ರಾಜ್ಯ

ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ‘ಕಾಂತಾರ’ ಪ್ರಭಾವದಿಂದ ಬರೆದ‌ ಉತ್ತರಕ್ಕೆ ಟೀಚರ್ಸ್ ಫುಲ್ ಶಾಕ್

ಸಮಗ್ರ ನ್ಯೂಸ್: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಎನ್ನುವುದಕ್ಕೆ ಈ ವಿದ್ಯಾರ್ಥಿ ಬರೆದ ಉತ್ತರ ನೋಡಿದರೆ ಗೊತ್ತಾಗುತ್ತದೆ. ಕಾಂತಾರ ಸಿನಿಮಾ ಬಳಿಕ ದೈವ, ಗುಳಿಗ, ಪಂಜುರ್ಲಿ, ಭೂತಾರಾಧನೆ ಮೇಲಿನ ಜನರ ನಂಬಿಕೆ, ಭಕ್ತಿ ಮತ್ತಷ್ಟು ಜಾಸ್ತಿ ಆಗಿದೆ. ತನ್ನ ಊರು ಬಿಟ್ಟು ದೂರದ ಊರುಗಳಲ್ಲಿ ವಾಸಿಸುತ್ತಿರುವವರು ಸಹ ಹುಟ್ಟೂರಿಗೆ ಬಂದು ದೈವಾರಾಧನೆ, ಭೂತ, ಕೋಲದಲ್ಲಿ ಭಾಗಿಯಾಗುತ್ತಿದ್ದಾರೆ. ಕಾಂತಾರ ಸಿನಿಮಾ ಮಕ್ಕಳಿಂದ ದೊಡ್ಡವರ ವರೆಗೂ ಪ್ರಭಾವ ಬೀರಿದ ಸಿನಿಮಾವಾಗಿದೆ. ಅಭಿಮಾನಿಗಳ […]

ಸಾರ್ವಜನಿಕ ಸ್ಥಳಗಳನ್ನು ಯಾರು ರಕ್ಷಿಸುತ್ತಾರೆ? ‘ಕಾಂತಾರ’ ಪ್ರಭಾವದಿಂದ ಬರೆದ‌ ಉತ್ತರಕ್ಕೆ ಟೀಚರ್ಸ್ ಫುಲ್ ಶಾಕ್ Read More »

13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ| ಗರ್ಭಿಣಿ ಆದ ನಂತರ ಬೆಳಕಿಗೆ

ಸಮಗ್ರ ನ್ಯೂಸ್: ಬಾಲಕಿಯೊಬ್ಬಳ ಮೇಲೆ ಮೂವರು ಯುವಕರು ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕಾಮುಕರು ಸೇರಿ ಈ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ಈ ಕೃತ್ಯ ಎಸಗಿದ್ದಾರೆ. ಅದೇ ಗ್ರಾಮದ ಸ್ವಾಗತ್, ಸುದರ್ಶನ್, ಪಾಪಣ್ಣ ಅವರೇ ಈ ಕೃತ್ಯ ಎಸಗಿದ ಪಾಪಿಗಳು‌ ಎಂದು ತಿಳಿದುಬಂದಿದೆ. ಕೆಲವು ತಿಂಗಳ ಹಿಂದೆ ಈ ಪೈಶಾಚಿಕ

13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ| ಗರ್ಭಿಣಿ ಆದ ನಂತರ ಬೆಳಕಿಗೆ Read More »

