ರಾಜ್ಯ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ| ಹಲವೆಡೆ ಅವಘಡ, ವಿದ್ಯುತ್ ವ್ಯತ್ಯಯ

ಸಮಗ್ರ ನ್ಯೂಸ್: ಉರಿ ಬಿಸಿಲು, ವಿಪರೀತ ತಾಪಮಾನದಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಆದರೆ ಒಂದೇ ಬಾರಿಗೆ ಭಾರಿಗೆ ಬಿರಾಗಾಳಿ ಸಹಿತ ಮಳೆಯಿಂದ ಹಲವು ಅವಾಂತರಗಳು ಸೃಷ್ಟಿಯಾಗಿದೆ. ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗಿದೆ. ಗುಡುಗು, ಬಿರುಗಾಳಿ ಸಹಿತ ಮಳೆಗೆ ಹಲವು ಮರಗಳು ಧರೆಗುರುಳಿದೆ. ವಿದ್ಯುತ್ ಕಂಬಗಳು ಧರೆಗುಳಿ ಹಲವು ತಾಲೂಕುಗಳು ಕತ್ತಲಲ್ಲಿ ಮುಳುಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕು ಸೇರಿದಂತೆ […]

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ| ಹಲವೆಡೆ ಅವಘಡ, ವಿದ್ಯುತ್ ವ್ಯತ್ಯಯ Read More »

ದರ್ಶನ್ – ಸುಮಲತಾ ಅಂಬರೀಷ್ ಮಧ್ಯೆ ಬಿರುಕು? ಸುಮಲತಾರನ್ನ ಅನ್‌ಫಾಲೋ ಮಾಡಿದ ಡಿ-ಬಾಸ್

ಸಮಗ್ರ ನ್ಯೂಸ್: ಸುಮಲತಾ ಅಂಬರೀಷ್ ಹಾಗೂ ದರ್ಶನ್ ಮಧ್ಯೆ ಈ ಹಿಂದೆಯಿಂದ್ಲು ಒಳ್ಳೆಯ ಬಾಂಧವ್ಯ ಇತ್ತು. ಅಷ್ಟೇ ಅಲ್ಲದೆ ದರ್ಶನ್ ನಾ ಮಗ ಎಂದು ಸುಮಲತಾ ಪರಿಗಣಿಸಿದ್ದರು. ದರ್ಶನ್ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ದರ್ಶನ್ ಅವರು ಹೊರ ಬರುತ್ತಿದ್ದಂತೆ ‘ಅವನು ಯಾವಾಗಲೂ ನನ್ನ ಮಗ’ ಎಂದಿದ್ದರು. ಆದರೆ, ಇತ್ತೀಚಿಗಿನ ಬೆಳವಣಿಗೆ ಸಾಕಷ್ಟು ಅನುಮಾನಗಳನ್ನು ಎಡೆಮಾಡಿಕೊಟ್ಟಿದೆ. ಹೌದು ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇಷ್ಟು ದಿನ ಕೆಲವೇ ಕೆಲವರನ್ನು ಫಾಲೋ ಮಾಡುತ್ತಾ ಇದ್ದರು. ಆ ಪೈಕಿ

ದರ್ಶನ್ – ಸುಮಲತಾ ಅಂಬರೀಷ್ ಮಧ್ಯೆ ಬಿರುಕು? ಸುಮಲತಾರನ್ನ ಅನ್‌ಫಾಲೋ ಮಾಡಿದ ಡಿ-ಬಾಸ್ Read More »

ಮಗನಿಗೆ ಹೆಚ್‌ಐವಿ ಸೋಂಕುತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮೃತ ಭರತ್ ಹೆಚ್‌ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಇದೀಗ ಬಹಿರಂಗಪಡಿಸಿದ್ದಾರೆ. ಪತ್ನಿ ಕುಟುಂಬಸ್ಥರು ಭರತ್‌ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್‌ಐವಿ ಸೋಂಕಿತನಾಗಿದ್ದ. ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು

