ಕಾಸರಗೋಡು: ಕಬ್ಬಿಣದ ರಾಡ್ ನಿಂದ ಹೊಡೆದು ತಂದೆಯನ್ನೇ ಕೊಂದ ಪಾಪಿ ಮಗ

ಸಮಗ್ರ ನ್ಯೂಸ್‌ : ಕಬ್ಬಿಣದ ರಾಡ್ ನಿಂದ ಹೊಡೆದು ತನ್ನ ತಂದೆಯನ್ನೇ ಕೊಲೆ ಮಾಡಿದ ಘಟನೆ ಕಾಸರಗೋಡಿನ ಪಳ್ಳಿ ಕೆರೆ ಎಂಬಲ್ಲಿ ನಡೆದಿದೆ.

. Ad Widget . Ad Widget

ಪಳ್ಳಿ ಕೆರೆ ಥಿಯೇಟರ್ ಸಮೀಪದ ಅಪ್ಪು ಕುಂಞಿ(65) ಕೊಲೆಯಾದ ತಂದೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪುತ್ರ ಪ್ರಮೋದ್ (37)ನನ್ನು ಬೇಕಲ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

. Ad Widget . . Ad Widget . Ad Widget

ಪುತ್ರ ಪ್ರಮೋದ್ ದಿನನಿತ್ಯ ಮನೆಯಲ್ಲಿ ತಂದೆಗೆ ಮಾನಸಿಕ ಹಿಂಸೆ, ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಅಪ್ಪು ಕುಂಞಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಭಾನುವಾರ ಪ್ರಮೋದ್ ತಂದೆಯ ಕೊಲೆಗೆತ್ನಿಸಿದ್ದಾನೆ. ಬಳಿಕ ತಂದೆ ಅಪ್ಪು ಕುಂಞಿ ಪೊಲೀಸರಿಗೆ ಪುನಃ ದೂರು ನೀಡಿದ್ದು, ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ನಂತರ ಸೋಮವಾರ ಸಂಜೆ ಮನೆಗೆ ತಲುಪಿದ ಪುತ್ರ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆದ ಸ್ಥಳದಲ್ಲೇ ಅಪ್ಪು ಕುಂಞಿಅವರು ಮೃತ ಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *