ರಾಜ್ಯ

ಲೋಕಾಯುಕ್ತ ಐಜಿಪಿಯಾಗಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ನೇಮಕ

ಸಮಗ್ರ ನ್ಯೂಸ್: ಲೋಕಾಯುಕ್ತ ಐಜಿಪಿಯಾಗಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರದ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಲೋಕಾಯುಕ್ತ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಲೋಕಾಯುಕ್ತ ಮರು ಸ್ಥಾಪನೆ ಬಳಿಕ ಮತ್ತೊಬ್ಬ ಖಡಕ್ ಐಪಿಎಸ್ ಅಧಿಕಾರಿ ಲೋಕಾಯುಕ್ತಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಸುಬ್ರಹ್ಮಣ್ಯೇಶ್ವರ ರಾವ್ ಸಿಬಿಐ ಬೆಂಗಳೂರು ಘಟಕದ ಎಸ್ ಪಿ ಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಲೋಕಾಯುಕ್ತ ಐಜಿಪಿಯಾಗಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ನೇಮಕ Read More »

ಹಾಲು ಉತ್ಪಾದಕರಿಗೆ ದೀಪಾವಳಿ ಗಿಪ್ಟ್| ಪ್ರೋತ್ಸಾಹ ಧನ ಹೆಚ್ಚಿಸಿದ ಒಕ್ಕೂಟಗಳು

ಸಮಗ್ರ ನ್ಯೂಸ್: ಹಾಲು ಉತ್ಪಾದಕರಿಗೆ ಒಕ್ಕೂಟಗಳು ದೀಪಾವಳಿ ಗಿಫ್ಟ್ ನೀಡಿದ್ದು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಗೆ ನೀಡುವ ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಿವೆ. ಚಾಮುಲ್ ತನ್ನ ಉತ್ಪಾದಕರಿಗೆ ಹಾಲಿನ ದರ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಪ್ರತಿ ಲೀಟರ್ ಹಾಲಿಗೆ 1 ರೂ. ಪ್ರೋತ್ಸಾಹ ಧನವನ್ನು ಹೆಚ್ಚಳ ಮಾಡಿದೆ. ಶುಕ್ರವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ

ಹಾಲು ಉತ್ಪಾದಕರಿಗೆ ದೀಪಾವಳಿ ಗಿಪ್ಟ್| ಪ್ರೋತ್ಸಾಹ ಧನ ಹೆಚ್ಚಿಸಿದ ಒಕ್ಕೂಟಗಳು Read More »

ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದ ಸರ್ಕಾರ

ಸಮಗ್ರ ನ್ಯೂಸ್: ಧ್ವನಿವರ್ಧಕಗಳ ಬಳಕೆ ನಿಯಂತ್ರಣ ನಿಯಮಗಳ ಅಡಿಯಲ್ಲಿ ಪರವಾನಗಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ಮೇ 10ರಂದು ಗೃಹ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅರ್ಜಿಗಳ ಪರಿಶೀಲನೆ ಪೂರ್ಣಗೊಳಿಸಿರುವ ಗೃಹ ಇಲಾಖೆ ಹತ್ತು ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿ ವರ್ಧಕ ಬಳಸಲು ಅನುಮತಿ ನೀಡಿದೆ. ಈ ಕುರಿತು ಸುತ್ತೋಲೆ ಹೊರಡಿಸಿದ ರಾಜ್ಯ ಸರಕಾರ 10,889 ಮಸೀದಿಗಳೂ ಸೇರಿದಂತೆ ರಾಜ್ಯದಲ್ಲಿ ಒಟ್ಟು 17,850 ಕಡೆ ಧ್ವನಿವರ್ಧಕಗಳ ಬಳಕೆಗೆ ಅನುಮತಿ ನೀಡಿದೆ. ಎರಡು ವರ್ಷಗಳ ಅವಧಿಗೆ ಧ್ವನಿವರ್ಧಕಗಳ ಬಳಕೆಗೆ

