ರಾಜ್ಯ

ಮಧ್ಯರಾತ್ರಿ ದರ್ಶನ್, ಸ್ನೇಹಿತರು ಜೆಟ್​ಲ್ಯಾಗ್ ಪಬ್​ನಲ್ಲಿ ಪಾರ್ಟಿ ಪ್ರಕರಣ| ಜೆಟ್​ಲ್ಯಾಗ್ ಪರವಾನಗಿ ರದ್ದು

ಸಮಗ್ರ ನ್ಯೂಸ್: ಇತ್ತೀಚೆಗೆ ತಡರಾತ್ರಿವರೆಗೆ ಬೆಂಗಳೂರಿನ ಜೆಟ್​ಲ್ಯಾಗ್ ಪಬ್​ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಮಾಡಿರುವ ಬಗ್ಗೆ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿನಿಮಾ ತಾರೆಯರು ನಿಯಮ ಮೀರಿ ಪಾರ್ಟಿ ಮಾಡಿದ್ದಾರೆಂದು ದೊಡ್ಡ ಸುದ್ದಿಯೇ ಆಗಿತ್ತು. ದರ್ಶನ್ ಹಾಗೂ ಇತರರಿಗೆ ನೊಟೀಸ್ ನೀಡಿ ವಿಚಾರಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಳ್ಳಲಾಗಿತ್ತು. ಇದೀಗ ದರ್ಶನ್ ಹಾಗೂ ಇತರರು ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ಕೊಟ್ಟಿದ್ದ ಜೆಟ್​​ಲ್ಯಾಗ್​ ಪಬ್​ನ ಪರವಾನಗಿಯನ್ನು(ಲೈಸೆನ್ಸ್) 25 ದಿನಗಳ ಕಾಲ ರದ್ದು ಮಾಡಿ ಆದೇಶಿಸಲಾಗಿದೆ. ದರ್ಶನ್, ಡಾಲಿ

ಮಧ್ಯರಾತ್ರಿ ದರ್ಶನ್, ಸ್ನೇಹಿತರು ಜೆಟ್​ಲ್ಯಾಗ್ ಪಬ್​ನಲ್ಲಿ ಪಾರ್ಟಿ ಪ್ರಕರಣ| ಜೆಟ್​ಲ್ಯಾಗ್ ಪರವಾನಗಿ ರದ್ದು Read More »

ಕೋಚಿಂಗ್ ಸೆಂಟರ್‍ಗಳ ನೋಂದಣಿ ಕಡ್ಡಾಯ/ ರಾಜ್ಯ ಸರ್ಕಾರದ ಆದೇಶ

ಸಮಗ್ರ ನ್ಯೂಸ್: ನಾಗರಿಕ ಸೇವಾ ಪರೀಕ್ಷೆಗಳಿಗೆ ಕೋಚಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್‍ಗಳಿಗೆ ಉನ್ನತ ಶಿಕ್ಷಣ ಇಲಾಖೆಯಲ್ಲಿ ನೋಂದಣಿ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೋಚಿಂಗ್ ಸೆಂಟರ್‍ಗಳ ನೋಂದಣಿ ದೇಶದಲ್ಲಿ ಕಡ್ಡಾಯವಾಗಿರಬೇಕು. ರಾಜ್ಯದಲ್ಲಿ ಸಾಕಷ್ಟು ಕೋಚಿಂಗ್ ಸೆಂಟರ್‍ಗಳಿವೆ. ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದಾಗಿ ಹೇಳಿ ಅವರಿಂದ ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ, ಕೋಚಿಂಗ್ ಸೆಂಟರ್‍ಗಳನ್ನು ನೋಂದಾಯಿಸಲು ಸರ್ಕಾರ ನಿರ್ಧರಿಸಿದೆ. 15 ದಿನಗಳಲ್ಲಿ 25,000 ಶುಲ್ಕ ಪಾವತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೋಂದಾಯಿಸಿಕೊಳ್ಳುವಂತೆ

