ಸುಳ್ಯ: ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ಸಮಗ್ರ ನ್ಯೂಸ್: ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಮಡಿಕೇರಿ ಮೂಲದ ವ್ಯಕ್ತಿಯೋರ್ವರು ಸುಳ್ಯ ಸಮೀಪದ ಅರಂಬೂರಿನ ಹೊಳೆಯಲ್ಲಿ ವ್ಯಕ್ತಿಯು ಶವವಾಗಿ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಮೊಣ್ಣಂಗೇರಿಯ ವೆಂಕಟರಮಣ ಎಂದು ಗುರುತಿಸಲಾಗಿದೆ.

. Ad Widget . Ad Widget

ಅರಂಬೂರು ಸಮೀಪ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಎರಡನೇ ಮೊಣ್ಣಂಗೇರಿಯ ನಿವಾಸಿಯಾಗಿರುವ ವೆಂಕಟರಮಣ ಎಂಬವರು ಹೊಳೆಯಲ್ಲಿ ನಾಪತ್ತೆಯಾಗಿದ್ದರು. ಇವರಿಗಾಗಿ ತೀವ್ರ ಹುಡುಕಾಟ ನಡೆಸಲಾಗಿತ್ತು.

. Ad Widget . . Ad Widget . Ad Widget

ತೀವ್ರ ಹುಡುಕಾಟದ ಬಳಿಕವೂ ಪತ್ತೆಯಾಗದ ಕಾರಣ ಸುಳ್ಯದ ಪೈಚಾರ್ ನ ಮುಳುಗು ತಜ್ಞರ ತಂಡ ಆಗಮಿಸಿದ್ದು, ಮುಳುಗಿದ್ದ ವ್ಯಕ್ತಿಯ ಮೃತದೇಹವನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದರೆ ಸಮಗ್ರ ಸಮಾಚಾರ ಅಯ್ಯಪ್ಪ ಮಾಲಾಧಾರಿ ಸಾವನಪ್ಪಿರುವುದಾಗಿ ವರದಿ ಮಾಡಿತ್ತು. ಆದರೆ ಅಯ್ಯಪ್ಪ ಮಾಲದಾರಿ ಸಾವನಪ್ಪಿರುವುದಲ್ಲ, ಸಂಬಂಧಿಕರ ‌ಮನೆಗೆ ಬಂದಾತ‌ ಸಾವನ್ನಪ್ಪಿದ್ದಾಗಿ ಎಂದು ಆಲೆಟ್ಟಿ ವ್ಯಾಪ್ತಿಯ ಅಯ್ಯಪ್ಪ ಮಾಲಾಧಾರಿಗಳು ಸ್ಪಷ್ಟನೆ ನೀಡಿದ್ದಾರೆ.

Leave a Comment

Your email address will not be published. Required fields are marked *