ಮಗನಿಗೆ ಹೆಚ್‌ಐವಿ ಸೋಂಕುತಾಯಿ-ಮಗ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ Read More »

ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ| ಆತಂಕದ ವಾತಾವರಣ ಸೃಷ್ಟಿ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮಡಿಕೇರಿ ತಾಲೂಕಿನ ಮದೆನಾಡು, 2ನೇ ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಭೂಕಂಪನ ಅನುಭವವಾಗಿದೆ. ಬೆಳಗ್ಗೆ 10.50 ರ ಸುಮಾರಿಗೆ ತೀರಾ ಸಣ್ಣ ಪ್ರಮಾಣದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ, ಈ ವಿಚಾರದ ಬಗ್ಗೆ ಭೂ ವಿಜ್ಞಾನಿಗಳಿಗೆ ಮಾಹಿತಿ ನೀಡಲು ಗ್ರಾಮ ಪಂಚಾಯತ್ ಅಧಿಕಾರಿಗಳು ಮುಂದಾಗಿದ್ದಾರೆ. ಅದೃಷ್ಟವಶಾತ್‌ ಯಾವುದೇ ರೀತಿಯ ಹಾನಿ ಹಾಗೂ ಸಾವು-ನೋವು ಸಂಭವಿಸಿಲ್ಲ. ಭೂಮಿ ಕಂಪಿಸಲು ಕಾರಣಗಳೇನು ಎಂಬುದನ್ನು

ಕೊಡಗು ಜಿಲ್ಲೆಯ ಹಲವೆಡೆ ಕಂಪಿಸಿದ ಭೂಮಿ| ಆತಂಕದ ವಾತಾವರಣ ಸೃಷ್ಟಿ Read More »

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಫೆ.11ರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆಯ ಅವಧಿಯಲ್ಲಿ ಸುಳ್ಯದಲ್ಲಿ ರಾಜ್ಯದಲ್ಲೇ ಅತ್ಯಧಿಕ 41.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆಗಳಲ್ಲಿ ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆ 38 ಡಿ.ಸೆ.ಗೂ ಅಧಿಕ ತಾಪಮಾನ ಉಂಟಾಗಿದೆ. ಉತ್ತರ ಕನ್ನಡ ಜಿಲ್ಲೆಯ 10 ಕಡೆಗಳಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಎರಡು ಕಡೆ ಮತ್ತು ಉಡುಪಿ

ಹವಾಮಾನ ವರದಿ| ಕರಾವಳಿಯಲ್ಲಿ ಮತ್ತೆ ‘ಹೀಟ್ ವೇವ್’ ಆತಂಕ| ಸುಳ್ಯದಲ್ಲಿ ‌ದಾಖಲೆಯ 41.4° ಡಿಗ್ರಿ ಉಷ್ಣಾಂಶ ದಾಖಲು Read More »

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ

ಸಮಗ್ರ ನ್ಯೂಸ್: ಕುದುರೆಮುಖ ವನ್ಯಜೀವಿ ವಿಭಾಗದ ನೇತ್ರಾವತಿ‌ ಪೀಕ್ ಕೆಳಭಾಗದಲ್ಲಿ ಸಾವಿರಾರು ಎಕ್ರೆ ಪ್ರದೇಶಕ್ಕೆ ಕಾಡ್ಗಿಚ್ಚು ಹಬ್ಬಿದ್ದು ಕಳೆದ ಎರಡು ದಿನಗಳಿಂದ ಅರಣ್ಯ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದೆ. ಕಡಿದಾದ ಪ್ರದೇಶಕ್ಕೆ ತೆರಳಲು ಸಾಧ್ಯವಾಗದೇ ಇರುವುದರಿಂದ ಬೆಂಕಿ ಕೆನ್ನಾಲಿಗೆ ಸುಮಾರು 50 ಕಿ.ಮೀ.ದೂರದ ಬೆಳ್ತಂಗಡಿ ವರೆಗೆ ನೇರವಾಗಿ ಗೋಚರಿಸುತ್ತಿದೆ. ವನ್ಯಜೀವಿ‌ ವಿಭಾಗದ ಸಾಕಷ್ಟು ಮರಗಿಡ, ಹುಲ್ಲು, ಪ್ರಾಣಿಗಳು ಬಲಿಯಾಗಿರುವ ಆತಂಕ ಎದುರಾಗಿದೆ.

