ಸಮಗ್ರ ನ್ಯೂಸ್: ಯಶವಂತಪುರ- ಮಂಗಳೂರು ಜಂಕ್ಷನ್-ಮಡಗಾಂವ್ ವಂದೇ ಭಾರತ್ ರೈಲಿಗೆ ಇದೇ 13ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ಅಂದು ಮಧ್ಯಾಹ್ನ 12ಕ್ಕೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಪ್ರಧಾನಿ ಅವರು ಬೆಂಗಳೂರಿನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಈ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಪ್ರಕಟಣೆ ತಿಳಿಸಿದೆ.
ಈಗಿರುವ ವೇಳಾಪಟ್ಟಿಯಂತೆ ಈ ರೈಲಿಗೆ ದಾರಿ ಮಧ್ಯೆ 12 ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಯಶವಂತಪುರದಿಂದ ಬುಧವಾರ ಹೊರತುಪಡಿಸಿ, ಮಡಗಾಂವ್ ಕಡೆಯಿಂದ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ವಂದೇ ಭಾರತ್ ರೈಲು ಸಂಚರಿಸಲಿದೆ.
ಯಶವಂತಪುರದಿಂದ ಬೆಳಿಗ್ಗೆ 7.35ಕ್ಕೆ ಹೊರಡಲಿದೆ. ಶ್ರವಣಬೆಳಗೊಳಕ್ಕೆ ಬೆಳಿಗ್ಗೆ 9.03, ಹಾಸನಕ್ಕೆ 9.38, ಸಕಲೇಶಪುರಕ್ಕೆ 10.20, ಸುಬ್ರಹ್ಮಣ್ಯ ರಸ್ತೆ ಮಧ್ಯಾಹ್ನ 12.40, ಕಬಕ ಪುತ್ತೂರು ಮಧ್ಯಾಹ್ನ 1.25, ಮಂಗಳೂರು ಜಂಕ್ಷನ್ ಮಧ್ಯಾಹ್ನ 3.05, ಉಡುಪಿಗೆ ಸಂಜೆ 4.20, ಕುಂದಾಪುರಕ್ಕೆ ಸಂಜೆ 4.28, ಮೂಕಾಂಬಿಕಾ ರಸ್ತೆ ಕೊಲ್ಲೂರು ಸಂಜೆ 5.30, ಮುರುಡೇಶ್ವರಕ್ಕೆ ಸಂಜೆ 6, ಗೋಕರ್ಣ ರಸ್ತೆಗೆ ರಾತ್ರಿ 7, ಕಾರವಾರಕ್ಕೆ ರಾತ್ರಿ 7.45ಕ್ಕೆ ಹಾಗೂ ಮಡಗಾಂವ್‌ಗೆ ರಾತ್ರಿ 8.55ಕ್ಕೆ ತಲುಪಲಿದೆ.









