April 2026

ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಳೆಂದು ಸಾವಿಗೆ ಶರಣಾದ ಪ್ರಿಯಕರ| ಮನೆಯವರ ವಿರೋಧಕ್ಕೆ ಮಸಣ ಪಾಲಾದ ಪ್ರೀತಿ!!

ಸಮಗ್ರ ನ್ಯೂಸ್: ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದು ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ. ಮದುವೆ ವಿಚಾರವಾಗಿ ಮನೆಯವರ ವಿರೋಧ ಎದುರಿಸಿದ ಹಿನ್ನೆಲೆಯಲ್ಲಿ, ಇಬ್ಬರು ಪ್ರೇಮಿಗಳು ಚರ್ಚೆ ನಡೆಸುವ ವೇಳೆ ಗಲಾಟೆ ಉಂಟಾಗಿ ವೈಮನಸ್ಸು ಉಂಟಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ಯುವತಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬನಹಟ್ಟಿಯ ಕೆಹೆಚ್‌ಡಿಸಿ ಕಾಲೋನಿ ನಿವಾಸಿ ಪವಿತ್ರಾ ಒಂಟಿ (19) ಹಾಗೂ ಅಸ್ಕಿ ಗ್ರಾಮದ ಕಾರ್ತಿಕ್ ನಾಯಕ್ (19) ಮೃತಪಟ್ಟ […]

ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಳೆಂದು ಸಾವಿಗೆ ಶರಣಾದ ಪ್ರಿಯಕರ| ಮನೆಯವರ ವಿರೋಧಕ್ಕೆ ಮಸಣ ಪಾಲಾದ ಪ್ರೀತಿ!! Read More »

ಕದನ ವಿರಾಮ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ತೆರವು| ತೈಲ ಸಾಗಣೆ ಸುಗಮ, ಕಚ್ಚಾ ತೈಲ‌ ಬೆಲೆಯಲ್ಲಿ ಕುಸಿತ

ಸಮಗ್ರ ನ್ಯೂಸ್: ಎರಡು ವಾರಗಳ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಒಪ್ಪಿಗೆ ಕೊಡುತ್ತಿದ್ದಂತೆ ಇತ್ತ ಇರಾನ್ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಅನುಮತಿ ನೀಡಿದ್ದು, ಇರಾನ್​ನಿಂದ ತೈಲ ಸಾಗಾಟ ಸುಗಮವಾಗಲಿದೆ. ಭಾರತ ಸೇರಿ ಅನೇಕ ದೇಶಗಳಿಗೆ ಇದರಿಂದ ಅನುಕೂಲವಾಗಲಿದೆ.  ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಮುಂದೂಡಲು ಅಮೆರಿಕ ಅಧ್ಯಕ್ಷ ಟ್ರಂಪ್ ನಿರ್ಧರಿಸಿದ್ದು, ಜಾಗತಿಕ ಮಾರುಕಟ್ಟೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಘೋಷಣೆಯ ನಂತರ, ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿವೆ ಮತ್ತು ಅಮೆರಿಕದ ಷೇರುಗಳು

ಕದನ ವಿರಾಮ ಬೆನ್ನಲ್ಲೇ ಹಾರ್ಮುಜ್ ಜಲಸಂಧಿ ತೆರವು| ತೈಲ ಸಾಗಣೆ ಸುಗಮ, ಕಚ್ಚಾ ತೈಲ‌ ಬೆಲೆಯಲ್ಲಿ ಕುಸಿತ Read More »

ಶಿಕ್ಷಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ| ಕೇಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಾಪಾಸ್ ಪಡೆದ ಎಸ್ಐ ಸಂದೇಶ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರ ಮುಖ್ಯ ಶಿಕ್ಷಕಿ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಆರೋಪದಲ್ಲಿ ಸದ್ಯ ಸೇವೆಯಿಂದ ಅಮಾನತುಗೊಂಡಿರುವ ಮೂಡಬಿದಿರೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಪಿ.ಜಿ.ಸಂದೇಶ್‌ ಅವರಿಗೆ ಚಾಟಿ ಬೀಸಿದ ಹೈಕೋರ್ಟ್, ‘ಒಬ್ಬ ಪೊಲೀಸ್ ಅಧಿಕಾರಿಯಾಗಿ ಹೀಗೆಲ್ಲ ಮಾಡುವಂತಿಲ್ಲ’ ಎಂದು ಕಟುವಾಗಿ ಹೇಳಿದೆ. ಅತ್ಯಾಚಾರ ಆರೋಪ ಸಂಬಂಧ ಶಿಕ್ಷಕಿಯೊಬ್ಬರು ದಾಖಲಿಸಿರುವ ದೂರು ಆಧರಿಸಿ ದಕ್ಷಿಣ ಕನ್ನಡದ ವೇಣೂರು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪಿ.ಜಿ.ಸಂದೇಶ್‌, ಉಡುಪಿಯ ಸ್ಮಿತಾ ಪೂರ್ಣಿಮಾ ಆರ್‌.ಮಲ್ಯ ಮತ್ತು ಮಂಗಳೂರಿನ

