ಕೆಜಿಎಫ್-2 ಸಿನಿಮಾ ನೋಡುತ್ತಿದ್ದಾಗ ಹಾರಿದ ಗುಂಡು; ಯುವಕ ಗಂಭೀರ
ಹಾವೇರಿ: ಕೆಜಿಎಫ್-2 ಸಿನಿಮಾ ನೋಡುತ್ತಿದ್ದ ವೇಳೆ ಗುಂಡು ಹಾರಿದ ಪರಿಣಾಮ ಯುವಕನೊಬ್ಬನ ಹೊಟ್ಟೆಗೆ ಗಾಯವಾದ ಘಟನೆ ಹಾವೇರಿಯಲ್ಲಿ ನಡೆದಿದೆ. ಗಾಯಾಳುವನ್ನು ವಸಂತ ಕುಮಾರ್ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜೇಶ್ವರಿ ಚಿತ್ರಮಂದಿರದಲ್ಲಿ ಘಟನೆ ನಡೆದಿದೆ. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಗುಂಡುಹಾರಿದೆ. ಈ ಗುಂಡು ವಸಂತ ಕುಮಾರ್ ಹೊಟ್ಟೆಗೆ ತಗುಲಿದೆ. ಕೂಡಲೇ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಕೆಜಿಎಫ್-2 ಸಿನಿಮಾ ನೋಡುತ್ತಿದ್ದಾಗ ಹಾರಿದ ಗುಂಡು; ಯುವಕ ಗಂಭೀರ Read More »










