ರಾಜ್ಯ

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ

ಸಮಗ್ರ ನ್ಯೂಸ್: ವಿಶ್ವ ಕಂಡ ಶ್ರೇಷ್ಠ ದಾರ್ಶನಿಕ, ರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕ, ಯುವ ಜನತೆಯ ಪ್ರೇರಣಾ ಶಕ್ತಿ ಸ್ವಾಮಿ ವಿವೇಕಾನಂದ ರವರ ಜನ್ಮ ದಿನ. ಅ ದಿನದಂದು ಆಚರಿಸಲ್ಪಡುವ ‘ರಾಷ್ಟ್ರೀಯ ಯುವ ದಿನಾಚರಣೆ’ಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಉಡುಪಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ‘ಯುವ ಸಂಗಮ’ದಲ್ಲಿ ಭಾಗಿಯಾಗಲು ಉತ್ತರ ಪ್ರದೇಶದ ಜನಪ್ರಿಯ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಜೀ ಯವರು ಉಡುಪಿಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ […]

ಜ.12ರಂದು ಸಿಎಂ ಯೋಗಿ ಆದಿತ್ಯನಾಥ್ ಉಡುಪಿಗೆ Read More »

ಮತ್ತೆ ಕಿರುತೆರೆಯತ್ತ ನಟ ಅನಿರುದ್ದ್| ಎಸ್.ನಾರಾಯಣ್ ನಿರ್ದೇಶನದಲ್ಲಿ ಬರಲಿದೆ “ಸೂರ್ಯವಂಶ”

ಸಮಗ್ರ ನ್ಯೂಸ್: ಎಸ್. ನಾರಾಯಣ್ ಎಂದರೆ ಸೂರ್ಯವಂಶ ಸಿನಿಮಾ ನೆನಪಾಗುತ್ತದೆ. ಕಲಾ ಸಾಮ್ರಾಟ್ ಮತ್ತು ಸಾಹಸಸಿಂಹ ಡಾ. ವಿಷ್ಣುವರ್ಧನ್ ಕಾಂಬಿನೇಷನ್ ನಲ್ಲಿ ಮೂಡಿಬಂದ ಈ ಸಿನಿಮಾ ಇಂದಿಗೂ ಸೂಪರ್ ಹಿಟ್. ಇದೇ ಟೈಟಲ್ ಇಟ್ಟುಕೊಂಡು ಈಗ ಎಸ್. ನಾರಾಯಣ್ ಮತ್ತೊಂದು ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಬಾರಿ ಅವರು ಸೂರ್ಯವಂಶ ಟೈಟಲ್ ನ ಧಾರವಾಹಿಯೊಂದನ್ನು ರಚಿಸಿ, ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ ಅಂದು ವಿಷ್ಣು ಜೊತೆಗೆ ಮಾಡಿದ್ದ ಸೂರ್ಯವಂಶವನ್ನು ಇಂದು ಅವರ ಮಗನ ಸಮಾನ ಅಳಿಯ ಅನಿರುದ್ಧ್ ಜತ್ಕಾರ್

ಮತ್ತೆ ಕಿರುತೆರೆಯತ್ತ ನಟ ಅನಿರುದ್ದ್| ಎಸ್.ನಾರಾಯಣ್ ನಿರ್ದೇಶನದಲ್ಲಿ ಬರಲಿದೆ “ಸೂರ್ಯವಂಶ” Read More »

ಕೆಮ್ಮಿ,ಕೆಮ್ಮಿ ಮೂಳೆ ಮುರಿದುಕೊಂಡ ಮಹಿಳೆ

ಸಮಗ್ರ ನ್ಯೂಸ್: ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಅಥವಾ ಮೈ ಮೇಲೆ ಬಿದ್ದರೆಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಿದ್ದರೆ ಈ ಸುದ್ದಿ ಓದಿ. ಹೌದು ಚೀನಾದ ಮಹಿಳೆಯೊಬ್ಬಳು ಕೆಮ್ಮಿನ ಕಾರಣಕ್ಕೆ ತನ್ನ ನಾಲ್ಕು ಮೂಳೆಗಳನ್ನು ಮುರಿದುಕೊಂಡಿದ್ದಾಳೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಅತಿಯಾದ ಖಾರ ಪದಾರ್ಥ ಸೇವನೆ. ಈ ಮಹಿಳೆ ಇತ್ತೀಚೆಗೆ ಹೋಟೆಲ್ ಗೆ ಊಟಕ್ಕೆ ತೆರಳಿದಾಗ ಅತಿ ಖಾರದ ಆಹಾರ ಸೇವಿಸಿದ್ದಾಳೆ. ಇದರಿಂದಾಗಿ ಕಣ್ಣಿನಲ್ಲಿ

ಕೆಮ್ಮಿ,ಕೆಮ್ಮಿ ಮೂಳೆ ಮುರಿದುಕೊಂಡ ಮಹಿಳೆ Read More »

