ರಾಜ್ಯ

ತೀರ್ಥಹಳ್ಳಿ: ನದಿಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು

ಸಮಗ್ರ ನ್ಯೂಸ್‌ : ರಂಜಾನ್ ಉಪವಾಸ ಮುಗಿಸಿ ಮೂವರು ಎಸ್‌ಎಸ್‌ಎಲ್ ಸಿ ವಿದ್ಯಾರ್ಥಿಗಳು ತುಂಗಾ ನದಿಗೆ ಈಜಲು ಹೋಗಿ ನೀರು ಪಾಲಾದ ಘಟನೆ ತೀರ್ಥಹಳ್ಳಿ ರಾಮ ಮಂಟಪದ ಬಳಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿಗಳು ರಫನ್, ಇಯನ್, ಸಮ್ಮರ್ ಎಂದು ಗುರುತಿಸಲಾಗಿದೆ. ಹುಡುಗರು ರಂಜಾನ್ ಉಪವಾಸ ಮುಗಿಸಿ ಸ್ನಾನಕ್ಕೆ ಈಜಲು ಹೋಗಿ ನಾಪತ್ತೆಯಾದ ಬಳಿಕ ಕುಟುಂಬಸ್ಥರು ಮತ್ತು ಸ್ಥಳೀಯರು ಹುಡುಕಾಟಕ್ಕಿಳಿದಿದ್ದರು. ಸತತವಾಗಿ ಒಂದು ಘಂಟೆಯಿಂದ ತುಂಗಾ ನದಿಯ ತೀರದಲ್ಲಿ ಅಗ್ನಿ ಶಾಮಕ ದಳ ಮತ್ತು ಪೊಲೀಸರು ಹುಡುಕಾಟ ನಡೆಸಿ

ತೀರ್ಥಹಳ್ಳಿ: ನದಿಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು Read More »

ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮ ಜಾರಿಗೆ/ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ

ಸಮಗ್ರ ನ್ಯೂಸ್: ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದ್ದ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮವು ಸೋಮವಾರದಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ. ಇದು ಹಲವು ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಬಳಕೆಯನ್ನು ನಿರ್ಬಂಧಿಸುತ್ತದೆ ಅಥವಾ ನಿರ್ದಿಷ್ಟ ವಾಹನಕ್ಕೆ ಹಲವು ಫಾಸ್ಟ್ಯಾಗ್‌ಗಳನ್ನು ಲಿಂಕ್ ಮಾಡುವುದನ್ನೂ ತಡೆಗಟ್ಟುತ್ತದೆ.ಮಾ.1ರಿಂದಲೇ ಇದು ಜಾರಿಗೆ ಬರಬೇಕಿತ್ತು. ಆದರೆ ನಿರ್ಬಂಧಿತ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನ ಫಾಸ್ಟ್ಯಾಗ್ ಬಳಕೆದಾರರು ಸಮಸ್ಯೆಗೀಡಾದ ಕಾರಣ ಗಡುವನ್ನು 1 ತಿಂಗಳು ವಿಸ್ತರಿಸಲಾಗಿತ್ತು. ಹೀಗಾಗಿ ಏ.1ರಿಂದ ಇದು ಜಾರಿಗೆ ಬಂದಿದೆ. ಈ ಕುರಿತು

ಒಂದು ವಾಹನ, ಒಂದು ಫಾಸ್ಟ್ಯಾಗ್’ ನಿಯಮ ಜಾರಿಗೆ/ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಣೆ Read More »

ಕಾಸರಗೋಡು: ಕಬ್ಬಿಣದ ರಾಡ್ ನಿಂದ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

ಸಮಗ್ರ ನ್ಯೂಸ್‌ : ಕಬ್ಬಿಣದ ರಾಡ್ ನಿಂದ ಹೊಡೆದು ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ಕಾಸರಗೋಡಿನ ಪಳ್ಳಿ ಕೆರೆ ಎಂಬಲ್ಲಿ ನಡೆದಿದೆ. ಪಳ್ಳಿ ಕೆರೆ ಥಿಯೇಟರ್ ಸಮೀಪದ ಅಪ್ಪು ಕುಂಞಿ(65) ಕೊಲೆಯಾದ ತಂದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪುತ್ರ ಪ್ರಮೋದ್ (37)ನನ್ನು ಬೇಕಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪುತ್ರ ಪ್ರಮೋದ್ ದಿನನಿತ್ಯ ಮನೆಯಲ್ಲಿ ತಂದೆಗೆ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅಪ್ಪು ಕುಂಞಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಭಾನುವಾರ

ಕಾಸರಗೋಡು: ಕಬ್ಬಿಣದ ರಾಡ್ ನಿಂದ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ Read More »

ಬೆಂಗಳೂರು-ಹುಬ್ಬಳ್ಳಿ- ಮೈಸೂರು ರೈಲು ಏಪ್ರಿಲ್ 6 ಮತ್ತು 7 ರಂದು ಸ್ಥಗಿತ

ಸಮಗ್ರ ನ್ಯೂಸ್: ಬೆಂಗಳೂರು-ಹುಬ್ಬಳ್ಳಿ- ಮೈಸೂರು ರೈಲು ಸೇವೆಯನ್ನು ಏಪ್ರಿಲ್ 6 ಮತ್ತು 7 ರಂದು ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಇಲಾಖೆ ತಿಳಿಸಿದೆ. ಬೆಂಗಳೂರು ವಿಭಾಗದ ಭದ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಎರಡು ದಿನಗಳಲ್ಲಿ ಎರಡು ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ. ನೈಋತ್ಯ ರೈಲ್ವೆ ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಏ. 6ರ ಹುಬ್ಬಳ್ಳಿ- ಬೆಂಗಳೂರು ನಡುವಿನ ವಿಶೇಷ ರೈಲು (07339) ಮತ್ತು ಏ.7 ರಂದು ಬೆಂಗಳೂರು ಮತ್ತು ಹುಬ್ಬಳ್ಳಿ ನಡುವಿನ ವಿಶೇಷ ರೈಲು (07340)

ಬೆಂಗಳೂರು-ಹುಬ್ಬಳ್ಳಿ- ಮೈಸೂರು ರೈಲು ಏಪ್ರಿಲ್ 6 ಮತ್ತು 7 ರಂದು ಸ್ಥಗಿತ Read More »

ಮುಕ್ತಾಯದ ಹಂತದಲ್ಲಿ ಪಿಯುಸಿ ಮೌಲ್ಯಮಾಪನ/ ಫಲಿತಾಂಶ ಯಾವಾಗ?

ಸಮಗ್ರ ನ್ಯೂಸ್: ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯಮಾಪನ ಮುಕ್ತಾಯದ ಹಂತದಲ್ಲಿ ಇದ್ದು, ಫಲಿತಾಂಶ ಇದೇ ತಿಂಗಳ 10ನೇ ತಾರೀಖಿನಂದು ಪ್ರಕಟವಾಗುವ ಸಾಧ್ಯತೆಗಳಿವೆ. ಕಳೆದ ಮಾರ್ಚ್ 1ರಿಂದ 22 ರವರೆಗೆ ರಾಜ್ಯದಲ್ಲಿ 1120 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆದಿದ್ದು, ಒಟ್ಟಾರೆ ಏಳು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮಾ.25 ರಿಂದ ಮೌಲ್ಯಮಾಪನ ಆರಂಭವಾಗಿದ್ದು, ಇದೀಗ ಮುಕ್ತಾಯದ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಕಂಪ್ಯೂಟರೀಕರಣ ಕೂಡ ಆಗಲಿದ್ದು, ಎಲ್ಲವೂ ಅಂದುಕೊಂಡ ಸಮಯಕ್ಕೇ ಮುಕ್ತಾಯವಾದರೆ ಏ.10 ಅಥವಾ ಆಸುಪಾಸಿನ

ಮುಕ್ತಾಯದ ಹಂತದಲ್ಲಿ ಪಿಯುಸಿ ಮೌಲ್ಯಮಾಪನ/ ಫಲಿತಾಂಶ ಯಾವಾಗ? Read More »

ಚುನಾವಣಾ ಪ್ರಚಾರದಿಂದ ಹೆಲಿಕಾಪ್ಟರ್​​ಗಳಿಗೆ ಬೇಡಿಕೆ…ಲಕ್ಷಲಕ್ಷ ಬಾಡಿಗೆ ಕೊಟ್ಟು ನಾಯಕರ ಸುತ್ತಾಟ..!

