ರಾಜ್ಯ

ಹೊಸರೂಪದಲ್ಲಿ ಎಂಟ್ರಿ ಕೊಡ್ತಿದೆ ಕೊರೊನಾ| ಸಕ್ರಿಯ ಪ್ರಕರಣಗಳಲ್ಲಿ ದಿಢೀರ್ ಏರಿಕೆ

ಸಮಗ್ರ ನ್ಯೂಸ್: ಅಬ್ಬರಿಸಿ ಬೊಬ್ಬಿರಿದಿದ್ದ ಮಹಾಮಾರಿ ಕೊರೊನಾ ಇನ್ನೇನು ತೊಲಗೇಬಿಡ್ತು ಅಂತ ಜನ ನಿಟ್ಟುಸಿರು ಬಿಡ್ತಿರೋ ಹೊತ್ತಲ್ಲೇ H3N3 ರೂಪದಲ್ಲಿ ಶಾಕ್ ನೀಡುತ್ತಿದೆ. 3 ತಿಂಗಳ ಬಳಿಕ ದೇಶದಲ್ಲಿ ಕೋವಿಡ್ ಮತ್ತೆ ಏರಿಕೆ ಕಾಣ್ತಿದ್ದು ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಅಪಾಯದ ಮುನ್ಸೂಚನೆ ನೀಡಿದೆ. ದೇಶದಲ್ಲಿ ಮತ್ತೆ ಕೊರೊನಾ ಮಹಾಮಾರಿ ಅಟ್ಟಹಾಸದೇಶದಲ್ಲಿ ಸಂಪೂರ್ಣ ಹತೋಟಿಗೆ ಬಂದಿದ್ದ ಕೊರೊನಾ ಮಹಾಮಾರಿ ಕಳೆದೊಂದು ವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದೆ. 114 ದಿನಗಳ ಬಳಿಕ ಭಾರತದಲ್ಲಿ ದೈನಂದಿನ ಕೇಸ್​ಗಳ ಸಂಖ್ಯೆ

ಹೊಸರೂಪದಲ್ಲಿ ಎಂಟ್ರಿ ಕೊಡ್ತಿದೆ ಕೊರೊನಾ| ಸಕ್ರಿಯ ಪ್ರಕರಣಗಳಲ್ಲಿ ದಿಢೀರ್ ಏರಿಕೆ Read More »

ಹವಾಮಾನ ವರದಿ| ಇಂದಿನಿಂದ ಐದು ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಿಸಿಲಿನಿಂದ ರಾಜ್ಯದ ಜನತೆ ತತ್ತರಿಸಿರುವ ಕರ್ನಾಟಕದ ಹಲವೆಡೆ, ಇಂದಿನಿಂದ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಪರಿಣಾಮ ಮಳೆ ಆಗಲಿದೆ ಎನ್ನಲಾಗಿದ್ದು, ಮಾರ್ಚ್ 14 ರಿಂದ 18 ರ ವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ, ಮಾರ್ಚ್ 16 ರಿಂದ 18 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ತಿಳಿಸಲಾಗಿದೆ.

ಹವಾಮಾನ ವರದಿ| ಇಂದಿನಿಂದ ಐದು ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ Read More »

