ಸಮಗ್ರ ನ್ಯೂಸ್ : ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಟಾಕ್ಸಿಕ್ ಸಿನಿಮಾ ರಿಲೀಸ್ ಬಗ್ಗೆಯಾವುದೇ ಮಾಹಿತಿ ಇಲ್ಲ, ಆದರೆ ಟಾಕ್ಸಿಕ್ ಗೂ ಮುನ್ನ ರಾಮಾಯಣ ಬರೋದಂತೂ ಫಿಕ್ಸ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತೆ ಪೋಸ್ಟ್ ಪೋನ್ ಆದ ಮೇಲೆ, ಫ್ಯಾನ್ಸ್ ಯಾವಾಗ ರಿಲೀಸ್ ಅನ್ನೋದನ್ನ ಕೇಳೋದೇ ಬಿಟ್ಟುಬಿಟ್ಟಿದ್ದಾರೆ. ಅದ್ಯಾವಾಗ ಬರುತ್ತೋ ಬರಲಿ ಅಂತ ಸೈಲೆಂಟ್ ಆಗಿಬಿಟ್ಟಿದ್ದಾರೆ. ಆದ್ರೆ ಇದರ ನಡುವೆ ರಾಮಾಯಣ ಟೀಂ ಮಾತ್ರ ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್ ಕೊಟ್ಟಿದೆ. ಅಸಲಿಗೆ 2026 ದೀಪಾವಳಿಗೆ ರಾಮಾಯಣ ಭಾಗ-1 ರಿಲೀಸ್. 2027 ದೀಪಾವಳಿಗೆ ಭಾಗ-2 ರಿಲೀಸ್ ಅಂತ ಹಿಂದೆ ಅನೌನ್ಸ್ ಮಾಡಲಾಗಿತ್ತು.
ಹೊಸ ಅಪ್ ಡೇಟ್ ಪ್ರಕಾರ ರಾಮಾಯಣ ದೀಪಾವಳಿಗೂ ಒಂದು ವಾರ ಮೊದಲೇ ಅಂದರೆ ಅಕ್ಟೋಬರ್ 30ಕ್ಕೆ ತೆರೆಗೆ ಬರ್ತಾ ಇದೆ. ಹಿಂದಿನ ವೀಕೆಂಡ್ ಗೆ ರಿಲೀಸ್ ಮಾಡಿ ದೀಪಾವಳಿ ಹೊತ್ತಿಗೆ ಬಾಕ್ಸಾಫೀಸ್ ನಲ್ಲಿ ಪಟಾಕಿ ಹೊಡೆಯೋ ಪ್ಲಾನ್ ಮಾಡಿದೆ.
ನಿಮಗೆಲ್ಲಾ ಗೊತ್ತಿರೋ ಹಾಗೆ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾದ್ರೆ, ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ನಮ್ಮ ರಾಕಿಂಗ್ ಸ್ಟಾರ್ ಯಶ್ ದಶಕಂಠ ರಾವಣನಾಗಿ ಮಿಂಚಿದ್ದಾರೆ.