ಕೊಟ್ಟಿಗೆಹಾರ: ಪುತ್ರನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ಸಮಗ್ರ ನ್ಯೂಸ್: ಅಪಘಾತದಲ್ಲಿ ಸಾವನ್ನಪ್ಪಿದ ಪುತ್ರನ ಅಂಗಾಂಗವನ್ನು ಪೋಷಕರು ದಾನ ಮಾಡಿ ಸಾರ್ಥಕತೆ ಮೆರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿಯಲ್ಲಿ ನಡೆದಿದೆ. ಧನ್ಯ ಕುಮಾರ್(37) ಮೃತರು. ಇವರು ಬೈಕ್ ನಲ್ಲಿ ಹೋಗುತ್ತಿದ್ದಾಗ ಕ್ಯಾಂಟರ್ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡುಎಷ್ಟೇ ಪ್ರಯತ್ನಪಟ್ಟರೂ ಬದುಕಿಸಲು ಸಾಧ್ಯವಾಗಲ್ಲ ಎಂದು ವೈದ್ಯರು ತಿಳಿಸಿದ್ದರು. ಆದರೆ ಧನ್ಯಕುಮಾರ್ ದೇಹದ ಇತರೆ ಭಾಗಗಳು ಸುರಕ್ಷಿತವಾಗಿವೆ ವೈದ್ಯರು ಹೇಳಿದ್ದರು. ಈ ಕಾರಣ ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ.

ಕೊಟ್ಟಿಗೆಹಾರ: ಪುತ್ರನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು Read More »

ನಿರಂತರ ಮಳೆ ಹಿನ್ನಲೆ; ಇಂದು(ಡಿ.12) ಈ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ಮಾಂಡೌಸ್ ಚಂಡಮಾರುತ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದರಲ್ಲೂ ವಿಪರೀತ ಚಳಿಯ ಹಿನ್ನೆಲೆಯಲ್ಲಿ ಸೋಮವಾರ(ಡಿ.12) ಜಿಲ್ಲೆಯಾದ್ಯಂತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಮಾಂಡೌಸ್ ಚಂಡಮಾರುತದ ಎಫೆಕ್ಟ್ ರಾಜ್ಯಕ್ಕೆ ತಟ್ಟಿದೆ. ನಾಳೆಯೂ ಮಳೆ ಮುಂದುವರಿಕೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಾತ್ರವೇ ರಜೆಯನ್ನು ಘೋಷಣೆ ಮಾಡಲಾಗಿದೆ. ಆದರೆ ಪಿಯುಸಿ, ಪದವಿ, ಸ್ನಾತಕೋತ್ತರ ತರಗತಿಗಳು ಎಂದಿನಂತೆ ನಡೆಯಲಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು ಮಾಹಿತಿ ನೀಡಿದ್ದಾರೆ.

ನಿರಂತರ ಮಳೆ ಹಿನ್ನಲೆ; ಇಂದು(ಡಿ.12) ಈ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ Read More »

ರಾತ್ರಿ 11 ಗಂಟೆ ನಂತರ ಪತಿ-ಪತ್ನಿ ಜೊತೆಯಾಗಿ ಓಡಾಡಿದ್ರೆ ₹.3000 ಫೈನ್| ಹೀಗೊಂದು ದಂಡ ರೂಪದ ಸುಲಿಗೆ!?

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿದ್ದು, ಪೊಲೀಸರು ಸ್ನೇಹಿತರ ಜತೆ ಪಾರ್ಟಿ ಮುಗಿಸಿ , ಮಾನ್ಯತಾ ಟೆಕ್​ಪಾರ್ಕ್​ ಬಳಿ ಮಧ್ಯರಾತ್ರಿ ಬರುತ್ತಿದ್ದ ಕಾರ್ತಿಕ್ ಪೆತ್ರಿ, ಪತ್ನಿ ದಂಪತಿಯನ್ನು ತಡೆದು 3000ಕ್ಕೆ ಬೇಡಿಕೆ ಇಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ಹೊಯ್ಸಳ ಪೊಲೀಸರ ವಿರುದ್ಧ ಸುಲಿಗೆ ಆರೋಪ ಕೇಳಿ ಬಂದಿದ್ದು, ಮಾನ್ಯತಾ ಟೆಕ್​ಪಾರ್ಕ್​ ಬಳಿ ಸ್ನೇಹಿತರ ಜತೆ ಪಾರ್ಟಿ ಮುಗಿಸಿ ಬರುತ್ತಿದ್ದ ಕಾರ್ತಿಕ್ ಪೆತ್ರಿ, ಪತ್ನಿ ಯನ್ನ ಮಧ್ಯರಾತ್ರಿ ದಂಪತಿ ತಡೆದ

