ರಾಜ್ಯ

ಬೆಳ್ಳಾರೆ: ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಶುಭಾರಂಭಗೊಂಡಿದೆ

ಸಮಗ್ರ ನ್ಯೂಸ್: ಮಿಥುನ್ ಶುಂಠಿತ್ತಡ್ಕ ಅವರ ಮಾಲಕತ್ವದಲ್ಲಿ ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಜೂ.21 ರಂದು ಬೆಳ್ಳಾರೆ ಮುಖ್ಯ ರಸ್ತೆಯ ಹಾಲಿನ ಡೈರಿ ಬಳಿ ಶುಭಾರಂಭಗೊಂಡಿದೆ. ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಉದಯಕುಮಾರ್ ಕೆ.ಟಿ. ಅವರ ನೇತೃತ್ವದಲ್ಲಿ ಗಣಹೋಮ ನಡೆಯಿತು. ಈ ಸಂದರ್ಭದಲ್ಲಿ ನಾರಾಯಣ ಗೌಡ ಶುಂಠಿತ್ತಡ್ಕ, ಶ್ರೀಮತಿ ಪದ್ಮಾವತಿ, ಚರಿತ್ ಕುಮಾರ್, ಶ್ರೀಮತಿ ಮಧುರಾ, ಸುರೇಶ್ ಶುಂಠಿತ್ತಡ್ಕ, ಶ್ರೀಮತಿ ಮೇಘಶ್ರೀ, ಸೂರಪ್ಪ ಗೌಡ ಜಬಳೆ, ವಿನೋದ್ ಕುಳ್ಳಂಪಾಡಿ, ದೇವಿಪ್ರಸಾದ್ ಶುಂಠಿತ್ತಡ್ಕ, ರಮೇಶ ಮಿತ್ತಮೂಲೆ, ಗಣೇಶ್

ಬೆಳ್ಳಾರೆ: ಶ್ರೀ ಲಕ್ಷ್ಮೀ ಇಲೆಕ್ಟ್ರಿಕಲ್ಸ್ ಶುಭಾರಂಭಗೊಂಡಿದೆ Read More »

ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಪೋಷಕರಿಗೆ ಬಿಗ್ ಶಾಕ್ | 20 ಸಾವಿರ ರೂ. ದಂಡ ವಿಧಿಸಿದ ಕೋರ್ಟ್!

ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕರಿಗೆ ವಾಹನ ಚಾಲನೆ ಮಾಡುವ ನೀಡುವ ಪೋಷಕರಿಗೆ ಕೋರ್ಟ್ ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 20 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಅಪ್ರಾಪ್ತ ಬಾಲಕ ಬೈಕ್‌ ಚಾಲನೆ ಮಾಡಿದ ತಪ್ಪಿಗೆ ಪೋಷಕರಿಗೆ 20 ಸಾವಿರ ರೂ. ದಂಡ ವಿಧಿಸಿ ತೀರ್ಥಹಳ್ಳಿ ನ್ಯಾಯಾಲಯ ತೀರ್ಪು ನೀಡಿದೆ. ತೀರ್ಥಹಳ್ಳಿಯ ಕುಶಾವತಿ ಬಳಿ ಡಿವೈಎಸ್‌ಪಿ ಗಜಾನನ ವಾಮನ ಸುತರ ವಾಹನ ತಪಾಸಣೆ ‌ನಡೆಸುತ್ತಿದ್ದರು. ವಾಹನ ತಪಾಸಣೆ ವೇಳೆ ಹೆಲ್ಮೆಟ್ ಧರಿಸದೇ ಅಪ್ರಾಪ್ತ ಬೈಕ್

ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡುವ ಪೋಷಕರಿಗೆ ಬಿಗ್ ಶಾಕ್ | 20 ಸಾವಿರ ರೂ. ದಂಡ ವಿಧಿಸಿದ ಕೋರ್ಟ್! Read More »

