ರಾಜ್ಯ

ಕಮರ್ಷಿಲ್ ಪೈಲೆಟ್ ಆಗಿ ಕೊಡಗಿನ ಟಿಯಾರ ಸುಬ್ಬಯ್ಯ

ಸಮಗ್ರ ನ್ಯೂಸ್: ಕೊಡಗಿನ ಟಿಯಾರ ಸುಬ್ಬಯ್ಯ ಏರ್ ಇಂಡಿಯಾ ಎಕ್ಸ್ಪ್ರೆಸ್ (AIR INDIA EXPRESS)ನ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಮರ್ಷಿಯಲ್ ಪೈಲೆಟ್ ಆಗಿ ನೇಮಕಗೊಂಡಿದ್ದಾರೆ. ಇವರು ಒಲಂಪಿಯನ್ ಡಾ.ಸುಬ್ಬಯ್ಯ ಅವರ ಪುತ್ರಿ. ಕೊಡಗಿನ ಕಮರ್ಷಿಯಲ್ ಪೈಲೆಟ್ಟಾಗಿ ಆಯ್ಕೆ ಹೊಂದಿದವರು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕಮರ್ಷಿಲ್ ಪೈಲೆಟ್ ಆಗಿ ಕೊಡಗಿನ ಟಿಯಾರ ಸುಬ್ಬಯ್ಯ Read More »

ಕರುನಾಡಿನಲ್ಲಿ ಸಂಕ್ರಾಂತಿ ದಿನ ಸಾವಿನ ಮೃದಂಗ| ಪ್ರತ್ಯೇಕ 2 ಅಪಘಾತ 7 ಜನ ಸಾವು

ಸಮಗ್ರ ನ್ಯೂಸ್: ಸಂಕ್ರಾಂತಿ ದಿನವೇ ಕರುನಾಡಿನಲ್ಲಿ ಸಾವಿನ ಮೃದಂಗ ಕೇಳಿದೆ. ಪ್ರತ್ಯೇಕ ಎರಡು ಅಪಘಾತ ಸಂಭವಿಸಿದ್ದು ಏಳು ಜನ ಮೃತಪಟ್ಟಿದ್ದಾರೆ. ಮತ್ತು ಆರು ಜನ ಗಾಯಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಿನಕನಹಳ್ಳಿ ಗ್ರಾಮದ ಸಮೀಪ ಹೋಗುತ್ತಿದ್ದ ಬೈಕ್​ಗೆ ಭತ್ತ ಕಟಾವು ಮಾಡುವ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ನಲ್ಲಿ ಹೋಗುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಓರ್ವ ಬಾಲಕ ಗಾಯಗೊಂಡಿದ್ದನು. ಪಾಳ್ಯ ಗ್ರಾಮದ ನಿವಾಸಿಗಳಾದ ಪತಿ ಸಂತೋಷ್(32), ಪತ್ನಿ ಸೌಮ್ಯ(27) ಹೆಣ್ಣು ಮಗು ನಿತ್ಯಸಾಕ್ಷಿ (4) ಮೃತ

ಕರುನಾಡಿನಲ್ಲಿ ಸಂಕ್ರಾಂತಿ ದಿನ ಸಾವಿನ ಮೃದಂಗ| ಪ್ರತ್ಯೇಕ 2 ಅಪಘಾತ 7 ಜನ ಸಾವು Read More »

ಲಕ್ನೋದಲ್ಲಿ 76 ನೇ ಸೇನಾ ದಿನಾಚರಣೆ|ಸೇನಾ ತಂಡದ ನೇತೖತ್ವ ವಹಿಸಿದ ಮಡಿಕೇರಿಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ.

ಸಮಗ್ರ ನ್ಯೂಸ್: ಲಕ್ನೋದಲ್ಲಿ ನಡೆದ 76 ನೇ ಸೇನಾ ದಿನಾಚರಣೆಯಲ್ಲಿ ಸೇನಾ ತಂಡದ ನೇತೖತ್ವ ವಹಿಸಿದ ಮಡಿಕೇರಿಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ.. ಇವರು ಅಂಬಿಕಾ ವಿಡಿಯೋ ಮಾಲೀಕ ಗಣೇಶ್ ಮತ್ತು ಸಮಾಜಸೇವಾಕರ್ತೆ ಮೋಂತಿ ಗಣೇಶ್ ದಂಪತಿ ಪುತ್ರಿ. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಮತ್ತು 28ನೇ ಆರ್ಮಿ ಏರ್ ಡಿಫೆನ್ಸ್ ರೆಜಿಮೆಂಟ್ ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಐಶ್ವರ್ಯ2017ರಲ್ಲಿ ಪ್ರತಿಷ್ಟಿತ ಗಣರಾಜ್ಯೋತವ ಪೆರೇಡ್ ನಲ್ಲಿ NCCತಂಡ ಮುನ್ನಡೆಸಿದ್ದರು. ಪುತ್ರಿಯ ಸಾಧನೆ ವೀಕ್ಷಿಸಿ ಲಕ್ನೋದಲ್ಲಿ ಸಂಭ್ರಮಿಸಿದ ಗಣೇಶ್ ಮೋಂತಿ ದಂಪತಿ.

