October 2026

ರಾಜ್ಯಾದ್ಯಂತ ಚಳಿ, ಒಣಹವೆ ಆರಂಭ| ಕಣ್ಮರೆಯಾದ ಹಿಂಗಾರು ಮಳೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಸದ್ಯ ಒಣ ಹವಾಮಾನ ಮುಂದುವರಿದಿದ್ದು, ದಾವಣಗೆರೆಯಲ್ಲಿ ಕನಿಷ್ಠ ತಾಪಮಾನ 12.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಚಳಿಯ ಅನುಭವ ಹೆಚ್ಚಾಗಿದೆ. ಮುಂದಿನ ಎರಡು ದಿನಗಳಲ್ಲೂ ರಾಜ್ಯದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನವೇ ಮುಂದುವರಿಯುವ ಮುನ್ಸೂಚನೆ ಇದೆ. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದೆ. ರಾಜ್ಯದಲ್ಲಿ ದಾಖಲಾದ ಹವಾಮಾನ ಮಾಹಿತಿಯ ಪ್ರಕಾರ, ದಾವಣಗೆರೆ ಬಯಲು ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ 12.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮತ್ತೊಂದೆಡೆ,

ರಾಜ್ಯಾದ್ಯಂತ ಚಳಿ, ಒಣಹವೆ ಆರಂಭ| ಕಣ್ಮರೆಯಾದ ಹಿಂಗಾರು ಮಳೆ Read More »

ಪಶ್ಚಿಮ ಏಷ್ಯಾ ಸಂಘರ್ಷ| 14 ನಾವಿಕರು ಸೇರಿದಂತೆ 22 ಭಾರತೀಯರು ಸಾವು

ಸಮಗ್ರ ನ್ಯೂಸ್: ಪಶ್ಚಿಮ ಏಷ್ಯಾದಲ್ಲಿ (West Asia) ಉಲ್ಬಣಿಸಿರುವ ಯುದ್ಧ ಮತ್ತು ಬಿಕ್ಕಟ್ಟಿನ ಪರಿಣಾಮವಾಗಿ ಕಳೆದ ಫೆಬ್ರವರಿಯಿಂದ ಇದುವರೆಗೆ 14 ನಾವಿಕರು ಸೇರಿದಂತೆ ಒಟ್ಟು 22 ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ಸಚಿವಾಲಯ (MEA) ಅಧಿಕೃತವಾಗಿ ತಿಳಿಸಿದೆ. ​ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರರು, “ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಂಘರ್ಷದ ಕುರಿತು ಭಾರತ ತೀವ್ರ ಕಳವಳ ಹೊಂದಿದೆ. ಈ ಸಂಘರ್ಷದಲ್ಲಿ ನಾವು 14 ನಾವಿಕರು ಸೇರಿದಂತೆ 22 ಭಾರತೀಯ ಪ್ರಜೆಗಳನ್ನು

ಪಶ್ಚಿಮ ಏಷ್ಯಾ ಸಂಘರ್ಷ| 14 ನಾವಿಕರು ಸೇರಿದಂತೆ 22 ಭಾರತೀಯರು ಸಾವು Read More »

ಶಾಸಕ ವೀರೇಂದ್ರ ಪಪ್ಪಿ ಆಸ್ತಿ ಜಪ್ತಿ ಮಾಡಿದ ಇಡಿ| 23.35 ಕೋಟಿ ಆಸ್ತಿ ವಶಕ್ಕೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಇಡಿ ಮತ್ತೆ ಬಿಗ್​ ಶಾಕ್​ ಕೊಟ್ಟಿದೆ. ಆನ್​ಲೈನ್ ಬೆಟ್ಟಿಂಗ್, ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮತ್ತು ಇತರರಿಗೆ ಸೇರಿದ್ದ 23.35 ಕೋಟಿ ರೂ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ‘ಕಿಂಗ್ 567’ ಆಯಪ್ ಮೂಲಕ ವಂಚಿಸಿ ₹2,300 ಕೋಟಿಗೂ ಅಧಿಕ ಅಕ್ರಮ ವ್ಯವಹಾರ ನಡೆಸಿದ ಆರೋಪ ಇವರ ಮೇಲಿದ್ದು, ಈವರೆಗೆ ಒಟ್ಟು ₹343 ಕೋಟಿ ಮೌಲ್ಯದ ಆಸ್ತಿಯನ್ನು

