ರಾಜಕೀಯ

ಡಾ.ಜಿ ಪರಮೇಶ್ವರ್ ಮೇಲೆ ಕಲ್ಲೆಸೆದ ಕಿಡಿಗೇಡಿಗಳು| ಕ್ರಮ ಜರುಗಿಸಲು ರಮೇಶ್ ಬಾಬು ಒತ್ತಾಯ

ಸಮಗ್ರ ನ್ಯೂಸ್: ಕೊರಟಗೆರೆಯ ಭೈರೇನಹಳ್ಳಿಯಲ್ಲಿ ಇಂದು ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ತಲೆಗೆ ಕಲ್ಲು ಬಿದ್ದು ಗಾಯಗೊಂಡಿದ್ದರು. ಇದು ಜಿಲ್ಲಾಡಳಿತದ ವೈಫಲ್ಯವಾಗಿದೆ. ಚುನಾವಣಾ ಆಯೋಗವು ಕಳಂಕಿತ ಅಧಿಕಾರಿಯನ್ನು ವರ್ಗಾಯಿಸುವಂತೆ ಮಾಜಿ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ. ಈ ಕುರಿತಂತೆ ಇಂದು ಟ್ವಿಟ್ ಮಾಡಿರುವಂತ ಅವರು, ಡಾ.ಜಿ.ಪರಮೇಶ್ವರ ಮೇಲೆ ಕಲ್ಲು ತೂರಿ ಗಾಯಮಾಡಿರುವುದು ಹತಾಷೆ […]

ಡಾ.ಜಿ ಪರಮೇಶ್ವರ್ ಮೇಲೆ ಕಲ್ಲೆಸೆದ ಕಿಡಿಗೇಡಿಗಳು| ಕ್ರಮ ಜರುಗಿಸಲು ರಮೇಶ್ ಬಾಬು ಒತ್ತಾಯ Read More »

ಇಂದಿನಿಂದ ಮೇ6 ರವರೆಗೆ ಅಂಚೆ ಮತದಾನ

ಸಮಗ್ರ ನ್ಯೂಸ್: ಮುಂದಿನ ತಿಂಗಳ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆಗೆ ನಾಳೆಯಿಂದ ಬ್ಯಾಲೇಟ್ ಪೇಪರ್ ವೋಟಿಂಗ್ ಶುರುವಾಗುತ್ತಿದೆ. 80 ವರ್ಷ ಮೇಲ್ಪಟ್ಟ ವೃದ್ದರು ಹಾಗೂ ವಿಕಲಚೇತನರು ಮನೆಯಿಂದ, ಪೊಲೀಸರು, ಚುನಾವಣಾ ಸಿಬ್ಬಂದಿಗಳು ಹಾಗೂ ಪತ್ರಕರ್ತರು ಬ್ಯಾಲೇಟ್ ಪೇಪರ್ ಮೂಲಕ ತಮ್ಮ ಹಕ್ಕು ಚಲಾಯಿಸಬಹುದಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ವೋಟಿಂಗ್ ವ್ಯವಸ್ಥೆ ಮಾಡಲಾಗಿದ್ದರೆ, ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಪತ್ರಕರ್ತರು ಅವರವರ ಕ್ಷೇತ್ರಗಳಲ್ಲಿ ನಾಳೆಯಿಂದ ಬ್ಯಾಲೇಟ್ ವೋಟಿಂಗ್ ಮಾಡಬಹುದಾಗಿದೆ. ಚುನಾವಣಾ

ಇಂದಿನಿಂದ ಮೇ6 ರವರೆಗೆ ಅಂಚೆ ಮತದಾನ Read More »

‘ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ; ಮೋದಿ – ದೇವೇಗೌಡ್ರ ನಡುವೆ ಮಾತುಕತೆ ಆಗಿದೆ’ | ವೈರಲ್ ಆಗ್ತಿದೆ ಪ್ರೀತಂಗೌಡ ಹೇಳಿಕೆ