ಲಕ್ನೋದಲ್ಲಿ 76 ನೇ ಸೇನಾ ದಿನಾಚರಣೆ|ಸೇನಾ ತಂಡದ ನೇತೖತ್ವ ವಹಿಸಿದ ಮಡಿಕೇರಿಯ ಲೆಫ್ಟಿನೆಂಟ್ ಐಶ್ವರ್ಯ ಎ.ಜಿ. Read More »

ಕಾಡಾನೆ ದಾಳಿ ಕಾರ್ಮಿಕ ಮಹಿಳೆ ಗಂಭೀರ…!

ಸಮಗ್ರ ನ್ಯೂಸ್: ಕಾರ್ಮಿಕರೊಂದಿಗೆ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಗುಹ್ಯ ಪಳ್ಳಕೆರೆ ಕಾಫಿ ತೋಟದಲ್ಲಿ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಅಮಿರನಾ (35) ಮಹಿಳೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೋಲಿಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆ ಹಾವಳಿ ತಡೆಗಟ್ಟಲು ಕಾರ್ಮಿಕರು ಒತ್ತಾಯಿಸಿದ್ದಾರೆ.

ಕಾಡಾನೆ ದಾಳಿ ಕಾರ್ಮಿಕ ಮಹಿಳೆ ಗಂಭೀರ…! Read More »

ಕೊಡಗು:ಬಿಜೆಪಿಗೆ ನೂತನ ಸಾರಥಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ನಾಪಂಡ ರವಿ ಕಾಳಪ್ಪನವರನ್ನು ರಾಜ್ಯ ಘಟಕ ನೇಮಕ ಗೊಳಿಸಿದೆ. ರಾಜ್ಯ ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷರಾಗಿದ್ದ ರವಿ ಕಾಳಪ್ಪನವರ ಹೆಸರು ರಾಜ್ಯ ಬಿಜೆಪಿ ಜ. 14ರಂದು ಬಿಡುಗಡೆ ಗೊಳಿಸಲಾದ ಅಧ್ಯಕ್ಷರ ಪಟ್ಟಿಯಲ್ಲಿ ನಮೂದಿಸಲಾಗಿದೆ. ಮಡಿಕೇರಿ ತಾಲೂಕು ಮಕ್ಕಂದೂರು ಗ್ರಾಮದ ರವಿ ಕಾಳಪ್ಪ. ಪಕ್ಷದಲ್ಲಿ ಈ ಹಿಂದೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವ ಇದ್ದು ಸರಳ ವ್ಯಕ್ತಿತ್ವ ಹೊಂದಿದ್ದಾರೆ.

ಕೊಡಗು:ಬಿಜೆಪಿಗೆ ನೂತನ ಸಾರಥಿ Read More »

ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ

ಸಮಗ್ರ ನ್ಯೂಸ್: ಯಾದಗಿರಿ ತಾಲೂಕಿನ ಮೈಲಾಪುರದಲ್ಲಿ ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ ಉಂಟಾಗಿದೆ. ಅರಕೇರ ಹಾಗೂ ರಾಮಸಮುದ್ರ ಗ್ರಾಮದ ಭಕ್ತರ ನಡುವೆ ಬಡಿದಾಟವಾಗಿದೆ. ಹೊನ್ನಕೆರೆಗೆ ಗಂಗಾ ಸ್ನಾನಕ್ಕೆ ಮೈಲಾರಲಿಂಗೇಶ್ವರ ಪಲ್ಲಕ್ಕಿ ಹೋಗುತ್ತಿತ್ತು. ರಾಮಸಮುದ್ರ ಗ್ರಾಮದ ಕಡೆ ತೆಗೆದುಕೊಂಡು ಹೋಗಲು ಭಕ್ತರು ಯತ್ನಿಸಿದ್ದಾರೆ. ಇನ್ನೊಂದು ಕಡೆ ಪಲ್ಲಕ್ಕಿಯನ್ನು ಅರಕೇರ ಗ್ರಾಮದ ಕಡೆ ಭಕ್ತರು ಎಳೆದಾಡಿದ್ದಾರೆ. ಈ ವೇಳೆ ಎರಡು ಗ್ರಾಮಗಳ ಭಕ್ತರಿಂದ ದೊಣ್ಣೆಗಳಿಂದ ಬಡಿದಾಟವಾಗಿದೆ. ಕೊನೆಗೆ ಕೆರೆ ಕಡೆ ಮೈಲಾಪುರದ

