ರಾಜ್ಯ

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಯಾಗಲಿದೆ. ಈಗಾಗಲೇ ಪೂಜಾ ಕೈಂಕರ್ಯಗಳು ನೆರವೇರಿದ್ದು, ಈಗಾಗಲೇ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ನಡೆಯುವ ಜಂಬೂ ಸವಾರಿಯ ನೇರ ಪ್ರಸಾರ ಇಲ್ಲಿದೆ. ಕೃಪೆ ಡಿಡಿ ಚಂದನ :

ಮೈಸೂರು: ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಮಹೋತ್ಸವ, ಇಲ್ಲಿದೆ ಜಂಬೂಸವಾರಿಯ ನೇರಪ್ರಸಾರ Read More »

ಮೈಸೂರು: ಜಂಬೂ ಸವಾರಿಗೆ ಕ್ಷಣಗಣನೆ|

ಮೈಸೂರು: ಅರಮನೆ ನಗರಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಶುಭ ಶುಕ್ರವಾರ(ಅ.15) ಬೆಳ್ಳಂಬೆಳಗ್ಗೆ 4.40ಕ್ಕೆ ಅರಮನೆಯಲ್ಲಿ ವಿಜಯದಶಮಿ‌ ಪೂಜಾ ಕೈಂಕರ್ಯಗಳು ಆರಂಭವಾಯಿತು. ಕಳೆದೊಂದು ವಾರದಿಂದ ಆರಂಭವಾಗಿರುವ ನಾಡಹಬ್ಬ ದಸರಾ ಉತ್ಸವದ ಸಂಭ್ರಮಕ್ಕೆ ಇಂದಿನ ಜಂಬೂಸವಾರಿ ಮೆರವಣಿಗೆಯ ಮೂಲಕ ತೆರೆ ಬೀಳಲಿದೆ. ಕೊರೊನಾ ಕಾರಣದಿಂದ ಈ ಬಾರಿಯೂ ಸರಳವಾಗಿ ದಸರಾ ಹಬ್ಬ ಆಚರಣೆ ಮಾಡಲಾಗುತ್ತಿದ್ದು, ಪ್ರತಿಬಾರಿಯಂತೆ ಅರಮನೆ ನಗರಿ ಸುಂದರವಾಗಿ ಸಿಂಗಾರಗೊಂಡಿದೆ. ಐತಿಹಾಸಿಕ ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಅರಮನೆ ನಗರಿಯ

ಮೈಸೂರು: ಜಂಬೂ ಸವಾರಿಗೆ ಕ್ಷಣಗಣನೆ| Read More »

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ?

ಮುಂಬೈ : ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿರುವ ಮುಂಬೈ ಸೆಷನ್ಸ್ ಕೋರ್ಟ್ ಮುಂದೆ ಎನ್‍ಬಿಸಿ ಪರ ವಕೀಲ ಎಎಸ್‍ಜಿ ಅನಿಲ್‌ ಸಿಂಗ್‌ ಮಹತ್ವದ ಅಂಶದೊಂದಿಗೆ ವಾದ ಆರಂಭಿಸಿದ್ದಾರೆ.ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಮೂರು ವರ್ಷಗಳಿಂದ ಡ್ರಗ್ ಸೇವಿಸುತ್ತಿದ್ದಾರೆ ಎಂದು ವಕೀಲರು ಹೇಳಿದ್ದಾರೆ. ಹಡಗಿನಲ್ಲಿ ರೇವ್ ಪಾರ್ಟಿ ನಡೆಸಿದ ಆರೋಪದಲ್ಲಿ ಎನ್‍ಸಿಬಿಯಿಂದ ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಹಾಗೂ ಇತರೆ ಆರೋಪಿಗಳು ಜಾಮೀನು ಕೋರಿ ಮುಂಬೈ ಸೆಷನ್ಸ್ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ

ಆರ್ಯನ್ ಡ್ರಗ್ಸ್ ಸೇವನೆ ವಿಚಾರ ಬಹಿರಂಗಗೊಳಿಸಿದ ವಕೀಲರು| ಎಷ್ಟು ವರ್ಷದಿಂದ ಅಮಲು ಸೇವನೆ ಗೊತ್ತಾ? Read More »

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಕೇಂದ್ರಬಿಂದು ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಸಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಅಲಂಕೃತ ವಾಹನದಲ್ಲಿ ವಿವಿಧ ಕಲಾತಂಡಗಳ ಜೊತೆಗೆ ಮೆರವಣಿಗೆ ಮೂಲಕ ಅರಮನೆಗೆ ತರಲಾಗುತ್ತಿದೆ. ವಿಜಯದಶಮಿ ದಿನವಾದ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ, ಸೋಮಶೇಖರ್ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡುವರು. ಚಾಮುಂಡೇಶ್ವರಿ

ಬೆಟ್ಟದಿಂದ ಭುವಿಗಿಳಿದ ನಾಡದೇವಿ| ನಾಳೆ ಜಗದ್ವಿಖ್ಯಾತ ಜಂಬೂಸವಾರಿ| ಸಿಂಗಾರಗೊಂಡ ಸಾಂಸ್ಕೃತಿಕ ನಗರಿ Read More »

ದೊಡ್ಡ ಕುಳಗಳಿಗೆ ಹನಿಟ್ರ್ಯಾಪ್| ಕಾಂಗ್ರೆಸ್ ‌ನಾಯಕಿ ಅರೆಸ್ಟ್

ಬೆಂಗಳೂರು: ಹನಿಟ್ರ್ಯಾಪ್ ಆರೋಪದ ಮೇಲೆ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಕಾಂಗ್ರೆಸ್​ ನಾಯಕಿಯೊಬ್ಬಳನ್ನ ಬಂಧಿಸಿದ್ದಾರೆ. ಈಕೆಯ ವಿರುದ್ಧ ಪ್ರಭಾವಿ ರಾಜಕಾರಣಿಗಳು, ಐಪಿಎಸ್​, ಐಎಎಸ್ ಅಧಿಕಾರಿಗಳೂ ಸೇರಿದಂತೆ ಹೈ-ಪ್ರೊಫೈಲ್​ ವ್ಯಕ್ತಿಗಳನ್ನ ಯಾಮಾರಿಸಿ ಹೈಟೆಕ್ ಹನಿಟ್ರ್ಯಾಪ್ ಬಲೆಗೆ ಬೀಳಿಸಿ ಹಣ ಪೀಕಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ನಾಯಕಿ ವಿದ್ಯಾ ಎನ್ನುವವರು ಇದೀಗ ಹನಿಟ್ರ್ಯಾಪ್ ಆರೋಪದಲ್ಲಿ ಬಂಧಿತರಾಗಿರುವವರು. ಎಐಸಿಸಿ ಸದಸ್ಯೆ ಆಗಿರೋ ವಿದ್ಯಾ ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಕೂಡ ಆಗಿದ್ದರೆ. ಆರೋಪಿ ಸ್ಥಾನದಲ್ಲಿರುವ ವಿದ್ಯಾ, ತನ್ನ ಮೇಕ್​ ಅಪ್ ಭರಿತ ಸೌಂದರ್ಯದ

ದೊಡ್ಡ ಕುಳಗಳಿಗೆ ಹನಿಟ್ರ್ಯಾಪ್| ಕಾಂಗ್ರೆಸ್ ‌ನಾಯಕಿ ಅರೆಸ್ಟ್ Read More »

ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಕ್ಯಾನ್ಸಲ್|

ಬೆಂಗಳೂರು: ನಿರೀಕ್ಷೆಯಂತೆ ರಾಜ್ಯಾದ್ಯಂತ ಇಂದು ಕೋಟಿಗೊಬ್ಬ3 ಚಿತ್ರ ರಿಲೀಸ್ ಆಗಬೇಕಿದ್ದು, ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಇವತ್ತಿನ ಎಲ್ಲಾ ಪ್ರದರ್ಶನ ರದ್ದುಗೊಂಡಿದೆ. ಆದರೆ ನಾಳೆ ಎಂದಿನಂತೆ ಚಿತ್ರದ ಪ್ರದರ್ಶನ ಇರಲಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದು, ಅಭಿಮಾನಿಗಳು ತಾಳ್ಮೆಯಿಂದ ಇರಿ. ಚಿತ್ರ ಬಿಡುಗಡೆಯಾಗಲು ಕೊಂಚ ವಿಳಂಬವಾಗಿದೆ. ಮುಂದಿನ ಸಮಯವನ್ನ ನಾನೇ ಖುದ್ದು ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಕೋಟಿಗೊಬ್ಬ 3 ರಿಲೀಸ್ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಯಿಂದಲೇ ಕಿಚ್ಚನ ಅಭಿಮಾನಿಗಳು

ಬಹುನಿರೀಕ್ಷಿತ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಕ್ಯಾನ್ಸಲ್| Read More »

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವಕ

ಶಿವಮೊಗ್ಗ: ಯುವಕನೊರ್ವ ಮನೆಯಿಂದ ಬೈಕ್ ನಿಂದ ಹೊರಟು ಮಾರ್ಗ ಮಧ್ಯದಲ್ಲಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವಿಲಕ್ಷಣ ಘಟನೆ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸಮೀಪದ ಅಕ್ಲಾಪುರದಲ್ಲಿ ನಡೆದಿದೆ. ಮೃತ ಯುವಕ ಅಕ್ಲಾಪುರ ವಾಸಿ ರಾಘವೇಂದ್ರ(40) ಎಂದು ಗುರುತಿಸಲಾಗಿದೆ. ಮನೆಯಿಂದ ದತ್ತರಾಜಪುರ ಮಾರ್ಗದಲ್ಲಿ ಹೋಗುವಾಗ ಸೀಮೆಎಣ್ಣೆ ಕೊಂಡೊಯ್ದು ಮೈಮೇಲೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಆಸ್ತಿವ್ಯಾಜ್ಯದ ವೈಯಕ್ತಿಕ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಮೃತ ವ್ಯಕ್ತಿ ಪತ್ನಿ,ಎರಡು ಮಕ್ಕಳನ್ನು ಅಗಲಿದ್ದು, ಈ ಘಟನೆ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ

ರಸ್ತೆ ಮಧ್ಯೆ ಬೈಕ್ ನಿಲ್ಲಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ‌ಮಾಡಿಕೊಂಡ ಯುವಕ Read More »

ಪಬ್ಲಿಕ್ ನಲ್ಲಿ ಡಿ.ಕೆ ಶಿವಕುಮಾರ್ ಮಾನ ಹರಾಜು| ಉಗ್ರಪ್ಪ, ಸಲಿಂ ವಿರುದ್ದ ಡಿಕೆಶಿ ಕೆಂಡಾಮಂಡಲ| ಕಾಂಗ್ರೇಸ್ ನಲ್ಲಿ ಮೊದಲ ವಿಕೆಟ್ ಪತನ

ಬೆಂಗಳೂರು: ಸಂಸದ ಉಗ್ರಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ, ಆದರೀಗ ಈ ಹೇಳಿಕೆ ಕೊಟ್ಟ ನಾಯಕರಿಗೆ ಡಿ. ಕೆ. ಶಿವಕುಮಾರ್ ಫುಲ್ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಅಲ್ಲದೇ ಸಲೀಂರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಲು ಸೂಚಿಸಿದ್ದಾರೆ. ಡಿಕೆಶಿ ವಿರುದ್ಧ ಹೇಳಿಕೆ ಕೊಟ್ಟಿದ್ದ ಸಲೀಂ, ‘ಅವರು ದೊಡ್ಡ ಸ್ಕ್ರ್ಯಾಮ್ ಇದೆ, ಕೆದುಕುತ್ತಾ ಹೋದರೆ ಇವರದ್ದು ಹೊರಬರುತ್ತೆ. ಅವರ ಹುಡುಗನ ಹತ್ತಿರವೆ 50 ರಿಂದ 100 ಕೋಟಿ ಇದೆ ಎಂದರೆ,