ಸಮಗ್ರ ನ್ಯೂಸ್: ‘ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೇ ಹಾಕಿದಂತೆ. ದೇವೇಗೌಡರು, ಮೋದಿ ಸಾಹೇಬರು ಮಾತನಾಡಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಬರೋದು 20- 25 ಮಾತ್ರ’ ಎಂದು ಶಾಸಕ ಪ್ರೀತಂ ಗೌಡ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಸನ ನಗರ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಪ್ರಚಾರದ ಸಂದರ್ಭದಲ್ಲಿ ಪ್ರೀತಂ ಮಾತನಾಡಿದ್ದು, ‘ಮೈಸೂರಿನ ಮೇಲೆ ಬೆಂಗಳೂರಿಗೆ ಹೋಗೋದು ಬೇಡ. ಹಾಸನದಿಂದ ಬೆಳ್ಳೂರು ಕ್ರಾಸ್‌ ಮೇಲೆ ಹೋಗಿ ಎಂದು ಹೇಳುತ್ತೇನೆ. ಅದರ ಮೇಲೆ ನಿಮ್ಮಿಷ್ಟ’ ಎಂದಿದ್ದಾರೆ. ‘ಮೈಸೂರಿನ ಮೇಲೆಯೇ ಬೆಂಗಳೂರಿಗೆ ಹೋಗೋದಕ್ಕೆ

‘ಜೆಡಿಎಸ್ ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ; ಮೋದಿ – ದೇವೇಗೌಡ್ರ ನಡುವೆ ಮಾತುಕತೆ ಆಗಿದೆ’ | ವೈರಲ್ ಆಗ್ತಿದೆ ಪ್ರೀತಂಗೌಡ ಹೇಳಿಕೆ Read More »

ಕಾಂಗ್ರೆಸ್ ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ| ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಇಂದು ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಪಕ್ಷದ 5ನೇ ಗ್ಯಾರಂಟಿ ಘೋಷಣೆಯನ್ನು ನೀಡಿದರು. ಕಾಂಗ್ರೆಸ್​ ಪಕ್ಷ ಗೆದ್ದು ಬಂದರೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್​ನಲ್ಲಿ ಉಚಿತ ಪ್ರಯಾಣ ಸೇವೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಕಾಂಗ್ರೆಸ್ ನಿಂದ ಮತ್ತೊಂದು ಗ್ಯಾರಂಟಿ ಘೋಷಣೆ| ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ Read More »

ವಯಸ್ಸು ಜಸ್ಟ್ 26; ಪ್ರಕರಣ 40: ಆಸ್ತಿ 29 ಕೋಟಿ| ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರೌಡಿಶೀಟರ್!! ವಿಪಕ್ಷಗಳಿಂದ ಬಿಜೆಪಿ ಮೇಲೆ ವಾಗ್ದಾಳಿ

ಸಮಗ್ರ ನ್ಯೂಸ್: ಆತನ ವಯಸ್ಸು 26, ದಾಖಲಾಗಿರುವ ಪ್ರಕರಣಗಳು 40, ಆಸ್ತಿ 29 ಕೋಟಿ, ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಫೇಲ್, ಅಂಗನವಾಡಿ ಮಕ್ಕಳಿಗೆ ಹಂಚುವ ಹಾಲಿನ ಪುಡಿ, ಪಡಿತರ ಅಕ್ಕಿ ಕಳ್ಳ ಸಾಗಣೆ ಆರೋಪ ಎದುರಿಸುತ್ತಿರುವ ಈತ ಈ ಬಾರಿಯ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿ. ಮೇ 10ರಂದು ನಡೆಯುವ ವಿಧಾನಸಭೆ ಚುನಾವಣೆಗೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್. ಬಿಜೆಪಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಅಸಮಾಧಾನ ಹೊರಹಾಕಿವೆ. ಇಂತಹ

ವಯಸ್ಸು ಜಸ್ಟ್ 26; ಪ್ರಕರಣ 40: ಆಸ್ತಿ 29 ಕೋಟಿ| ಚಿತ್ತಾಪುರ ಬಿಜೆಪಿ ಅಭ್ಯರ್ಥಿ ರೌಡಿಶೀಟರ್!! ವಿಪಕ್ಷಗಳಿಂದ ಬಿಜೆಪಿ ಮೇಲೆ ವಾಗ್ದಾಳಿ Read More »

