ರಾಜ್ಯ

ಕೆ ಎಸ್ ಆರ್ ಟಿ ಸಿ ಹೆಸರು ಕೇರಳ ಪಾಲು ಸತ್ಯಕ್ಕೆ ದೂರವಾದ ಮಾತು | ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಕಳೆದೆರಡು ದಿನಗಳಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಇನ್ನು ಮುಂದೆ “ಕೆಎಸ್‌ಆರ್‌ಟಿಸಿ” ಎಂಬ ಹೆಸರು ಬಳಸುವಂತಿಲ್ಲವೆಂದು, ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟರಿರವರು ಬುಧವಾರ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದ್ದಾರೆ. ಎರಡು ರಾಜ್ಯಗಳ ನಡುವಿನ ಒಂದು ದಶಕದ ಕಾನೂನಾತ್ಮಕ ಹೋರಾಟವು ಅಂತ್ಯಗೊಂಡಂತಿದೆ ಎಂಬ ಮಾಧ್ಯಮಗಳ ವರದಿಯನ್ನು ನೋಡಿ ಆಶ್ಚರ್ಯವಾಗಿದೆ. ಇದು ವಸ್ತುಷಃ ಸತ್ಯಕ್ಕೆ ದೂರವಾದ ವರದಿಯಾಗಿದೆ ಎಂದು ಕ ರಾ ರ ಸಾ ನಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ ಕಳಸದ ಸ್ಪಷ್ಟೀಕರಣ ನೀಡಿದ್ದಾರೆ. […]

ಕೆ ಎಸ್ ಆರ್ ಟಿ ಸಿ ಹೆಸರು ಕೇರಳ ಪಾಲು ಸತ್ಯಕ್ಕೆ ದೂರವಾದ ಮಾತು | ವ್ಯವಸ್ಥಾಪಕ ನಿರ್ದೇಶಕರ ಸ್ಪಷ್ಟನೆ Read More »

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಒತ್ತಾಯಿಸಿ ಜೂ.5ರಂದು ಅತಿಥಿ ಉಪನ್ಯಾಸಕರಿಂದ ಆನ್ಲೈನ್ ಚಳುವಳಿ

ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪ.ಪೂ ಅತಿಥಿ ಉಪನ್ಯಾಸಕರ ಸಂಘವು ಜೂ.5 ರಂದು ಆನ್ ಲೈನ್ ಚಳುವಳಿ ನಡೆಸಲಿದೆ.ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರ ಬಾಕಿ ಇರುವ 2021 ನೇ ಶೈಕ್ಷಣಿಕ ಸಾಲಿನ ಎಲ್ಲಾ ಮಾಸಿಕ ವೇತನವನ್ನು ಬಿಡುಗಡೆ ಮಾಡಬೇಕು. ಕೋವಿಡ್ ವಿಶೇಷ ಪ್ಯಾಕೇಜ್ ನೀಡಬೇಕು. ಸೇವಾ ಭದ್ರತೆಯನ್ನು ಖಾತ್ರಿ ಮತ್ತು ಈ ಹಿಂದೆ ಕಾರ್ಯನಿರ್ವಹಿಸುತ್ತಾ ಇದ್ದ ಅತಿಥಿ ಉಪನ್ಯಾಸಕರನ್ನು ಮುಂದಿನ ದಿನಗಳಲ್ಲಿ ಸೇವೆಗೆ ನೇಮಕಾತಿ ಮಾಡಿಕೊಳ್ಳವುದು, 2021 ನೇ ಶೈಕ್ಷಣಿಕ ವರ್ಷದಲ್ಲಿ ಸರಕಾರಿ

ವಿವಿಧ ಬೇಡಿಕೆಗಳ‌ ಈಡೇರಿಕೆಗೆ ಒತ್ತಾಯಿಸಿ ಜೂ.5ರಂದು ಅತಿಥಿ ಉಪನ್ಯಾಸಕರಿಂದ ಆನ್ಲೈನ್ ಚಳುವಳಿ Read More »