ಸಮಗ್ರ ನ್ಯೂಸ್: ಲೋಕ ಅಖಾಡಕ್ಕೆ ರಾಜಕೀಯ ನಾಯಕರು ಸಿದ್ದರಾಗಿದ್ದು, ಜಿಲ್ಲೆ ಜಿಲ್ಲೆಗಳಲ್ಲೂ ಸುತ್ತಾಡಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಲ್ಲೂ, ಲಕ್ಷ ಲಕ್ಷ ಬಾಡಿಗೆ ಕೊಟ್ಟು ನಾಯಕರು ಹೆಲಿಕಾಪ್ಟರ್​​ಗಳಲ್ಲಿ ಸವಾರಿ ಮಾಡುತ್ತಿದ್ದಾರೆ. ಮತಬೇಟೆಗೆ ಸುತ್ತಾಡುವ ನಾಯಕರಿಗಾಗಿ ನೂರಾರು ಹೆಲಿಕಾಪ್ಟರ್​ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ.​ ದುಬಾರಿ ಬೆಲೆಯಲ್ಲಿ ಹೆಲಿಕಾಪ್ಟರ್ ಬೆಲೆಗಳಿವೆ. ಈಗಾಗಲೇ 150 ಹೆಲಿಕಾಪ್ಟರ್​ ಹಾಗೂ ಮಿನಿ ವಿಮಾನ ಬುಕ್ ಆಗಿವೆ. ಹೆಲಿಕಾಪ್ಟರ್​​ಗಳ ಬಾಡಿಗೆ ದರದಲ್ಲಿ ಶೇ 20ರಿಂದ 30ರಷ್ಟು ಹೆಚ್ಚಾದರೂ ರಾಜಕೀಯ ನಾಯಕರು ತಲೆಕೆಡಿಸಿಕೊಳ್ಳಲ್ಲ. ಆದರೆ ಹೆಲಿಕಾಪ್ಟರ್ ಬಾಡಿಗೆ ಕೇಳಿದ್ರೆ

ಚುನಾವಣಾ ಪ್ರಚಾರದಿಂದ ಹೆಲಿಕಾಪ್ಟರ್​​ಗಳಿಗೆ ಬೇಡಿಕೆ…ಲಕ್ಷಲಕ್ಷ ಬಾಡಿಗೆ ಕೊಟ್ಟು ನಾಯಕರ ಸುತ್ತಾಟ..! Read More »

ಆಪರೇಷನ್ ಹಸ್ತ: ಇಂದು 30 ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಒಂದ್ಕಡೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದರೆ , ಮತ್ತೊಂದ್ಕಡೆ, ಪ್ರಚಾರ, ಮಾತಿನ ಯುದ್ಧ, ಆಪರೇಷನ್ ಹಸ್ತ ಎಲ್ಲವೂ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಆಪರೇಷನ್ ಹಸ್ತದ ಭರಾಟೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ಚಾಲೆಂಜಿಂಗ್ ಆಗಿ ತೆಗೆದುಕೊಂಡು ಮೈಸೂರಿನಲ್ಲಿ ಮೊನ್ನೆಯಿಂದ ಪ್ರವಾಸ ಕೈಗೊಂಡಿದ್ದರು. ಈಗ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಸೋದರ ವಿ.ರಾಮಸ್ವಾಮಿ ಅವರಿಗೆ ಕಾಂಗ್ರೆಸ್ ಗಾಳ ಹಾಕಿದ್ದು ಇಂದು ​​​​​ರಾಮಸ್ವಾಮಿ ಸೇರಿ 30 ಮುಖಂಡರು BJP

ಆಪರೇಷನ್ ಹಸ್ತ: ಇಂದು 30 ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆ Read More »

