ರಾಜ್ಯ

‘ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿ’|ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಸರಕಾರದ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳ ಜವಬ್ದಾರಿ ಹೆಚ್ಚಿನದ್ದು. ಅಧಿಕಾರಿಗಳು ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸದೇ ಅವರಿಗೆ ಸೂಕ್ತ ಸಲಹೆಗಳನ್ನು ನೀಡಿ ಅವರ ಕೆಲಸಗಳನ್ನು ಮಾಡಿಕೊಡಬೇಕು. ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸುವ ನನ್ನ ಕನಸಿಗೆ ಅಧಿಕಾರಿಗಳು ಸಹಕರಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಬುಧವಾರ ಮಾತನಾಡಿದರು. ಅಧಿಕಾರಿಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಅನುಭವವನ್ನು

‘ಸುಳ್ಯವನ್ನು ಮಾದರಿ ಕ್ಷೇತ್ರವನ್ನಾಗಿಸಲು ಅಧಿಕಾರಿಗಳೂ ಸಹಕರಿಸಿ’|ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ Read More »

360° ಕೋನದಲ್ಲಿ ನಿಮ್ಮ ಏರಿಯಾನ ವೀಕ್ಷಿಸಬಹುದು| ಗೂಗಲ್ ಮ್ಯಾಪ್ ನ ಹೊಸ ಪೀಚರ್ ‘ಸ್ಟ್ರೀಟ್ ವ್ಯೂ’ನಲ್ಲಿ

ಸಮಗ್ರ ನ್ಯೂಸ್: ಗೂಗಲ್ ಮ್ಯಾಪ್ ನ ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ ಫೀಚರ್ ಇದೀಗ ಇಡೀ ಭಾರತದಲ್ಲಿ ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆ್ಯಂಗಲ್ನಲ್ಲಿ ವೀಕ್ಷಿಸಬಹುದು. 2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್

360° ಕೋನದಲ್ಲಿ ನಿಮ್ಮ ಏರಿಯಾನ ವೀಕ್ಷಿಸಬಹುದು| ಗೂಗಲ್ ಮ್ಯಾಪ್ ನ ಹೊಸ ಪೀಚರ್ ‘ಸ್ಟ್ರೀಟ್ ವ್ಯೂ’ನಲ್ಲಿ Read More »

ಜೂ. ೧ ವಿಶ್ವ ಕ್ಷೀರ ದಿನ| ಹಾಲಿಗೂ ಒಂದು ದಿನವೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಸಮಗ್ರ ನ್ಯೂಸ್: ಪ್ರತಿ ವರ್ಷ, ವಿಶ್ವ ಹಾಲಿನ ದಿನವನ್ನು ಜೂನ್ 1 ರಂದು ಆಚರಿಸಲಾಗುತ್ತದೆ. ಜಾಗತಿಕ ಆಹಾರವಾಗಿ ಹಾಲಿನ ಮಹತ್ವವನ್ನು ಗುರುತಿಸಲು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ ಈ ದಿನವನ್ನು ಜಾರಿಗೆ ತಂದಿದೆ. ಇಂದು ವಿಶ್ವ ಹಾಲು ದಿನವನ್ನು ಆಚರಿಸಲು ಹಾಗೂ ಈ ದಿನದ ಮಹತ್ವವನ್ನು ತಿಳಿಯಲು ಇದೊಂದು ಒಳ್ಳೆಯ ಸರಿಯಾದ ಸಂದರ್ಭವಾಗಿದೆ. ಜೂನ್ 1 ವಿಶ್ವ ಹಾಲು ದಿನ. ಹಾಲಿನ ಉದ್ಯಮವು ನಮ್ಮ ಸ್ವಾಸ್ಥ್ಯಕ್ಕೆ ಕೊಡುಗೆ ನೀಡುವುದಲ್ಲದೆ, ಲಕ್ಷಾಂತರ ಜನರಿಗೆ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದೆ.

ಜೂ. ೧ ವಿಶ್ವ ಕ್ಷೀರ ದಿನ| ಹಾಲಿಗೂ ಒಂದು ದಿನವೇಕೆ? ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ತಲುಪಿದೆ. ಜೂನ್ 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂ.ಇದೆ. ಆದಾಗ್ಯೂ, ದರಗಳ ಕಡಿತವು ವಾಣಿಜ್ಯ

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ Read More »

ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ| ಜಿಡಿಪಿಯಲ್ಲಿ 7.2% ಪ್ರಗತಿ‌ ದಾಖಲು

ಸಮಗ್ರ ನ್ಯೂಸ್: ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟು ಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿದೆ. 2022-23ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಅಂಕಿ ಅಂಶಗಳು ಬುಧವಾರ ಬಿಡುಗಡೆಯಾಗಿದ್ದು ಅದರನ್ವಯ ಕಡೆಯ ತ್ರೈಮಾಸಿಕದಲ್ಲಿ ಶೇ.6.1ರಷ್ಟುಪ್ರಗತಿ ದಾಖಲಾಗಿದೆ. ಕೃಷಿ, ಉತ್ಪಾದನಾ ವಲಯ, ನಿರ್ಮಾಣ, ಸೇವಾ, ಗಣಿಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ತಮ ಪ್ರಗತಿ

ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ| ಜಿಡಿಪಿಯಲ್ಲಿ 7.2% ಪ್ರಗತಿ‌ ದಾಖಲು Read More »

ಎಂ.ಬಿ ಪಾಟೀಲ್, ಪ್ರಿಯಾಂಕ ಖರ್ಗೆಗೆ ಹೆಚ್ಚುವರಿ ಖಾತೆಗಳ ಹೊಣೆ

ಸಮಗ್ರ ನ್ಯೂಸ್: ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಹೆಚ್ಚುವರಿಯಾಗಿ ಮೂಲಸೌಲಭ್ಯ ಅಭಿವೃದ್ಧಿ ಖಾತೆಯನ್ನು ಹಂಚಿಕೆ ಮಾಡಿ ಬುಧವಾರ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಹೆಚ್ಚುವರಿಯಾಗಿ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಜೈವಿಕ ತಂತ್ರಜ್ಞಾನ (ಬಿಟಿ) ಖಾತೆಯನ್ನೂ ನೀಡಲಾಗಿದೆ. ಇದೇ 28ರಂದು ಎಲ್ಲ ಸಚಿವರಿಗೆ ಖಾತೆಗಳನ್ನು ಹಂಚಲಾಗಿತ್ತು. ಆಗ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಐಟಿ ಬಿಟಿ ಖಾತೆಯನ್ನು ಮುಖ್ಯಮಂತ್ರಿ ವಹಿಸಿಕೊಂಡಿದ್ದರು. ಪರಿಷ್ಕೃತ ಖಾತೆ ಹಂಚಿಕೆ

ಎಂ.ಬಿ ಪಾಟೀಲ್, ಪ್ರಿಯಾಂಕ ಖರ್ಗೆಗೆ ಹೆಚ್ಚುವರಿ ಖಾತೆಗಳ ಹೊಣೆ Read More »

ಹವಾಮಾನ ವರದಿ| ರಾಜ್ಯದ ದ.ಒಳನಾಡಿನಲ್ಲಿ ಧಾರಾಕಾರ ಮಳೆ ಸಾಧ್ಯತೆ| ಕರಾವಳಿಗೂ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡಿನ 6 ಜಿಲ್ಲೆಗಳಲ್ಲಿ ಇಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗದಲ್ಲಿ ಭಾರಿ ಮಳೆ ಸುರಿಯಲಿದ್ದು, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿಯಲ್ಲಿ ಸಾಧಾರಣ ಮಳೆಯಾಗಲಿದೆ. ಕಲಬುರಗಿಯಲ್ಲಿ 39.2 ಡಿಗ್ರಿ ಸೆಲ್ಸಿಯಸ್​ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ, ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ

ಹವಾಮಾನ ವರದಿ| ರಾಜ್ಯದ ದ.ಒಳನಾಡಿನಲ್ಲಿ ಧಾರಾಕಾರ ಮಳೆ ಸಾಧ್ಯತೆ| ಕರಾವಳಿಗೂ ಅಲರ್ಟ್ ಘೋಷಣೆ Read More »

ನೌಕಾದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಪ್ರತಿಭೆ| ಕಿತ್ತು ತಿನ್ನುವ ಬಡತನದ ಮಧ್ಯೆ ಸಾಧನೆ ಮೆರೆದ ಕನ್ನಡತಿ

