‘ಏಯ್, ಅವ್ನನ್ನ ಆಚೆ ಕಳ್ಸಿ’| ಮಂಗಳೂರಿನಲ್ಲಿ ಮುಸ್ಲಿಂ ಮುಖಂಡನ ಮೇಲೆ ಗರಂ ಆದ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಪ್ರತೀಕಾರದ ಕೊಲೆಗಳ ಸರಣಿ ಮುಂದೂವರೆದಿದೆ. ಮಂಗಳೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದ್ದಾರೆ. ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ವೇಳೆ ಸಚಿವರು ಮಾತಾಡುವಾಗ ಮುಸ್ಲಿಂ ಮುಖಂಡನೊಬ್ಬ ಅವರ ಮಾತಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದನು.

. Ad Widget . Ad Widget

ಇದರಿಂದ ಕೋಪಗೊಂಡ ಗುಂಡೂರಾವ್ ಮೊದಲಿಗೆ ಸುಮ್ಮನಿರುವಂತೆ ಗದುರಿದರು. ಇದಕ್ಕೆ ಸುಮ್ಮನಾಗದ ಆತ ಮಾತಾಡುವುದು ಮುಂದುವರಿಸಿದಾಗ ತಾಳ್ಮೆ ಕಳೆದುಕೊಳ್ಳುವ ದಿನೇಶ್ ಗುಂಡೂರಾವ್ ಆತನನ್ನು ಅಲ್ಲಿಂದ ಹೊರಗೆ ಹಾಕುವಂತೆ ಹೇಳುತ್ತಾರೆ.

. Ad Widget . . Ad Widget . Ad Widget

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೇ ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಯಿತು. ಈ ಘಟನೆಯಿಂದ ಕೆರಳಿದ ಮುಸ್ಲಿಂ ಮುಖಂಡರು ಕಾಂಗ್ರೆಸ್ ಗೆ ಸಾಮೂಹಿಕ ರಾಜಿನಾಮೆ ನೀಡಿದ್ದರು. ಇನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೀಶ್ ಪೂಜಾರಿ ಅವರ ಪುತ್ರ ದೀಪಕ್(21), ಪ್ರಮೋದ್ ರಾಜ್ ಜೋಗಿ ಅವರ ಪುತ್ರ ಪೃಥ್ವಿರಾಜ್(21) ಮತ್ತು ಸುರೇಶ್ ಬೆಲ್ಚಡ ಅವರ ಪುತ್ರ ಚಿಂತನ್(19) ಎಂಬುವರನ್ನು ಬಂಧಿಸಲಾಗಿದೆ.

Leave a Comment

Your email address will not be published. Required fields are marked *