ಅಮೆರಿಕಾ – ಇರಾನ್ ಯುದ್ದ ವಿರಾಮಕ್ಕೆ ಒಪ್ಪಂದ ಮುಗಿದ ಅಧ್ಯಾಯ ಎಂದ ಟ್ರಂಪ್| ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ
ಸಮಗ್ರ ನ್ಯೂಸ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ಐತಿಹಾಸಿಕ ಕದನ ವಿರಾಮ ಒಪ್ಪಂದವು ಕೇವಲ ಮೂರು ವಾರಗಳ ಮಿಲಿಟರಿ ಸಂಘರ್ಷಗಳ ನಂತರ ಸಂಪೂರ್ಣವಾಗಿ ಧೂಳೀಪಟವಾಗಿದೆ. ಬುಧವಾರ ಟರ್ಕಿಯ ಅಂಕಾರಾದಲ್ಲಿ ನಡೆಯುತ್ತಿರುವ ನಾಟೋ (NATO) ಶೃಂಗಸಭೆಯ ನಡುವೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಜೊತೆಗಿನ ಒಪ್ಪಂದವು ಅಧಿಕೃತವಾಗಿ “ಮುಗಿದ ಅಧ್ಯಾಯ” ಎಂದು ಘೋಷಿಸಿದ್ದಾರೆ . ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗಳಿಗೆ ಪ್ರತಿಯಾಗಿ ಅಮೆರಿಕವು ಇರಾನ್‌ನೊಳಗಿನ 80 ಕ್ಕೂ ಹೆಚ್ಚು […]