ಹೆಲ್ಮೆಟ್ ಧರಿಸದ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುತ್ತೇನೆ: SP ಹರಿರಾಂ ಶಂಕರ್ ಖಡಕ್ ಎಚ್ಚರಿಕೆ

ಸಮಗ್ರ ನ್ಯೂಸ್: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡಬೇಕು ತಪ್ಪಿದಲ್ಲಿ ಅಂತಹ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡುತ್ತೇನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೊಲೀಸರೇ ದ್ವಿಚಕ್ರ ವಾಹನ ಚಲಾಯಿಸುವಾಗ ಹೆಲ್ಮೆಟ್ ಧರಿಸದಿರುವುದರ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಾಸನ ಎಸ್‍ಪಿ ಎಚ್ಚರಿಕೆ ನೀಡಿದ್ದಾರೆ. ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು

ಹೆಲ್ಮೆಟ್ ಧರಿಸದ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುತ್ತೇನೆ: SP ಹರಿರಾಂ ಶಂಕರ್ ಖಡಕ್ ಎಚ್ಚರಿಕೆ Read More »

ಸೆಲ್ಪಿ ಹುಚ್ಚಿಗೆ ಮರ್ಮಾಂಗ ಸುಟ್ಟುಕೊಂಡ ವಿದ್ಯಾರ್ಥಿ

ಸಮಗ್ರ ನ್ಯೂಸ್: ವಿದ್ಯುತ್ ಚಾಲಿತ ರೈಲುಗಳು ಸಂಚರಿಸುವ ಹಳಿಯಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿದ್ದ ವಿದ್ಯಾರ್ಥಿಯೊಬ್ಬನಿಗೆ ವಿದ್ಯುತ್ ತಗುಲಿ ಮರ್ಮಾಂಗಕ್ಕೆ ತೀವ್ರತರ ಗಾಯವಾದ ಘಟನೆ ಶಿರಡಿನಗರದ ರೈಲು ಹಳಿಯಲ್ಲಿ ನಡೆದಿದೆ. ನಗರದ ವಿನಾಯಕ ಎಂಬಾತನೇ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿ. ಸದ್ಯ ಆತನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈತ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪಸರಿಸಿದ್ದರಿಂದ ಬಟ್ಟೆಗೆ ಬೆಂಕಿ ಹತ್ತಿಕೊಂಡು ದೇಹಕ್ಕೆ ಆವರಿಸಿದೆ. ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ. ಸೇಲ್ಫಿ ಗೀಳುಗೆ

ಸೆಲ್ಪಿ ಹುಚ್ಚಿಗೆ ಮರ್ಮಾಂಗ ಸುಟ್ಟುಕೊಂಡ ವಿದ್ಯಾರ್ಥಿ Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಮತ್ತೆ ಭಾರೀ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮಳೆ ಮತ್ತೆ ಆರಂಭವಾಗಲಿದೆ. ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ 5.8 ಕಿಲೋ ಮೀಟರ್ ಎತ್ತರದಷ್ಟು ಮೇಲ್ಮೈ ಸುಳಿಗಾಳಿ ಎದ್ದಿದೆ. ಇದರ ಪ್ರಭಾವದಿಂದಾಗಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಯ ಕೆಲವೆಡೆಗಳಲ್ಲಿ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಮತ್ತೆ ಭಾರೀ ಮಳೆ ನಿರೀಕ್ಷೆ Read More »

ಶಿವಸೇನೆಯಿಂದ‌‌ ಮತ್ತೆ ಗಡಿಕ್ಯಾತೆ| ರಾಜ್ಯ ಸಾರಿಗೆ ಬಸ್ ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲುತೂರಾಟ

ಸಮಗ್ರ ನ್ಯೂಸ್: ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪುಣೆ ಡಿಪೋಗೆ ನುಗ್ಗಿದ ಶಿವಸೇನೆ ಕಾರ್ಯಕರ್ತರು ಕೆ ಎಸ್ ಆರ್ ಟಿ ಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ವಿಚಾರ ಖಂಡಿಸಿ ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಟೋಲ್ ಬಳಿ ಪ್ರತಿಭಟನೆ ನಡೆಸಿ, ಮಹಾರಾಷ್ಟ್ರ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಪುಣೆಯಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ

ಶಿವಸೇನೆಯಿಂದ‌‌ ಮತ್ತೆ ಗಡಿಕ್ಯಾತೆ| ರಾಜ್ಯ ಸಾರಿಗೆ ಬಸ್ ಗಳಿಗೆ ಮಹಾರಾಷ್ಟ್ರದಲ್ಲಿ ಕಲ್ಲುತೂರಾಟ Read More »

ಕಾರಿನಲ್ಲಿ ಲಿಕ್ಕರ್ ಬಾಟಲಿ ಸಾಗಿಸಿದ ಬಿಜೆಪಿ ಜಿಲ್ಲಾಧ್ಯಕ್ಷ| ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ

ಸಮಗ್ರ ನ್ಯೂಸ್: ಗುಜರಾತ್ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಮತದಾನ ನಡೆಯುತ್ತಿದೆ. ಈ ನಡುವೆ ಗುಜರಾತ್‌ನ ಅರಾವಳಿ ಜಿಲ್ಲೆಯ ಬಿಜೆಪಿ ಅಧ್ಯಕ್ಷರ ವರ್ತನೆ ಬಗ್ಗೆ ಟೀಕೆಗಳು ಬರುತ್ತಿವೆ. ಅರವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮದ್ಯದ ಬಾಟಲಿಗಳನ್ನು ಮುಕ್ತವಾಗಿ ಸಾಗಿಸುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಅರಾವಳಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಹಿರಂಗವಾಗಿ ಮದ್ಯದ ಪೆಟ್ಟಿಗೆಗಳನ್ನು ಒಯ್ಯುತ್ತಿದ್ದಾರೆ ಎಂದು ದೀಪಕ್ ಖತ್ರಿ ಎನ್ನುವವರು ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ‘ಗುಜರಾತ್​ನ ಅರಾವಳಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ

ಕಾರಿನಲ್ಲಿ ಲಿಕ್ಕರ್ ಬಾಟಲಿ ಸಾಗಿಸಿದ ಬಿಜೆಪಿ ಜಿಲ್ಲಾಧ್ಯಕ್ಷ| ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ Read More »

ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ| ಖಂಡನೆ ವ್ಯಕ್ತಪಡಿಸಿದ ವಕೀಲರ ಸಂಘ

ಸಮಗ್ರ ನ್ಯೂಸ್: ಮಂಗಳೂರಿನ ಯುವ ವಕೀಲರಾದ ಕುಲದೀಪ್ ಶೆಟ್ಟಿ ಅವರ ಮೇಲೆ ಬಂಟ್ವಾಳದ ಪುಂಜಾಲಕಟ್ಟೆ ಠಾಣೆಯ ಪೊಲೀಸರು ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿರುವ ಮಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿ ಘಟನೆಯನ್ನು ಖಂಡಿಸುವುದಾಗಿ ಹೇಳಿದೆ.ಈ ಕುರಿತಂತೆ ನಡೆದ ತುರ್ತು ಸಭೆ ನಡೆಸಲಾಗಿದ್ದು, ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ ಎಂದು ಸಮಿತಿ ಪ್ರಕಟನೆ ತಿಳಿಸಿದೆ. ಸಿವಿಲ್ ವ್ಯಾಜ್ಯ ನ್ಯಾಯಾಲಯದಲ್ಲಿ ಇದ್ದು ಎದುರುದಾರರ ವಿರುದ್ಧ ಪ್ರತಿಬಂದಕಾಜ್ಞೆ ಇದ್ದೂ ಕೂಡ ಎದುರುದಾರರ ಸುಳ್ಳು ಫಿರ್ಯಾದಿಯ ಆಧಾರದ ಮೇಲೆ ಯುವ ವಕೀಲರ ಮೇಲೆ ಎಫ್‌ಐಆರ್

ವಕೀಲರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ| ಖಂಡನೆ ವ್ಯಕ್ತಪಡಿಸಿದ ವಕೀಲರ ಸಂಘ Read More »

ಪುತ್ತೂರಲ್ಲೂ ವೋಟರ್ ಐಡಿ ಹಗರಣದ ವಾಸನೆ| ಜನಸೇವಾ ಕೇಂದ್ರಕ್ಕೆ ಬೀಗ ಜಡಿದ ಎಸಿ!!

ಸಮಗ್ರ ನ್ಯೂಸ್: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ‌ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ಸೋಮವಾರ(ಡಿ.5) ಸಂಜೆ ನಡೆದಿದೆ. ಪುತ್ತೂರಿನ ವ್ಯಕ್ತಿಯೊಬ್ಬರ ಮತದಾರನ ಗುರುತಿನ ಚೀಟಿ ಕಳೆದುಹೋಗಿದ್ದು, ಅವರು ಜನ ಸೇವಾ ಕೇಂದ್ರಕ್ಕೆ ಬಂದು ವಿಷಯ ತಿಳಿಸಿದ್ದರು. ವೋಟರ್ ಐಡಿ ಮತ್ತೆ ದೊರಕಿಸುವ ಸಂಬಂಧ ಆನ್ ಲೈನ್ ಅರ್ಜಿ ಪ್ರಕ್ರಿಯೆ ನಡೆಸಿ ಕೇಂದ್ರದಲ್ಲೇ ಗುರುತಿನ ಚೀಟಿ ಮುದ್ರಿಸಿ ಕೊಡಲಾಗಿದೆ

ಪುತ್ತೂರಲ್ಲೂ ವೋಟರ್ ಐಡಿ ಹಗರಣದ ವಾಸನೆ| ಜನಸೇವಾ ಕೇಂದ್ರಕ್ಕೆ ಬೀಗ ಜಡಿದ ಎಸಿ!! Read More »