ಪುತ್ತೂರು:ಹೆರಿಗೆ ವೇಳೆ ತೀವ್ರ ರಕ್ತಸ್ರಾವ|ಆಶಾ ಕಾರ್ಯಕರ್ತೆ ಮೃತ್ಯು

ಸಮಗ್ರ ನ್ಯೂಸ್: ಹೆರಿಗೆ ವೇಳೆ ತೀವ್ರ ರಕ್ತಸ್ರಾವಗೊಂಡ ಹಿನ್ನೆಲೆ ಬೆಳ್ತಂಗಡಿಯ ಕರಾಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

. Ad Widget . Ad Widget . Ad Widget

ಆಶಾ ಕಾರ್ಯಕರ್ತೆ ಭವ್ಯ (29) ಹೆರಿಗೆಗಾಗಿ ಪುತ್ತೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಈ ವೇಳೆ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು ತಕ್ಷಣ ಪುತ್ತೂರಿನ ಆಸ್ಪತ್ರೆಯಿಂದ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿ ಚಿಕಿತ್ಸೆ ನೀಡಲಾಗಿದ್ದು, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ಜೂ. 21ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

. Ad Widget .

ಭವ್ಯರವರದ್ದು 3ನೇ ಹೆರಿಗೆಯಾಗಿದ್ದು, ಹಸುಗೂಸು ಗಂಡು ಮಗು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.

ಮೃತರು ಪತಿ ಬಾಲಕೃಷ್ಣ ಗೌಡ, 4ನೇ ತರಗತಿ ಕಲಿಯುತ್ತಿರುವ ಪುತ್ರ ಭವಿಷ್, 3ನೇ ತರಗತಿಯ ಸ್ವಸ್ತಿಕ್ ಮತ್ತು ಹಸುಗೂಸು ಗಂಡು ಮಗುವನ್ನು ಅಗಲಿದ್ದಾರೆ. ಭವ್ಯ ಅವರು ಕೊಕ್ಕಡದ ಕೃಷ್ಣಪ್ಪ ಎಂಬವರ ಮಗಳಾಗಿದ್ದಾಳೆ.

Leave a Comment

Your email address will not be published. Required fields are marked *