ರಾಜ್ಯ

ಶಿವಮೊಗ್ಗ ಗಲಭೆ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು

ಸಮಗ್ರ ನ್ಯೂಸ್: ಶಿವಮೊಗ್ಗದ ಸೀಗೆಹಟ್ಟಿ ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ ಗಲಭೆ ಪ್ರಕರಣ ಸಂಬಂಧ ಪೊಲೀಸರು ಅಲರ್ಟ್ ಆಗಿದ್ದಾರೆ. ಸೋಮವಾರ ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು 22 ವರ್ಷದ ಮಾರ್ಕೆಟ್ ಫೌಜಾನ್, 21 ವರ್ಷದ ಅಜ್ಹರ್ ಅಲಿಯಾಸ್ ಅಜ್ಜು, ಫರಾಜ್ ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ 2 ಬೈಕ್​ಗಳಲ್ಲಿ ಬಂದು ದಾಂಧಲೆ ಮಾಡಿದ್ದರು ಎನ್ನಲಾಗಿದೆ. ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲು ಆಗಿದ್ದವು. ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ […]

ಶಿವಮೊಗ್ಗ ಗಲಭೆ ಪ್ರಕರಣ| ಮೂವರನ್ನು ಬಂಧಿಸಿದ ಪೊಲೀಸರು Read More »

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ| ಸಿಎಂ ಬೊಮ್ಮಾಯಿಗೆ ಸವಿವರ ಪತ್ರ ಬರೆದ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ| ಖಾವಂದರ ಪತ್ರದ ಒಕ್ಕಣೆ ಏನ್ಗೊತ್ತಾ?

ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ಶಿರಾಡಿ ಘಟ್ಟಗಳ ರಸ್ತೆಯಲ್ಲಿ ಸುಗಮ ಸಾರಿಗೆ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಸುವ ಕುರಿತಂತೆ ಸಿಎಂ ಬೊಮ್ಮಾಯಿಗೆ ರಾಜ್ಯ ಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಶಿರಾಡಿ ಘಾಟ್ ಕುರಿತಂತೆ ಸವಿವರವಾದ ಪತ್ರ ಬರೆದು ಸಮಸ್ಯೆಯನ್ನು ಮುಂದಿಟ್ಟಿದ್ದಾರೆ. ಪೂಜ್ಯ ಖಾವಂದರ ಪತ್ರದಲ್ಲೇನಿದೆ? ಓದಿ… “ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಮಗೆ ಈ ದಿನ ದಕ್ಷಿಣಕನ್ನಡ ಟ್ರಕ್ ಮಾಲೀಕರ ಅಸೋಸಿಯೇಶನ್(ರಿ)ನಿಂದ ಒಂದು

ಶಿರಾಡಿ ಘಾಟ್ ರಸ್ತೆ ಅವ್ಯವಸ್ಥೆ| ಸಿಎಂ ಬೊಮ್ಮಾಯಿಗೆ ಸವಿವರ ಪತ್ರ ಬರೆದ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ| ಖಾವಂದರ ಪತ್ರದ ಒಕ್ಕಣೆ ಏನ್ಗೊತ್ತಾ? Read More »

ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಕನ್ನಡಿಗ ʻಮಲ್ಲಿಕಾರ್ಜುನ ಖರ್ಗೆʼ ಅವರು ಇಂದು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಇಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಈ ವೇಳೆ ಸಮಾರಂಭದಲ್ಲಿ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ. 24 ವರ್ಷಗಳ ನಂತರ ಮೊದಲ ಬಾರಿಗೆ ಗಾಂಧಿಯೇತರರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬಾರಿ ಗಾಂಧಿ ಕುಟುಂಬದವರು ಅಧ್ಯಕ್ಷ ಸ್ಥಾನಕ್ಕೆ

ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ Read More »

ವಿಜಯಪುರ :‌ಗ್ರಹಣ ಕಾಲದಲ್ಲಿ ನಡೆಯಿತು ವಿಸ್ಮಯ| ನೀರು ತುಂಬಿದ ತಟ್ಟೆಯಲ್ಲಿ ಆಧಾರವಿಲ್ಲದೆ‌ ನಿಂತ ಒನಕೆ

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ಬಸವೇಶ್ವರ ನಗರದಲ್ಲಿ ಮಂಗಳವಾರ ಸಂಭವಿಸಿದ ಗ್ರಹಣ ಕಾಲದಲ್ಲಿ ವಿಸ್ಮಯ ನಡೆದಿದೆ. ಶಂಕಪ್ಪ ಮನ್ಮಥನಾಥ ಎಂಬುವವರ ಮನೆಯಲ್ಲಿ ಗ್ರಹಣ ವೇಳೆಯಲ್ಲಿ ನೀರು ತುಂಬಿದ್ದ ತಟ್ಟೆಯಲ್ಲಿ ಯಾವುದೇ ಆಧಾರವಿಲ್ಲದೆ ಒನಕೆ ನಿಂತಿದ್ದು ಕುತೂಹಲಕ್ಕೆ ಕಾರಣವಾಯಿತು. ಈ ವಿಸ್ಮಯ ನೋಡಲು ಬಸವೇಶ್ವರ ನಗರದ ನಿವಾಸಿಗಳು ಆಗಮಿಸಿದ್ದರು. ಹಿಂದಿಕಾಲದಲ್ಲಿ ಗ್ರಹಣ ಯಾವಾಗ ಆರಂಭವಾಗಿ ಯಾವಾಗ ಮುಕ್ತಾಯವಾಗುತ್ತದೆ ಎಂದು ತಿಳಿಯಲು ತಲತಲಾಂತರದಿಂದ ಈ ಪದ್ದತಿಯನ್ನು ಅನುಸರಿಸಲಾಗುತ್ತಿದೆ ಎಂದು ಮನೆಯವರು ತಿಳಿಸಿದ್ದಾರೆ. ಇನ್ನೂ ಕೆಲವೆಡೆ , ದೇವಸ್ಥಾನದ

ವಿಜಯಪುರ :‌ಗ್ರಹಣ ಕಾಲದಲ್ಲಿ ನಡೆಯಿತು ವಿಸ್ಮಯ| ನೀರು ತುಂಬಿದ ತಟ್ಟೆಯಲ್ಲಿ ಆಧಾರವಿಲ್ಲದೆ‌ ನಿಂತ ಒನಕೆ Read More »

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್

ಚೆನ್ನೈ: ಚೆಕ್ ಇನ್ ಬ್ಯಾಗೇಜ್‍ನಲ್ಲಿ ಬ್ಯಾಂಕಾಕ್‍ನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 5 ವಿದೇಶಿ ಪ್ರಾಣಿಗಳನ್ನು ಚೆನ್ನೈನ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಮುಂಗುಸಿ ಹಾಗೂ ಕ್ಯೂಕಸ್ ಅನ್ನು ಚೀಲದಲ್ಲಿ ಮರೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳು ಬ್ಯಾಂಕಾಕ್‍ನಿಂದ ಬಂದ ಪ್ರಯಾಣಿಕನ ಬ್ಯಾಗ್‍ನಲ್ಲಿತ್ತು. ಅದನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಥೈಲ್ಯಾಂಡ್‍ಗೆ ಕಳುಹಿಸಿದ್ದಾರೆ. ಮುಂಗುಸಿ ಅಂಗೋಲಾ, ಉತ್ತರ ನಮೀಬಿಯಾ, ದಕ್ಷಿಣ ಆಫ್ರಿಕಾದ ಕ್ವಾಝುಲು-ನಟಾಲ್, ಜಾಂಬಿಯಾ ಮತ್ತು ಪೂರ್ವ ಆಫ್ರಿಕಾಕ್ಕೆ ಸ್ಥಳೀಯವಾಗಿರುವ ಮುಂಗುಸಿ

ಬ್ಯಾಂಕಾಕ್‍ನಿಂದ ಚೆನ್ನೈಗೆ ಬ್ಯಾಗ್‍ನಲ್ಲಿ ಮುಂಗುಸಿ ಸಾಗಾಟ|ಪ್ರಯಾಣಿಕ ಅರೆಸ್ಟ್ Read More »

ರಾಜ್ಯದಲ್ಲಿ ಕುಸಿದ ತಾಪಮಾನ| ಮೈಕೊರೆಯುವ ಚಳಿಗೆ ಜನತೆ ತತ್ತರ

ಸಮಗ್ರ ನ್ಯೂಸ್ : ಭಾರೀ ಮಳೆಯಿಂದ ತತ್ತರಿಸಿರುವ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಭಾರೀ ಕುಸಿತವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿ ಹೆಚ್ಚಳವಾಗಿದೆ. ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಟ ತಾಪಮಾನದಲ್ಲಿ ಇಳಿಕೆ ದಾಖಲಾಗಿದೆ. ರಾಜ್ಯದ ಶೇ. 73 ರಷ್ಟು ಭೂ ಭಾಗದಲ್ಲಿ 12 ರಿಂ ದ16 ಡಿಗ್ರಿ ಸೆಲ್ಸಿಯಸ್ ತನಕ ಕನಿಷ್ಟ ತಾಪಮಾನ ದಾಖಲಾಗಿದೆ. ಕೋಲಾರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು,

ರಾಜ್ಯದಲ್ಲಿ ಕುಸಿದ ತಾಪಮಾನ| ಮೈಕೊರೆಯುವ ಚಳಿಗೆ ಜನತೆ ತತ್ತರ Read More »

ವಿಜಯಪುರ- ಮಂಗಳೂರು ರೈಲು ಸಂಚಾರ ಖಾಯಂಗೊಳಿಸಲು ನಳಿನ್ ಕುಮಾರ್ ಆಗ್ರಹ

ಸಮಗ್ರ ನ್ಯೂಸ್: ಉತ್ತರ ಕರ್ನಾಟಕಕ್ಕೆ ಮಂಗಳೂರಿನಿಂದ ನೇರ ಸಂಪರ್ಕದ ಏಕೈಕ ಮಂಗಳೂರು -ವಿಜಯಪುರ ರೈಲು ಖಾಯಂಗೊಳಿಸಲು ಸಂದ ನಳಿನ್ ಕುಮಾರ್ ಆಗ್ರಹಿಸಿದ್ದಾರೆ. ಈ ರೈಲು ಇನ್ನೂ ಕೂಡ ವಿಶೇಷ ರೈಲು ನೆಲೆಯಲ್ಲೇ ಸಂಚರಿಸುತ್ತಿದ್ದು ಇದನ್ನು ಖಾಯಂಗೊಳಿಸಲು ರೈಲ್ವೆ ಮಂಡಳಿ ಮೀನಾಮೇಷ ಎಣಿಸುತ್ತಿದೆ.‌ ಕೊರೊನಾ ಸೋಂಕು ಇಳಿಕೆಯಾದ ಬಳಿಕ 2021ರ ಡಿ.1ರಿಂದ ಮರು ಆರಂಭಗೊಂಡಿದ್ದ ಈ ವಿಶೇಷ ರೈಲು ಅನ್ನು ರೈಲ್ವೆ ಮಂಡಳಿ 3 ತಿಂಗಳ ಕಾಲಮಿತಿ ಇರಿಸಿಕೊಂಡು ವಿಶೇಷ ನೆಲೆಯಲ್ಲಿ ಕಳೆದ 11 ತಿಂಗಳಿನಿಂದ ಓಡಿಸುತ್ತಿದೆ. ಈ

ವಿಜಯಪುರ- ಮಂಗಳೂರು ರೈಲು ಸಂಚಾರ ಖಾಯಂಗೊಳಿಸಲು ನಳಿನ್ ಕುಮಾರ್ ಆಗ್ರಹ Read More »