ರಾಜ್ಯದಲ್ಲಿ 10ಸಾವಿರಕ್ಕೂ ಹೆಚ್ಚು ಮಸೀದಿಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಿದ ಸರ್ಕಾರ Read More »

ಮೂಡಿಗೆರೆ:ಶಾಸಕ ಕುಮಾರಸ್ವಾಮಿ ಮನೆ ಮುಂದೆ ಧರಣಿನಿರತ ರೈತರ ಬಂಧನ

ಸಮಗ್ರ ನ್ಯೂಸ್: ರಸ್ತೆ ದುರಸ್ಥಿಗೆ ಆಗ್ರಹಿಸಿ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತಿದ್ದ ಐವತ್ತು ಹೆಚ್ಚು ರೈತರನ್ನು ಬಂಧಿಸಿರುವ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಅರಳಿಮರ, ಗಂಜಲಗೋಡು, ಹಳುವಳ್ಳಿ, ಮತ್ತಿಕೆರೆ ಸೇರಿದಂತೆ ಹತ್ತಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ಥಿಗೆ ಆಗ್ರಹಿಸಿ ರೈತ ಸಂಘ ಕೆಲ್ಲೂರು ಗ್ರಾಮದಲ್ಲಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರು ಮನವೊಲಿಸಿದರೂ ರೈತರ ಸಂಘದ ಸದಸ್ಯರು ಮಾತು ಕೇಳದ ಹಿನ್ನೆಲೆ ಪೊಲೀಸರು

ಮೂಡಿಗೆರೆ:ಶಾಸಕ ಕುಮಾರಸ್ವಾಮಿ ಮನೆ ಮುಂದೆ ಧರಣಿನಿರತ ರೈತರ ಬಂಧನ Read More »

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ| ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಬರೋಬ್ಬರಿ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರಕಟಿತ ವರ್ಗಾವಣೆ ಆದೇಶದಂತೆ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಂತ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ವರ್ಗಾವಣೆ ಮಾಡಿದೆ. ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ| ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಸೇರಿದಂತೆ 21 ಐಎಎಸ್ ಅಧಿಕಾರಿಗಳ ವರ್ಗಾವಣೆ Read More »

ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಂಗುಡೆ, ಬೂತಾಯಿ!! | ಏನಿದು ಸ್ಟೋರಿ ಗೊತ್ತಾ? ಇಲ್ಲಿದೆ ಮಾಹಿತಿ…

ಸಮಗ್ರ ನ್ಯೂಸ್: ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸಾರ್ವಜನಿಕ ಸಹಭಾಗಿತ್ವ ಯೋಜನೆಯಡಿ ಜನಸಾಮಾನ್ಯರ ಮನೆ ಬಾಗಿಲಿಗೆ ತಾಜಾ ಮೀನು ತಲುಪಿಸುವ ಯೋಜನೆಯನ್ನು ಮೀನುಗಾರಿಕಾ ಇಲಾಖೆ ಹಮ್ಮಿಕೊಂಡಿದೆ. ಸೀಗರ್ ಸೀಫುಡ್ ಲಾಜಿಸ್ಟಿಕ್ಸ್ ಸಂಸ್ಥೆಯು (Sheegr Seafood and Logistics Pvt.ltd ) ಈ ಯೋಜನೆಯ ಉಸ್ತುವಾರಿ ಹೊತ್ತುಕೊಂಡಿದೆ. ತಾಜಾ ಮೀನಿನ ಜೊತೆಗೆ ಮೀನಿನ ಉತ್ಪನ್ನಗಳನ್ನೂ ಶೀಘ್ರವಾಗಿ ಮನೆ ಬಾಗಿಲಿಗಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿದೆ. ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಿಂದ ತಾಜಾ ಮೀನನ್ನು ವಿಮಾನದ ಮೂಲಕ ಬೆಂಗಳೂರಿಗೆ ತಲುಪಿಸಿ,

ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಂಗುಡೆ, ಬೂತಾಯಿ!! | ಏನಿದು ಸ್ಟೋರಿ ಗೊತ್ತಾ? ಇಲ್ಲಿದೆ ಮಾಹಿತಿ… Read More »

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ

ಸಮಗ್ರ ನ್ಯೂಸ್: ಮಂಗಳೂರು ವಿ.ವಿ ಯಿಂದ ಹಲವಾರು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದು,ಬಗೆಹರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶುಕ್ರವಾರ ಕ್ಲಾಕ್ ಟವರ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. UUCMS ತಂತ್ರಾಂಶದ ಲೋಪದೋಶದಿಂದ NEP ಯ ಪ್ರಥಮ ವರ್ಷದ ಪದವಿ ಮುಗಿಸಿರುವ ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ಮಾಡಿ, ಫಲಿತಾಂಶವನ್ನು ನೀಡದೆ ವಿದ್ಯಾರ್ಥಿಗಳು ಗೊಂದಲದಲ್ಲಿ ಶಿಕ್ಷಣವನ್ನು ಮುಂದುವರಿಸುವಂತೆ ಆಗಿದೆ . ವಿದ್ಯಾರ್ಥಿಗೆ ದೊರೆಯುವ ಎಲ್ಲಾ ಸೌಲಭ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗುವಂತೆ ಹಾಗೂ ಬೇರೆ ಕಾಲೇಜಿಗೆ ವರ್ಗಾವಣೆಯನ್ನು ವಿದ್ಯಾರ್ಥಿ ಪಡೆಯದ ರೀತಿ

ಮಂಗಳೂರು ವಿವಿ ನ್ಯೂನತೆ ಸರಿಪಡಿಸುವಂತೆ ಎಬಿವಿಪಿ ಪ್ರತಿಭಟನೆ Read More »

ಜೇನುಗೂಡಿಗೆ ಕೈಹಾಕಿತೇ ರಾಜ್ಯ ಸರ್ಕಾರ? ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು!?

ಸಮಗ್ರ ನ್ಯೂಸ್: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಹೆಚ್ಚಿಸಲು ಸುಗ್ರೀವಾಜ್ಞೆ ಹೊರಡಿಸುತ್ತಿರುವ ರಾಜ್ಯ ಸರ್ಕಾರ ಇದೀಗ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಮೀಸಲಾತಿ ರದ್ದುಪಡಿಸುವ ಲೆಕ್ಕಾಚಾರದಲ್ಲಿದೆ. ಈ ಮೂಲಕ ರಾಜ್ಯ ಸರ್ಕಾರ ಜೇನುಗೂಡಿಗೆ ಕೈಹಾಕುವ ಮಟ್ಟಿಗೆ ಆಲೋಚನೆ ಮಾಡಿದೆ ಸುಪ್ರೀಂಕೋರ್ಟ್‍ನ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ಪ್ರಕಾರ ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವಂತಿಲ್ಲ. ವಾಸ್ತವ ಹೀಗಿದ್ದೂ ರಾಜ್ಯ ಸರ್ಕಾರ ಎಸ್ಸಿಗೆ 15ರಿಂದ 17, ಎಸ್ಟಿಗೆ ಶೇ.3ರಿಂದ 7ರಷ್ಟು ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಹೆಚ್ಚಿಸಲು

ಜೇನುಗೂಡಿಗೆ ಕೈಹಾಕಿತೇ ರಾಜ್ಯ ಸರ್ಕಾರ? ಮುಸ್ಲಿಂ- ಕ್ರಿಶ್ಚಿಯನ್ ಮೀಸಲಾತಿ ರದ್ದು!? Read More »

