ಸಮಗ್ರ ನ್ಯೂಸ್: ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎನ್.ಎಂ.ಪಿ.ಟಿ ಕಾಲನಿ ನಿವಾಸಿ, ಹಾಲಿ ಕಾರ್ಕಳ ತಾಲೂಕು ಕೌಡೂರು ಗ್ರಾಮದ ರಂಗನ ಪಲ್ಕೆ ಎಂಬಲ್ಲಿ ವಾಸವಾಗಿದ್ದ ಮನೋಜ್ (44) ಬಂಧಿತ ಆರೋಪಿ.
2005ರಲ್ಲಿ ನಡೆದ ಕೋಮು ಗಲಭೆಯ ಸಂದರ್ಭ ಕೊಲೆಯಾದ ಪೊಳಲಿ ಅನಂತುವಿನ ಮೃತದೇಹದ ಮೆರವಣೆಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಈತನ ವಿರುದ್ಧ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಾಗಿತ್ತು.
2007ರಲ್ಲಿ ವಿದೇಶಕ್ಕೆ ತೆರಳಿದ್ದ ಈತ ಅಲ್ಲಿಂದ ಬಂದು ರಂಗನಪಲ್ಕೆಯಲ್ಲಿ ವಾಸವಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೆ ಹಾಜರಾಗದ ಈತನ ಮೇಲೆ ನ್ಯಾಯಾಲಯ ಎರಡು ಎಲ್ಪಿಸಿ ವಾರೆಂಟ್ ಹೊರಡಿಸಿತ್ತು.
ಖಚಿತ ಮಾಹಿತಿ ಮೇರೆಗೆ ನ. 14ರಂದು ಮಂಗಳೂರು ಉತ್ತರ ಉಪವಿಭಾಗದ ಎ.ಸಿ.ಪಿ. ನೇತೃತ್ವದ ಅಪರಾಧ ಪತ್ತೆ ತಂಡದವರು ಕಾರ್ಕಳದಲ್ಲಿ ಬಂಧಿಸಿ, ಮುಂದಿನ ಕ್ರಮಕ್ಕೆ ಬಜಪೆ ಠಾಣೆಗೆ ಹಸ್ತಾಂತರಿಸಿದ್ದಾರೆ.