ಎಸ್ಸೆಸ್ಸೆಲ್ಸಿ ಮಕ್ಕಳು ಭಯಪಡಬೇಕಿಲ್ಲ : ಪರೀಕ್ಷೆ ಕುರಿತು ಅಭಯ ನೀಡಿದ ಸಿ.ಎಂ

ಬೆಳಗಾವಿ: ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ಕುರಿತಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಘೋಷಣೆ ಮಾಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಕೋವಿಡ್ ನಿಯಂತ್ರಣಕ್ಕೆ ಬಂದರೆ ಮಾತ್ರ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಇಲ್ಲವಾದಲ್ಲಿ ಈ ವರ್ಷ ಪರೀಕ್ಷೆ ನಡೆಸುವುದಿಲ್ಲ ಎಂದು ಅಭಯ ನೀಡಿದರು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ

ಎಸ್ಸೆಸ್ಸೆಲ್ಸಿ ಮಕ್ಕಳು ಭಯಪಡಬೇಕಿಲ್ಲ : ಪರೀಕ್ಷೆ ಕುರಿತು ಅಭಯ ನೀಡಿದ ಸಿ.ಎಂ Read More »

ಸೆಕ್ಸ್‌ದಂಧೆಯಿಂದ ಲಕ್ಷ ಲಕ್ಷ ಆದಾಯ ಸಿಗ್ತಿತ್ತಂತೆ | ದಿನಕ್ಕೊಂದು ಭಯಾನಕ ಸತ್ಯ ಬಾಯ್ಬಿಡ್ತಿದಾರೆ ಬಾಂಗ್ಲಾ ಯುವತಿಯ ರೇಪಿಸ್ಟ್ ಗಳು

ಬೆಂಗಳೂರು: ಕಳೆದ ವಾರ ಬೆಂಗಳೂರಿನಲ್ಲಿ ಬಾಂಗ್ಲಾ ಯುವತಿಯ ಮೇಲೆ ನಡೆದಿದ್ದ ಭಯಾನಕ ಹಾಗೂ ವಿಕೃತ ಗ್ಯಾಂಗ್‌ರೇಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಆರೋಪಿಗಳಿಂದ ಭಯಾನಕ ಸತ್ಯಗಳು ಹೊರಬೀಳುತ್ತಿವೆ. ಈಗಾಗಲೇ ಕೆಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಪೊಲೀಸರು ಅವರ ವಿಚಾರಣೆಯನ್ನು ತೀವ್ರಗೊಳಿಸುತ್ತಿದ್ದಂತೆಯೇ ಒಂದೊಂದೇ ಸತ್ಯವನ್ನು ಹೊರಹಾಕುತ್ತಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಾಂಗ್ಲಾ ಯುವತಿಯ ಮೇಲೆ ಬೆಂಗಳೂರಿನಲ್ಲಿ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಬಾಟಲಿ ತುರುಕಿ ಅದರ ವಿಡಿಯೋ ಮಾಡಿ ಹರಿಬಿಟ್ಟ ಭಯಾನಕ ಘಟನೆ ಇದಾಗಿದೆ. ಇಡೀ ದೇಶಾದ್ಯಂತ ಈ ಘಟನೆ

ಸೆಕ್ಸ್‌ದಂಧೆಯಿಂದ ಲಕ್ಷ ಲಕ್ಷ ಆದಾಯ ಸಿಗ್ತಿತ್ತಂತೆ | ದಿನಕ್ಕೊಂದು ಭಯಾನಕ ಸತ್ಯ ಬಾಯ್ಬಿಡ್ತಿದಾರೆ ಬಾಂಗ್ಲಾ ಯುವತಿಯ ರೇಪಿಸ್ಟ್ ಗಳು Read More »

