Ad Widget

ಒಲಿಂಪಿಕ್ಸ್​ ಕೂಟದಲ್ಲಿ ಕ್ರೀಡಾಪಟುಗಳಿಗೆ 1.60 ಲಕ್ಷ ಕಾಂಡೋಮ್ ಹಂಚಿಕೆ, ಆದ್ರೂ ಬಳಕೆ ಮಾಡಂಗಿಲ್ಲ! ಮತ್ತೇನ್ ಮಾಡ್ತಾರೆ?

ಟೋಕಿಯೊ : ಪ್ರತಿ ವರ್ಷದಂತೆ ಈ ವರ್ಷ ಕೂಡ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಬರುವ ಕ್ರೀಡಾಪಟುಗಳಿಗೆ ಕೋಂಡಮ್ ವಿತರಿಸಲು ಸಂಘಟಕರು ಸಿದ್ದತೆಯನ್ನು ನಡೆಸಿದ್ದಾರೆ.

Ad Widget . Ad Widget . Ad Widget . Ad Widget . Ad Widget . Ad Widget

ಜುಲೈ 23ರಿಂದ ಟೋಕಿಯೊ ಜಾಗತಿಕ ಒಲಿಂಪಿಕ್ಸ್​ ಕ್ರೀಡಾಕೂಟವನ್ನು ಆಯೋಜಿಸಲು ಆತಿಥೇಯ ಜಪಾನ್​ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಕ್ರೀಡಾಕೂಟದಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದು, ಅವರೆಲ್ಲರಿಗೂ ತಲಾ 14ರಂತೆ ಒಟ್ಟಾರೆ 1.60 ಲಕ್ಷ ಕಾಂಡೋಮ್​ಗಳನ್ನು ಸಂಘಟಕರು ವಿತರಿಸಲು ಸಿದ್ದತೆ ಮಾಡಿದ್ದಾರೆ.

Ad Widget . Ad Widget .

ಪ್ರತಿ ವರ್ಷ ಕೂಡ ಕಾಂಡಮ್ ವಿತರಿಸಲಾಗುತ್ತದೆ. ಆದರೆ ಈ ಬಾರಿ ಕೋಂಡಮ್ ಬಳಸದೆ ಊರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಸಂಘಟಕರು ಹೇಳಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ದೈಹಿಕ ಸಂಪರ್ಕಕ್ಕೆ ಕಡಿವಾಣ ಹಾಕುವ ರೂಲ್ಸ್ ಕೂಡ ಜಾರಿಯಲ್ಲಿದೆ. ಆದರೆ ಸಂಪ್ರದಾಯದಂತೆ ಕಾಂಡಮ್ ವಿತರಿಸಲಾಗುತ್ತಿದೆ.

ಈ ಕಾಂಡೋಮ್​ಗಳನ್ನು ಸ್ಮರಣಿಕೆಗಳ ರೀತಿಯಲ್ಲಿ ತವರಿಗೆ ಕೊಂಡೊಯ್ಯಿರಿ ಎಂದೂ ಜಪಾನ್​ ಸಂಘಟಕರು ಸಲಹೆ ನೀಡಿದ್ದಾರೆ.

1988ರ ಸಿಯೋಲ್​ ಒಲಿಂಪಿಕ್ಸ್​ ನ ಬಳಿಕ ಏಡ್ಸ್​ ರೋಗದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್​ ಸಮಿತಿ ಪ್ರತಿ ಒಲಿಂಪಿಕ್ಸ್​ ವೇಳೆ ಕಾಂಡೋಮ್​ಗಳನ್ನು ಉಚಿತವಾಗಿ ವಿತರಿಸುತ್ತಿದೆ.

Leave a Comment

Your email address will not be published. Required fields are marked *