ರಾಜ್ಯ

ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ನಾಪತ್ತೆ; ಪ್ರಕರಣ ದಾಖಲು

ಸಮಗ್ರ ನ್ಯೂಸ್: ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ಒಳಮೊಗ್ರು ನಿವಾಸಿ ಮೋನಿಶಾ (23ವ) ಮತ್ತು ಮಂಡ್ಯ ಪಾಂಡವಪುರ ನಿವಾಸಿ ದಿವ್ಯಾ (20ವ) ನಾಪತ್ತೆಯಾದವರು. ಇಬ್ಬರು ಮಂಡ್ಯದ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ದಿನಗಳ ಹಿಂದೆ ಅವರಿಬ್ಬರೂ ಮೋನಿಶಾ ಮನೆಗೆ ಬಂದಿದ್ದರು. ಅಲ್ಲಿಂದ ಕಾಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಿಗೂ ಮಾತು ಮತ್ತು ಕಿವಿ ಕೇಳುವುದಿಲ್ಲ ಎಂದು ಹೇಳಲಾಗಿದ್ದು, ಮಾಹಿತಿ ದೊರೆತಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್‌

ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ನಾಪತ್ತೆ; ಪ್ರಕರಣ ದಾಖಲು Read More »

ರಾಜ್ಯದಲ್ಲಿ ಆರ್ ಎಸ್ಎಸ್ ನಿಷೇಧ!?| ವಿವಾದದ ಕಿಡಿ ಹೊತ್ತಿಸಿದ ಪ್ರಿಯಾಂಕ ಖರ್ಗೆ ಬರೆದ‌ ಪತ್ರ

ಸಮಗ್ರ ನ್ಯೂಸ್: ಕಾಂಗ್ರೆಸ್‌ನೊಳಗೆ ರಾಜ್ಯದ ಸಾರ್ವಜನಿಕ‌ ಸ್ಥಳಗಳಲ್ಲಿ ಸಂಘದ ಚಟುವಟಿಕೆಗಳನ್ನು ನಿಷೇಧಿಸುವ ಕೂಗೆದ್ದಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ವಿವಾದದ ಕಿಡಿ ದೊಡ್ಡದಾಗಿ ಹತ್ತಿಕೊಂಡಿದೆ. ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು

ರಾಜ್ಯದಲ್ಲಿ ಆರ್ ಎಸ್ಎಸ್ ನಿಷೇಧ!?| ವಿವಾದದ ಕಿಡಿ ಹೊತ್ತಿಸಿದ ಪ್ರಿಯಾಂಕ ಖರ್ಗೆ ಬರೆದ‌ ಪತ್ರ Read More »

ರಾಜ್ಯದಲ್ಲಿ ಮುಂದುವರಿಯಲಿದೆ ಗುಡುಗು ಸಹಿತ ಮಳೆ

ಸಮಗ್ರ ನ್ಯೂಸ್: ರಾಜ್ಯದ ಹಲವು ಜಿಲ್ಲೆಗಳಲ್ಲಿ ಇನ್ನೂ 2-3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಾಳೆಯಿಂದ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಎರಡು ದಿನ ಮತ್ತು ಹಾಸನ, ಕೊಡಗು, ಮೈಸೂರಿನಲ್ಲಿ ಅ.15ರಂದು ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಇನ್ನು ಉಡುಪಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ ಎಂದು ಹವಾಮಾನ

ರಾಜ್ಯದಲ್ಲಿ ಮುಂದುವರಿಯಲಿದೆ ಗುಡುಗು ಸಹಿತ ಮಳೆ Read More »

ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರ ರಜೆ ಕಡ್ಡಾಯ| ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ – ಸಚಿವ ಸಂತೋಷ್ ಲಾಡ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಎಲ್ಲಾ ಕಂಪನಿಗಳು ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಎಚ್ಚರಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಕಾನೂನು ತಂದಿದೆ. ಇದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಶ್ರೀಮಂತರ ಹೆಣ್ಣು ಮಕ್ಕಳಿಗೆ ಸೌಲಭ್ಯ ಇರುತ್ತದೆ. ದುಡಿಯುವ ವರ್ಗದ ಹೆಣ್ಣುಗಳಿಗೆ ಸರ್ಕಾರ ವರ್ಷಕ್ಕೆ 12 ವೇತನ ಸಹಿತ ರಜೆ ಘೋಷಿಸಿ ಈ ನೀತಿಯನ್ನು ಜಾರಿ ಮಾಡಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರ ರಜೆ ಕಡ್ಡಾಯ| ನಿಯಮ ಪಾಲಿಸದಿದ್ದರೆ ಕಠಿಣ ಕ್ರಮ – ಸಚಿವ ಸಂತೋಷ್ ಲಾಡ್ Read More »

ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ಸಿಡಿಲು ಬಡಿದು ಮನೆಯಲ್ಲಿ ಕುಳಿತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಶಾಂತಿಗೋಡು ಆನಡ್ಕ ಗ್ರಾಮದಲ್ಲಿ ನಡೆದಿದೆ. ವಾಮನ(40) ಮೃತಪಟ್ಟವರುಎಂದು ಹೇಳಲಾಗಿದೆ. ಶನಿವಾರ ಸಂಜೆ ಸುಮಾರು 5.30 ರ ವೇಳೆ ವಾಮನ ಅವರು ಕೆಲಸ ಮುಗಿಸಿ ಮನೆಗೆ ಬಂದು ಕುಳಿತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆಯಾಗಿದ್ದು, ವಾಮನ ಮನೆಯಲ್ಲಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಪುತ್ತೂರು: ಸಿಡಿಲು ಬಡಿದು ವ್ಯಕ್ತಿ ಸಾವು Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಅಕ್ಟೋಬರ್ ತಿಂಗಳ ಈ ವಾರವು ಗ್ರಹಗಳ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಸಾಪ್ತಾಹಿಕ ಭವಿಷ್ಯ ಹೇಗಿರಲಿದೆ? ಯಾವ ರಾಶಿಗೆ ಶುಭ? ಯಾವ ರಾಶಿಗೆ ಅದೃಷ್ಟಶಾಲಿಯಾಗಿರಲಿದೆ? ಯಾವ ರಾಶಿಗೆ ದುರಾದೃಷ್ಟ ಎದುರಾಗಲಿದೆ? ಎಲ್ಲಾ 12 ರಾಶಿಗಳ ಈ ವಾರದ ರಾಶಿ ಭವಿಷ್ಯ ಹೇಗಿರಲಿದೆ? ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಮೇಷ ರಾಶಿ:ಈ ವಾರ ನಿಮ್ಮ ಅದೃಷ್ಟ ಬದಲಾಗಬಹುದು. ನೀವು ಹಲವು ಕೆಲಸಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಅದ್ರಲ್ಲೂ ಶುಭ ಕಾರ್ಯ ಸಂಬಂಧವಾಗಿ ಪ್ರಯಾಣಗಳ ಮಾಡುವಿರಿ. ಪ್ರೀತಿ ಮತ್ತು ಮಕ್ಕಳ

ದ್ವಾದಶ ರಾಶಿಗಳ ವಾರಭವಿಷ್ಯ Read More »

ನೊಬೆಲ್ ಸಿಗದ ಕೋಪಕ್ಕೆ ಟ್ರಂಪ್ ಕೆಂಗಣ್ಣಿಗೆ ಗುರಿಯಾದ ಚೀನಾ| ಶೇ.100 ಸುಂಕ ವಿಧಿಸಿ ಆದೇಶ

ಸಮಗ್ರ ನ್ಯೂಸ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಚೀನಾದ ಮೇಲೆ 100% ಹೆಚ್ಚುವರಿ ಸುಂಕವನ್ನು ಘೋಷಿಸಿದ್ದಾರೆ. ಇದರ ಜೊತೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಭೆಯನ್ನು ರದ್ದುಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಪ್ರಸ್ತುತ, ಟ್ರಂಪ್ ಅವರ ಹಿಂದಿನ ನಿರ್ಧಾರಗಳ ಪರಿಣಾಮವಾಗಿ ಚೀನಾದ ಉತ್ಪನ್ನಗಳ ಮೇಲೆ 30% ಯುಎಸ್ ಸುಂಕವನ್ನು ಈಗಾಗಲೇ ವಿಧಿಸಲಾಗಿದೆ. ಇದು ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧವನ್ನು ಮತ್ತೆ ಪ್ರಚೋದಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಚೀನಾದ ಮೇಲೆ

ನೊಬೆಲ್ ಸಿಗದ ಕೋಪಕ್ಕೆ ಟ್ರಂಪ್ ಕೆಂಗಣ್ಣಿಗೆ ಗುರಿಯಾದ ಚೀನಾ| ಶೇ.100 ಸುಂಕ ವಿಧಿಸಿ ಆದೇಶ Read More »