ಶಾಸಕ ವೀರೇಂದ್ರ ಪಪ್ಪಿ ಆಸ್ತಿ ಜಪ್ತಿ ಮಾಡಿದ ಇಡಿ| 23.35 ಕೋಟಿ ಆಸ್ತಿ ವಶಕ್ಕೆ Read More »

ಚುರುಕುಗೊಂಡ ಸೌಜನ್ಯ ಕೊಲೆ ಪ್ರಕರಣ ತನಿಖೆ| ಹಿಂದಿನ ತನಿಖಾಧಿಕಾರಿ ಸೇರಿ 15 ಮಂದಿಗೆ ಎಸ್ ಐಟಿ ನೊಟೀಸ್

ಸಮಗ್ರ ನ್ಯೂಸ್: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಯನ್ನು ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ (SIT) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪ್ರಕರಣದ ಆರಂಭಿಕ ಹಂತದಲ್ಲಿ ತನಿಖೆ ನಡೆಸಿದ್ದ ಮಾಜಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಸ್‌ಐಟಿ ಇದೀಗ ಸಮನ್ಸ್/ನೋಟಿಸ್ ಜಾರಿ ಮಾಡಿದೆ. 2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಈ ಭೀಕರ ಅತ್ಯಾಚಾರ-ಹತ್ಯೆ ಪ್ರಕರಣದ ಆರಂಭಿಕ ಹಂತದ ಸ್ಥಳೀಯ ಪೊಲೀಸರು, ಸಿಐಡಿ ಹಾಗೂ ಸಿಬಿಐ ತನಿಖಾ ತಂಡದಲ್ಲಿದ್ದ 15ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು

ಚುರುಕುಗೊಂಡ ಸೌಜನ್ಯ ಕೊಲೆ ಪ್ರಕರಣ ತನಿಖೆ| ಹಿಂದಿನ ತನಿಖಾಧಿಕಾರಿ ಸೇರಿ 15 ಮಂದಿಗೆ ಎಸ್ ಐಟಿ ನೊಟೀಸ್ Read More »

ವಿಧಾನಪರಿಷತ್ ಚುನಾವಣೆ| ಮೈತ್ರಿಕೂಟಕ್ಕೆ ಗೆಲುವು; ಕಾಂಗ್ರೆಸ್ ಗೆ ಮುಖಭಂಗ

ಸಮಗ್ರ ನ್ಯೂಸ್: ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ- ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು ಧಕ್ಕಿದ್ದು, ಆಡಳಿತಾ ರೂಢ ಕಾಂಗ್ರೆಸ್‌ಗೆ ಭಾರೀ ಹಿನ್ನಡೆ ಆಗಿದೆ. ಇದೇ ತಿಂಗಳ ಅಕ್ಟೋಬರ್ 23ರಂದು ಮತದಾನ ನಡೆದಿತ್ತು. ಇವತ್ತು ಫಲಿತಾಂಶ ಬಿಡುಗಡೆ ಆಗಿದ್ದು, ಬಿಜೆಪಿ ಜೆಡಿಎಸ್‌ ಮೈತ್ರಿ (NDA) ಅಭ್ಯರ್ಥಿ ಎ.ಪಿ ರಂಗನಾಥ್ 908 ಮತಗಳ ಅಂತರದಿಂದ ಭಾರೀ ಗೆಲುವು ಪಡೆದಿದ್ದಾರೆ. ಈ ಮೂಲಕ 5 ಬಾರಿ

ವಿಧಾನಪರಿಷತ್ ಚುನಾವಣೆ| ಮೈತ್ರಿಕೂಟಕ್ಕೆ ಗೆಲುವು; ಕಾಂಗ್ರೆಸ್ ಗೆ ಮುಖಭಂಗ Read More »

