ಕೆಮ್ಮಿ,ಕೆಮ್ಮಿ ಮೂಳೆ ಮುರಿದುಕೊಂಡ ಮಹಿಳೆ

ಸಮಗ್ರ ನ್ಯೂಸ್: ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಅಥವಾ ಮೈ ಮೇಲೆ ಬಿದ್ದರೆ
ಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಿದ್ದರೆ ಈ ಸುದ್ದಿ ಓದಿ.

Ad Widget ... ..

ಹೌದು ಚೀನಾದ ಮಹಿಳೆಯೊಬ್ಬಳು ಕೆಮ್ಮಿನ ಕಾರಣಕ್ಕೆ ತನ್ನ ನಾಲ್ಕು ಮೂಳೆಗಳನ್ನು ಮುರಿದುಕೊಂಡಿದ್ದಾಳೆ. ಅಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು ಅತಿಯಾದ ಖಾರ ಪದಾರ್ಥ ಸೇವನೆ. ಈ ಮಹಿಳೆ ಇತ್ತೀಚೆಗೆ ಹೋಟೆಲ್ ಗೆ ಊಟಕ್ಕೆ ತೆರಳಿದಾಗ ಅತಿ ಖಾರದ ಆಹಾರ ಸೇವಿಸಿದ್ದಾಳೆ.

Ad Widget

ಇದರಿಂದಾಗಿ ಕಣ್ಣಿನಲ್ಲಿ ನೀರು ಬರುವುದರ ಜೊತೆಗೆ ಸಿಕ್ಕಾಪಟ್ಟೆ ಕೆಮ್ಮು ಸಹ ಬಂದಿದೆ. ಹೀಗೆ ಕೆಮ್ಮಿ ಕೆಮ್ಮಿ ಮೈ ಮೂಳೆ ಮುರಿದುಕೊಂಡಿದ್ದಾಳೆ. ಇತ್ತೀಚೆಗೆ ಆಕೆಗೆ ಉಸಿರಾಡಲು ಕಷ್ಟವಾಗುತ್ತಿದ್ದು, ಹೀಗಾಗಿ ವೈದ್ಯರ ಬಳಿ ತೆರಳಿ ಎಕ್ಸರೇ ಮಾಡಿಸಿದಾಗ ಮೂಳೆ ಮುರಿದಿರುವುದು ಗೊತ್ತಾಗಿದೆ.

Leave a Comment

Your email address will not be published. Required fields are marked *