ಬೆಳ್ತಂಗಡಿ: ಬಸ್ ನಲ್ಲಿ ನಿರ್ವಾಹಕಿ ಮತ್ತು ಪ್ರಯಾಣಿಕನ ನಡುವೆ ಗಲಾಟೆ

ಸಮಗ್ರ ನ್ಯೂಸ್: ಕೆಎಸ್‌ಆರ್ ಟಿಸಿ ಬಸ್ ನ ಲೇಡಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ಟಿಕೆಟ್ ಹಣದ ವಿಚಾರಕ್ಕೆ ಗಲಾಟೆ ನಡೆದಿದ್ದು. ಈ ವೇಳೆ ಪ್ರಯಾಣಿಕನ ಮೇಲೆ ಬಸ್ ನಲ್ಲೇ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿಯಲ್ಲಿ ಅಕ್ಟೋಬರ್ 10ರಂದು ನಡೆದಿದೆ. ಮೂಡಿಗೆರೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಗೆ ಉಜಿರೆಯಲ್ಲಿ ಹತ್ತಿದ ಪ್ರಯಾಣಿಕ ಟಿಕೆಟ್ ಹಣ ಕೊಟ್ಟಿದ್ದೇನೆ ಅಂತ ವಾದಿಸುತ್ತಿದ್ದರೆ, ಲೇಡಿ ಕಂಡಕ್ಟರ್ ಹಣ ಕೊಟ್ಟಿಲ್ಲ ಅಂತ ವಾದಿಸುತ್ತಿದ್ದರು.‌ ಬಸ್ ನಲ್ಲಿದ್ದ ಪ್ರಯಾಣಿಕರು ಆತ ಹಣ ಕೊಟ್ಟಿದ್ದಾನೆ

ಬೆಳ್ತಂಗಡಿ: ಬಸ್ ನಲ್ಲಿ ನಿರ್ವಾಹಕಿ ಮತ್ತು ಪ್ರಯಾಣಿಕನ ನಡುವೆ ಗಲಾಟೆ Read More »

ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? ಪಿಲಿಚಂಡಿ ದೈವ ನುಡಿ ಬಗ್ಗೆ ಜಾಲತಾಣಗಳಲ್ಲಿ ಪರ-ವಿರೋಧ ಕುರಿತು ಚರ್ಚೆ

ಸಮಗ್ರ ನ್ಯೂಸ್: ಕಾಂತಾರ ಚಾಪ್ಟರ್ 1 ಈಗಾಗಲೇ 500 ಕೋಟಿಗೂ ಅಧಿಕ ಹಣ ಮಾಡಿ ಮುಂದುವರೆಯುತ್ತಿದೆ. ಈ ನಡುವೆ ದೈವಗಳ ಅವಹೇಳನವೂ ಕೂಡ ಮುಂದುವರೆದಿದ್ದು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ದೈವದ ನುಡಿಯ ಬಗ್ಗೆಯೇ ಅಪಹಾಸ್ಯ ಮಾಡುವ ಮಟ್ಟಿಗೆ ಪರ ವಿರೋಧ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರಂಭವಾಗಿದೆ. ಕಾಂತಾರ ಸಿನೆಮಾ ಬಿಡುಗಡೆಯಾದ ಬಳಿಕ ಇದೀಗ ಕರಾವಳಿಯಲ್ಲಿ ಚಿತ್ರದಲ್ಲಿ ದೈವಾರಾಧನೆ ಬಳಸಿದ ಬಗ್ಗೆ ಪರ ವಿರೋಧ ಚರ್ಚೆ ಪ್ರಾರಂಭವಾಗಿದೆ. ಈ ಮಧ್ಯೆ ತುಳುನಾಡು ದೈವಗಳ ನುಡಿಗಳ ಬಗ್ಗೆಯೇ

ದೈವ ಹೇಳಿದ್ದಾ? ದೈವ ನರ್ತಕ ಹೇಳಿದ್ದಾ? ಪಿಲಿಚಂಡಿ ದೈವ ನುಡಿ ಬಗ್ಗೆ ಜಾಲತಾಣಗಳಲ್ಲಿ ಪರ-ವಿರೋಧ ಕುರಿತು ಚರ್ಚೆ Read More »

ವೆನೆಜುವೆಲಾದ ಮರಿಯಾ ಕೊರಿನಾಗೆ ನೊಬೆಲ್ ಶಾಂತಿ ಪುರಸ್ಕಾರ| ನನಸಾಗದ ಟ್ರಂಪ್ ಕನಸು

ಸಮಗ್ರ ನ್ಯೂಸ್: ಸ್ವಯಂ ಘೋಷಿತ ಶಾಂತಿಧೂತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಭಾರೀ ಮುಖಭಂಗವಾಗಿದೆ. ಇಂದು ನೊಬೆಲ್ ಶಾಂತಿ ಪುರಸ್ಕಾರದ ವಿಜೇತರ ಹೆಸರು ಘೋಷಿಸಲಾಗಿದೆ. ಆದರೆ, ಆ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಹೆಸರು ಇರಲಿಲ್ಲ. ಟ್ರಂಪ್ ಬದಲಿಗೆ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮರಿಯಾ ಮಚಾಡೋಗೆ ನೊಬೆಲ್ ಶಾಂತಿ ಪುರಸ್ಕಾರ ಒಲಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಸು ನನಸಾಗಿಲ್ಲ. 2025 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ತಲೆಮರೆಸಿಕೊಂಡಿರುವ ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ

ವೆನೆಜುವೆಲಾದ ಮರಿಯಾ ಕೊರಿನಾಗೆ ನೊಬೆಲ್ ಶಾಂತಿ ಪುರಸ್ಕಾರ| ನನಸಾಗದ ಟ್ರಂಪ್ ಕನಸು Read More »