ಬೆಳ್ತಂಗಡಿ: ಸೋಮಾವತಿ ನದಿಗೆ ವಿಷಪ್ರಾಶನ| ನೂರಾರು ಮೀನುಗಳ ಮಾರಣಹೋಮ

ಸಮಗ್ರ ನ್ಯೂಸ್: ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರಿನ ಪ್ರಮುಖ ಆಶ್ರಯವಾಗಿದ್ದ ಸೋಮಾವತಿ ನದಿ ನೀರಿಗೆ ಕಿಡಿಕೇಡಿಗಳು ವಿಷ ಪದಾರ್ಥ ಹಾಕಿರುವ ಪರಿಣಾಮ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಘಟನೆ ವರದಿಯಾಗಿದ್ದು, ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ನದಿಯಲ್ಲಿದ್ದ ಘಟಕಕ್ಕೆ ವಿಷ ಪ್ರಾಶನ ಮಾಡಿದ ಪರಿಣಾಮ ಸಾವಿರಾರು ಮೀನುಗಳ ಮಾರಣ ಸತ್ತುಬಿದ್ದಿವೆ.‌ ನಗರಕ್ಕೆ ಪ್ರಸಕ್ತ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅವಶ್ಯಕತೆಯಿದ್ದು ಇದೇ ನೀರನ್ನು ಅವಲಂಬಿಸಲಾಗಿತ್ತು. ಆದರೆ ವಿಷ ಪ್ರಾಶನವಾಗಿರುವ ಪರಿಣಾಮ ನೀರು

ಬೆಳ್ತಂಗಡಿ: ಸೋಮಾವತಿ ನದಿಗೆ ವಿಷಪ್ರಾಶನ| ನೂರಾರು ಮೀನುಗಳ ಮಾರಣಹೋಮ Read More »

ತನ್ನದಲ್ಲದ ಎರಡೂ ಕ್ಷೇತ್ರಗಳಲ್ಲಿ ಸಚಿವ ವಿ.ಸೋಮಣ್ಣಗೆ ಸೋಲುವ ಭೀತಿ| ಕೈ ಮುಗಿತೀನಿ ವಾಪಾಸ್ ತಗೋ ಎಂದು ಜೆಡಿಎಸ್ ಅಭ್ಯರ್ಥಿಗೆ ದಮ್ಮಯ್ಯ ಹಾಕಿದ ಹಿರಿಯ ನಾಯಕ

ಸಮಗ್ರ ನ್ಯೂಸ್: ತನ್ನ ಸ್ವಂತ ಕ್ಷೇತ್ರ ಗೋವಿಂದರಾಜನಗರ ಬಿಟ್ಟು ವರುಣಾ ಹಾಗೂ ಚಾಮರಾಜನಗರದ ವಿಧಾನಸಭಾ ಕ್ಷೇತ್ರಗಳೆರಡಲ್ಲೂ ಬಿಜೆಪಿ ಹೈಕಮಾಂಡ್‌ ಸೂಚನೆ ಮೇರೆಗೆ ಸ್ಪರ್ಧೆ ಮಾಡುತ್ತಿರುವ ಸಚಿವ ವಿ ಸೋಮಣ್ಣ ಅವರಿಗೆ ಎರಡೂ ಕ್ಷೇತ್ರಗಳಲ್ಲಿ ಸೋಲುವ ಆತಂಕ ಹೆಚ್ಚಾಗಿದೆ. ವರುಣಾ ವಿಧಾನಸಭಾ ಕ್ಷೇತ್ರದ ಎರಡು ಹಳ್ಳಿಗಳಲ್ಲಿ ಮತಯಾಚನೆ ಮಾಡುವ ವೇಳೆ ಗ್ರಾಮಸ್ಥರಿಂದ ತರಾಟೆಗೆ ಒಳಗಾಗಿದ್ದ ಸೋಮಣ್ಣ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್‌ ಆಗಿದೆ. ಇಲ್ಲಿ ಸಚಿವ ವಿ ಸೋಮಣ್ಣ ಅವರು ಚಾಮರಾಜನಗರ ಜೆಡಿಎಸ್‌ ಅಭ್ಯರ್ಥಿಗೆ ನಿನ್ನ ಕೈಮುಗಿತಿನಿ