ಕಳಸ: ಕುಡಿಯುವ ನೀರಿಗೆ ಒತ್ತಾಯಿಸಿ ಇಡಕಣಿ ಗ್ರಾ.ಪಂಗೆ ಮುತ್ತಿಗೆ

ಸಮಗ್ರ ನ್ಯೂಸ್: ಇಡಕಿಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬೈಲು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಮಂಜೂರಾದ ಆನೆಕಾಡು ನೀರಿನ ಯೋಜನೆಯ ಕಾಮಗಾರಿ ನೆನೆಗುದಿಗೆ ಬಿದ್ದಿರುವುದನ್ನು ಖಂಡಿಸಿ ಹಿರೇಬೈಲು ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮರಸಣಿಗೆ ಗ್ರಾಮ ವ್ಯಾಪ್ತಿಯ ಆನೆಕಾಡು ಪ್ರದೇಶದಿಂದ ಹಿರೇಬೈಲು ಗ್ರಾಮಕ್ಕೆ ನೀರು ಪೂರೈಸಲು 48 ಲಕ್ಷ ರುಪಾಯಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದ್ದು ಈ ವೇಳೆಗೆ ಪೂರ್ಣಗೊಳ್ಳಬೇಕಿತ್ತು.ಆದರೆ ಕಾಮಗಾರಿಯು ನೆನೆಗುದಿಗೆ ಬಿದ್ದಿದ್ದು ಹಿರೇಬೈಲಿಗೆ ನೀರು ತಲುಪುವ ಆಶಾಭಾವನೆ ಇಲ್ಲ.ನಾವು ಬೇಸಿಗೆಯಲ್ಲಿ ಕುಡಿಯುವ ನೀರು

ಕಳಸ: ಕುಡಿಯುವ ನೀರಿಗೆ ಒತ್ತಾಯಿಸಿ ಇಡಕಣಿ ಗ್ರಾ.ಪಂಗೆ ಮುತ್ತಿಗೆ Read More »

ಕೊಟ್ಟಿಗೆಹಾರ: ಸಂಘಟಿನ ಪ್ರಯತ್ನದಿಂದ ಸರ್ವಾಂಗೀಣ ಅಭಿವೃದ್ದಿ

ಸಮಗ್ರ ನ್ಯೂಸ್:ಸಂಘಟಿತ ಪ್ರಯತ್ನದಿಂದ ಸರ್ವಾಂಗೀಣ ಅಭಿವೃದ್ದಿ ಸಾಧ್ಯ ಎಂದು ಬಣಕಲ್ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು. ಹಿರೇಬೈಲ್‍ನಲ್ಲಿ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮುದಾಯವನ್ನು ಸಂಘಟಿಸುವುದು, ಸಮುದಾಯದ ಆತ್ಮಸ್ಥೈರ್ಯವನ್ನು ಬಲಪಡಿಸುವುದು, ಸಮುದಾಯದ ಜನರಲ್ಲಿ ಸಹಕಾರವನ್ನು ಸಾಧಿಸುವುದು, ಸಮುದಾಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೇರವಾಗುವುದು, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ

ಕೊಟ್ಟಿಗೆಹಾರ: ಸಂಘಟಿನ ಪ್ರಯತ್ನದಿಂದ ಸರ್ವಾಂಗೀಣ ಅಭಿವೃದ್ದಿ Read More »

ನನ್ನ ಬಳಿ ಡಿಕೆಶಿಯ 10 ಸಿಡಿ ಇದೆ|ಅದನ್ನು ರಿಲೀಸ್​ ಮಾಡೋದಿಲ್ಲ, ಅವನ ಹೆಂಡತಿ ನನ್ನ ತಂಗಿಯಿದ್ದಂತೆ| ರಮೇಶ್​ ಜಾರಕಿಹೊಳಿ

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕರ ಆರೋಪ – ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಾಗೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ನಡುವೆ ಸಿಡಿ ವಾರ್​ ಜೋರಾಗಿದೆ. ಡಿ.ಕೆಶಿವಕುಮಾರ್​ ವಿರುದ್ಧ ರಮೇಶ್​ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದರು ನಮ್ಮ ಕೆಲವು ಮಂತ್ರಿಗಳಿಗೆ ಡಿ.ಕೆ ಶಿವಕುಮಾರ್​ ಕಾಂಗ್ರೆಸ್​ಗೆ ಬರದೇ ಇದ್ದರೆ ನಿಮ್ಮ ಸಿಡಿ ಬಿಡುಗಡೆ ಮಾಡುತ್ತೇನೆಂದು ಹೆದರಿಸುತ್ತಿದ್ದಾರೆ ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ. ಡಿ.ಕೆ

ನನ್ನ ಬಳಿ ಡಿಕೆಶಿಯ 10 ಸಿಡಿ ಇದೆ|ಅದನ್ನು ರಿಲೀಸ್​ ಮಾಡೋದಿಲ್ಲ, ಅವನ ಹೆಂಡತಿ ನನ್ನ ತಂಗಿಯಿದ್ದಂತೆ| ರಮೇಶ್​ ಜಾರಕಿಹೊಳಿ Read More »

