ರಾಜ್ಯ

ರಾಜ್ಯ ಸರ್ಕಾರಕ್ಕೆ ಕೇಂದ್ರ ಪುರಸ್ಕಾರ| ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ ಗೆ ರಾಜ್ಯ ಭಾಜನ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ‌ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ಗೆ ರಾಜ್ಯ ಭಾಜನವಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ಗೆ ರಾಜ್ಯ ಭಾಜನವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಕರ್ನಾಟಕವು ಪಾರದರ್ಶಕ, ಜನಸ್ನೇಹಿ ಆಡಳಿತಕ್ಕೆ ಇಡೀ ದೇಶಕ್ಕೆ ಮಾದರಿ ರಾಜ್ಯ. ಈ ಪ್ರಶಸ್ತಿಯು […]

ರಾಜ್ಯ ಸರ್ಕಾರಕ್ಕೆ ಕೇಂದ್ರ ಪುರಸ್ಕಾರ| ‘ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ’ ಗೆ ರಾಜ್ಯ ಭಾಜನ Read More »

ಪೋಕ್ಸೊ ಪ್ರಕರಣ| ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಬಿ.ಎಸ್.ವೈ ಬಚಾವ್

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ. ವಿಶೇಷ ನ್ಯಾಯಾಲಯದ ಸಮನ್ಸ್ ಹಾಗೂ ಕೋರ್ಟ್ ಕಾಗ್ನಿಜೆನ್ಸ್ ರದ್ದು ಮಾಡುವಂತೆ ಕೋರಿ ಬಿಎಸ್‍ವೈ ಮತ್ತು ಇತರ ಮೂವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಏಕಸದಸ್ಯ ಪೀಠ ಸಮನ್ಸ್ ಆದೇಶಕ್ಕೆ ತಡೆ ನೀಡಿದೆ. ಮುಂದಿನ ವಿಚಾರಣೆಯವರೆಗೂ ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗೆ ಹಾಜರಾತಿಗೆ ವಿನಾಯಿತಿ ನೀಡಲಾಗಿದೆ. ಈ

ಪೋಕ್ಸೊ ಪ್ರಕರಣ| ನ್ಯಾಯಾಲಯಕ್ಕೆ ಖುದ್ದು ಹಾಜರಾಗುವುದರಿಂದ ಬಿ.ಎಸ್.ವೈ ಬಚಾವ್ Read More »

ಕರಾವಳಿಯನ್ನು ಕಡೆಗಣಿಸಿದ್ರೆ ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುತ್ತೇವೆ| ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜಾ ಆಕ್ರೋಶ

ಸಮಗ್ರ ನ್ಯೂಸ್ : ಕರಾವಳಿ ಅಭಿವೃದ್ಧಿ ಕಡೆಗಣಿಸಿದ್ರೆ ನಾವು ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುವ ವ್ಯವಸ್ಥೆ ತರಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ಈ ಕೂಗೆಬ್ಬಿಸಿದ್ದಾರೆ. ವಿಧಾನಸಭೆಯಲ್ಲಿ 69 ನಿಯಮದಡಿಯಲ್ಲಿ ಕರಾವಳಿ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಇಂದು ಚರ್ಚೆ ನಡೆಯಿತು. ಈ ವೇಳೆ ಸುನಿಲ್ ಕುಮಾರ್ ಮಾತನಾಡಿ, ಸದನದಲ್ಲಿ ಉತ್ತರ ಕರ್ನಾಟಕ, ಬೆಂಗಳೂರು ಬಗ್ಗೆ ಚರ್ಚೆ ಆಗುತ್ತದೆ. ಆದರೆ ಕರಾವಳಿ ಬಗ್ಗೆ ಯಾವತ್ತೂ ಚರ್ಚೆಗಳು ನಡೆದಿಲ್ಲ. ಟೆಂಪಲ್ ಟೂರಿಸಂ ವಿಚಾರವಾಗಿ ಕರಾವಳಿಯನ್ನು ಅಭಿವೃದ್ಧಿ ಪಡಿಸಬೇಕು. 330 ಕಿ.ಮೀ

