ಕುವೈಟ್: ಜೆವಣ್ ಚಲನ ಚಿತ್ರ ಪ್ರದರ್ಶನ

ಸಮಗ್ರ ನ್ಯೂಸ್: ಇತ್ತೀಚೆಗೆ ಬಿಡುಗಡೆಗೊಂಡ ಹಾಸ್ಯಮಯ ಮನೋರಂಜನೆಯ ಕೊಂಕಣಿ ಚಲನಚಿತ್ರ ಜೆವಣ್ ಮೇ.30 ರಂದು ಕುವೈಟ್ ನಲ್ಲಿ ಪ್ರದೃಶಿಸಲ್ಪಟ್ಟಿತು.

Ad Widget ... ..

GSB ಸಭಾ ಕುವೈಟ್ ಸದಸ್ಯರು ಹೆಚ್ಚಿನ ಸಂಖೆಯಲ್ಲಿ ಸೇರಿ ಚಲನ ಚಿತ್ರ ವೀಕ್ಷಿಸಿದರು.ಪ್ರಥಮ ಬಾರಿಗೆ ಈ ಚಿತ್ರ ವಿದೇಶದಲ್ಲಿ ಬಿಡುಗಡೆಗೊಂಡಿದೆ. GSB ಸಮಾಜ ಭಾಂದವರು ಚಿತ್ರವನ್ನು ಪ್ರಶಂಸಿಸಿದರು.

Ad Widget

ಸಭೆಯ ಅಧ್ಯಕ್ಷ ಡಾ.ಸುರೇಂದ್ರ ನಾಯಕ್ ಕಾಪಾಡಿ ಅವರು ಸೇರಿರುವ ಎಲ್ಲರನ್ನೂ ಸ್ವಾಗತಿಸಿದರು.ಕೊಂಕಣಿ ಭಾಷೆಯ ಚಿತ್ರಗಳನ್ನು ನೋಡಿ ಮಾತೃ ಭಾಷೆಯ ಪ್ರೋತ್ಸಾಹ ಅತೀ ಅಗತ್ಯ ಎಂದು ನುಡಿದರು.ಗೋಕುಲದಾಸ್ ಭಟ್ ಬೆಳ್ತಂಗಡಿ ಪ್ರಾಸ್ತಾವಿಕ ಭಾಷಣ ಮಾಡಿದರು.ವೇದಿಕೆಯಲ್ಲಿ ಗಿರೀಶ್ ಶೆಣೈ, ನಾಗರಾಜ ಶಾನಭಾಗ್, ಮಂಜೇಶ್ವರ ಮೋಹನದಾಸ್ ಕಾಮತ್, ಸುಗುಣ ನಾಯಕ್,ನಿಶಾ ಶಾನಭಾಗ್, ನಯನಾ ಶೆಣೈ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾಯೋಜನೆ ಯನ್ನು ಸಾಗರ್ ಟ್ರಾನ್ಸ್ಪೋರ್ಟ್ ಕುವೈಟ್ ,ಸುದರ್ಶನ್ ಭಂಡಾರ್ಕರ್ ಹಾಗೂ ಡಾ.ಬಾಲಕೃಷ್ಣ ಪೈ ಮಾಡಿದರು.ಜೆವಣ್ ಚಲನಚಿತ್ರ ನಿರ್ಮಾಪಕ ರಮೇಶ್ ನಾಯಕ್,ಕರೋಪಾಡಿ ಅಕ್ಷಯ್ ನಾಯಕ್ ,ಕುಂಬ್ಳೆ ವೆಂಕಟೇಶ್ ಭಟ್ ರವರು ಕೊಂಕಣಿಗರಿಗೆ ತಯಾರಿಸಿರುವ ಈ ಚಿತ್ರದಲ್ಲಿ ಮೂರು ಮುತ್ತು ನಾಟಕ ಖ್ಯಾತಿ ಯ ಸತೀಶ್ ಪೈ,ಸಂತೋಷ್ ಪೈ ಕುಂದಾಪುರ ಹಾಗೂ 45 ಕ್ಕೂ ಅಧಿಕ ಕಲಾವಿದರು ನಟನೆ ಮಾಡಿದ್ದಾರೆ.

ವಿದೇಶದಲ್ಲಿ ಈ ನಾಟಕ ವೀಕ್ಷಣೆಗೆ ಅವಕಾಶ ಮಾಡಿ ಕೊಟ್ಟ ಕರೋಪಾಡಿ ಅಕ್ಷಯ್ ನಾಯಕ್,ಹಾಗೂ ಸೂರಜ್ ಭಟ್ ತಂಡಕ್ಕೆ ಅಪಾರ ಯಶಸ್ಸು ಸಿಗಲಿ ಎಂದು GSB ಸಮಾಜ ಭಾಂದವರು ಹರಸಿದರು.

Leave a Comment

Your email address will not be published. Required fields are marked *