಗೆ ಜೈಲುಶಿಕ್ಷೆ ವಿಧಿಸಿದ ಸುಳ್ಯ ಕೋರ್ಟ್ Read More »