ಕರಾವಳಿಯನ್ನು ಕಡೆಗಣಿಸಿದ್ರೆ ಪ್ರತ್ಯೇಕ ವಿಧಾನಸೌಧ ಕಟ್ಟಿಸಿಕೊಂಡು ಮಾತಾಡುತ್ತೇವೆ| ವಿಧಾನ ಮಂಡಲ ಅಧಿವೇಶನದಲ್ಲಿ ಶಾಸಕ ಹರೀಶ್ ಪೂಂಜಾ ಆಕ್ರೋಶ Read More »

ವಿಜ್ಞಾನಿಗಳಿಂದ‌ ಭರ್ಜರಿ ಆವಿಷ್ಕಾರ| ಕೇವಲ‌ 4 ಗಂಟೆಗಳಲ್ಲಿ ಗಾಯ‌ ವಾಸಿಯಾಗಬಲ್ಲ ಹೈಡ್ರೋಜೆಲ್ ಅಭಿವೃದ್ಧಿ

ಸಮಗ್ರ ನ್ಯೂಸ್: ವಿಜ್ಞಾನಿಗಳು ಚರ್ಮದಂತಹ ಹೈಡ್ರೋಜೆಲ್ ರಚಿಸಿದ್ದಾರೆ. ಇದು 4 ಗಂಟೆಗಳಲ್ಲಿ 90% ಗಾಯಗಳನ್ನು ಸಂಪೂರ್ಣವಾಗಿ ಗುಣಪಡಿಸುತ್ತದೆ.ರೋಮಾಂಚಕಾರಿ ವೈಜ್ಞಾನಿಕ ಆವಿಷ್ಕಾರ ಇದಾಗಿದ್ದು, ಆಲ್ಟೊ ವಿಶ್ವವಿದ್ಯಾಲಯ ಮತ್ತು ಬೇರೂತ್ ವಿಶ್ವವಿದ್ಯಾಲಯದ ಸಂಶೋಧಕರು ಮಾನವ ಚರ್ಮದ ಗುಣಗಳನ್ನು ಅನುಕರಿಸುವ ಕ್ರಾಂತಿಕಾರಿ ಸ್ವಯಂ-ಗುಣಪಡಿಸುವ ಹೈಡ್ರೋಜೆಲ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ನವೀನ ವಸ್ತುವು ಕೇವಲ ನಾಲ್ಕು ಗಂಟೆಗಳಲ್ಲಿ 90% ವರೆಗೆ ತನ್ನನ್ನು ತಾನೇ ಸರಿಪಡಿಸಿಕೊಳ್ಳಬಹುದು ಮತ್ತು 24 ಗಂಟೆಗಳಲ್ಲಿ ಸಂಪೂರ್ಣವಾಗಿ ಗಾಯ ವಾಸಿ ಮಾಡಬಹುದು. ಇದು ಗಾಯದ ಆರೈಕೆ, ಪುನರುತ್ಪಾದಕ ಔಷಧ ಮತ್ತು

ವಿಜ್ಞಾನಿಗಳಿಂದ‌ ಭರ್ಜರಿ ಆವಿಷ್ಕಾರ| ಕೇವಲ‌ 4 ಗಂಟೆಗಳಲ್ಲಿ ಗಾಯ‌ ವಾಸಿಯಾಗಬಲ್ಲ ಹೈಡ್ರೋಜೆಲ್ ಅಭಿವೃದ್ಧಿ Read More »

ಮುಸ್ಲಿಮರಿಗೆ ಸಿಎಂರಿಂದ ಭರ್ಜರಿ ಗಿಫ್ಟ್? ಮೀಸಲಾತಿ ಶೇ.4 ರಿಂದ 10% ಏರಿಕೆ ಆಗುತ್ತಾ?