ರೌಡಿ ಶೀಟರ್ ಮುಂದೆ ಕೈಮುಗಿದು ನಿಂತ ಪ್ರಧಾನಿ ಮೋದಿ| ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿ

ಸಮಗ್ರ ನ್ಯೂಸ್: ನಿನ್ನೆ ಅಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯಗೆ ಭೇಟಿ ನೀಡಿ ಬೆಂಗಳೂರು- ಮೈಸೂರು ಎಕ್ಸ್​ಪ್ರೆಸ್​ವೇ ಉದ್ಘಾಟಿಸಿ ಹೋಗಿದ್ದಾರೆ. ಆದರೆ, ಮೋದಿ ಓರ್ವ ರೌಡಿ ಶೀಟರ್​ಗೆ ಕೈಮುಗಿದಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೋದಿ ಮಂಡ್ಯ ಹೆಲಿಪ್ಯಾಡ್‍ಗೆ ಬಂದಿಳಿದ ವೇಳೆ ಬಿಜೆಪಿ ಮುಖಂಡರು ಸ್ವಾಗತ ಕೋರಿದ್ದರು. ಈ ವೇಳೆ ಬಿಜೆಪಿ ಮುಖಂಡರ ಜೊತೆ ರೌಡಿ ಶೀಟರ್ ಫೈಟರ್ ರವಿ ಸಹ ಕಾಣಿಸಿಕೊಂಡಿದ್ದು, ಮೋದಿಗೆ ಕೈ ಮುಗಿದು ಸ್ವಾಗತ ಕೋರಿದ್ದಾರೆ. ಇದಕ್ಕೆ ಮೋದಿ ಸಹ ಫೈಟರ್ ರವಿ

ರೌಡಿ ಶೀಟರ್ ಮುಂದೆ ಕೈಮುಗಿದು ನಿಂತ ಪ್ರಧಾನಿ ಮೋದಿ| ಕಾಂಗ್ರೆಸ್ ನಿಂದ ತೀವ್ರ ವಾಗ್ದಾಳಿ Read More »

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ದಿನವೇ ಭೀಕರ ಅಪಘಾತ

ಸಮಗ್ರ ನ್ಯೂಸ್: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ದಿನವೇ ಎಕ್ಸ್‌ಪ್ರೆಸ್ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದ ಕಾರು ಮಂಡ್ಯ ಜಿಲ್ಲೆಯ ಮದ್ದೂರಿನ ಎಕ್ಸ್‍ಪ್ರೆಸ್ ವೇ ಫ್ಲೈಓವರ್ ಬಳಿ ಕಾರು ಪಲ್ಟಿಯಾಗಿದೆ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿದ್ದಾಗ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪಲ್ಟಿಯಾದ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ದಿನವೇ ಭೀಕರ ಅಪಘಾತ Read More »

ಕಾವೂರಿನಲ್ಲಿ ಬಿಜೆಪಿ “ವಿಜಯ ಸಂಕಲ್ಪ ಯಾತ್ರೆ”| “ಅಲಿ ಬಾವಾ ದೇವಸ್ಥಾನಗಳಲ್ಲಿ ತಗೊಂಡ ಪ್ರಸಾದ ಏನ್ ಮಾಡ್ತಾರೆ?”
-ಶಾಸಕ ಡಾ. ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಬಿಜೆಪಿ ಕರ್ನಾಟಕ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಕಾವೂರಿನ ಶಾಂತಿನಗರ ಕೇಂದ್ರ ಮೈದಾನದಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು, “ನಾವು ಅಭಿವೃದ್ಧಿ ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತೇವೆ. ಇದಕ್ಕಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಅಭಿವೃದ್ಧಿ ಮತ್ತು ಹಿಂದುತ್ವದ ಜೊತೆ ಮಂಗಳೂರು ಉತ್ತರ ಕ್ಷೇತ್ರ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಉತ್ತರ ಕ್ಷೇತ್ರದಲ್ಲಿ ಚುನಾವಣೆ ಬರ್ತಾ ಇದ್ದಂತೆ ಅಲಿ ಮತ್ತು ಬಾವಾ ದಿನಂಪ್ರತಿ