ನಾಲ್ಕನೇ ದಿನವೂ ಗೃಹ ಯೋಜನೆಗೆ ಸರ್ವರ್ ಸಮಸ್ಯೆ| ಅರ್ಜಿ ಸಲ್ಲಿಸಲು ಗ್ರಾಹಕರ ಪರದಾಟ

ಸಮಗ್ರ ನ್ಯೂಸ್: ಪ್ರತಿಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ನಾಲ್ಕನೇ ದಿವೂ ಸರ್ವರ್ ಸಮಸ್ಯೆ ಎದುರಾಗಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಪೋರ್ಟಲ್ ಬ್ಯೂಸಿ ಆದ ಕಾರಣ ಹಲವಡೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹೋದವರು ಪರದಾಡುವಂತಾಗಿದೆ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಗೃಹ ಬಳಕೆಯ ಗ್ರಾಹಕರಿಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವಂತ ಯೋಜನೆಗೆ ಅರ್ಜಿ ಸಲ್ಲಿಕೆ

ನಾಲ್ಕನೇ ದಿನವೂ ಗೃಹ ಯೋಜನೆಗೆ ಸರ್ವರ್ ಸಮಸ್ಯೆ| ಅರ್ಜಿ ಸಲ್ಲಿಸಲು ಗ್ರಾಹಕರ ಪರದಾಟ Read More »

ಶಿಕ್ಷಕರ ವರ್ಗಾವಣೆಗೆ `ಕೌನ್ಸೆಲಿಂಗ್’ | ಶಿಕ್ಷಣ ಸಚಿವರಿಂದ ಮುಖ್ಯ ಮಾಹಿತಿ

ಸಮಗ್ರ ನ್ಯೂಸ್: 2022-23ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು , ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢ ಶಾಲಾ ಮುಖ್ಯಶಿಕ್ಷಕರು, ತತ್ಸಮಾನ ವೃಂದದ ಶಿಕ್ಷಕರ ಸಾಮಾನ್ಯ ವರ್ಗಾವಣೆಗೆ ಕೌನ್ಸೆಲಿಂಗ್ ಗೆ ಮಂಗಳವಾರದಿಂದ ಚಾಲನೆ ನೀಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಆರೇಳು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಿಕ್ಷಕರ ವರ್ಗಾವಣೆಗೆ ಚಾಲನೆ ನೀಡಲಾಗಿದ್ದು, ತಕ್ಷಣದಿಂದಲೇ ಕೌನ್ಸೆಲಿಂಗ್ ಪ್ರಾರಂಭಗೊಳ್ಳಲಿದೆ. ಪುನಾರಂಭದ ಬಗ್ಗೆ ಬಹಳ ಒತ್ತಡ ಇದ್ದ

ಶಿಕ್ಷಕರ ವರ್ಗಾವಣೆಗೆ `ಕೌನ್ಸೆಲಿಂಗ್’ | ಶಿಕ್ಷಣ ಸಚಿವರಿಂದ ಮುಖ್ಯ ಮಾಹಿತಿ Read More »

ಶಕ್ತಿ ಯೋಜನೆ’ಗೆ ‘ಮಹಿಳಾ ಪ್ರಯಾಣಿಕ’ರ ಭರ್ಜರಿ ರೆಸ್ಪಾನ್ | ಜೂ.21ರಂದು 57.88 ಲಕ್ಷ ಸಂಚಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ಶಕ್ತಿ ಯೋಜನೆಗೆ ಮಹಿಳೆಯರ ರೆಸ್ಪಾನ್ ಮುಂದುವರೆದಿದೆ. ನಿನ್ನೆ ಬರೋಬ್ಬರಿ 57.88 ಲಕ್ಷ ಮಂದಿ ಯೋಜನೆಯ ಅಡಿಯಲ್ಲಿ ಸಂಚರಿಸಿ, ಪ್ರಯೋಜನ ಪಡೆದಿದ್ದಾರೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ 20-06-2023ರಂದು ಕೆ ಎಸ್ ಆರ್ ಟಿ ಸಿ ಬಸ್ಸುಗಳಲ್ಲಿ 17,46,756, ಬಿಎಂಟಿಸಿಯಲ್ಲಿ 17,89,423, ಎನ್ ಡಬ್ಲ್ಯೂ ಕೆ ಆರ್ ಟಿಸಿ ಬಸ್ಸುಗಳಲ್ಲಿ 14,47,223 ಹಾಗೂ ಕೆಕೆ ಆರ್ ಟಿಸಿಯಲ್ಲಿ 8,05,072 ಮಂದಿ ಸೇರಿದಂತೆ