ಸಮಗ್ರ ನ್ಯೂಸ್: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಓಲೈಕೆ ಸರ್ಕಾರ ಎಂದು ಪ್ರತಿಪಕ್ಷಗಳು ಟೀಕಿಸುತ್ತಲೇ ಇದೆ. ಈಗ ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗುವ ಸುಳಿವನ್ನು ನೀಡಿದೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಯಲ್ಲಿ ಶೇ 4 ರ ಮೀಸಲಾತಿ ಘೋಷಣೆಯಾದ ಬೆನ್ನಲ್ಲೇ ಇದೀಗ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 10ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಸಂಬಂಧ ಕ್ರಮ ವಹಿಸುವಂತೆ ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮೀಸಲಾತಿಯನ್ನು ಶೇ 10ಕ್ಕೆ ಹೆಚ್ಚಿಸುವಂತೆ ಸಿಎಂ

ಮುಸ್ಲಿಮರಿಗೆ ಸಿಎಂರಿಂದ ಭರ್ಜರಿ ಗಿಫ್ಟ್? ಮೀಸಲಾತಿ ಶೇ.4 ರಿಂದ 10% ಏರಿಕೆ ಆಗುತ್ತಾ? Read More »

ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು: ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿಯಲ್ಲಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ದಾರುಣವಾಗಿ ಸಾವಿಗೀಡಾಗಿರುವ ಘಟನೆ ಕೆ.ಆರ್. ಮಾರ್ಕೆಟ್ ರಸ್ತೆಯ ಆನಂದಪುರದಲ್ಲಿ ನಡೆದಿದೆ. ಸೆಲ್ವಿ ಮೃತ ಮಹಿಳೆ. ಇಲ್ಲಿರುವ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್‌ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನೀಡಲಾಗಿದೆ. ಮೃತ ಸೆಲ್ವಿ ಇಂದು ಬೆಳಗ್ಗೆ 5:30ರ ಸುಮಾರಿಗೆ ಮೋಟರ್ ಸ್ಟಾರ್ಟ್ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆ ನಡೆಸಿ

ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು: ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ Read More »

ಚಿಕ್ಕಮಗಳೂರು:ಮಾರ್ಚ್ 15 ರಿಂದ 17 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲಾಡಳಿತವು ಪ್ರವಾಸಿಗರ ಪ್ರವೇಶವನ್ನು ಮಾರ್ಚ್ 15 ರಿಂದ 17 ರವರೆಗೆ ತಾತ್ಕಾಲಿಕವಾಗಿ ನಿರ್ಬಂಧನೆಯನ್ನು ಹೊರಡಿಸಿದೆ. ಈ ನಿರ್ಬಂಧವು ಚಂದ್ರದ್ರೋಣ ಪರ್ವತ ಸರಣಿಯ ಪ್ರಮುಖ ಪ್ರವಾಸಿ ತಾಣಗಳಾದ ದತ್ತಪೀಠ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಧಾರಾ ಮತ್ತು ಝರಿಫಾಲ್ಸ್ ಗೆ ಅನ್ವಯಿಸುತ್ತದೆ. ದತ್ತಪೀಠದಲ್ಲಿ ನಡೆಯಲಿರುವ ಉರುಸ್ ಹಬ್ಬದ ಹಿನ್ನೆಲೆಯಲ್ಲಿ ಭಕ್ತಾದಿಗಳ ಹೆಚ್ಚಿನ ಸಂಖ್ಯೆಯ ನಿರೀಕ್ಷೆಯಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಗಿರಿಸಾಲೆಯ ಹೊಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಈಗಾಗಲೇ ಬುಕ್ಕಿಂಗ್ ಮಾಡಿರುವ

ಚಿಕ್ಕಮಗಳೂರು:ಮಾರ್ಚ್ 15 ರಿಂದ 17 ರವರೆಗೆ ಪ್ರವಾಸಿಗರ ಪ್ರವೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ Read More »

ಮಾರ್ಚ್ ಅಂತ್ಯದ ವೇಳೆಗೆ ಮಂಗಳೂರು – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಚಾಲನೆ – ಸಂಸದ ಚೌಟ

