ದ.ಕ‌ ಜಿಲ್ಲೆಯಲ್ಲಿ ದಸರಾ ರಜೆ ಅ.22ರ ವರೆಗೆ ವಿಸ್ತರಣೆ

ಸಮಗ್ರ ನ್ಯೂಸ್: ದ.ಕ.ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ, ಖಾಸಗಿ ಶಾಲೆಗಳಿಗೆ ಅ.22ರ ಗುರುವಾರ ಒಂದು ದಿನ ರಜೆ ವಿಸ್ತರಿಸಿ‌ ಆದೇಶಿಸಲಾಗಿದೆ‌.

. Ad Widget . Ad Widget . Ad Widget

ನವರಾತ್ರಿ ಉತ್ಸವದ ಕೊನೆಯ ದಿನದಂದು (ಅ.21) ತಡರಾತ್ರಿಯವರೆಗೆ ಕಾರ್ಯಕ್ರಮವಿರುವ ಕಾರಣ ವಿದ್ಯಾರ್ಥಿಗಳಿಗೆ ಮರುದಿನ (ಅ.22) ಶಾಲೆಗಳಿಗೆ ತೆರಳಲು ಸಮಸ್ಯೆಯಾಗಲಿದೆ. ಹಾಗಾಗಿ ಈ ಬಗ್ಗೆ ಪರಿಶೀಲಿಸಬೇಕು ಎಂದು ಸಾರ್ವಜನಿಕರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ಗಮನ ಸೆಳೆದಿದ್ದರು.

. Ad Widget .

ಆ ಹಿನ್ನೆಲೆಯಲ್ಲಿ ಈ ಬಗ್ಗೆ ಕ್ರಮ ಜರಗಿಸುವಂತೆ ಸಚಿವ ಖಾದರ್ ದ.ಕ.ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಅ.22ರ ಗುರುವಾರ ಜಿಲ್ಲೆಯ ಎಲ್ಲಾ ಅಂಗನವಾಡಿ, ಖಾಸಗಿ ಮತ್ತು ಸರಕಾರಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

Leave a Comment

Your email address will not be published. Required fields are marked *