ಶಕ್ತಿ ಯೋಜನೆ’ಗೆ ‘ಮಹಿಳಾ ಪ್ರಯಾಣಿಕ’ರ ಭರ್ಜರಿ ರೆಸ್ಪಾನ್ | ಜೂ.21ರಂದು 57.88 ಲಕ್ಷ ಸಂಚಾರ Read More »

ಮಡಿಕೇರಿ: ಜಿಲ್ಲಾಡಳಿತದ ವತಿಯಿಂದ ಅಂತರಾಷ್ಟ್ರೀಯ 9ನೇ ಯೋಗ ದಿನಾಚರಣೆ

ಸಮಗ್ರ ನ್ಯೂಸ್:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ವತಿಯಿಂದ 9 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು “ವಸುದೈವ ಕುಟುಂಬಕ್ಕಾಗಿ ಯೋಗ’ ‘ಹರ್ ಆಂಗನ್ ಯೋಗ” ಎಂಬ ಘೋಷ ವ್ಯಾಕ್ಯದೊಂದಿಗೆ ಇಂದು ಬೆಳಗ್ಗೆ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ಶಿಸ್ತು ಬದ್ಧವಾಗಿ ಜರುಗಿತು. ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಜಿಲ್ಲಾಧಿಕಾರಿ. ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ ಇತರರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿಗಳು ಹಾಗೂ ಜಿ. ಪಂ. ಕಾರ್ಯನಿರ್ವಹಣಾಧಿಕಾರಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ಮಡಿಕೇರಿ: ಜಿಲ್ಲಾಡಳಿತದ ವತಿಯಿಂದ ಅಂತರಾಷ್ಟ್ರೀಯ 9ನೇ ಯೋಗ ದಿನಾಚರಣೆ Read More »

ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು| ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ

ಸಮಗ್ರ ನ್ಯೂಸ್: ಅಪ್ಪನಿಂದಲೇ ಮಗಳು ಪೋಲಿಸ್‌ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿರುವ ಅಪರೂಪದ ಘಟನೆ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ನಡೆದಿದೆ. ಇಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಬಿ‌.ಎಸ್.ವೆಂಕಟೇಶ್ ಎನ್ನುವವರ ಬೇರೆ ಠಾಣೆಗೆ ವರ್ಗಾವಣೆ ಆಗಿದ್ದಾರೆ, ಇದೇ ವೇಳೇ ಅವರು ವರ್ಗಾವಣೆಯಾದ ಜಾಗಕ್ಕೆ ಅವರ ಮಗಳಾದ ಬಿ.ವಿ.ವರ್ಷಾಅವರು ನೂತನ ಎಸ್‌ಐ ಆಗಿ ಬಂದಿದ್ದಾರೆ. ಈ ನಡುವೆ ಬಿ.ವಿ.ವರ್ಷಾ ಅವರು ತಮ್ಮ ತಂದೆಯಿಂದ ಅಧಿಕಾರ ಸ್ವೀಕಾರ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. 2022ರ ಬ್ಯಾಚ್‌ನಲ್ಲಿ ಪಿಎಸ್‌ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ

ಅಪ್ಪನಿಂದಲೇ ಅಧಿಕಾರ ಸ್ವೀಕರಿಸಿದ ಮಗಳು| ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಅಪರೂಪದ ಘಟನೆ Read More »