ಕಾವೂರಿನಲ್ಲಿ ಬಿಜೆಪಿ “ವಿಜಯ ಸಂಕಲ್ಪ ಯಾತ್ರೆ”| “ಅಲಿ ಬಾವಾ ದೇವಸ್ಥಾನಗಳಲ್ಲಿ ತಗೊಂಡ ಪ್ರಸಾದ ಏನ್ ಮಾಡ್ತಾರೆ?”
-ಶಾಸಕ ಡಾ. ಭರತ್ ಶೆಟ್ಟಿ
Read More »

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ

ಸಮಗ್ರ ನ್ಯೂಸ್: ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಮಾತಾಡುತ್ತಾ, “ಕಬಡ್ಡಿಯಂತಹ ದೇಶೀಯ ಕ್ರೀಡೆ ಇಂದು ಅಳಿವಿನ ಅಂಚಿನಲ್ಲಿದೆ. ಆದರೆ ಯುವಕರು ಇಂತಹ ಕ್ರೀಡೆಗಳತ್ತ ಅಕರ್ಷಿತರಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಬಡ್ಡಿ

“ಕಬಡ್ಡಿಯಂತಹ ದೇಶೀಯ ಕ್ರೀಡೆ ಉಳಿಸಿ ಬೆಳೆಸುವ ಹೊಣೆ ಯುವಜನರದ್ದು” -ಡಾ.ಭರತ್ ಶೆಟ್ಟಿ Read More »

‘ನಮ್ಮನ್ನೂ ಬದುಕಲು ಬಿಡ್ರಪ್ಪ; ನಿಮ್ಮ ಬಟ್ಟಲಲ್ಲಿ ಹೆಗ್ಗಣ ಬಿದ್ದಿದೆ ನೋಡ್ಕೊಳ್ಳಿ’| ಕಿರಿಕ್ ಕೀರ್ತಿ ಯಾಕೆ ಹೀಗಂದ್ರು?

ಸಮಗ್ರ ನ್ಯೂಸ್: ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಿರಿಕ್ ಕೀರ್ತಿ ಅವರ ವೈಯಕ್ತಿಕ ಜೀವನ ಕುರಿತ ಅಪ ಪ್ರಚಾರದ ಸುದ್ದಿಗಳು ಹರಿದಾಡುತ್ತಿದ್ದವು. ಇಂತಹ ಸುದ್ದಿಗಳಿಗೆ ಪ್ರತಿಕ್ರಿಯಿಸಿರುವ ಕಿರಿಕ್ ಕೀರ್ತಿ, ನೆಟ್ಟಿಗರ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ಫೇಸ್ ಬುಕ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿ, ಪ್ಲೀಸ್ ನಮ್ಮನ್ನು ಬದುಕೋಕೆ ಬಿಡ್ರಪ್ಪ… ಯಾಕ್ ಇಷ್ಟು ಟಾರ್ಚರ್ ಕೊಡ್ತೀರಿ ಎಂದು ಗರಂ ಆಗಿದ್ದಾರೆ. ಎಲ್ಲರಿಗೂ ವೈಯಕ್ತಿಕ ಜೀವನ ಇರುತ್ತೆ. ಅದನ್ನು ಗೌರವಿಸಿ, ಸಾಮಾಜಿಕ ಮಾಧ್ಯಮದಲ್ಲಿ

‘ನಮ್ಮನ್ನೂ ಬದುಕಲು ಬಿಡ್ರಪ್ಪ; ನಿಮ್ಮ ಬಟ್ಟಲಲ್ಲಿ ಹೆಗ್ಗಣ ಬಿದ್ದಿದೆ ನೋಡ್ಕೊಳ್ಳಿ’| ಕಿರಿಕ್ ಕೀರ್ತಿ ಯಾಕೆ ಹೀಗಂದ್ರು? Read More »