ರಾಜ್ಯ

ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜ್ಯಾಂ| ಮುಳುಗಿದ ವಾಹನಗಳು

ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಟ್ಯಾಕ್ಸಿ ಮತ್ತು ಕಾರುಗಳಿಗೆ ಹಾನಿಯಾಗಿದ್ದು, ನಗರದ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಾಮುತ್ತ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಇಂಜಿನ್ ಗಳಿಗೆ ನೀರು ನುಗ್ಗಿ ಸುಮಾರು 20ಕ್ಕೂ ಹೆಚ್ಚು ಕಾರುಗಳು ಕೆಟ್ಟು ನಿಂತಿವೆ. ಅದಲ್ಲದೆ ಭಾರಿ ಮಳೆಯಿಂದ ಟರ್ಮಿನಲ್ ಮುಂಭಾಗ ನೀರು ನಿಂತಿತ್ತು. ಟರ್ಮಿನಲ್ ಬಳಿ 2 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿತ್ತು. ಸದ್ಯ ಸಹಜ ಸ್ಥಿತಿಗೆ ಮರಳಿದ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿಂತಿದ್ದ ಭಾರಿ […]

ಭಾರೀ ಮಳೆಗೆ ಬೆಂಗಳೂರಿನ ಹಲವೆಡೆ ಟ್ರಾಫಿಕ್ ಜ್ಯಾಂ| ಮುಳುಗಿದ ವಾಹನಗಳು Read More »

ಬೆಂಗಳೂರಿನಲ್ಲಿ ಕಾಣೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ| ಸುಖಾಂತ್ಯ ಪಡೆದ ನಾಪತ್ತೆ ಪ್ರಕರಣ

ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. 2 ದಿನದ ಹಿಂದೆ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಪತ್ತೆಯಾಗಿದ್ದಾರೆ. ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್‌ಮೆಂಟ್‌ನ ನಾಲ್ವರು ಮಕ್ಕಳು ಪತ್ತೆಯಾಗಿದ್ದು, ಸದ್ಯ ಈಗ ಪಾಂಡೇಶ್ವರ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಎಜಿಬಿ ಲೇಔಟ್‌ನ ನಾಲ್ವರು ಮಕ್ಕಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಅಮೃತವರ್ಷಿಣಿ ಮನೆಯಿಂದ ಹೋಗಬೇಕಾದ್ರೆ 70 ಗ್ರಾಂ ಚಿನ್ನದ ನೆಕ್ಲೆಸ್, 3000 ನಗದು ತೆಗೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಮಕ್ಕಳ

ಬೆಂಗಳೂರಿನಲ್ಲಿ ಕಾಣೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆ| ಸುಖಾಂತ್ಯ ಪಡೆದ ನಾಪತ್ತೆ ಪ್ರಕರಣ Read More »

ರಾಜ್ಯದಲ್ಲಿ ಡೀಸೆಲ್‌, ಪೆಟ್ರೋಲ್ ಶತಕದ ಜೊತೆಯಾಟ| ಹೈರಾಣಾದ ‘ಪ್ಯಾರೇ ದೇಶವಾಸಿ’

ಬೆಂಗಳೂರು: ದಿನೇ ದಿನೇ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಟಮಟ್ಟಕ್ಕೆ ಏರಿಕೆಯಾಗಿವೆ. ರಾಜ್ಯದಲ್ಲಿಯೂ ಡೀಸೆಲ್ ದರ 100 ರೂ. ಗಡಿ ದಾಟಿದೆ. ಶಿವಮೊಗ್ಗದಲ್ಲಿ ಡೀಸೆಲ್ ಒಂದು ಲೀಟರ್ ಗೆ 100.29 ರೂಗೆ ತಲುಪಿದೆ. ದಾವಣಗೆರೆಯಲ್ಲಿ 100.44 ರೂ., ಚಿತ್ರದುರ್ಗ 100.44 ರೂ.ತಲುಪಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ 109.69 ರೂ., ಡೀಸೆಲ್ 100.29 ರೂ. ಬೀದರ್ ಪೆಟ್ರೋಲ್ 108.97 ರೂ., ಡೀಸೆಲ್ 99.73 ರೂ.ತುಮಕೂರು ಪೆಟ್ರೋಲ್ 108.14 ರೂ., ಡೀಸೆಲ್ 98.74 ರೂ.