ಕೋಚಿಂಗ್ ಸೆಂಟರ್‍ಗಳ ನೋಂದಣಿ ಕಡ್ಡಾಯ/ ರಾಜ್ಯ ಸರ್ಕಾರದ ಆದೇಶ Read More »

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಭೇಟಿ/ ಅದ್ಧೂರಿ ಸ್ವಾಗತಕ್ಕೆ ಸಜ್ಜಾದ ರಾಜ್ಯ ಬಿಜೆಪಿ

ಸಮಗ್ರ ನ್ಯೂಸ್: ಪ್ರಧಾನಿ ಮೋದಿ ಇದೇ ಶುಕ್ರವಾರ ಬೆಂಗಳೂರಿಗೆ ಭೇಟಿ ನೀಡಲಿದ್ದು ಈ ವೇಳೆ ಮೋದಿ ಸ್ವಾಗತಕ್ಕೆ ಕಾರ್ಯಕರ್ತರಿಗೆ ಅವಕಾಶ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ದೇಶಿಸಿ ಪ್ರಮುಖರ ಜತೆ ಚರ್ಚೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ಅವರು ಲೋಕಸಭೆ ಚುನಾವಣೆಗೂ ಮುನ್ನ ರೋಡ್ ಶೋ ನಡೆಸುವ ಆಲೋಚನೆ ಇದ್ದು, ಪ್ರಧಾನಿ ಕಾರ್ಯಾಲಯದ ಒಪ್ಪಿಗೆಗಾಗಿ ಕಾಯಲಾಗಿದೆ. ಪ್ರಧಾನಿ ಭೇಟಿಯಿಂದಾಗಿ 19ರಂದು ನಡೆಯಬೇಕಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಂದೂಡಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೆಂಗಳೂರಿಗೆ ಭೇಟಿ/ ಅದ್ಧೂರಿ ಸ್ವಾಗತಕ್ಕೆ ಸಜ್ಜಾದ ರಾಜ್ಯ ಬಿಜೆಪಿ Read More »

ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಹೇಳಿದ್ದಾರೆ. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಮತ್ತು ಕರ್ನಾಟಕ ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲಾಗುವುದು. ಕಳ್ಳತನ ಹೆಚ್ಚಾಗ್ತಾ ಇದೆ ಎಂದರೆ ಗಸ್ತು ವ್ಯವಸ್ಥೆ, ಹೋಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವಿಫಲರಾಗಿದ್ದಾರೆ

ಖಾಲಿ ಇರುವ ಪೊಲೀಸ್ ಹುದ್ದೆಗಳ ಭರ್ತಿ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಯಾರೂ ಹೆಣ್ಣು ಕೊಡಲ್ಲ ಎಂದು ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮದುವೆ ವಿಚಾರವಾಗಿ ಬಹಳ ಯುವಕರು ತಮ್ಮ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಇದೀಗ ಎದುರಾಗಿದೆ. ಮದುವೆಗೆ ಯುವತಿ ಸಿಗದ ಹಿನ್ನೆಲೆ ನೊಂದ 26 ವರ್ಷದ ಯುವಕ ಮಧುಸೂದನ್ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಮಧುಸೂದನ್ ತಂದೆ ಅರೆ ಹುಚ್ಚನಂತೆ ವರ್ತಿಸುವ ಕಾರಣ ಯಾರೂ ಹೆಣ್ಣು ನೀಡಲು ಮುಂದಾಗಿರಲಿಲ್ಲ ಈ ಕಾರಣಕ್ಕಾಗಿ ಮಧುಸೂದನ್ ನೊಂದುಕೊಂಡಿದ್ದ ಎನ್ನಲಾಗಿದೆ. ನನಗೆ ಹೆಣ್ಣು ಸಿಗಲ್ಲ. ನಾನು ಒಂಟಿಯಾಗಿಯೇ

ಯಾರೂ ಹೆಣ್ಣು ಕೊಡಲ್ಲ ಎಂದು ಯುವಕ ಆತ್ಮಹತ್ಯೆ Read More »