ಸಮಗ್ರ ನ್ಯೂಸ್: ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಮನೆಗೆ ಆಧಾರಸ್ತಂಭವಾಗಿದ್ದ ತಂದೆ ಮೃತಪಟ್ಟಿದ್ದರು. ಹೀಗಿದ್ದರೂ ಕಷ್ಟದಲ್ಲೇ ಬೆಳೆದು ಕಠಿಣ ಪರಿಶ್ರಮದಿಂದ ಯುವತಿಯೊಬ್ಬರು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ. ತಾಯಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ದುಡಿದು ಶಿಕ್ಷಣ ನೀಡಿದ್ದೇ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿಯ ಈ ಸಾಧನೆಗೆ ಸಹಕಾರಿಯಾಗಿದೆ. ಹರಿಹರ ನಗರದಲ್ಲಿರುವ ಸಿಬಾರ ವೃತ್ತದ ನಿವಾಸಿ ಲತಾ ಎಂಬವರ ಪುತ್ರಿ ಭೂಮಿಕ ತಾಯಿಯ ಆಸರೆಯಲ್ಲೇ ಬೆಳೆದವರು. ಇದೀಗ ನೌಕಾದಳಕ್ಕೆ ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ ಎಂಬ ಹೆಗ್ಗಳಿಕೆ

ನೌಕಾದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಪ್ರತಿಭೆ| ಕಿತ್ತು ತಿನ್ನುವ ಬಡತನದ ಮಧ್ಯೆ ಸಾಧನೆ ಮೆರೆದ ಕನ್ನಡತಿ Read More »

ಕಾಂಗ್ರೆಸ್ ನ ಚುನಾವಣಾ ಗ್ಯಾರಂಟಿ ದೇಶವನ್ನು ದಿವಾಳಿ ಮಾಡುತ್ತೆ – ನಮೋ ವಾಗ್ದಾಳಿ

ಸಮಗ್ರ ನ್ಯೂಸ್: ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಕಾಂಗ್ರೆಸ್‌ ಅನುಸರಿಸುತ್ತಿರುವ ‘ಗ್ಯಾರಂಟಿ ಸೂತ್ರ’ ದೇಶವನ್ನು ದಿವಾಳಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಸ್ಥಾನದಲ್ಲಿ ನಡೆದ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದೇ ತಿಂಗಳ ಆರಂಭದಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವ ವಿಚಾರ ಉಲ್ಲೇಖಿಸಿದರು. ಕಾಂಗ್ರೆಸ್ ಹೊಸ ಗ್ಯಾರಂಟಿ ಸೂತ್ರವನ್ನು ಅನುಸರಿಸುತ್ತಿದೆ. ಆದರೆ, ಅವರು (ಕಾಂಗ್ರೆಸ್ಸಿಗರು) ಕೊಟ್ಟ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ ಎಂದು

ಕಾಂಗ್ರೆಸ್ ನ ಚುನಾವಣಾ ಗ್ಯಾರಂಟಿ ದೇಶವನ್ನು ದಿವಾಳಿ ಮಾಡುತ್ತೆ – ನಮೋ ವಾಗ್ದಾಳಿ Read More »

ಉಜಿರೆ: ರಾಷ್ಟ್ರಮಟ್ಟದ ಯುವ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ಸಾವು

ಸಮಗ್ರ ನ್ಯೂಸ್: ವಿದ್ಯಾರ್ಥಿ ದಿಸೆಯಲ್ಲಿ ರಾಷ್ಟ್ರ ಮಟ್ಟದ ಪ್ರತಿಭಾನ್ವಿತ ವಾಲಿಬಾಲ್ ಆಟಗಾರ್ತಿಯಾಗಿದ್ದ ಉಜಿರೆ ಎಸ್.ಡಿ.ಎಂ. ಕಾಲೇಜಿನ ಹಳೆಯ ವಿದ್ಯಾರ್ಥಿ ಸಾಲಿಹಾತ್ (24) ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಪಡಂಗಡಿ ಪೊಯ್ಯೆಗುಡ್ಡೆ ನಿವಾಸಿ ಆದಂ ಮತ್ತು ಹವ್ವಮ್ಮ ದಂಪತಿಯ ಪುತ್ರಿಯಾಗಿರುವ ಸಾಲಿಹಾತ್ ಒಂದು ವರ್ಷದ ಹಿಂದೆ ವಿವಾಹಿತರಾಗಿದ್ದರು. ಹೃದಯ ನೋವಿನ ಕಾರಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಅವರು ಮೃತಪಟ್ಟಿದ್ದು, ವೈದ್ಯರು ಹೃದಯಾಘಾತ ಎಂದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬೆಳ್ತಂಗಡಿ

ಉಜಿರೆ: ರಾಷ್ಟ್ರಮಟ್ಟದ ಯುವ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ಸಾವು Read More »