ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ| ಜಿಡಿಪಿಯಲ್ಲಿ 7.2% ಪ್ರಗತಿ‌ ದಾಖಲು

ಸಮಗ್ರ ನ್ಯೂಸ್: ಆರ್ಥಿಕ ಪ್ರಗತಿಯಲ್ಲಿ ನಾಗಾಲೋಟ ಮುಂದುವರೆಸಿರುವ ಭಾರತ 2022-23ನೇ ಸಾಲಿನಲ್ಲಿ ಶೇ.7.2ರಷ್ಟು ಜಿಡಿಪಿ ಪ್ರಗತಿ ದಾಖಲಿಸಿದೆ. ಇದು ಈ ಹಿಂದಿನ ನಿರೀಕ್ಷೆಗಿಂತ ಅಧಿಕ ಮತ್ತು ವಿಶ್ವದ ಎಲ್ಲಾ ಬೆಳವಣಿಗೆ ಹೊಂದುತ್ತಿರುವ ಮತ್ತು ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪ್ರಗತಿಗಿಂತ ಹೆಚ್ಚಾಗಿದೆ.

. Ad Widget . Ad Widget . Ad Widget .

2022-23ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದ ಅಂಕಿ ಅಂಶಗಳು ಬುಧವಾರ ಬಿಡುಗಡೆಯಾಗಿದ್ದು ಅದರನ್ವಯ ಕಡೆಯ ತ್ರೈಮಾಸಿಕದಲ್ಲಿ ಶೇ.6.1ರಷ್ಟುಪ್ರಗತಿ ದಾಖಲಾಗಿದೆ. ಕೃಷಿ, ಉತ್ಪಾದನಾ ವಲಯ, ನಿರ್ಮಾಣ, ಸೇವಾ, ಗಣಿಗಾರಿಕೆ ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ತಮ ಪ್ರಗತಿ ದಾಖಲಾಗಿರುವುದು ಆರ್ಥಿಕತೆಗೆ ಭರ್ಜರಿ ಬಲ ನೀಡಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಪ್ರಸಕ್ತ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್‌ನಲ್ಲಿ ಶೇ.6.2, ಅಕ್ಟೋಬರ್‌- ಡಿಸೆಂಬರ್‌ನಲ್ಲಿ ಶೇ.4.5ರಷ್ಟುಪ್ರಗತಿ ದಾಖಲಾಗಿತ್ತು. ಆದರೆ ಕಳೆದ ತ್ರೈಮಾಸಿಕದಲ್ಲಿ ಮತ್ತೆ ಆರ್ಥಿಕತೆ ಚಿಗಿತುಕೊಂಡಿರುವುದು, ಒಟ್ಟಾರೆ ಇಡೀ ವರ್ಷದ ಆರ್ಥಿಕ ಪ್ರಗತಿ ದರ ಶೇ.7.2 ಮುಟ್ಟಲು ನೆರವು ನೀಡಿದೆ.

Leave a Comment

Your email address will not be published. Required fields are marked *