ಶಿಕ್ಷಕಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣ| ಕೇಸ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಾಪಾಸ್ ಪಡೆದ ಎಸ್ಐ ಸಂದೇಶ್ Read More »

ಮಧ್ಯಪ್ರಾಚ್ಯ ಯುದ್ದಕ್ಕೆ ವಿರಾಮ| ಅಮೇರಿಕಾ, ಇರಾನ್ ಹೇಳಿದ್ದಿಷ್ಟು…

ಸಮಗ್ರ ನ್ಯೂಸ್: ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್ ರಣಭೀಕರ ದಾಳಿಯ ಡೆಡ್​​ಲೈನ್ ಮುಗಿದಿದೆ. ಅಷ್ಟರಲ್ಲಿ ಅಮೆರಿಕ, ಇರಾನ್ 2 ವಾರಗಳ ಕದನ ವಿರಾಮ ಘೋಷಣೆ ಒಪ್ಪಂದಕ್ಕೆ ಬಂದಿವೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಇರಾನ್ ಮೇಲೆ ಅಮೆರಿಕದ ಫೈಟರ್ ಜೆಟ್‌ಗಳು ದಾಳಿ ಮಾಡಬೇಕಿತ್ತು, ಅಷ್ಟರಲ್ಲಿ ತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಪಾಕಿಸ್ತಾನದ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರ ಮನವಿಯ ಮೇರೆಗೆ ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಫೀಲ್ಡ್ ಮಾರ್ಷಲ್

ಮಧ್ಯಪ್ರಾಚ್ಯ ಯುದ್ದಕ್ಕೆ ವಿರಾಮ| ಅಮೇರಿಕಾ, ಇರಾನ್ ಹೇಳಿದ್ದಿಷ್ಟು… Read More »

ಲಾಕ್ ಡೌನ್ ಲಾಕಪ್ ಡೆತ್ ಪ್ರಕರಣ| 9 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಲ್ಲು ವಿಧಿಸಲು ಕಾರಣಳಾದ ಸಹೋದ್ಯೋಗಿ| ಯಾರು ಗೊತ್ತಾ ಈ ರೇವತಿ?

ಸಮಗ್ರ ನ್ಯೂಸ್: 2020ರಲ್ಲಿ ಕೋವಿಡ್​-19 ಲಾಕ್​ಡೌನ್ ಸಮಯದಲ್ಲಿ ನಡೆದ ಇಬ್ಬರ ಲಾಕಪ್​ ಡೆತ್​ ಕೇಸ್​ನಲ್ಲಿ 9 ಪೊಲೀಸ್​ ಅಧಿಕಾರಿಗಳಿಗೆ ಕಡೆಗೂ ಮಧುರೈ ಕೋರ್ಟ್ ಗಲ್ಲು ಶಿಕ್ಷೆ ತೀರ್ಪು ಘೋಷಿಸಿದೆ. 6 ವರ್ಷಗಳಿಂದ ಬಂಧನದಲ್ಲಿದ್ದ ಆರೋಪಿ ಖಾಕಿಗಳ ವಿರುದ್ಧ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪಿಗೆ ಸದ್ಯ ದೇಶದ ಜನತೆ ತಲೆಬಾಗಿದ್ದಾರೆ. ಈ ಸಂದರ್ಭದಲ್ಲಿ, ಅಮಾಯಕರ ಜೀವವನ್ನು ಬಲಿ ಪಡೆದ ಪೊಲೀಸ್​ ಅಧಿಕಾರಿಗಳ ವಿರುದ್ಧ ದಿಟ್ಟತನದಿಂದ ಸಾಕ್ಷಿ ಹೇಳಿದ ಓರ್ವ ಸಾಮಾನ್ಯ ಮಹಿಳಾ ಕಾನ್​ಸ್ಟೇಬಲ್​ಗೆ ಸಲಾಂ ರೇವತಿ ಎಂಬ ಕೂಗುಗಳು

