ಪುತ್ತೂರು: ಏಕಾಏಕಿ ಎಲ್.ಪಿ.ಜಿ ದರದಲ್ಲಿ ಭಾರೀ ಏರಿಕೆ| ರಿಕ್ಷಾ ಚಾಲಕರಿಂದ ಪ್ರತಿಭಟನೆ; ಬಂಕ್ ಬಂದ್ ಮಾಡಿದ ಮಾಲೀಕರು
ಸಮಗ್ರ ನ್ಯೂಸ್: ಪುತ್ತೂರು ನಗರದಲ್ಲಿ ಎಲ್.ಪಿ.ಜಿ (LPG) ಬೆಲೆಯಲ್ಲಿ ಏಕಾಏಕಿ ಭಾರಿ ಏರಿಕೆ ಮಾಡಿರುವುದನ್ನು ವಿರೋಧಿಸಿ ಆಟೋ ರಿಕ್ಷಾ ಚಾಲಕರು ಸೋಮವಾರ ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಉಂಟಾದ ಆಕ್ರೋಶದ ಹಿನ್ನೆಲೆಯಲ್ಲಿ ಬಂಕ್ ಮಾಲೀಕರು ಅನಿವಾರ್ಯವಾಗಿ ವ್ಯಾಪಾರ ಸ್ಥಗಿತಗೊಳಿಸಿ ಬಂಕ್ ಬಂದ್ ಮಾಡಿದ್ದಾರೆ. ಪುತ್ತೂರಿನ ಮಹಿಳಾ ಪೊಲೀಸ್ ಠಾಣೆಯ ಮುಂಭಾಗವಿರುವ ಎಲ್.ಪಿ.ಜಿ ಬಂಕ್‌ನಲ್ಲಿ ಪ್ರತಿ ಕೆ.ಜಿ ಅನಿಲಕ್ಕೆ 120 ರೂಪಾಯಿ ನಿಗದಿಪಡಿಸಲಾಗಿತ್ತು. ನಗರದ ಇತರ ಕೆಲವು ಬಂಕ್‌ಗಳಲ್ಲಿ 95 ರೂಪಾಯಿಗೆ ಎಲ್.ಪಿ.ಜಿ ಸಿಗುತ್ತಿದ್ದರೆ, ಇಲ್ಲಿ ಮಾತ್ರ 25 […]