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರಸ್ತೆಗಿಳಿದ ‘ಪಿಂಕ್ ಆಟೋ’

ಸಮಗ್ರ ನ್ಯೂಸ್: ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಗೆ ಉತ್ತೇಜನ ನೀಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿನೂತನ ಯೋಜನೆಯೊಂದು ಗಮನ ಸೆಳೆಯುತ್ತಿದೆ. ಮಹಿಳೆಯರೇ ಚಾಲನೆ ಮಾಡುವ ಪಿಂಕ್ ಎಲೆಕ್ಟ್ರಿಕ್ ಆಟೋರಿಕ್ಷಾಗಳು ಇದೀಗ ಸುಳ್ಯ ಹಾಗೂ ಬಂಟ್ವಾಳದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3181 ವತಿಯಿಂದ ಜಾರಿಗೊಳಿಸಲಾಗಿರುವ ‘ಸಖಿ’ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಸ್ವಂತ ಉದ್ಯೋಗ ಆರಂಭಿಸಲು ಹೊಸ ಅವಕಾಶ ಕಲ್ಪಿಸುತ್ತಿದೆ. ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಆರಂಭಿಸಲಾಗಿರುವ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ರಸ್ತೆಗಿಳಿದ ‘ಪಿಂಕ್ ಆಟೋ’ Read More »

ಮಂಗಳೂರಿನಿಂದ ಆಟೋ ಮೂಲಕ ಕಾಶ್ಮೀರ ತಲುಪಿದ ನಾಲ್ವರು ಗೆಳೆಯರು

ಸಮಗ್ರ ನ್ಯೂಸ್: ಬದುಕಿಗೆ ಆಸರೆಯಾಗಿರುವ ಆಟೋ ಸಾವಿರಾರು ಕಿಲೋಮೀಟರ್ ದೂರದ ಕಾಶ್ಮೀರದತ್ತ ನಾಲ್ವರು ಸ್ನೇಹಿತರ ಕನಸನ್ನು ಹೊತ್ತು ಸಾಗುತ್ತಿದೆ. ಊರಿನ ರಸ್ತೆಗಳಲ್ಲಿ ಸಲೀಸಾಗಿ ಓಡುತ್ತಿದ್ದ ಇದು, ಇಂದು ಹಿಮಾಚ್ಛಾದಿತ ಪರ್ವತಗಳ ನಡುವೆ ಕೊರೆಯುವ ಚಳಿಯನ್ನು ಎದುರಿಸುತ್ತಿದೆ. ಈ ಸಾಹಸಕ್ಕೆ ಕೈಹಾಕಿರುವುದು ದ.ಕ. ಜಿಲ್ಲೆ ಉಳ್ಳಾಲ ತಾಲೂಕಿನ ದೇರಳಕಟ್ಟೆಯ ನಾಲ್ವರು ಯುವಕರು. ಸುಮಾರು ಆರೇ‍ಳು ವರ್ಷಗಳಿಂದ ಮನಸ್ಸಿನಲ್ಲಿದ್ದ ಕಾಶ್ಮೀರ ಪ್ರವಾಸದ ಕನಸಿಗೆ ಅ.10ರಂದು ಚಾಲನೆ ನೀಡಿದವರು ದೇರಳಕಟ್ಟೆಯ ಸಾದಿಕ್, ಹಜೀಮ್, ಹಸನ್ ಮತ್ತು ಹಫೀದ್. ಐಷಾರಾಮಿ ಕಾರುಗಳ ಬದಲಿಗೆ

ಮಂಗಳೂರಿನಿಂದ ಆಟೋ ಮೂಲಕ ಕಾಶ್ಮೀರ ತಲುಪಿದ ನಾಲ್ವರು ಗೆಳೆಯರು Read More »