ಘಾಟಿ ಸುಬ್ರಹ್ಮಣ್ಯದಲ್ಲಿ ತಪ್ಪಿದ ಅನಾಹುತ| ರಥದ ಚಕ್ರದ ಬಳಿ ಬಿದ್ದ ಮಹಿಳೆ

ಸಮಗ್ರ ನ್ಯೂಸ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಇಂದು ಬ್ರಹ್ಮ ರಥೋತ್ಸವ ನಡೆದಿದ್ದು ಬ್ರಹ್ಮ ರಥೋತ್ಸವದ ವೇಳೆ ಭಾರಿ ಅನಾಹುತವೊಂದು ತಪ್ಪಿದೆ. ರಥ ಎಳೆಯುವಾಗ ನೂಕುನುಗ್ಗಲು ಉಂಟಾಗಿ ಚಕ್ರದ ಬಳಿ ಮಹಿಳೆ ಬಿದ್ದಿದ್ದರು. ಕೂಡಲೇ ಎಚ್ಚೆತ್ತ ಪೊಲೀಸರು ಮತ್ತು ದೇವಸ್ಥಾನದ ಸಿಬ್ಬಂದಿ ಮಹಿಳೆಯನ್ನು ಮೇಲಕ್ಕೆ ಎತ್ತಿದ್ದಾರೆ. ಬಳಿಕ ಮಹಿಳೆಯನ್ನು ಪಕ್ಕಕ್ಕೆ ಸರಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಪುಷ್ಯ ಶುದ್ದ ಷಷ್ಟಿ ಹಿನ್ನೆಲೆಯಲ್ಲಿ ಇಂದು ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮ ರಥೋತ್ಸವ ನಡೆಯಿತು.

ಘಾಟಿ ಸುಬ್ರಹ್ಮಣ್ಯದಲ್ಲಿ ತಪ್ಪಿದ ಅನಾಹುತ| ರಥದ ಚಕ್ರದ ಬಳಿ ಬಿದ್ದ ಮಹಿಳೆ Read More »

ಬೆಂಗಳೂರಿನ ಯುವಕ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು

ಸಮಗ್ರ ನ್ಯೂಸ್: ಮಡಿಕೇರಿ ನಗರದ ಲಾಡ್ಜ್ ಒಂದರಲ್ಲಿ ಮೈಸೂರು ಮೂಲದ ಸಂದೇಶ್(35) ಸಾವಿಗೆ ಶರಣಾಗಿದ್ದಾನೆ. ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದ ಸಂದೇಶ್ ಕಳೆದ 3ದಿನಗಳ ಹಿಂದೆ ಮಡಿಕೇರಿಗೆ ಬಂದಿದ್ದು ಇಲ್ಲಿನ ಕೊಹಿನೂರ್ ರಸ್ತೆಯಲ್ಲಿರುವ ಲಾಡ್ಜ್ ನಲ್ಲಿ ಬೆಳಗೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾನೆ.ಈ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನ ಯುವಕ ಮಡಿಕೇರಿ ಲಾಡ್ಜ್ ನಲ್ಲಿ ನೇಣಿಗೆ ಶರಣು Read More »

ಮಡಿಕೇರಿ:ನೆಲಜಿ ಮತ್ತು ಕುಂಚಿಲ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡ ಹುಲಿ

ಸಮಗ್ರ ನ್ಯೂಸ್:ಮಡಿಕೇರಿ ತಾಲೂಕಿನ ನೆಲಜಿ ಮತ್ತು ಕುಂಜಿಲ ಗ್ರಾಮದ ಗಡಿಯಲ್ಲಿರುವ ಅಚ್ಚಾಂಡಿರ ಹಾಗೂ ಕಲಿಯಾಟಂಡ ತೋಟದ ಮಧ್ಯೆ ಬರುವ ಕೊಲ್ಲಿಯ ಬಳಿ ಇಂದು ಬೆಳಿಗ್ಗೆ(ಜ.16) ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬುಲಿ. ಕಾಡು ಕುರಿಯನ್ನು ಅಟ್ಟಿಸಿಕೊಂಡು ಹೋಗುತ್ತಾ ತೋಟದ ಕಾರ್ಮಿಕರಿಗೆ ದರ್ಶನವಿತ್ತ ಹುಲಿರಾಯ. ಈ ಎರಡೂ ಗ್ರಾಮಗಳ ಜನ ಎಚ್ಚರಿಕೆಯಲ್ಲಿರುವಂತೆ ಸ್ಥಳೀಯರೊಬ್ಬರು ಕೋರಿಕೊಂಡಿದ್ದಾರೆ.

