ಮುಂಬೈ: ಟೀಂ ಇಂಡಿಯಾ ಆಟಗಾರರು ಹಲಾಲ್ ಪ್ರಮಾಣಿಕೃತ ಮಾಂಸವನ್ನು ಮಾತ್ರ ಸೇವಿಸಬೇಕೆಂದು ಬಿಸಿಸಿಐ ಕಡ್ಡಾಯಗೊಳಿಸಿದೆ ಎನ್ನಲಾದ ಮೆನು ಲಿಸ್ಟ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಬಿಸಿಸಿಐ ಆಟಗಾರರ ಡಯಟ್ ಪ್ಲಾನ್‍ನಲ್ಲಿ ಹಲಾಲ್ ಮಾಂಸ ಪದ್ಧತಿಯನ್ನು ಸೇರಿಸಿದೆ. ಮುಂಬರುವ ಐಸಿಸಿ ಟೂರ್ನಿಗಳು ನಿರ್ಣಾಯಕವಾಗಿರುವ ಕಾರಣ, ಆಟಗಾರರನ್ನು ಫಿಟ್ ಆಗಿಡಲು ಇಂಥ ಡಯಟ್ ಪ್ಲಾನ್ ಅನಿವಾರ್ಯ. ಹಾಗಾಗಿ, ಪೋರ್ಕ್ ಮತ್ತು ಬೀಫ್ ಯಾವುದನ್ನೂ ಸೇವಿಸುವಂತಿಲ್ಲ ಎಂದು ಬಿಸಿಸಿಐ ತಾಕೀತು ಮಾಡಿದೆ. ಆದರೆ, ಬಿಸಿಸಿಐನ ಈ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಂಗಣ್ಣಿಗೆ ಗುರಿಯಾಗಿದೆ.
ಹಲಾಲ್ ಮಾಂಸ ಎಂದರೇನು?:
ಹಲಾಲ್ ಮಾಂಸ ಎಂದರೆ ಕುರಿ ಕೋಳಿ ಇನ್ನಿತರ ಪ್ರಾಣಿಗಳ ಕತ್ತು ಕುಯ್ಯುವ ಮೂಲಕ ಅದರ ರಕ್ತನಾಳಗಳನ್ನು ಕತ್ತರಿಸಿ ಸಂಪೂರ್ಣ ರಕ್ತ ಹರಿದ ಬಳಿಕ ಮಾಂಸ ಮಾಡಲಾಗುತ್ತದೆ ಇದನ್ನು ಹಲಾಲ್ ಮಾಂಸ ತಯಾರಿ ಎನ್ನಲಾಗುತ್ತದೆ.
ಟೀಂ ಇಂಡಿಯಾ ಸರ್ವಧರ್ಮೀಯ ತಂಡ. ಹಿಂದೂ, ಸಿಖ್ ಧರ್ಮದಲ್ಲಿ ಹಲಾಲ್ ಮಾಂಸ ಸೇವನೆ ನಿಷೇಧವಿದೆ. ಮುಸ್ಲಿಂ ಆಟಗಾರರಿಗೆ ಮಾತ್ರ ಹಲಾಲ್ ಮಾಂಸ ಸೇವನೆಗೆ ಅವಕಾಶ ಇದೆ. ಅವರು ಹಲಾಲ್ ಮಾಂಸ ಹೊರತುಪಡಿಸಿ ಬೇರೆ ಯಾವುದೇ ಮಾಂಸ ಸೇವಿಸುವುದಿಲ್ಲ. ಆದರೆ, ಬಿಸಿಸಿಐ ಯಾಕೆ ಇಂಥ ನಿರ್ಧಾರ ಮಾಡಿದೆ? ಬಿಸಿಸಿಐ ಹಲಾಲ್‍ಗೆ ಉತ್ತೇಜನ ಕೊಡ್ತಾ ಇದೆಯಾ? ಸರ್ವಧರ್ಮೀಯರಿರುವ ಟೀಂ ಇಂಡಿಯಾದಲ್ಲಿ ಇದೆಂತಹ ಪದ್ಧತಿ ಅಂತ ನೆಟ್ಟಿಗರು ಮುಗಿಬಿದ್ದಿದ್ದಾರೆ. ಬಿಸಿಸಿಐನ ಈ ನಿಯಮದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಏತನ್ಮಧ್ಯೆ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ವಾಹಿನಿ ಒಂದಕ್ಕೆ ‘ಮಂಡಳಿಯಿಂದ ಅಂತಹ ಯಾವುದೇ ಸುತ್ತೋಲೆಯನ್ನ ಹೊರಡಿಸಲಾಗಿಲ್ಲ. ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಹಾರವನ್ನ ಸೇವಿಸುವುದು ಅಥವಾ ಹಲಾಲ್ ಅಥವಾ ಹಲಾಲ್ ಅಲ್ಲದ ಮಾಂಸವನ್ನು ಸೇವಿಸುವುದು ಸಂಪೂರ್ಣವಾಗಿ ಆಟಗಾರನ ಸ್ವಂತ ಆಯ್ಕೆಯಾಗಿದೆ. ಮಂಡಳಿಯು ಈ ಬಗ್ಗೆ ಎಂದಿಗೂ ಯಾವುದೇ ಸೂಚನೆಗಳನ್ನು ನೀಡಿಲ್ಲ’ ಎಂದಿದ್ದಾರೆ.
ಆಹಾರ ಮೆನು ಬಗ್ಗೆ ವಿವಾದ..!
ಸಾಮಾಜಿಕ ಮಾಧ್ಯಮದ ಪ್ರಕಾರ, ಬಿಸಿಸಿಐ ಟೀಮ್ ಇಂಡಿಯಾದ ಆಟಗಾರರಿಗೆ ಆಹಾರ ಮೆನುವನ್ನ ಬಿಡುಗಡೆ ಮಾಡಿದೆ. ಆಹಾರ ಯೋಜನೆಯಲ್ಲಿ ದಿನವಿಡೀ ತಿಂಡಿಗಳು, ಕ್ರೀಡಾಂಗಣದಲ್ಲಿ ಮಿನಿ ಉಪಾಹಾರಗಳು, ಮಧ್ಯಾಹ್ನ ಊಟ, ಚಹಾ ಸಮಯದ ತಿಂಡಿಗಳು ಮತ್ತು ರಾತ್ರಿ ಊಟ ಮತ್ತು ಹಂದಿ ಮಾಂಸ ಹಾಗೂ ಗೋಮಾಂಸವನ್ನ ಈ ಮೆನುವಿನಿಂದ ಹೊರಗಿಡಲಾಗಿದೆ. ಮಾಂಸಾಹಾರಿ ಭಕ್ಷ್ಯಗಳಿಗೆ ಮಾತ್ರ ಹಲಾಲ್ ಮಾಂಸದ ಬಳಕೆ ಎಂದು ಕೂಡ ಅದು ಉಲ್ಲೇಖಿಸಿದೆ ಎಂದು ವರದಿಯಾಗಿದೆ.
Halal, a religiously discriminatory practice that promotes differentiation between Mu&lims & non-Mu&lims
— Deeksha Mangalore (@DMangaloree) November 23, 2021
The new dietary plan followed by the Indian team is profoundly disturbing, given that it lays emphasis on consuming only halal-certified meat products. #BCCI_Promotes_Halal pic.twitter.com/q5InPwo2MN
Why You Are Imposing Halal On Non-Muslims ?
— Vinay Prabhu (@VinayaPrabhu10) November 23, 2021
Is Halal Economic Jihad ?
What Is Your Goal ?
Halal Is a Route To Do Islamisation Of India !
Is It Not ?#BCCI_Promotes_Halal#tuesdaymotivations pic.twitter.com/Kj9uq5re9I