ರಾಜ್ಯದಲ್ಲಿ ಡೀಸೆಲ್‌, ಪೆಟ್ರೋಲ್ ಶತಕದ ಜೊತೆಯಾಟ| ಹೈರಾಣಾದ ‘ಪ್ಯಾರೇ ದೇಶವಾಸಿ’ Read More »

‘ಸಂಚಿ ಹೊನ್ನಮ್ಮ’ ವಿದ್ಯಾರ್ಥಿವೇತನಕ್ಕೆ ಪದವಿ‌ ವಿದ್ಯಾರ್ಥಿಗಳಿಂದ ಅರ್ಜಿ‌ ಅಹ್ವಾನ

ಬೆಂಗಳೂರು : 2021-22 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿ.ಎ ಹಾಗೂ ಬಿ.ಕಾಂ ವಿದ್ಯಾರ್ಥಿನಿಯರಿಗೆ ಸಂಚಿ ಹೊನ್ನಮ್ಮ ವಿದ್ಯಾರ್ಥಿ ವೇತನಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ಅರ್ಜಿ ಆಹ್ವಾನಿಸಿದೆ. 2021 ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 2021-22 ನೇ ಸಾಲಿನಲ್ಲಿ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜಿನಲ್ಲಿ ಪ್ರಥಮ ಬಿಎ/ಬಿಕಾಂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿಯಲ್ಲಿ ಕನಿಷ್ಟ 75%ಅಂಕಗಳನ್ನು ಪಡೆದಿರಬೇಕು. ಈ ವಿದ್ಯಾರ್ಥಿ

‘ಸಂಚಿ ಹೊನ್ನಮ್ಮ’ ವಿದ್ಯಾರ್ಥಿವೇತನಕ್ಕೆ ಪದವಿ‌ ವಿದ್ಯಾರ್ಥಿಗಳಿಂದ ಅರ್ಜಿ‌ ಅಹ್ವಾನ Read More »

ರಾಜ್ಯದಲ್ಲಿ ಮರೆಯಾದ DREAM11 | ಆನ್ಲೈನ್ ಜೂಜಿಗೆ ಕಡಿವಾಣ ಹಾಕಿದ ರಾಜ್ಯ‌ಸರ್ಕಾರ

ಬೆಂಗಳೂರು: ರಾಜ್ಯದಲ್ಲಿ ಆನ್‌ಲೈನ್‌ ಜೂಜಾಟ, ಸ್ಕಿಲ್‌ ಗೇಮ್‌, ಬೆಟ್ಟಿಂಗ್‌ಗೆ ನಿಷೇಧ ಹೇರಿ ಅಧಿಸೂಚನೆ ಹೊರಬಿದ್ದ ಬೆನ್ನಲ್ಲೇ ರಾಜ್ಯ ಸರಕಾರ ಕಾರ್ಯಾಚರಣೆ ಆರಂಭಿಸಿದ್ದು, ಜನಪ್ರಿಯ ಗೇಮಿಂಗ್‌ ಆ್ಯಪ್‌ ಡ್ರೀಮ್‌ 11 ತನ್ನ ಸೇವೆ ಸ್ಥಗಿತಗೊಳಿಸಿದೆ. ಈ ಮೂಲಕ ಆನ್‌ಲೈನ್‌ ಜೂಜು ವಿರುದ್ಧ ಸರಕಾರದ ಹೋರಾಟಕ್ಕೆ ದೊಡ್ಡ ಮಟ್ಟದ ಜಯ ಲಭಿಸಿದಂತಾಗಿದೆ. ನಿಷೇಧ ಜಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಡ್ರೀಮ್‌ 11 ವಿರುದ್ಧ ಬೆಂಗಳೂರು ಪೊಲೀಸರು ಶನಿವಾರ ಎಫ್‌ಐಆರ್‌ ದಾಖಲಿಸಿದ್ದರು. ಮರುದಿನವೇ ಕರ್ನಾಟಕದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿ ರುವುದಾಗಿ ಡ್ರೀಮ್‌ 11