ಕುಂದಾಪುರ: ಬೈಕ್ ಲಾರಿ ನಡುವೆ ಅಪಘಾತ| ಸವಾರ ಸಾವು, ಮತ್ತೊಬ್ಬ ಗಂಭೀರ

ಸಮಗ್ರ ನ್ಯೂಸ್‌ : ಬೈಕ್ ಲಾರಿ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿ ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಂಗೊಳ್ಳಿ ಪೋಸ್ಟ್ ಆಫೀಸ್ ಬಳಿ ನಿವಾಸಿ ಅಬ್ದುಲ್ ಖಾದರ್ ಎಂಬುವರ ಮಗ ಮೊಹಮ್ಮದ್ ಕಾಶಿಫ್ (17) ಸಾವನ್ನಪ್ಪಿದವರು. ಗಂಭೀರ ಗಾಯಗೊಂಡವನನ್ನು ಫಾಜ್ಲು ಎಂಬುವರ ಮಗ ಗಂಗೊಳ್ಳಿ ಪೋಸ್ಟ್ ಆಫೀಸ್ ಬಳಿ ನಿವಾಸಿ ಮೊಹಮ್ಮದ್ ಫೈಜ್ (14) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಅಪಘಾತ ನಡೆದಿದ್ದು, ಗಾಯಾಳುವನ್ನು ಕುಂದಾಪುರದ

ಕುಂದಾಪುರ: ಬೈಕ್ ಲಾರಿ ನಡುವೆ ಅಪಘಾತ| ಸವಾರ ಸಾವು, ಮತ್ತೊಬ್ಬ ಗಂಭೀರ Read More »

ಗೂಂಡಾ ಪದಬಳಕೆ/ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಗೂಂಡಾ ಪದಬಳಕೆ ಮಾಡಿದ್ದ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದ್ದಾರೆ. ಈ ಕುರಿತು ಅಮಿತ್ ಷಾ ವಿರುದ್ಧ ಗೂಂಡ ಹೇಳಿಕೆ ಹೇಳಿದ್ದಕ್ಕೆ ನೊಟೀಸ್ ಕೊಡಿಸಿದ್ದಾರೆ. ಯತೀಂದ್ರಗೆ ನೊಟೀಸ್ ಕೊಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸಚಿವ ಕೆ ವೆಂಕಟೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚಿಗೆ ಯತಿಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ಗೂಂಡಾ

ಗೂಂಡಾ ಪದಬಳಕೆ/ ಡಾ. ಯತೀಂದ್ರ ಸಿದ್ದರಾಮಯ್ಯಗೆ ಚುನಾವಣಾ ಆಯೋಗ ನೊಟೀಸ್ Read More »

ನಾಳೆ ರಾಜ್ಯಕ್ಕೆ ಅಮಿತ್ ಶಾ/ ಚನ್ನಪಟ್ಟಣದಲ್ಲಿ ರೋಡ್ ಶೋ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತುಕತೆ ನಡೆಸಲಿದ್ದಾರೆ.ಬೆಳಗ್ಗೆ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಈ ಭೇಟಿ ನಡೆಯಲಿದ್ದು, ಲೋಕಸಭೆ ಚುನಾವಣೆ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ನಮ್ಮಲ್ಲಿರುವ ಮಾಹಿತಿಯನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಜ್ಯದ 28 ಕ್ಷೇತ್ರಗಳನ್ನು ನಮ್ಮ ಮೈತ್ರಿಕೂಟ ಗೆಲ್ಲಬೇಕು. ಯಾವುದೇ ಕ್ಷೇತ್ರದಲ್ಲಿಯೂ ಸಮಸ್ಯೆ ಆಗಬಾರದು. ಹೊಂದಾಣಿಕೆಗೆ ಧಕ್ಕೆ ಆಗಬಾರದು, ಗುರಿ ತಲುಪಲು ಯಾವ

ನಾಳೆ ರಾಜ್ಯಕ್ಕೆ ಅಮಿತ್ ಶಾ/ ಚನ್ನಪಟ್ಟಣದಲ್ಲಿ ರೋಡ್ ಶೋ Read More »