ರೈತ ಸಮುದಾಯಕ್ಕೆ‌ ಗುಡ್ ನ್ಯೂಸ್ ನೀಡಿದ ಸಚಿವ ಸುನಿಲ್‌ಕುಮಾರ್| 3.5 ಲಕ್ಷ ಜನರಿಗೆ ಉಚಿತ ಸೌರ ವಿದ್ಯುತ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕುಸುಮ್ ಯೋಜನೆಯಡಿ ರಾಜ್ಯದ ಸುಮಾರು 3.50 ಲಕ್ಷ ರೈತರಿಗೆ ಉಚಿತ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸುಮಾರು 3.50 ಲಕ್ಷ ರೈತಗರಿಗೆ ಉಚಿತವಾಗಿ ಸೌರ ವಿದ್ಯುತ್ ಪೂರೈಕೆ ಮಾಡುವ ಉದ್ದೇಶದಿಂದ ಕುಸುಮ್ ಯೋಜನೆಯನ್ನು ಜಾರಿಗೊಳಿಸಲಾಗುವುದು. ಕೇಂದ್ರ ಸರ್ಕಾರದ ಸಹಾಯದಿಂದ ಅನುಷ್ಠಾನಗೊಳಿಸಲಾಗುವ ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗಾ ವ್ಯಾಟ್ ಸಾಮರ್ಥ್ಯದ

ರೈತ ಸಮುದಾಯಕ್ಕೆ‌ ಗುಡ್ ನ್ಯೂಸ್ ನೀಡಿದ ಸಚಿವ ಸುನಿಲ್‌ಕುಮಾರ್| 3.5 ಲಕ್ಷ ಜನರಿಗೆ ಉಚಿತ ಸೌರ ವಿದ್ಯುತ್ Read More »

ಕೊಡಗು: 700 ವರ್ಷದ ಹಳೆಯ ಶಿವ ದೇಗುಲ‌ ಪತ್ತೆ|

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ ವಿಶೇಷವಾಗಿ ಕಾಣುವ ಬನಹೊಂದಿರುವ ಶಿವನ ದೇಗುಲವು ಪತ್ತೆಯಾಗಿದೆ. ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕುಂಜಿಲಗೇರಿ, ಅರಪಟ್ಟು, ಬೆಳ್ಳುಮಾಡು, ಕಂಡಂಗಮರೂರು, ಬೆಪ್ಪುನಾಡು ಖ್ಯಾತಿಯ ಗ್ರಾಮವಾಗಿದ್ದ ಬೆಳ್ಳುಮಾಡು ಗ್ರಾಮದ ಸರ್ವೇ ಸಂಖ್ಯೆ 76/10ರಲ್ಲಿ ಇಂದಿನ ಬೆಳ್ಳುಮಾಡು ದವಸ ಭಂಡಾರ ಸಹಕಾರ ನಿಯಮಿತ ಕಟ್ಟಡದ ಹಿಂಭಾಗದ ಸ್ಥಳದಲ್ಲಿ ಸುಮಾರು 13ನೇ ಶತಮಾನದಲ್ಲಿ ನಾಡು ದೇವನಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ

ಕೊಡಗು: 700 ವರ್ಷದ ಹಳೆಯ ಶಿವ ದೇಗುಲ‌ ಪತ್ತೆ| Read More »

ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಸೋಮಣ್ಣ ಕಪಾಳ ಮೋಕ್ಷ!

ಸಮಗ್ರ ನ್ಯೂಸ್: ಸಮಸ್ಯೆ ಹೇಳಲು ಬಂದ ಮಹಿಳೆಗೆ ವಸತಿ ಸಚಿವ ಸೋಮಣ್ಣ ಕಪಾಳಮೋಕ್ಷ ಮಾಡಿರೋ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಹಂಗಳ ಗ್ರಾಮದಲ್ಲಿ ನಿನ್ನೆ 175 ಗ್ರಾಮಸ್ಥರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ನಿಗದಿಯಾಗಿತ್ತು. ಮಧ್ಯಾಹ್ನ 3.30ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸಂಜೆ 6.30ಕ್ಕೆ ಆಗಮಿಸಿದ್ದ ಸಚಿವರ ಬಳಿ ಮಹಿಳೆ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದರು. ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಸಂಭವಿಸಿತ್ತು. ಇದೇ ವೇಳೆ ಮಹಿಳೆ ಸಚಿವರ ಬಳಿ ತೆರಳಿದ್ದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ

ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ಸೋಮಣ್ಣ ಕಪಾಳ ಮೋಕ್ಷ! Read More »