ಮೂಡಿಗೆರೆ: ರಸ್ತೆ ಮಧ್ಯೆ ಬರ್ತ್‌ಡೇ ಪಾರ್ಟಿ ಆಚರಿಸಿದ ಬೆಳ್ತಂಗಡಿಯ 9 ಮಂದಿ ವಿರುದ್ದ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪ ರಸ್ತೆಯಲ್ಲಿ ನಿಂತು ವಾಹನದ ಮೇಲೆ ಗೆಳೆಯರು ಸೇರಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದವರ ವಿರುದ್ಧ ಸ್ಥಳೀಯ ಪೊಲೀಸರು 9 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

. Ad Widget . Ad Widget

ಮಡಂತ್ಯಾರ್‌ ಗ್ರಾಮದ ರೋಹಿತ್‌ ಪೈ (19) ಎಂಬಾತನ ಹುಟ್ಟುಹಬ್ಬದ ಪ್ರಯುಕ್ತ ಮೇ 28ರಂದು ರಾತ್ರಿ ಕೊಟ್ಟಿಗೆಹಾರ ಸಮೀಪ ರಸ್ತೆಯಲ್ಲಿ ಕೇಕ್‌ ಕತ್ತರಿಸಿ ಬಳಿಕ ಮುಖಕ್ಕೆ ಬಳಿದುಕೊಂಡು ಕಿರುಚಾಡುತ್ತಿದ್ದುದನ್ನು ರಾತ್ರಿ ಕರ್ತವ್ಯದಲ್ಲಿದ್ದ ಬಣಕಲ್‌ ಪೊಲೀಸರು ಘಟನೆ ಕಂಡು ಪರಿಶೀಲನೆ ನಡೆಸಿದ್ದಾರೆ.

. Ad Widget . . Ad Widget . Ad Widget

ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದವರಾದ ಗಣೇಶ (24), ಪ್ರದೀಪ (19), ಸೂರಜ್‌ ಎಸ್‌. ಸಾಲಿಯಾನ್‌ (19), ಸುಜಿತ್‌ (19), ಅಜಿತ್‌ (18), ಸುದೀಪ್‌ (23), ಮಡಂತ್ಯಾರ್‌ ಗ್ರಾಮದವರಾದ ಸೂರಜ್‌ ಶೆಟ್ಟಿ (23), ಮೊಹಮ್ಮದ್‌ ಅಶ್ರಫ್‌, ರೋಹಿತ್‌ ಪೈ (19) ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *