ರಾಜ್ಯ

ಕಾರ್ಕಳ: ಬಟ್ಟೆ ಒಣಗಿಸಲು ಹೋದ ಮಹಿಳೆ ಮಹಡಿಯಿಂದ ಬಿದ್ದು ಸಾವು

ಕಾರ್ಕಳ(: ಬಟ್ಟೆ ಒಣಗಿಸಲು ಹೋಗಿ 5 ನೇ ಮಹಡಿಯಿಂದ ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ತಾಲೂಕು ನಿಟ್ಟೆಯಲ್ಲಿ ಸಂಭವಿಸಿದೆ. ಶ್ರೀಮತಿ ಕಮಲ ಪ್ರಿಯಾ ಬಿ (48) ಮೃತಪಟ್ಟವರು. ಇವರು ಕಳೆದ 10 ವರ್ಷದಿಂದ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ನಿಟ್ಟೆ ಕಾಲೇಜಿನ ವಸತಿ ಗೃಹದ ಎ ಬ್ಲಾಕ್ ನ 5 ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ನ.24 ರ ಸಂಜೆ ತಾವು ವಾಸ್ತವ್ಯವಿದ್ದ ಮನೆಯ ಬಾಲ್ಕನಿಯಲ್ಲಿ ಸ್ಟೂಲ್ ನ ಮೇಲೆ ನಿಂತು ಬಟ್ಟೆ ಒಣಗಿಸುತ್ತಿರುವಾಗ ಆಕಸ್ಮಿಕವಾಗಿ ಆಯ ತಪ್ಪಿ […]

ಕಾರ್ಕಳ: ಬಟ್ಟೆ ಒಣಗಿಸಲು ಹೋದ ಮಹಿಳೆ ಮಹಡಿಯಿಂದ ಬಿದ್ದು ಸಾವು Read More »

ಉಳ್ಳಾಲ: ನೇತ್ರಾವತಿ ನದಿಯಲ್ಲಿ ಮಹಿಳೆಯ ಶವ ಪತ್ತೆ| ಕೊಳೆತ ಸ್ಥಿತಿಯಲ್ಲಿನ ಕಳೆಬರ ಬೆಳ್ಳಾರೆ ಮಹಿಳೆಯದ್ದೇ…!?

ಮಂಗಳೂರು: ಉಳ್ಳಾಲ ಹೊಯ್ಗೆ ನೇತ್ರಾವತಿ ನದಿ ತೀರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಇಂದು ಬೆಳಗ್ಗೆ ಮಹಿಳೆಯ ಶವ ಸಂಪೂರ್ಣ ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಂಪೂರ್ಣ ಕೊಳೆತು ಹೋಗಿದೆ. ಹೊಯ್ಗೆ ಕಿಂಗ್ ಸ್ಟಾರ್ ಸೇವಾ ಸಮಿತಿಯ ಪ್ರೇಮ್ ಪ್ರಕಾಶ್ ಡಿಸೋಜ, ರಾಕೇಶ್ ಪ್ರಶಾಂತ್ ಡಿಸೋಜ, ಅನಿಲ್ ಮೊಂತೇರೊ ಮತ್ತು ನಿಶಾನ್ ಜಾಯ್ ಲೋಬೋ, ಅವರು ಶವವನ್ನ ನದಿಯಿಂದ ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

ಉಳ್ಳಾಲ: ನೇತ್ರಾವತಿ ನದಿಯಲ್ಲಿ ಮಹಿಳೆಯ ಶವ ಪತ್ತೆ| ಕೊಳೆತ ಸ್ಥಿತಿಯಲ್ಲಿನ ಕಳೆಬರ ಬೆಳ್ಳಾರೆ ಮಹಿಳೆಯದ್ದೇ…!? Read More »

ಮಂಗಳೂರು: ನಾಗಬನ ಹಾನಿ ಪ್ರಕರಣ| 8 ಆರೋಪಿಗಳು ಅಂದರ್| ಕೋಮುದ್ವೇಷಕ್ಕೆ ಕಾರಣವಾಗಿದ್ದ ಘಟನೆ|

ಮಂಗಳೂರು: ಕೋಮು ವೈಷಮ್ಯಕ್ಕೆ ಕಾರಣವಾಗಿದ್ದ ಮಂಗಳೂರು ನಾಗಬನದ ಮೂರ್ತಿಗಳನ್ನು ಧ್ವಂಸಗೊಳಿಸಿದ್ದ ಪ್ರಕರಣವನ್ನು ಭೇದಿಸಿರುವ ಮಂಗಳೂರು ನಗರ ಪೊಲೀಸರು, ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಮಂಗಳೂರು ನಗರದ ಕೂಳೂರು, ಕೋಡಿಕಲ್ ನಾಗನಕಲ್ಲಿಗೆ ಹಾನಿ ಮಾಡಿ ಜಿಲ್ಲೆಯಲ್ಲಿ ಶಾಂತಿ ಕದಡಲು ಪ್ರಯತ್ನಿಸಿದ್ದರು.ಬಂಧಿತರನ್ನು ಕೂಳೂರಿನ ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ (27), ಕಾವೂರು ಶಾಂತಿನಗರ ನಿವಾಸಿ ನಿಕಿಲೇಶ (22), ಸುರತ್ಕಲ್ ನಿವಾಸಿ ಜಯಂತ್ ಕುಮಾರ್ (30), ಬಂಟ್ವಾಳ ಪಡೂರು ಗ್ರಾಮ ನಿವಾಸಿ ಪ್ರತೀಕ್ (24), ಕೂಳೂರು ಪಡುಕೋಡಿ ಗ್ರಾಮ

ಮಂಗಳೂರು: ನಾಗಬನ ಹಾನಿ ಪ್ರಕರಣ| 8 ಆರೋಪಿಗಳು ಅಂದರ್| ಕೋಮುದ್ವೇಷಕ್ಕೆ ಕಾರಣವಾಗಿದ್ದ ಘಟನೆ| Read More »

ಹೊಸ ರೂಪಾಂತರಿ ವೈರಸ್ ಹಾವಳಿ ಹಿನ್ನಲೆ| ಇಂದು ಸಿಎಂ ಮಹತ್ವದ ಸಭೆ| ಮತ್ತೆ ”ಲಾಕ್” ಆಗುತ್ತಾ ಕರ್ನಾಟಕ?

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಇಂದು 4 ಗಂಟೆಗೆ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ. ವಿದೇಶದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಲರ್ಟ್ ಆಗಿದ್ದು, ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ ಬೊಮ್ಮಾಯಿ, ಶಾಲೆಗಳು, ಹಾಸ್ಟಲ್​ಗಳಲ್ಲಿ ಕೊವಿಡ್ ಹೆಚ್ಚಾಗುತ್ತಿರುವ ಸಂಬಂಧ ಆತಂಕ ವ್ಯಕ್ತಪಡಿಸಿದ್ದಾರೆ. ”ಶಾಲೆಗಳು,

ಹೊಸ ರೂಪಾಂತರಿ ವೈರಸ್ ಹಾವಳಿ ಹಿನ್ನಲೆ| ಇಂದು ಸಿಎಂ ಮಹತ್ವದ ಸಭೆ| ಮತ್ತೆ ”ಲಾಕ್” ಆಗುತ್ತಾ ಕರ್ನಾಟಕ? Read More »

ಮಂಗಳೂರು-ಚೆನ್ನೈ ರೈಲು ಗುದ್ದಿ ಹೆಣ್ಣಾನೆ ಹಾಗೂ‌ ಎರಡು ಮರಿಗಳು ಸಾವು|

ಚೆನ್ನೈ: 25 ವರ್ಷದ ಹೆಣ್ಣಾನೆ ಹಾಗೂ ಅದರ ಎರಡು ಮರಿಗಳು ರೈಲು ಹಳಿ ದಾಟುತ್ತಿದ್ದಾಗ ಮಂಗಳೂರು-ಚೆನ್ನೈ ಎಕ್ಸಪ್ರೆಸ್‌ ರೈಲು ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಮಡುಕ್ಕುರೈ ಬಳಿ ರಾತ್ರಿ 9 ರ ಸಮಯದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆ ಸಂಭವಿಸಿದಾಗ ರೈಲು ಅತಿ ವೇಗವಾಗಿ ಚಲಿಸುತ್ತಿತ್ತು, ಡಿಕ್ಕಿ ರಭಸಕ್ಕೆ ಆನೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಸ್ಥಳಕ್ಕೆ ಕಾರ್ಯಾಚರಣೆ ತಂಡ ತೆರಳಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಂಗಳೂರು-ಚೆನ್ನೈ ಎಕ್ಸಪ್ರೆಸ್‌ ರೈಲು ಕೇರಳದ

ಮಂಗಳೂರು-ಚೆನ್ನೈ ರೈಲು ಗುದ್ದಿ ಹೆಣ್ಣಾನೆ ಹಾಗೂ‌ ಎರಡು ಮರಿಗಳು ಸಾವು| Read More »

ವಿಶಿಷ್ಟ ಥೀಮ್ ನಲ್ಲಿ ಮದುವೆ ಕಾರ್ಡ್ ರೆಡಿ ಮಾಡಿದ ವಕೀಲ| ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್|

ಬೆಂಗಳೂರು: ವಕೀಲರೋರ್ವರು ತಮ್ಮ ಮದುವೆ ಕರೆಯೋಲೆಯನ್ನು ಸಂವಿಧಾನದ ಥೀಮ್​ನೊಂದಿಗೆ ಸಿದ್ಧಪಡಿಸಿದ್ದಾರೆ. ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. ಮನೆಯಲ್ಲಿ ಮದುವೆಯ ದಿನ ನಿಗದಿಯಾದ ಮೇಲೆ ಮೊದಲು ರೆಡಿಯಾಗೋದೇ ಲಗ್ನ ಪತ್ರಿಕೆ. ಇತ್ತೀಚೆಗೆ ಜನರು ಹೊಸ ಶೈಲಿಯಲ್ಲಿ ಲಗ್ನ ಪತ್ರಿಕೆ ತಯಾರಿಕೆಯನ್ನು ಯೋಚಿಸುತ್ತಾರೆ. ಜನರ ಮನಸೆಳೆಯುವ ಲಗ್ನ ಪತ್ರಿಕೆಗಳನ್ನು ಹುಡುಕುತ್ತಾರೆ. ಈಗೆಲ್ಲಾ ಹೊಸ ಹೊಸ ಥೀಮ್​ನೊಂದಿಗೆ ವೆಡ್ಡಿಂಗ್ ಕಾರ್ಡ್​ಗಳು ಸಿದ್ಧವಾಗುತ್ತಿವೆ. ಈ ಹಿಂದೆ ಆಧಾರ್ ಕಾರ್ಡ್​ ಥೀಮ್​ನೊಂದಿಗೆ ವಿಶಿಷ್ಟವಾಗಿ ಸಿದ್ಧಪಡಿಸಿದ ವೆಡ್ಡಿಂಗ್ ಕಾರ್ಡ್ ಚಿತ್ರ ಫುಲ್ ವೈರಲ್ ಆಗಿತ್ತು, ಇದೀಗ

ವಿಶಿಷ್ಟ ಥೀಮ್ ನಲ್ಲಿ ಮದುವೆ ಕಾರ್ಡ್ ರೆಡಿ ಮಾಡಿದ ವಕೀಲ| ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್| Read More »

ಮತ್ತೆ ಆತಂಕದಲ್ಲಿ ಜಗತ್ತು| ಹೈ ಸ್ಪೀಡಾಗಿ ಹರಡುವ ಮತ್ತೊಂದು ಕೊರೊನಾ ತಳಿ ಪತ್ತೆ!, ಎಚ್ಚರಿಕೆಯಿಂದಿರಲು ವೈದ್ಯಲೋಕ ಸೂಚನೆ

ಡಿಜಿಟಲ್ ಡೆಸ್ಕ್: ಕೊರೋನಾ ವೈರಸ್‌ ದೇಶದಲ್ಲಿ ಸದ್ಯ ಕಡಿಮೆ ಪ್ರಕರಣಗಳು ವರದಿಯಾಗುತ್ತಿದೆ. ಆದರೂ, ಪ್ರತಿನಿತ್ಯ ಸಾವುಗಳು ಸಂಭವಿಸುತ್ತಿದ್ದು, ಸಾವಿರಾರು ಹೊಸ ಪ್ರಕರಣಗಳು ವರದಿಯಾಗುತ್ತಿದೆ. ಈ ನಡುವೆ, ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೋವಿಡ್ ರೂಪಾಂತರದ ಬಗ್ಗೆ ವಿಶ್ವದೆಲ್ಲೆಡೆ ಆತಂಕ ಹೆಚ್ಚಾಗಿದೆ. ಇತ್ತೀಚಿನ ಇದುವರೆಗೆ ಕಂಡುಹಿಡಿದ ಅತ್ಯಂತ ಹೆಚ್ಚು ರೂಪಾಂತರಗೊಂಡ ಆವೃತ್ತಿಯಾಗಿದೆ. ಮತ್ತು ಇದು ರೂಪಾಂತರಗಳ ದೀರ್ಘ ಪಟ್ಟಿಯನ್ನು ಹೊಂದಿದೆ, ಇದನ್ನು ಒಬ್ಬ ವಿಜ್ಞಾನಿ “ಭಯಾನಕ” ಎಂದು ವಿವರಿಸಿದ್ದಾರೆ, ಆದರೆ ಇನ್ನೊಬ್ಬರು ಇದು ಅವರು ನೋಡಿದ ಅತ್ಯಂತ ಕೆಟ್ಟ ರೂಪಾಂತರವಾಗಿದೆ

ಮತ್ತೆ ಆತಂಕದಲ್ಲಿ ಜಗತ್ತು| ಹೈ ಸ್ಪೀಡಾಗಿ ಹರಡುವ ಮತ್ತೊಂದು ಕೊರೊನಾ ತಳಿ ಪತ್ತೆ!, ಎಚ್ಚರಿಕೆಯಿಂದಿರಲು ವೈದ್ಯಲೋಕ ಸೂಚನೆ Read More »

ಎರಡು ಜೀವಗಳನ್ನು ಬಲಿ ಪಡೆದ ದುಬಾರಿ ಟೊಮ್ಯಾಟೊ| ತೋಟದಿಂದ ಕದಿಯಲು ಹೋಗಿ ಅವಾಂತರ|

ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ತೋಟದಲ್ಲಿ ಬೆಳೆದಿದ್ದ ಟೋಮ್ಯಾಟೊ ಕದಿಯಲು ಹೋಗಿದ್ದ ಇಬ್ಬರು ಯುವಕರು ಬೇಲಿಗೆ ಹಾಕಿದ್ದ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟೇನಹಳ್ಳಿ ಬಳಿ ಸಂಭವಿಸಿದೆ. ಟೊಮ್ಯಾಟೊ ಬೆಳೆಗೆ ತೋಟದ ಮಾಲಿಕ ಅಶ್ವಥರಾವ್ ವಿದ್ಯುತ್ ಬೇಲಿ ಹಾಕಿದ್ದರು. ವಿದ್ಯುತ್ ಬೇಲಿ ತಗುಲಿ ವಸಂತರಾವ್ (28) ಸ್ಥಳದಲ್ಲೇ ಮೃತಪಟ್ಟರೆ, ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ತೋಟದ ಮಾಲಿಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ. ತೋಟದ ಮಾಲಿಕ ಅಶ್ವಥರಾವ್

ಎರಡು ಜೀವಗಳನ್ನು ಬಲಿ ಪಡೆದ ದುಬಾರಿ ಟೊಮ್ಯಾಟೊ| ತೋಟದಿಂದ ಕದಿಯಲು ಹೋಗಿ ಅವಾಂತರ| Read More »