ಲಾಕ್ ಡೌನ್ ಲಾಕಪ್ ಡೆತ್ ಪ್ರಕರಣ| 9 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಲ್ಲು ವಿಧಿಸಲು ಕಾರಣಳಾದ ಸಹೋದ್ಯೋಗಿ| ಯಾರು ಗೊತ್ತಾ ಈ ರೇವತಿ? Read More »

ಪುತ್ತೂರು: ಜಾತ್ರೋತ್ಸವದ ಧ್ವಜಾರೋಹಣ ಅರ್ಹತೆ ಇಲ್ಲದ ಜಗನ್ನಿವಾಸ ರಾವ್ ನಡೆಸಿದರೆ ದೇಗುಲಕ್ಕೆ ಕಪ್ಪುಚುಕ್ಕೆ – ಶೈವಕ್ಷೇತ್ರ ಸಂರಕ್ಷಣಾ ವೇದಿಕೆ

ಸಮಗ್ರ ನ್ಯೂಸ್: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪವಿತ್ರ ಜಾತ್ರೋತ್ಸವದ ಧ್ವಜಾರೋಹಣ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕೃತ ಅರ್ಹತೆ ಇಲ್ಲದ ಪಿ.ಜಿ. ಜಗನ್ನಿವಾಸ ರಾವ್ ಅವರು ಭಾಗವಹಿಸುವುದು ದೇವಸ್ಥಾನದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್. ಸುಬ್ರಹ್ಮಣ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳ ಉಲ್ಲಂಘನೆಯಾಗುತ್ತಿರುವ ಕುರಿತು ಹಲವು ಗಂಭೀರ ಆರೋಪಗಳನ್ನು ಮಾಡಿದರು. “ದೇವಸ್ಥಾನದ ನಿಯಮದಂತೆ ಧ್ವಜಾರೋಹಣ ಮತ್ತು ಅವರೋಹಣ ಮಾಡುವ ಜವಾಬ್ದಾರಿ ಕೇವಲ ಖಾಯಂ

ಪುತ್ತೂರು: ಜಾತ್ರೋತ್ಸವದ ಧ್ವಜಾರೋಹಣ ಅರ್ಹತೆ ಇಲ್ಲದ ಜಗನ್ನಿವಾಸ ರಾವ್ ನಡೆಸಿದರೆ ದೇಗುಲಕ್ಕೆ ಕಪ್ಪುಚುಕ್ಕೆ – ಶೈವಕ್ಷೇತ್ರ ಸಂರಕ್ಷಣಾ ವೇದಿಕೆ Read More »

ಎರಡು ವಾರಗಳ ಕಾಲ ಕದನ ವಿರಾಮ – ಟ್ರಂಪ್

ಸಮಗ್ರ ನ್ಯೂಸ್: ಇರಾನ್ ಮೇಲೆ ನಡೆಯುತ್ತಿರುವ ಬಾಂಬ್ ದಾಳಿ ಹಾಗೂ ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವ ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶ್ವೇತಭವನದ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಈ ಬಗ್ಗೆ CNN ವರದಿ ಮಾಡಿದೆ. ಇಸ್ರೇಲ್‌ ನ ಸರಕಾರಿ ಮಾಧ್ಯಮ ‘ಕಾನ್’ ಕೂಡ ಇಸ್ರೇಲ್ ಕದನ ವಿರಾಮಕ್ಕೆ ಸಮ್ಮತಿಸಿದೆ ಎಂದು ತಿಳಿಸಿದೆ. ಇಸ್ರೇಲ್ ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂಬ ಮಾಹಿತಿ ಅಮೆರಿಕ ಹಾಗೂ ಇಸ್ರೇಲ್ ಮಾಧ್ಯಮ ವರದಿಗಳಲ್ಲಿ ಪ್ರಕಟವಾಗಿದೆ.

