ಇನ್ಮುಂದೆ ಈ ಗ್ರಾಹಕರಿಗೆ ಸಿಗಲ್ಲ LPG ಸಿಲಿಂಡರ್!

ಸಮಗ್ರ  ನ್ಯೂಸ್ : ‘ಸ್ಟ್ರೇಟ್ ಆಫ್ ಹಾರ್ಮುಜ್’ ಸಮುದ್ರ ಮಾರ್ಗ (Strait of Hormuz) ಬಂದ್ ಆಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ಎದುರಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಹಾಗೂ ಕಠಿಣ ತೀರ್ಮಾನವೊಂದನ್ನು ಕೈಗೊಂಡಿದೆ. 

Ad Widget ... .. Ad Widget .

ಹೊಸ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದ್ದು, ಗ್ಯಾಸ್ ಪೈಪ್‌ಲೈನ್ ಸಂಪರ್ಕ ಹೊಂದಿರುವ ದೇಶದ ಕೋಟ್ಯಂತರ ಗ್ರಾಹಕರಿಗೆ ಇನ್ಮುಂದೆ ಎಲ್‌ಪಿಜಿ ಸಿಲಿಂಡರ್ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

Ad Widget

ಸೋಮವಾರವಷ್ಟೇ ಕೇಂದ್ರ ಸರ್ಕಾರದ ವತಿಯಿಂದ ಈ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ತಕ್ಷಣದಿಂದಲೇ ಇದು ಜಾರಿಗೆ ಬಂದಿದೆ. ಹೊಸ ಆದೇಶದ ಪ್ರಕಾರ, ಯಾವ ಗ್ರಾಹಕರ ಮನೆಯಲ್ಲಿ ಈಗಾಗಲೇ ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲ (PNG – Piped Natural Gas) ಸರಬರಾಜು ಆಗುತ್ತಿದೆಯೋ, ಅಂತಹ ಗ್ರಾಹಕರಿಗೆ ಇನ್ಮುಂದೆ ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್‌ಗಳ ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಂದರೆ, ಇನ್ಮುಂದೆ ಒಬ್ಬನೇ ವ್ಯಕ್ತಿ ಅಥವಾ ಒಂದೇ ಮನೆಯಲ್ಲಿ ಎಲ್‌ಪಿಜಿ ಮತ್ತು ಪಿಎನ್‌ಜಿ ಎರಡೂ ಕನೆಕ್ಷನ್‌ಗಳನ್ನು ಒಟ್ಟಿಗೆ ಹೊಂದುವಂತಿಲ್ಲ.

Leave a Comment

Your email address will not be published. Required fields are marked *