ನೇತ್ರಾವತಿ ಪೀಕ್ ಕೆಳಭಾಗದಲ್ಲಿ ಕಾಳ್ಗಿಚ್ಚು| ಎರಡು ದಿನಗಳಿಂದ ಉರಿಯುತ್ತಿರುವ ಬೆಂಕಿಗೆ ನೂರಾರು ಎಕ್ರೆ ಅರಣ್ಯ ನಾಶ Read More »

ಬಿರುಬಿಸಿಲಿನ‌ ನಡುವೆ ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರು ನಗರದ ಹಲವೆಡೆ ದಿಢೀರ್​ ಮಳೆಯಾಗಿದೆ. ಇಂದು (ಮಾರ್ಚ್ 11) ಸಂಜೆ ಶಾಂತಿನಗರ, ಕಾರ್ಪೊರೇಷನ್​, ರಿಚ್ಮಂಡ್​ ಸರ್ಕಲ್, ಕೆ.ಆರ್.ಮಾರ್ಕೆಟ್​, ಮೆಜೆಸ್ಟಿಕ್​ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿಗರಿಗೆ ವರುಣನ ಸಿಂಚನವಾಗಿದೆ. ಕರ್ನಾಟಕದಲ್ಲಿ ತಾಪಮಾನ ಏರಿಕೆ ನಡುವೆಯೇ ಹವಾಮಾನ ಇಲಾಖೆಯ ಮಳೆಯ ಮುನ್ಸೂಚನೆ ನೀಡಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದೀಗ

ಬಿರುಬಿಸಿಲಿನ‌ ನಡುವೆ ರಾಜಧಾನಿ ಬೆಂಗಳೂರಿನ ಹಲವೆಡೆ ಮಳೆ Read More »

ಪಿಲಿಕುಳ: ಮತ್ತೆರಡು ಮರಿಗಳಿಗೆ ಜನ್ಮ ನೀಡಿದ ರಾಣಿ| ಈಗ ಈಕೆ ಹತ್ತು ಮಕ್ಕಳ ತಾಯಿ

ಸಮಗ್ರ ನ್ಯೂಸ್: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎನ್ನುವ ಹೆಣ್ಣು ಹುಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದು, ಈ ಮೂಲಕ ಇಲ್ಲಿನ ಹುಲಿಗಳ ಸಂಖ್ಯೆ ಹತ್ತಕ್ಕೇರಿದೆ. ಒಂದು ಗಂಡು ಹಾಗೂ ಹೆಣ್ಣು ಮರಿಗಳಾಗಿದ್ದು ಇವು ಆರೋಗ್ಯದಿಂದಿವೆ. ಇದೇ “ರಾಣಿ ಹುಲಿ’ಯು 2016ರಲ್ಲಿ 5 ಮರಿಗಳಿಗೆ ಜನ್ಮನೀಡಿ ದಾಖಲೆ ನಿರ್ಮಿಸಿತ್ತು. 2021 ರಲ್ಲಿ 3 ಮರಿಗಳಿಗೆ ಜನ್ಮ ನೀಡಿದ್ದು, ಒಟ್ಟು ಹತ್ತು ಮಕ್ಕಳ ತಾಯಿ. 2016ರಲ್ಲಿ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟದಿಂದ ರಾಣಿಯನ್ನು ಪಿಲಿಕುಳಕ್ಕೆ ತಂದಿದ್ದು, ಪ್ರತಿಯಾಗಿ ಇಲ್ಲಿನ