ಸಮಗ್ರ ನ್ಯೂಸ್: ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಮಂಜೂರಾತಿ ನೀಡಿದ್ದು, ಮಾರ್ಚ್‌ ಅಂತ್ಯದೊಳಗೆ ಇದಕ್ಕೆ ಚಾಲನೆ ನೀಡುವರು ಎಂದು ಸಂಸದ ಕ್ಯಾ|ಬ್ರಿಜೇಶ್‌ ಚೌಟ ತಿಳಿಸಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಸಂಸದರು, ಒಂದು ದಶಕದ ಬೇಡಿಕೆ ಇದು ಎಂದು ವಿವರಿಸಿದ್ದಾರೆ. ಈ ರೈಲಿಗೆ ಹಸಿರು ನಿಶಾನೆ ತೋರುವ ಬಗ್ಗೆ ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಿದ್ದು, ಉದ್ಘಾಟನೆಗೆ ಸಮಯ ನಿಗದಿಯಾಗಲಿದೆ. ಬಳಿಕ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಈ ರೈಲು

ಮಾರ್ಚ್ ಅಂತ್ಯದ ವೇಳೆಗೆ ಮಂಗಳೂರು – ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಚಾಲನೆ – ಸಂಸದ ಚೌಟ Read More »

ಲಾಂಚ್ ಪ್ಯಾಡ್ ನಲ್ಲಿ ಸಮಸ್ಯೆ| ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಇನ್ನಷ್ಟು ‌ತಡ!

ಸಮಗ್ರ ನ್ಯೂಸ್: ನಾಸಾದಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಗನಯಾತ್ರಿಗಳನ್ನು ಭೂಮಿಗೆ ಕಳುಹಿಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಬೇಕಿದ್ದ ಸ್ಪೇಸ್ ಎಕ್ಸ್ ಉಡಾವಣಾ ಪ್ಯಾಡ್ ಸಮಸ್ಯೆಯಿಂದಾಗಿ ಹಾರಾಟ ವಿಳಂಬವಾಗಿದೆ. ಬಾಹ್ಯಾಕಾಶ ಕಕ್ಷೆಯಲ್ಲಿ ಕಳೆದ 9 ತಿಂಗಳಿನಿಂದ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಭೂಮಿಗೆ ಮರಳಬೇಕಾದರೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊಸ ಗಗನಯಾತ್ರಿಗಳು ಹೋಗಬೇಕಾಗಿದೆ. ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಫಾಲ್ಕನ್ ರಾಕೆಟ್‌ನ ಯೋಜಿತ ಉಡಾವಣೆ ನಿನ್ನೆ ಸಂಜೆ ನಿಗದಿಯಾಗಿತ್ತು. ಆದರೆ ಅದಕ್ಕೆ ನಾಲ್ಕು ಗಂಟೆ ಮೊದಲು

ಲಾಂಚ್ ಪ್ಯಾಡ್ ನಲ್ಲಿ ಸಮಸ್ಯೆ| ಸುನಿತಾ ವಿಲಿಯಮ್ಸ್ ಭೂಮಿಗೆ ಬರೋದು ಇನ್ನಷ್ಟು ‌ತಡ! Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಬಿಸಿಲಿನಿಂದ ಕಂಗಾಲಾಗಿದ್ದ ಕರ್ನಾಟಕದ ಜನರಿಗೆ ಗುಡ್‌ನ್ಯೂಸ್‌. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಕರಾವಳಿ ವ್ಯಾಪ್ತಿಯ ನೈಋುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ವಾಯುಭಾರ ಕುಸಿತದ ಪ್ರಭಾವ ಬೆಂಗಳೂರು ಹಾಗೂ ಕರ್ನಾಟಕದ ಮೇಲೂ ಆಗುತ್ತಿದ್ದು, ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭರ್ಜರಿ ಮಳೆಯಾಗುವ ನಿರೀಕ್ಷೆ ಇದೆ. ದೇಶದಲ್ಲಿ ಏಕಕಾಲಕ್ಕೆ ಎರಡು ಚಂಡಮಾರುತಗಳು ಕಾಣಿಸಿಕೊಂಡಿದ್ದು, ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯದಲ್ಲಿ ಮೂರು ದಿನ ಮಳೆ ಸಾಧ್ಯತೆ Read More »