ರಾತ್ರಿ 11 ಗಂಟೆ ನಂತರ ಪತಿ-ಪತ್ನಿ ಜೊತೆಯಾಗಿ ಓಡಾಡಿದ್ರೆ ₹.3000 ಫೈನ್| ಹೀಗೊಂದು ದಂಡ ರೂಪದ ಸುಲಿಗೆ!? Read More »

ಹವಾಮಾನ ವರದಿ; ಡಿ. 12ರವರೆಗೂ ಮುಂದುವರಿಯಲಿದೆ ಮಳೆ; ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಉಂಟಾಗಿರುವ ಮ್ಯಾಂಡೌಸ್‌ ಚಂಡಮಾರುತದ ಪರಿಣಾಮ ರಾಜ್ಯದ ವಿವಿಧ ಭಾಗಗಳಲ್ಲಿ ಡಿಸೆಂಬರ್ 12ರ ವರೆಗೆ ಮೋಡ ಕವಿದ ವಾತಾವರಣ, ಚಳಿಯ ಜೊತೆಗೆ ಮಳೆ ಸುರಿಯಲಿದೆ. ಮುಂದಿನ 24 ಗಂಟೆಗಳ ಕಾಲ ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮೋಡ ಕವಿದ ವಾತಾವರಣ, ಮಳೆ ಚಳಿಯ ವಾತಾವರಣ ಸೃಷ್ಟಿಯಾಗಿದೆ. ನಾಳೆ ಗುಡುಗು ಮತ್ತು ಬಿರುಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ.

ಹವಾಮಾನ ವರದಿ; ಡಿ. 12ರವರೆಗೂ ಮುಂದುವರಿಯಲಿದೆ ಮಳೆ; ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ Read More »

ಪಿಯುಸಿ ಪಾಸ್ ಆದವರಿಗೆ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಉದ್ಯೋಗ ಸಮಾಚಾರ: ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಇಲಾಖೆಯ ಒಟ್ಟು 1,100 ಹುದ್ದೆಗಳ ಪೈಕಿ 1000 ಅಬಕಾರಿ ಪೇದೆ ಹುದ್ದೆ, 100 ಅಬಕಾರಿ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಚಿವರು ಹೇಳಿದ್ದಾರೆ. ರಾಜ್ಯ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ಬಲವರ್ಧನೆಗೆ ಸರ್ಕಾರ ಪ್ರಾಧ್ಯಾನತೆ ನೀಡಿದೆ.

ಪಿಯುಸಿ ಪಾಸ್ ಆದವರಿಗೆ ಅಬಕಾರಿ ಇಲಾಖೆಯಲ್ಲಿ ಉದ್ಯೋಗ ಅವಕಾಶ Read More »

ರಾಜ್ಯದಲ್ಲಿ ಇನ್ನೂ ಐದು ದಿನ ಚಳಿ, ಮಳೆ| 15 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ರಾಜ್ಯಾದ್ಯಂತ ಇನ್ನೂ ಐದು ದಿನಗಳ ಕಾಲ ಭಾರೀ ಥಂಡಿ, ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಇದರ ಪರಿಣಾಮವಾಗಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ. ಡಿ.13ರವರೆಗೂ ಮಳೆಯಾಗಲಿದ್ದು, ಈ ನಿಟ್ಟಿನಲ್ಲಿ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ ಕರ್ನಾಟಕದ ಮೇಲೆ ಪ್ರಮುಖವಾಗಿ ದಕ್ಷಿಣ

ರಾಜ್ಯದಲ್ಲಿ ಇನ್ನೂ ಐದು ದಿನ ಚಳಿ, ಮಳೆ| 15 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ Read More »