ಮೈಲಾರಲಿಂಗೇಶ್ವರ ಜಾತ್ರೆ ಪಲ್ಲಕ್ಕಿ ಮೆರವಣಿಗೆ ವೇಳೆ 2 ಗ್ರಾಮಗಳ ಜನರ ಮಧ್ಯೆ ಮಾರಾಮಾರಿ Read More »

ಬಳ್ಳಾರಿಯ ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ|ಓರ್ವ ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಬೆಂಕಿ ಅವಘಡಗಳು ದಿನ ಸುದ್ದಿಯಲ್ಲಿ ಇರುತ್ತದೆ. ಈಗ ಬಳ್ಳಾರಿಯ ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಳ್ಳಾರಿಯ ಗುಗ್ಗರಹಟ್ಟಿ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು. ಸಲೀಂ ಮೃತ ದುರ್ದೈವಿಯಾಗಿದ್ದಾರೆ. ಘಟನೆಯಲ್ಲಿ ಐವರಿಗೆ ಗಾಯಗಳಾಗಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರು ಭರತ್ ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಳ್ಳಲು ಕಾರಣ ತಿಳಿದುಬಂದಿಲ್ಲ.

ಬಳ್ಳಾರಿಯ ಬಿಸ್ಕೆಟ್‌ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ|ಓರ್ವ ಸಾವು Read More »

ಮಡಿಕೇರಿ: ಪಿಕಪ್, ಆಟೋ ನಡುವೆ ಭೀಕರ ಅಪಘಾತ| ಆಟೋ ಚಾಲಕನ ಗಂಭೀರ

ಸಮಗ್ರ ನ್ಯೂಸ್: ಪಿಕಪ್ ವಾಹನ ಮತ್ತು ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಆಟೋ ಚಾಲಕ ಚಿಂತಾಜನಕ ಸ್ಥಿತಿಗೆ ತಲುಪಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಚಾಲಕನೋರ್ವ ನಿಯಂತ್ರಣ ಕಳೆದುಕೊಂಡು ಆಟೋಗೆ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಗಂಭೀರ ಗಾಯಗಳಾಗಿದ್ದ ಆಟೋ ಚಾಲಕ ಸುನೀಲ್ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಎದುರು ಅಪಘಾತ ಸಂಭವಿಸಿದ್ದು, ತಕ್ಷಣವೇ ಪಿಕಪ್ ವಾಹನದ ಚಾಲಕ

ಮಡಿಕೇರಿ: ಪಿಕಪ್, ಆಟೋ ನಡುವೆ ಭೀಕರ ಅಪಘಾತ| ಆಟೋ ಚಾಲಕನ ಗಂಭೀರ Read More »

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು?

ಸಮಗ್ರ ನ್ಯೂಸ್: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ರಾಮಮಂದಿರ ಸಿದ್ಧತೆ ನಡುವೆ 400% ವಿಮಾನ ದರ ಏರಿಕೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ವಿಮಾನದ (Flight) ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ವಿಮಾನ ಟಿಕೆಟ್ ದರ ಹೆಚ್ಚಳ.. !ವಿಮಾನಯಾನ ಸಂಸ್ಥೆಗಳು ಬೇಡಿಕೆಗೆ ಅನುಗುಣವಾಗಿ ಟಿಕೆಟ್ ದರ ಹೆಚ್ಚಿಸಿವೆ. ಕಳೆದ 10 ದಿನದಲ್ಲಿ 6,000 ಇದ್ದ ಟಿಕೆಟ್ ದರ ಈಗ 21,500 ಆಗಿದೆ. ಬರೋಬ್ಬರಿ ಶೇ.400ರಷ್ಟು ಹೆಚ್ಚಳವಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು? ವಿಮಾನ ದರ 400%

ಬೆಂಗಳೂರಿನಿಂದ ಅಯೋಧ್ಯೆಗೆ ವಿಮಾನ ಟಿಕೆಟ್ ದರ ಎಷ್ಟು? Read More »

ದಟ್ಟ ಮಂಜಿನಿಂದ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ

ಸಮಗ್ರ ನ್ಯೂಸ್: ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿದೆ. ವಿಮಾನಗಳು ಕಳೆದ ಎರಡು ಗಂಟೆಗೂ ಅಧಿಕ ಕಾಲ ಟೇಕಾಫ್​ ಆಗಿಲ್ಲ. ಸುಮಾರು 34 ವಿಮಾನ ಟೇಕಾಫ್​ ಆಗದೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು. ಮಂಜಿನಿಂದ ರನ್ ವೇ ಕಾಣದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಪ್ರಯಾಣಿಕರು ವಿಮಾನಗಳಲ್ಲೆ ಕುಳಿತು ಕಾಲಹರಣ ಮಾಡಿದರು. 9 ಗಂಟೆ ನಂತರ ವಿಮಾನಗಳು ಟೇಕ್ ಆಪ್​ ಆಗಿದೆ.

ದಟ್ಟ ಮಂಜಿನಿಂದ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ Read More »