ಟೋಕಿಯೊ : ಪ್ರತಿ ವರ್ಷದಂತೆ ಈ ವರ್ಷ ಕೂಡ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳಿಗೆ ಕೋಂಡಮ್ ವಿತರಿಸಲು ಸಂಘಟಕರು ಸಿದ್ದತೆಯನ್ನು ನಡೆಸಿದ್ದಾರೆ.
ಜುಲೈ 23ರಿಂದ ಟೋಕಿಯೊ ಜಾಗತಿಕ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಆತಿಥೇಯ ಜಪಾನ್ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್ಗಳನ್ನು ಸಂಘಟಕರು ವಿತರಿಸಲು ಸಿದ್ದತೆ ಮಾಡಿದ್ದಾರೆ.
ಪ್ರತಿ ವರ್ಷ ಕೂಡ ಕಾಂಡಮ್ ವಿತರಿಸಲಾಗುತ್ತದೆ. ಆದರೆ ಈ ಬಾರಿ ಕೋಂಡಮ್ ಬಳಸದೆ ಊರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಸಂಘಟಕರು ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದೈಹಿಕ ಸಂಪರ್ಕಕ್ಕೆ ಕಡಿವಾಣ ಹಾಕುವ ರೂಲ್ಸ್ ಕೂಡ ಜಾರಿಯಲ್ಲಿದೆ. ಆದರೆ ಸಂಪ್ರದಾಯದಂತೆ ಕಾಂಡಮ್ ವಿತರಿಸಲಾಗುತ್ತಿದೆ.
ಈ ಕಾಂಡೋಮ್ಗಳನ್ನು ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದೂ ಜಪಾನ್ ಸಂಘಟಕರು ಸಲಹೆ ನೀಡಿದ್ದಾರೆ.
1988ರ ಸಿಯೋಲ್ ಒಲಿಂಪಿಕ್ಸ್ ನ ಬಳಿಕ ಏಡ್ಸ್ ರೋಗದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಪ್ರತಿ ಒಲಿಂಪಿಕ್ಸ್ ವೇಳೆ ಕಾಂಡೋಮ್ಗಳನ್ನು ಉಚಿತವಾಗಿ ವಿತರಿಸುತ್ತಿದೆ.