ರಾಜ್ಯದಲ್ಲಿ ಮರೆಯಾದ DREAM11 | ಆನ್ಲೈನ್ ಜೂಜಿಗೆ ಕಡಿವಾಣ ಹಾಕಿದ ರಾಜ್ಯ‌ಸರ್ಕಾರ Read More »

ಇಂದು ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ

ಬೆಂಗಳೂರು: ಎಸ್‌ಎಸ್‌ಎಲ್ ಸಿ ಪೂರಕ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಂದು ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಸೆಪ್ಟೆಂಬರ್ 27, 29ರಂದು ಪೂರಕ ಪರೀಕ್ಷೆ ನಡೆದಿದ್ದು, 53 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಸೆಸೆಲ್ಸಿ ಎಸ್‌ಎಸ್‌ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶವನ್ನು https://sslc.karnataka.gov.in ವೆಬ್ಸೈಟ್ ನಲ್ಲಿ ವೀಕ್ಷಿಸಬಹುದಾಗಿದೆ.

ಇಂದು ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ಫಲಿತಾಂಶ Read More »

ಅ.13ರ ವರೆಗೂ ಭಾರೀ ಮಳೆ ಮುನ್ಸೂಚನೆ| ಹಲವು ಜಿಲ್ಲೆಗಳಲ್ಲಿ ಅಲರ್ಟ್| ದಸರಾ ಹಬ್ಬಕ್ಕೆ ಮಳೆ ಕಾಟ|

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮೂರು ದಿನ ಭಾರಿ ಮಳೆಯಾಗಲಿದೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಈ ಬಗ್ಗೆ ಮುನ್ಸೂಚನೆ ನೀಡಲಾಗಿದ್ದು, ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕಲಬುರ್ಗಿ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಅನೇಕ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಅ.13ರ ವರೆಗೂ ಭಾರೀ ಮಳೆ ಮುನ್ಸೂಚನೆ| ಹಲವು ಜಿಲ್ಲೆಗಳಲ್ಲಿ ಅಲರ್ಟ್| ದಸರಾ ಹಬ್ಬಕ್ಕೆ ಮಳೆ ಕಾಟ| Read More »

ಅಮಲು ಪದಾರ್ಥ ನೀಡಿ ಅಪ್ರಾಪ್ತೆಯ ಅತ್ಯಾಚಾರ| ಬಂಟ್ವಾಳದಲ್ಲಿ ನಡೆಯಿತು ಗ್ಯಾಂಗ್ ರೇಪ್|

ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮದ ಕೆಂಪುಗುಡ್ಡೆ ಎಂಬಲ್ಲಿ ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಅಪ್ರಾಪ್ತೆ ಬಾಲಕಿ ಮೇಲೆ ಐವರು ಕಾಮುಕರಿಂದ ಗ್ಯಾಂಗ್ ರೇಪ್ ಕೃತ್ಯ ನಡೆದಿದ್ದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಬಂಟ್ವಾಳದ ಎಸ್ ವಿ ಎಸ್ ಶಾಲೆಯ ಆಟೋ ಸ್ಟಾಂಡ್ ನಲ್ಲಿ ನಿಂತಿದ್ದ ಬಾಲಕಿಗೆ ಅಮಲು ಹತ್ತಿಸುವ ಚಾಕಲೇಟ್ ನೀಡಿ ಅಪಹರಿಸಸಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಅಮ್ಟಾಡಿಯ ರೂಂ ಒಂದಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಲಾಗಿದೆ

ಅಮಲು ಪದಾರ್ಥ ನೀಡಿ ಅಪ್ರಾಪ್ತೆಯ ಅತ್ಯಾಚಾರ| ಬಂಟ್ವಾಳದಲ್ಲಿ ನಡೆಯಿತು ಗ್ಯಾಂಗ್ ರೇಪ್| Read More »

ದಸರಾ ಜಂಬೂಸವಾರಿ|ಮದವೇರಿದ ವಿಕ್ರಮನಿಗೆ ಗೇಟ್‌ಪಾಸ್..!

ಮಂಡ್ಯ: ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಂದು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ವಿಕ್ರಮನಿಗೆ ಮದವೇರಿದ ಕಾರಣ ಈ ಬಾರಿಯ ಮೆರವಣಿಗೆಯಿಂದ ಗೇಟ್‌ಪಾಸ್ ಆಗಿದ್ದಾನೆ.ಮೈಸೂರಿಗೆ ದಸರಾ ನೋಡಲು ಬರುವ ಜನರಿಗೆ ಅಂಬಾರಿ ಹೊರುವ ಆನೆಗಳಾದ ಅರ್ಜುನನ್ನು ಮತ್ತು ವಿಕ್ರಮನನ್ನು ಕಂಡರೆ ಅಚ್ಚು-ಮೆಚ್ಚು. ಅದಲ್ಲದೆ ಕಳೆದ ಐದು ವರ್ಷಗಳಿಂದ ಸತತವಾಗಿ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಜರುಗುವ ಖಾಸಗಿ ದಬಾರ‍್ನ ಪೂಜಾ ವಿಧಿ ವಿಧಾನಗಳಲ್ಲಿ ಪಟ್ಟದ ಆನೆಯಾಗಿ ಜವಾಬ್ದಾರಿ

ದಸರಾ ಜಂಬೂಸವಾರಿ|ಮದವೇರಿದ ವಿಕ್ರಮನಿಗೆ ಗೇಟ್‌ಪಾಸ್..! Read More »

ದಸರಾ ಬಳಿಕ ರಾಜ್ಯದಲ್ಲಿ 1ನೇ ತರಗತಿಯಿಂದಲೇ‌ ಶಾಲಾರಂಭ – ಸಚಿವ ಬಿ.ಸಿ ನಾಗೇಶ್

ಮಂಗಳೂರು : ರಾಜ್ಯದಲ್ಲಿ ಈಗಾಗಲೇ 6 ರಿಂದ 12ನೇ ತರಗತಿ ಶಾಲಾ ಕಾಲೇಜುಗಳು ಆರಂಭಗೊಂಡಿವೆ. ಆದರೆ 1 ರಿಂದ 5ನೇ ತರಗತಿಗಳು ಆರಂಭಗೊಂಡಿಲ್ಲ. ಈ ಶಾಲೆಗಳು ಯಾವಾಗ ಆರಂಭವಾಗಲಿದೆ ಎನ್ನುವ ಬಗ್ಗೆ ಮುಹೂರ್ತವನ್ನು ರಾಜ್ಯ ಸರ್ಕಾರ ಫಿಕ್ಸ್ ಮಾಡಿದೆ. ದಸರಾ ಬಳಿಕ 1 ರಿಂದ 5ನೇ ತರಗತಿಗಳನ್ನು ಆರಂಭಿಸೋದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಈ ಕುರಿತಂತೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಇದುವರೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಹಾಜರಾತಿ ಕಡ್ಡಾಯಗೊಳಿಸಿಲ್ಲ. ಇದೀಗ

ದಸರಾ ಬಳಿಕ ರಾಜ್ಯದಲ್ಲಿ 1ನೇ ತರಗತಿಯಿಂದಲೇ‌ ಶಾಲಾರಂಭ – ಸಚಿವ ಬಿ.ಸಿ ನಾಗೇಶ್ Read More »