ನಾಳೆಯಿಂದ ರಾಜ್ಯಕ್ಕೆ ಮುಂಗಾರಿನ ಸಿಂಚನ | ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಬೆಂಗಳೂರು : ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶ ಮಾಡಿದ್ದು, ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಾಳೆಯಿಂದ ರಾಜ್ಯದಲ್ಲಿ ಗುಡುಗು -ಮಿಂಚು ಸಹಿತ ಮಳೆಯಾಗಲಿದ್ದು, ಗಂಟೆಗೆ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಸದ್ಯ ಅರಬ್ಬಿ ಸಮುದ್ರದ ಮಧ್ಯ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ತೀವ್ರವಾಗಿರುವುದರಿಂದ ಕರ್ನಾಟಕದ ಕೆಲವೆಡೆ ಜೂನ್ 1ರಿಂದ ಮಳೆಯಾಗುತ್ತಿದೆ.

ನಾಳೆಯಿಂದ ರಾಜ್ಯಕ್ಕೆ ಮುಂಗಾರಿನ ಸಿಂಚನ | ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ Read More »

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ

ಬೆಂಗಳೂರು : ಸಿಡಿ ಪ್ರಕರಣದಲ್ಲಿ ಕ್ಲೀನ್ ಚಿಟ್ ​ ಖುಷಿಯಲ್ಲಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನಿರಾಸೆಯಾಗಿದೆ . ಸದ್ಯ ನಡೆಯುತ್ತಿರುವ ಸಂಪುಟ ಪುನರ್ ​ ರಚನೆ ಪ್ರಕ್ರಿಯೆಯಲ್ಲಿ ಮತ್ತೆ ಮಂತ್ರಿಯಾಗುವ ಆಸೆ ರಮೇಶ್ ಜಾರಕಿಹೊಳಿ ಇಟ್ಟುಕೊಂಡಿದ್ದರು ಎನ್ನಲಾಗಿತ್ತು . ಆದ್ರೆ ಪ್ರಕರಣದಲ್ಲಿ ಬಿ ರಿಪೋರ್ಟ್ ಪ್ರಕ್ರಿಯೆಯನ್ನ ಎಸ್ ‌ ಐಟಿ ಮುಂದೂಡಿಕೆ ಮಾಡಿದೆ . ಪ್ರಕರಣದ ಪ್ರಗತಿ ವರದಿಯನ್ನ ಹೈಕೋರ್ಟ್ ​​ ಗೆ ನೀಡಲಾಗಿದ್ದು ಮುಂದಿನ 17 ನೇ ತಾರೀಕು ಮತ್ತೊಂದು ಸ್ಟೇಟಸ್ ರಿಪೋರ್ಟ್ ನೀಡಬೇಕಿದೆ

ಸೆಕ್ಸ್ ಸಿಡಿ‌ ಪ್ರಕರಣ: ಜಾರಕಿಹೋಳಿಗೆ ಮತ್ತೆ ನಿರಾಸೆ Read More »

ಜು.1 ರಿಂದಲೇ ಶೈಕ್ಷಣಿಕ ವರ್ಷಾರಂಭ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆ ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್​ ಮಾಡುವುದಾಗಿ ಶುಕ್ರವಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ರಾಜ್ಯ ಶಿಕ್ಷಣ ಇಲಾಖೆ. ದ್ವಿತೀಯ ಪಿಯುಸಿ ಎಕ್ಸಾಂ ರದ್ದಾಗಿರುವುದು ಇತಿಹಾಸದಲ್ಲೇ ಇದೇ ಮೊದಲ ಬಾರಿ. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಾದರೂ ಪರೀಕ್ಷೆಗೆ ಹಾಜರಾದ ಎಲ್ಲ ಮಕ್ಕಳನ್ನೂ ಪಾಸ್​ ಮಾಡಲಾಗುತ್ತೆ. ಇದರ ಜತೆಗೆ 2021-22ನೇ ಸಾಲಿನ ಶೈಕ್ಷಣಿಕ ವರ್ಷ ಯಾವಾಗ ಆರಂಭ ಆಗುತ್ತೆ ಎಂಬ ಗೊಂದಲಕ್ಕೂ ಇಂದು ತೆರೆಬಿದ್ದಿದೆ. ಜುಲೈ 1ರಿಂದ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ

ಜು.1 ರಿಂದಲೇ ಶೈಕ್ಷಣಿಕ ವರ್ಷಾರಂಭ Read More »

ಹೊಸ ಸ್ವರೂಪದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಜೂ.04. ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯು ನಡೆಯಲಿದ್ದು, ವಿಜ್ಞಾನ, ಗಣಿತ ಹಾಗೂ ಸಮಾಜಶಾಸ್ತ್ರ ವಿಷಯಗಳನ್ನು ಒಂದೇ ಪೇಪರ್ ಮೂಲಕ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು ಎಂದರು. ಒಟ್ಟು ಎರಡು ಪರೀಕ್ಷೆಗಳು ನಡೆಯಲಿದ್ದು, ಕೊರೋನಾ ಬಾಧಿತರಿಗೆ ಮತ್ತೊಂದು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ.

ಹೊಸ ಸ್ವರೂಪದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಸಚಿವ ಸುರೇಶ್ ಕುಮಾರ್ Read More »

ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್: ಹುಡುಕಿದ್ದೆಲ್ಲಾ ಪರಿಪೂರ್ಣವಲ್ಲ ಎಂದು ಕ್ಷಮೆಯಾಚನೆ

ಬೆಂಗಳೂರು: ಕನ್ನಡದ ಕುರಿತು ಅವಹೇಳನಕಾರಿ ಅಂಶವನ್ನು ಪ್ರಕಟಿಸಿದ್ದಕ್ಕೆ ಗೂಗಲ್ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ದನಿ ಎತ್ತಿದ್ದು, ಕೊನೆಗೂ ಮಣಿದ ಗೂಗಲ್​ ಕನ್ನಡಿಗರ ಕ್ಷಮೆಯನ್ನು ಯಾಚಿಸಿದೆ. ‘ಅಗ್ಲಿಯೆಸ್ಟ್ ಲ್ಯಾಂಗ್ವೇಜ್ ಇನ್​ ಇಂಡಿಯಾ’ ಎಂದು ಸರ್ಚ್ ಮಾಡಿದಾಗ ಕನ್ನಡ ಎಂದು ಉತ್ತರ ಬರುವಂತೆ ಇದ್ದಿದ್ದನ್ನು ಗಮನಿಸಿದ ಕನ್ನಡಿಗರು ಬೆಳಗಿನಿಂದ ಇದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕನ್ನಡದ ಮಾಧ್ಯಮಗಳು ಬೆಳಕು ಚೆಲ್ಲಿದ್ದಲ್ಲದೆ, ಸೆಲೆಬ್ರಿಟಿಗಳು ಸೇರಿ ಅಸಂಖ್ಯಾತ ಕನ್ನಡಿಗರೂ ಸೋಷಿಯಲ್ ಮೀಡಿಯಾಗಳ ಮೂಲಕ ದನಿ ಎತ್ತಿದ್ದರು. ಒಟ್ಟಾರೆಯಾಗಿ

ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್: ಹುಡುಕಿದ್ದೆಲ್ಲಾ ಪರಿಪೂರ್ಣವಲ್ಲ ಎಂದು ಕ್ಷಮೆಯಾಚನೆ Read More »

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್

ಬೆಂಗಳೂರು: ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಪರೀಕ್ಷೆ ಇಲ್ಲದೇ ಗ್ರೇಡ್ ಮೂಲಕ ಬಡ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ‌ದ್ವಿತೀಯ‌ ಪಿಯುಸಿ ಪರೀಕ್ಷೆ ರದ್ದು: ಸಚಿವ ಸುರೇಶ್ ಕುಮಾರ್ Read More »