ಬಂಟ್ವಾಳ: ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು

ಸಮಗ್ರ ನ್ಯೂಸ್: ಮನೆಯ ಹಾಲ್‌ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಿಟಕಿಯ ಹಗ್ಗ ಕುತ್ತಿಗೆಗೆ ಸಿಲುಕಿ 9 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಕೆಂತಲೆ ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ. ಕೆಂತಲೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ನತದೃಷ್ಟ ಬಾಲಕ. ಅಕ್ಟೋಬರ್ 25ರ ರಾತ್ರಿ ಬಾಲಕ ಅಮೃತ್ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಮನೆಯ

ಬಂಟ್ವಾಳ: ಆಟವಾಡುತ್ತಿದ್ದಾಗ ಕುತ್ತಿಗೆಗೆ ಹಗ್ಗ ಸಿಲುಕಿ ಬಾಲಕ ಸಾವು Read More »

ಮಂಗಳೂರು : ದ್ವಿಚಕ್ರ ವಾಹನ ಕಳವು| ಮೂವರು ಅಪ್ರಾಪ್ತರ ಸಹಿತ ಏಳು ಆರೋಪಿಗಳ ಬಂಧನ

ಸಮಗ್ರ ನ್ಯೂಸ್: : ಐಷಾರಾಮಿ ಜೀವನಕ್ಕಾಗಿ ನಗರದ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾದ ದ್ವಿಚಕ್ರ ಕಳವು ಮಾಡುತ್ತಿದ್ದ 7ಮಂದಿ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ನಾಲ್ವರು 18-19ವರ್ಷ ಆಸುಪಾಸಿನವರಾದರೆ, ಉಳಿದ ಮೂವರು ಅಪ್ರಾಪ್ತರು. ವಾಮಂಜೂರು ಮೂಡುಶೆಡ್ಡೆ ನಿವಾಸಿ ಮಹಮ್ಮದ್ ಸಿಯಾಮ್ (19) ತೋಕೂರು ಬೈಕಂಪಾಡಿ ನಿವಾಸಿ ಮುಹಮ್ಮದ್ ನಾಸ್ೀ (19), ಮೂಡುಶೆಡ್ಡೆ ಶಿವನಗರ ನಿವಾಸಿ ಮೊಹಮ್ಮದ್ ರಾಹೀಲ್ (18), ತಿರುವೈಲು ಕುಟ್ಟಿಪಲ್ಕೆ ನಿವಾಸಿ ನಿಖಿಲ್ (18) ಪ್ರಕರಣದ ಆರೋಪಿಗಳು. ಅಪ್ರಾಪ್ತ ಮೂವರು ಆರೋಪಿಗಳಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಅ.12ರಂದು

ಮಂಗಳೂರು : ದ್ವಿಚಕ್ರ ವಾಹನ ಕಳವು| ಮೂವರು ಅಪ್ರಾಪ್ತರ ಸಹಿತ ಏಳು ಆರೋಪಿಗಳ ಬಂಧನ Read More »

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಸೃಷ್ಟಿ| ಅ. 28 ರಿಂದ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಮುನ್ಸೂಚನೆಯಂತೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ತೀವ್ರಗೊಂಡು ಹವಾಮಾನ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಯಾಗಿದೆ. ವೈಪರೀತ್ಯವು ತೀವ್ರ ಸ್ವರೂಪದೊಂದಿಗೆ ‘ಅರ್ನಾಬ್’ ಚಂಡಮಾರುತವಾಗಿ ಬದಲಾಗಿದೆ. ಇದರ ಪರಿಣಾಮವಾಗಿ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿವೆ ಎಂದು ಐಎಂಡಿ ತಿಳಿಸಿದೆ. ಹವಾಮಾನ ಇಲಾಖೆ ನಿಗದಿಯಂತೆ ಸೋಮವಾರ (ಅಕ್ಟೋಬರ್ 26) ಚಂಡಮಾರುತದ ಅಬ್ಬರ ಶುರುವಾಗಿದೆ. ಪುದುಚೆರಿ, ಆಂಧ್ರ ಪ್ರದೇಶ, ಓಡಿಶಾ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ ಸೇರಿದಂತೆ ಕರಾವಳಿ ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರೀ

ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಸೃಷ್ಟಿ| ಅ. 28 ರಿಂದ ದಕ್ಷಿಣ ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ Read More »