ನೇಣಿಗೆ ಕೊರಳೊಡ್ಡಿದ ಪುನೀತ್ ಅಭಿಮಾನಿ| ನಿಲ್ಲದ ಅಭಿಮಾನಿಗಳ ಸಾವಿನ‌ ಓಟ|

ಹಾಸನ: ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳಾಗುತ್ತಾ ಬಂದರೂ ಅವರ ಅಗಲಿಕೆಯ ನೋವು ಅಭಿಮಾನಿಗಳ ಮನದಲ್ಲಿ ಮಡುಗಟ್ಟಿದೆ. ಪುನೀತ್ ಇನ್ನಿಲ್ಲ ಎಂಬ ಕಠುಸತ್ಯವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೊಡ್ಮನೆ ಕುಟುಂಬದವರು ಅಭಿಮಾನಿಗಳ ಬಳಿ ಕೈಮುಗಿದು ಕೇಳಿ ಕೊಂಡರೂ ಪ್ರಯೋಜನವಾಗಿಲ್ಲ. ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ. ಇಂದು ಹಾಸನದಲ್ಲಿ ಅಪ್ಪು ಅಭಿಮಾನಿ ಮಯೂರ ಎಂಬುವರು ನೇಣಿಗೆ ಶರಣಾಗಿದ್ದಾರೆ. ಮಯೂರ ಡಾ.ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದರು. ಅಂತೆಯೇ ಪುನೀತ್ ಅವರ ಅಭಿಮಾನಿಯೂ ಆಗಿದ್ದರು. ಹಲವು ಭಾರಿ ಪುನೀತ್ ರಾಜ್‌ಕುಮಾರ್ ಅವರನ್ನು

ನೇಣಿಗೆ ಕೊರಳೊಡ್ಡಿದ ಪುನೀತ್ ಅಭಿಮಾನಿ| ನಿಲ್ಲದ ಅಭಿಮಾನಿಗಳ ಸಾವಿನ‌ ಓಟ| Read More »

ಕಡಬ: ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ ಹಿಂದೂ ಯುವಕರಿಗೆ ಬೆದರಿಕೆ|

ಕಡಬ: ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕಿದ್ದಕ್ಕೆ ಹಿಂದೂ ಯುವಕರಿಬ್ಬರಿಗೆ ಮುಸ್ಲಿಂ ಯುವಕರು ಜೀವ ಬೆದರಿಕೆ ಬೆದರಿಕೆ ಹಾಕಿರುವ ಘಟನೆ ಕಡಬದ ಮರ್ಧಾಳದಲ್ಲಿ ನಡೆದಿದೆ. ಮರ್ದಾಳದ ಹಿಂದೂ ಯುವಕರಿಬ್ಬರು ತಮ್ಮ ವಾಟ್ಸಾಪ್ ಸ್ಟೇಟಸ್’ನಲ್ಲಿ “ಮರ್ಧಾಳದ ಮುಸ್ಲಿಮರು ನಮ್ಮ ಸಮುದಾಯದ ಹುಡುಗಿಯರಿಗೆ ಕಣ್ಣು ಹಾಕಿದ್ರೆ ನಮಗೆ ಹೇಳಿ ನಾವು ನೋಡಿಕೊಳ್ಳುತ್ತೇವೆ, ನಮ್ಮ ಹುಡುಗಿಯರು ಮುಸ್ಲಿಂ ಯುವಕರ ಜೊತೆ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ದರೆ ಹೇಳಿ ಅವರನ್ನು ನಾವು ನೋಡಿಕೊಳ್ಳುತ್ತೇವೆ” ಎಂದು ಹಾಕಿಕೊಂಡಿದ್ದರೆಂದು ಹೇಳಲಾಗಿದೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿ ಮುಸ್ಲಿಂ ಯುವಕರು ಕೊಲೆ

ಕಡಬ: ವಾಟ್ಸಪ್ ನಲ್ಲಿ ಸ್ಟೇಟಸ್ ಹಾಕಿದ ಹಿಂದೂ ಯುವಕರಿಗೆ ಬೆದರಿಕೆ| Read More »