ಪಿಲಿಕುಳ: ಮತ್ತೆರಡು ಮರಿಗಳಿಗೆ ಜನ್ಮ ನೀಡಿದ ರಾಣಿ| ಈಗ ಈಕೆ ಹತ್ತು ಮಕ್ಕಳ ತಾಯಿ Read More »

ಪೊಲೀಸರು ಸ್ವಂತ ವಾಹನದ ಮೇಲೆ ‘ಪೊಲೀಸ್’ ಎಂದು ಬರೆಸಿದರೆ ಕಾನೂನು ಉಲ್ಲಂಘನೆ: ಗೃಹ ಸಚಿವ ಪರಮೇಶ್ವರ

ಸಮಗ್ರ ನ್ಯೂಸ್: ಪೊಲೀಸ್ ಇಲಾಖೆಯ ಅಧಿಕಾರಿಗಳು ‌ಹಾಗೂ ಸಿಬ್ಬಂದಿ ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್ ಎಂದು ಬರೆಸುವಂತಿಲ್ಲ. ಒಂದೇ ವೇಳೆ ಬರೆಸಿದ್ದರೇ ಅದು ಕಾನೂನು ಉಲ್ಲಂಘಿಸಿದಂತೆ ಎಂದು ಗೃಹ ಸಚಿವ ಡಾ.‌ಜಿ.ಪರಮೇಶ್ವರ ಸ್ಪಷ್ಟನೆ ನೀಡಿದ್ದಾರೆ. ವಿಧಾನ ಸದನದಲ್ಲಿ ಶ್ರವಣಬೆಳಗೊಳದ ಶಾಸಕ ಬಾಲಕೃಷ್ಣ ಸಿಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 561ಕ್ಕೆ ಲಿಖಿತ ಮೂಲಕ ಸಚಿವ ಡಾ. ಜಿ ಪರಮೇಶ್ವರ್​ ಉತ್ತರ ನೀಡಿದ್ದಾರೆ. ರಾಜ್ಯದ ಪೊಲೀಸ್ ಇಲಾಖೆಯ ಅಧಿಕಾರಿಗಳು ‌ತಮ್ಮ ಸ್ವಂತ ವಾಹನದ ಮೇಲೆ ಪೊಲೀಸ್

ಪೊಲೀಸರು ಸ್ವಂತ ವಾಹನದ ಮೇಲೆ ‘ಪೊಲೀಸ್’ ಎಂದು ಬರೆಸಿದರೆ ಕಾನೂನು ಉಲ್ಲಂಘನೆ: ಗೃಹ ಸಚಿವ ಪರಮೇಶ್ವರ Read More »

ಹವಾಮಾನ ವರದಿ| ನಾಳೆಯಿಂದ‌ ರಾಜಧಾನಿ ಬೆಂಗಳೂರು ಸೇರಿದಂತೆ ‌ರಾಜ್ಯದ‌ ಹಲವಡೆ‌ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರ್ಚ್ 11 ರಿಂದ ಮುಂಗಾರು ಪೂರ್ವ ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಮಾರ್ಚ್ ನಿಂದ ಮೇ ವರೆಗೆ ಮುಂಗಾರು ಪೂರ್ವ ಮಳೆಯ ಅವಧಿಯಾಗಿದ್ದು, ಈ ಅವಧಿಯಲ್ಲಿ ಬಿಸಿಲಿನ ತಾಪಕ್ಕೆ ಮಳೆಯಾಗಲಿದೆ. ಮಾರ್ಚ್ 12 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾರ್ಚ್ 12 ರಿಂದ 14 ರವರೆಗೆ ಮೂರು

ಹವಾಮಾನ ವರದಿ| ನಾಳೆಯಿಂದ‌ ರಾಜಧಾನಿ ಬೆಂಗಳೂರು ಸೇರಿದಂತೆ ‌ರಾಜ್ಯದ‌ ಹಲವಡೆ‌ ಮಳೆ ಮುನ್ಸೂಚನೆ Read More »