ಸಮಗ್ರ ನ್ಯೂಸ್: ರಾಜ್ಯದಲ್ಲಿ ಈ ಬಾರಿ ರೈತರು ಸೇರಿದಂತೆ ಜನಸಾಮಾನ್ಯರು ಸಹ ಭೀಕರ ಬರಗಾಲ ಎದುರಿಸುತ್ತಿದ್ದು, ಒಂದೆಡೆ ಜನಸಾಮಾನ್ಯರು ದಿನಬಳಕೆ ವಸ್ತು ಖರೀದಿಸಲು ಪರದಾಡುತ್ತಿದ್ದರೆ, ಮತ್ತೊಂದೆಡೆ ಸರಿಯಾಗಿ ಮಳೆ ಬಾರದ ಹಿನ್ನೆಲೆಯಲ್ಲಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.
ಸಂಕಷ್ಟದಲ್ಲಿದ್ದ ರೈತರಿಗೆ ಇಂದು ಬರ ಪರಿಹಾರದ ಹಣ ವಿತರಣೆಯಾಗಲಿದೆ. ಇಂದು ಮಧ್ಯಂತರ ಬೆಳೆ ಪರಿಹಾರದ ಹಣ ಸಿಎಂ ಡಿಕೆ ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12:15ಕ್ಕೆ ವಿಧಾನಸೌಧದಲ್ಲಿ ಪರಿಹಾರ ವಿತರಣೆಗೆ ಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ತುರ್ತು ಬೆಳೆ ಹಾನಿ ಪರಿಹಾರ(ಇನ್ ಪುಟ್ ಸಬ್ಸಿಡಿ) ಹಣ ಇಂದು ರೈತರ ಖಾತೆಗೆ ಜಮೆ ಆಗಲಿದೆ.
ಈಗಾಗಲೇ 2500 ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಪರಿಹಾರದ ಹಣ ಬಿಡುಗಡೆ ಮಾಡುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ರೈತರ ಖಾತೆಗೆ ಬೆಳೆ ಪರಿಹಾರದ ಹಣ ಜಮೆ ಆಗಲಿದೆ.