ಮಡಿಕೇರಿ:ನೆಲಜಿ ಮತ್ತು ಕುಂಚಿಲ ಗ್ರಾಮದ ತೋಟದಲ್ಲಿ ಕಾಣಿಸಿಕೊಂಡ ಹುಲಿ Read More »

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್​ನಲ್ಲಿ ಚಿಕಿತ್ಸೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿನಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ಎಂಬಿಬಿಎಸ್ ಮಾಡಿಲ್ಲ ಅಂದ್ರೂ ವೈದ್ಯರೆಂದು ಹೇಳಿಕೊಂಡು ಜನರ ಜೀವನದ ಜೊತೆ ಆಟ ಆಡುತ್ತಿದ್ದಾರೆ. ಈ ಹಿಂದೆ ಸರ್ಕಾರ ನಕಲಿ ವೈದ್ಯರಿಗೆ ಕಡಿವಾಣ ಹಾಕಲು ಅನೇಕ ಕ್ರಮಗಳನ್ನು ಕೈಗೊಂಡಿತ್ತು. ಆದರೂ ನಗರದಲ್ಲಿ ನಕಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ ಹಣ ಸಂಪಾದಿಸುತ್ತಿದ್ದಾರೆ. ಸದ್ಯ ಇದೀಗ ಬೆಂಗಳೂರಿನಲ್ಲಿ ನಕಲಿ ವೈದ್ಯನೊಬ್ಬ ಸಿಕ್ಕಿಬಿದ್ದಿದ್ದಾನೆ. ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ತಾನೊಬ್ಬ ವೈದ್ಯ ಎಂದು ಹೇಳಿಕೊಂಡು ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿರುವ

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ನಕಲಿ ವೈದ್ಯರ ಹಾವಳಿ|ಯೂಟ್ಯೂಬ್ ನೋಡಿ ಮೆಡಿಕಲ್ ಶಾಪ್​ನಲ್ಲಿ ಚಿಕಿತ್ಸೆ Read More »

ಕೊಡಗು: ಜೀವಿತ ಚಿಂತನ್ ಅವರು ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಮೂಲತಃ ತಾಳತ್ ಮನೆ ನಿವಾಸಿ ಮಡಿಕೇರಿ ನೆಲಕ್ಕಿ ಯುವತಿ ಮಂಡಳಿಯ ಸದಸ್ಯೆ ಜೀವಿತ ಚಿಂತನ್ ಬಹುಮುಖ ಪ್ರತಿಭೆಯ ಕಲಾವಿದೆ ಇದೀಗ ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ನೀಡುವ 15 ರಿಂದ 29 ವರ್ಷ ವಯೋಮಿತಿಯವರಿಗೆ ನೀಡುವ ವೈಯಕ್ತಿಕ ರಾಜ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಜ. 20ರಂದು ಸುಬ್ರಮಣ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆಯಲಿದ್ದಾರೆ. ಅವರು ಮಾಜಿ ಸೈನಿಕಸುಳ್ಯದ ಕೊಡಿ ಜಿ. ನಾಣಯ್ಯ

ಕೊಡಗು: ಜೀವಿತ ಚಿಂತನ್ ಅವರು ರಾಜ್ಯ ಮಟ್ಟದ ಯುವ ಪ್ರಶಸ್ತಿಗೆ ಆಯ್ಕೆ Read More »