ಮೈಸೂರು: ಕುಸಿದು ಬಿದ್ದ ಮಹಾರಾಣಿ ಕಾಲೇಜು ಕಟ್ಟಡ| ಇಬ್ಬರು ಅಧ್ಯಾಪಕರು ಜಸ್ಟ್ ಮಿಸ್

ಸಮಗ್ರ ನ್ಯೂಸ್: ಭಾರೀ ಮಳೆಗೆ ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಇಬ್ಬರು ಅಧ್ಯಾಪಕರು ಪಾರಾಗಿದ್ದಾರೆ. ಮೈಸೂರಿನ ಮಹಾರಾಣಿ ಪದವಿ ಕಾಲೇಜು ಕಟ್ಟಡ ಕುಸಿದು ಬಿದ್ದಿದ್ದು, ಕಾಲೇಜಿನ ಮುಂಭಾಗದ ಎರಡು ಲ್ಯಾಬ್ ಧರಾಶಾಯಿ. ವಿದ್ಯಾರ್ಥಿಗಳು ಇಲ್ಲದ ಕಾರಣ ಭಾರೀ ದುರಂತ ತಪ್ಪಿದೆ. ಕುಸಿದು ಬಿದ್ದ ಕಟ್ಟಡದ ಕೆಳಗೆ ಯಾರೂ ಇಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಖಚಿತಪಡಿಸಿಕೊಂಡಿದ್ದಾರೆ. ಕಾಲೇಜಿನ ಇತರೆ ಕಟ್ಟಡ ಕೂಡ ಇದೇ ಪರಿಸ್ಥಿತಿ ಇದ್ದು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ

ಮೈಸೂರು: ಕುಸಿದು ಬಿದ್ದ ಮಹಾರಾಣಿ ಕಾಲೇಜು ಕಟ್ಟಡ| ಇಬ್ಬರು ಅಧ್ಯಾಪಕರು ಜಸ್ಟ್ ಮಿಸ್ Read More »

ಚಿಕ್ಕಮಗಳೂರು : ಶ್ರೀಗಂಧ ಕದಿಯಲು ಬಂದವನ ಹೊಡೆದು ಕೊಂದರಾ ಅರಣ್ಯ ಅಧಿಕಾರಿಗಳು? ಶಿಬಿರದ ಶೌಚಾಲಯದಲ್ಲಿತ್ತು‌ ಆತನ ಹೆಣ…!

ಸಮಗ್ರ ನ್ಯೂಸ್: ಶ್ರೀಗಂಧದ ಮರವನ್ನ ಕಡಿಯಲು ಬಂದಿದ್ದ ಗಂಧದ ಕಳ್ಳನನ್ನ ಅರಣ್ಯ ಅಧಿಕಾರಿಗಳು ಹೊಡೆದು ಕೊಂದರಾ ಎಂಬ ಅನುಮಾನ ವ್ಯಕ್ತವಾಗಿದೆ. ತಾಲೂಕಿನ ಹೊಸಪೇಟೆ ಸಮೀಪದ ಕೋಟೆ ಎಂಬ ಗ್ರಾಮದ ಆನೆ ಹಿಮ್ಮೆಟ್ಟಿಸುವ ಶಿಬಿರದ ಶೌಚಾಲಯದಲ್ಲಿ ಗಂಧದ ಕಳ್ಳನ ಮೃತದೇಹ ಪತ್ತೆಯಾಗಿರೋದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಊರಿಗೆ ಆಂಬುಲೆನ್ಸ್ ಬಂದಿದ್ದನ್ನ ಕಂಡ ಸ್ಥಳೀಯರು ಆನೆ ಶಿಬಿರದ ಶೌಚಾಲಯದಲ್ಲಿ ಬಂದು ನೋಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ. ಕೂಡಲೇ ಊರಿನ ಜನ ಸೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಆತ

ಚಿಕ್ಕಮಗಳೂರು : ಶ್ರೀಗಂಧ ಕದಿಯಲು ಬಂದವನ ಹೊಡೆದು ಕೊಂದರಾ ಅರಣ್ಯ ಅಧಿಕಾರಿಗಳು? ಶಿಬಿರದ ಶೌಚಾಲಯದಲ್ಲಿತ್ತು‌ ಆತನ ಹೆಣ…! Read More »