ಶಿರಾಡಿ ಘಾಟ್ ಸುರಂಗ ಮಾರ್ಗ ಹೆದ್ದಾರಿ ನಿರ್ಮಾಣ ಸಾಧ್ಯವಿಲ್ಲ| ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅಭಿಮತ

ಸಮಗ್ರ ನ್ಯೂಸ್: ದಶಕದಿಂದಲೇ ಪ್ರಸ್ತಾವದಲ್ಲಿದ್ದ ಶಿರಾಡಿ ಘಾಟಿ ಸುರಂಗ ಮಾರ್ಗ ಹೆದ್ದಾರಿ ಯೋಜನೆಯನ್ನು ಕೇಂದ್ರ ಸರಕಾರ ಕೈಬಿಡುವ ಸೂಚನೆಗಳು ಕಾಣುತ್ತಿವೆ. ಈ ಯೋಜನೆಯು ದೊಡ್ಡ ಮೊತ್ತದ್ದಾಗಿದೆ ಹಾಗೂ ಅನೇಕ ಸವಾಲುಗಳಿಂದ ಕೂಡಿರುವ ಕಾರಣ ಇದು ಕಾರ್ಯಸಾಧುವಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿದೆ. ಲೋಕಸಭೆಯಲ್ಲಿ ಗುರುವಾರ ಸಂಸದ ನಳಿನ್‌ ಕುಮಾರ್‌ ಕಟೀಲು ಅವರ ಪ್ರಶ್ನೆಗೆ, ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿಯವರು ನೀಡಿರುವ ಉತ್ತರದಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಮಂಗಳೂರಿಗೆ ಫೆಬ್ರವರಿಯಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ,

ಶಿರಾಡಿ ಘಾಟ್ ಸುರಂಗ ಮಾರ್ಗ ಹೆದ್ದಾರಿ ನಿರ್ಮಾಣ ಸಾಧ್ಯವಿಲ್ಲ| ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅಭಿಮತ Read More »

ಮುಜುರಾಯಿ ದೇವಳಗಳಲ್ಲಿ ಟಿಪ್ಪು ಕಾಲದ ಸಲಾಂ ಆರತಿ, ದೀವಟಿಗೆ ಸಲಾಂಗೆ ಇತಿಶ್ರೀ| ಧಾರ್ಮಿಕ ಪರಿಷತ್ ನಿಂದ‌ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ಇತೀಶ್ರೀ ಹಾಕಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಧಾರ್ಮಿಕ ಪರಿಷತ್ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ದೀವಿಟಿಗೆ ಪೂಜೆ ಅಥವಾ ಸಲಾಂ ಪೂಜೆಯನ್ನು ಮಾಡಬಾರದು ಎಂದು ಧಾರ್ಮಿಕ ಷರಿಷತ್ ಆದೇಶ ಹೊರಡಿಸಿದೆ. ಟಿಪ್ಪು ಕಾಲದಲ್ಲಿ ಆರಂಭಗೊಂಡಿದ್ದ ದೀವಿಟಿಗೆ ಅಥವಾ ಸಲಾಂ ಪೂಜೆ ರಾಜ್ಯದ ಕೆಲ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿದೆ. ದೇವಸ್ಥಾನದಲ್ಲಿ ಸಂಜೆ ಸಮಯದಲ್ಲಿ ದೀವಿಟಿಗೆ ಪೂಜೆ ನಡೆಯುತ್ತಿತ್ತು.

ಮುಜುರಾಯಿ ದೇವಳಗಳಲ್ಲಿ ಟಿಪ್ಪು ಕಾಲದ ಸಲಾಂ ಆರತಿ, ದೀವಟಿಗೆ ಸಲಾಂಗೆ ಇತಿಶ್ರೀ| ಧಾರ್ಮಿಕ ಪರಿಷತ್ ನಿಂದ‌ ಮಹತ್ವದ ನಿರ್ಧಾರ Read More »