ಎರಡು ವಾರಗಳ ಕಾಲ ಕದನ ವಿರಾಮ – ಟ್ರಂಪ್ Read More »

ಡ್ರಿಂಕ್ ಆ್ಯಂಡ್ ಡ್ರೈವ್| ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅರೆಸ್ಟ್

ಸಮಗ್ರ ನ್ಯೂಸ್: ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಕ್ರಿಕೆಟ್ ದಿಗ್ಗಜ ಡೇವಿಡ್ ವಾರ್ನರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರೋಪದ ಮೇಲೆ ಸಿಡ್ನಿ ಪೊಲೀಸರು ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 5, 2026ರ ಭಾನುವಾರ ಸಂಜೆ ಸುಮಾರು 5:30ಕ್ಕೆ ಸಿಡ್ನಿಯ ಮರೂಬ್ರಾ (Maroubra) ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ವಾರ್ನರ್ ಚಲಾಯಿಸುತ್ತಿದ್ದ ವ್ಯಾನ್, ತಪಾಸಣಾ ಕೇಂದ್ರಕ್ಕಿಂತ ಸ್ವಲ್ಪ ದೂರದಲ್ಲೇ ನಿಂತಿದೆ. ಇದನ್ನು ಗಮನಿಸಿದ ಸಂಚಾರ

ಡ್ರಿಂಕ್ ಆ್ಯಂಡ್ ಡ್ರೈವ್| ಮಾಜಿ ಕ್ರಿಕೆಟರ್ ಡೇವಿಡ್ ವಾರ್ನರ್ ಅರೆಸ್ಟ್ Read More »

ಗಡುವು ಬೆನ್ನಲ್ಲೇ ಭೀಕರ ಎಚ್ಚರಿಕೆ ನೀಡಿದ ಟ್ರಂಪ್| ಇಂದು ರಾತ್ರಿಯೇ ಇರಾನ್ ನಾಗರೀಕತೆ ನಾಶಪಡಿಸುವುದಾಗಿ ಬೆದರಿಕೆ

ಸಮಗ್ರ ನ್ಯೂಸ್: ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದೆ. ಹೊರ್ಮೊಜ್ ಜಲಸಂಧಿ ತೆರೆಯುವಂತೆ ಅಮೆರಿಕ, ಇರಾನ್‌ಗೆ ತಾಕೀತು ಮಾಡಿದೆ. ಇಂದು ರಾತ್ರಿ 8 ಗಂಟೆ ಒಳಗೆ ಇರಾನ್ ಅಧಿಪತ್ಯ ಸಾಧಿಸಿರುವ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇಡೀ ನಾಗರೀಕತೆಯನ್ನೇ ಮುಗಿಸುತ್ತೇವೆ. ಮತ್ತೆ ಯಾವತ್ತೂ ಈ ನಾಗರೀಕತೆ ಮರಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಒಂದು ನಾಗರೀಕತೆಯನ್ನು ಮುಗಿಸುವುದು ನನಗೂ ಇಷ್ಟವಿಲ್ಲ. ಆದರೆ ಪರಿಸ್ಥಿತಿ ನೋಡಿದರೆ ಇದು ಆಗಲಿದೆ. ಇರಾನ್‌ನಲ್ಲಿ ಸಂಪೂರ್ಣ ಹಾಗೂ ಪೂರ್ಣಪ್ರಮಾಣದ ಆಡಳಿತ

ಗಡುವು ಬೆನ್ನಲ್ಲೇ ಭೀಕರ ಎಚ್ಚರಿಕೆ ನೀಡಿದ ಟ್ರಂಪ್| ಇಂದು ರಾತ್ರಿಯೇ ಇರಾನ್ ನಾಗರೀಕತೆ ನಾಶಪಡಿಸುವುದಾಗಿ ಬೆದರಿಕೆ Read More »

ಎ.9 ರಂದು ಪಿಯುಸಿ ಫಲಿತಾಂಶ ಪ್ರಕಟ| ರಿಸಲ್ಟ್ ಹೀಗೆ ನೋಡಿ…

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ದ್ವಿತೀಯ ಪಿಯುಸಿ ಫಲಿತಾಂಶದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಏಪ್ರಿಲ್ 9, 2026 ರಂದು ಫಲಿತಾಂಶ ಹೊರಬೀಳಲಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಬಿಡುಗಡೆ ಮಾಡಲಿದ್ದಾರೆ. ಫೆಬ್ರವರಿ 28 ರಿಂದ ಮಾರ್ಚ್ 17 ರವರೆಗೆ ನಡೆದಿದ್ದ ಈ ಪರೀಕ್ಷೆಗೆ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಏಪ್ರಿಲ್ 9 ರಂದು ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ನಲ್ಲಿ

ಎ.9 ರಂದು ಪಿಯುಸಿ ಫಲಿತಾಂಶ ಪ್ರಕಟ| ರಿಸಲ್ಟ್ ಹೀಗೆ ನೋಡಿ… Read More »