ಪುತ್ತೂರು:ಹೆರಿಗೆ ವೇಳೆ ತೀವ್ರ ರಕ್ತಸ್ರಾವ|ಆಶಾ ಕಾರ್ಯಕರ್ತೆ ಮೃತ್ಯು

ಸಮಗ್ರ ನ್ಯೂಸ್: ಹೆರಿಗೆ ವೇಳೆ ತೀವ್ರ ರಕ್ತಸ್ರಾವಗೊಂಡ ಹಿನ್ನೆಲೆ ಬೆಳ್ತಂಗಡಿಯ ಕರಾಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಆಶಾ ಕಾರ್ಯಕರ್ತೆ ಭವ್ಯ (29) ಹೆರಿಗೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಈ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು ತಕ್ಷಣ ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಜೂ. 21ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ. ಮೃತರು ಪತಿ

ಪುತ್ತೂರು:ಹೆರಿಗೆ ವೇಳೆ ತೀವ್ರ ರಕ್ತಸ್ರಾವ|ಆಶಾ ಕಾರ್ಯಕರ್ತೆ ಮೃತ್ಯು Read More »

ಸುಳ್ಯದಲ್ಲಿ ಸೇವಾಭಾರತಿ ಹೆಲ್ಪ್ ಲೈನ್ ಆಂಬ್ಯುಲೆನ್ಸ್ ಲೋಕಾರ್ಪಣೆ

ಸಮಗ್ರ ನ್ಯೂಸ್: ಸೇವಾಭಾರತಿ ಹೆಲ್ಪ್ ಲೈನ್ ಟ್ರಸ್ಟ್ ಸುಳ್ಯ (ರಿ.) ಇದರ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆ ಕಾರ್ಯಕ್ರಮ ಇಂದು ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಲಿದೆ. ಮಾಜಿ ಸಚಿವ ಎಸ್.ಅಂಗಾರ ಆಂಬ್ಯುಲೆನ್ಸ್ ಲೋಕಾರ್ಪಣೆ ಮಾಡಿ, ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಯಾವುದೇ ಸೇವೆ ಮಾಡುವುದು ಬದುಕಿನ ಪುಣ್ಯದ ಕಾರ್ಯ. ಇಂದು ಹಲವು ಎನ್.ಜಿ.ಒ.ಗಳು ಕೂಡ ಸೇವೆಯನ್ನು ಮಾಡುತ್ತದೆ. ಆದರೆ ಅವು ಅಪೇಕ್ಷೆಯನ್ನು ಇಟ್ಟುಕೊಂಡು ಸೇವೆ ಮಾಡುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದ ಸೇವೆ ನಿಜವಾದ ಸೇವೆ ಎಂದರು.

ಸುಳ್ಯದಲ್ಲಿ ಸೇವಾಭಾರತಿ ಹೆಲ್ಪ್ ಲೈನ್ ಆಂಬ್ಯುಲೆನ್ಸ್ ಲೋಕಾರ್ಪಣೆ Read More »

ಸಿಎಂ ಪತ್ನಿ‌ ಪಾರ್ವತಿ ಅಸ್ವಸ್ಥ| ಮಣಿಪಾಲ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಪಾರ್ವತಿ ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಬೆಳಗ್ಗೆ 9.50 ಕ್ಕೆ ದೆಹಲಿಗೆ ತೆರಳಬೇಕಿತ್ತು. ಆದರೆ ಪತ್ನಿ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುವ ಮುನ್ನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಪತ್ನಿ ಆರೋಗ್ಯ ವಿಚಾರಿಸಲಿದ್ದಾರೆ. ಬಳಿಕ

ಸಿಎಂ ಪತ್ನಿ‌ ಪಾರ್ವತಿ ಅಸ್ವಸ್ಥ| ಮಣಿಪಾಲ ಆಸ್ಪತ್ರೆಗೆ ದಾಖಲು Read More »