ಪಬ್ಲಿಕ್ ನಲ್ಲಿ ಡಿ.ಕೆ ಶಿವಕುಮಾರ್ ಮಾನ ಹರಾಜು| ಉಗ್ರಪ್ಪ, ಸಲಿಂ ವಿರುದ್ದ ಡಿಕೆಶಿ ಕೆಂಡಾಮಂಡಲ| ಕಾಂಗ್ರೇಸ್ ನಲ್ಲಿ ಮೊದಲ ವಿಕೆಟ್ ಪತನ Read More »

ದಸರಾ ಬಳಿಕ ಗಡಿಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಕ್ಕೆ ಕ್ರಮ – ಸಿಎಂ ಬೊಮ್ಮಾಯಿ

ಮಂಗಳೂರು: ರಾಜ್ಯದ ಗಡಿ ಭಾಗಗಳಲ್ಲಿ ಕೋವಿಡ್ ನಿರ್ಬಂಧಗಳನ್ನು ಸಡಿಲಗೊಳಿಸಲು ದಸರಾ ಮುಗಿದ ಕೂಡಲೇ ಕೋವಿಡ್ ತಜ್ಞರ ಸಮಿತಿಯ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಕರ್ನಾಟಕಕ್ಕೆ ಹೊಂದಿಕೊಂಡಿರುವ ಕೇರಳ ಮತ್ತು ಮಹಾರಾಷ್ಟ್ರ ದಲ್ಲಿ ಇರುವ ಕೋವಿಡ್ ಪರಿಸ್ಥಿತಿ ಬಗ್ಗೆ ತಜ್ಞರು ಮೌಲ್ಯಮಾಪನ ಮಾಡುತ್ತಿದ್ದಾರೆ. ದಸರಾ ಹಬ್ಬದ ಬಳಿಕ ಕೋವಿಡ್ ತಜ್ಞರ ಸಭೆ ಕರೆಯಲಾಗುವುದು. ಗಡಿ ಜಿಲ್ಲೆಗಳಲ್ಲಿ

ದಸರಾ ಬಳಿಕ ಗಡಿಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಕ್ಕೆ ಕ್ರಮ – ಸಿಎಂ ಬೊಮ್ಮಾಯಿ Read More »

ನದಿಗೆ ಉರುಳಿದ ಬಸ್ಸ್| 32 ಮಂದಿ ದುರ್ಮರಣ| ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ

ನೇಪಾಳ: ಕಣಿವೆ ದೇಶದಲ್ಲಿ ಭಾರೀ ಅನಾಹುತ ಸಂಭವಿಸಿದ್ದು, ಮುಗು ಜಿಲ್ಲೆಯ ಗಮಗಧಿಗೆ ತೆರಳುತ್ತಿದ್ದ ಬಸ್‌ ಸ್ಕಿಡ್‌ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 300 ಮೀಟರ್‌ ದೂರದಲ್ಲಿರುವ ನದಿಗೆ ಉರುಳಿಬಿದ್ದಿದೆ. ಘಟನೆಯಿಂದಾಗಿ 29ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇದುವರೆಗೆ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ವಿಜಯದಶಮಿ ಹಬ್ಬವನ್ನು ಆಚರಿಸುವ ಸಲುವಾಗಿ ಜನರು ಬಸ್ಸಿನ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಬಸ್ಸಿನಲ್ಲಿ ಒಟ್ಟು ಎಷ್ಟು

ನದಿಗೆ ಉರುಳಿದ ಬಸ್ಸ್| 32 ಮಂದಿ ದುರ್ಮರಣ| ಏರಿಕೆಯಾಗುತ್ತಿದೆ ಸಾವಿನ ಸಂಖ್ಯೆ Read More »