ತನ್ನದಲ್ಲದ ಎರಡೂ ಕ್ಷೇತ್ರಗಳಲ್ಲಿ ಸಚಿವ ವಿ.ಸೋಮಣ್ಣಗೆ ಸೋಲುವ ಭೀತಿ| ಕೈ ಮುಗಿತೀನಿ ವಾಪಾಸ್ ತಗೋ ಎಂದು ಜೆಡಿಎಸ್ ಅಭ್ಯರ್ಥಿಗೆ ದಮ್ಮಯ್ಯ ಹಾಕಿದ ಹಿರಿಯ ನಾಯಕ Read More »

ಪುತ್ತೂರು: ಚುನಾವಣೆ ಅಖಾಡದಲ್ಲಿ ಸಂಚಲನ ಸೃಷ್ಟಿಸಿದ ಪುತ್ತಿಲರ ಪ್ರಣಾಳಿಕೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾವು ಏರತೊಡಗುತ್ತಿದ್ದಂತೆಯೇ ಮಳೆಯ ಸಿಂಚನವಾಗುತ್ತಿದೆ. ಬುಧವಾರ ಹನಿಮಳೆಯೊಂದಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಪ್ರಚಾರ ನಡೆಸಿದರೆ, ಭಾರಿ ಸಂಚಲನವನ್ನೇ ಸೃಷ್ಟಿಸಿರುವ ಪುತ್ತೂರು ಕ್ಷೇತ್ರದಲ್ಲಿ ಹಿಂದು ಸಂಘಟನೆಗಳ ಮುಖಂಡ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಜಿಲ್ಲೆಯಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಣಾಳಿಕೆಯೊಂದನ್ನು ಬಿಡುಗಡೆ ಮಾಡುತ್ತಿರುವುದು ಈ ಚುನಾವಣೆಯಲ್ಲಿ ಇದೇ ಮೊದಲಾಗಿದ್ದು, ಪ್ರಚಾರದ ದೃಷ್ಟಿಯಿಂದ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಷ್ಟೇ ಅಲ್ಲ,

ಪುತ್ತೂರು: ಚುನಾವಣೆ ಅಖಾಡದಲ್ಲಿ ಸಂಚಲನ ಸೃಷ್ಟಿಸಿದ ಪುತ್ತಿಲರ ಪ್ರಣಾಳಿಕೆ Read More »

ಎ.30ರಂದು ಸುಳ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ

ಸಮಗ್ರ ನ್ಯೂಸ್:‌ ಕರಾವಳಿಯಲ್ಲಿ ಚುನಾವಣಾ ಕಾವು ಜೋರಾಗಿದ್ದು, ಅಲ್ಲಲ್ಲಿ ರಾಷ್ಟ್ರೀಯ ನಾಯಕರು ಪ್ರಚಾರದಲ್ಲಿ ತೊಡಗಿದ್ದಾರೆ. ಇದೀಗ ಬಿಜಪಿ ರಾಷ್ಟ್ರೀಯ ಅಧ್ಯಕ್ಷ ಅಧ್ಯಕ್ಷ ಜೆಪಿ ನಡ್ಡಾ ಎ.30ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಸುಳ್ಯದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೆಪಿ ನಡ್ಡಾ ಸುಳ್ಯಕ್ಕೆ ಆಗಮಿಸುವುದನ್ನು ಬಿಜೆಪಿ ಮುಖಂಡರು ಖಚಿತ ಪಡಿಸಿದ್ದಾರೆ.

ಎ.30ರಂದು ಸುಳ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ Read More »

ಬಿರುಸಾದ ಪ್ರಚಾರ ಭರಾಟೆ| ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ ಭರಾಟೆ ಬಿರುಸಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಲಿದ್ದು, ಮಂಡ್ಯದಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಇಂದು ಯೋಗಿ ಆದಿತ್ಯನಾಥ್ ಅವರು ಮಂಡ್ಯ ನಗರ, ಬಸವನಬಾಗೇವಾಡಿ, ಇಂಡಿ, ಏಪ್ರಿಲ್ 30 ರಂದು ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ, ಮೇ.3 ರಂದು ಗಂಗಾವತಿ, ಜೇವರ್ಗಿ, ಶಹಾಪುರ, ಭಾಲ್ಕಿ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ

ಬಿರುಸಾದ ಪ್ರಚಾರ ಭರಾಟೆ| ಇಂದು ರಾಜ್ಯಕ್ಕೆ ಯೋಗಿ ಆದಿತ್ಯನಾಥ್ ಭೇಟಿ Read More »