ರಾಜ್ಯ

ಹವಾಮಾನ ವರದಿ| ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಕರಾವಳಿ, ಮಲೆನಾಡು, ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು, ಮಿಂಚು, ಬಿರುಗಾಳಿ ಹಾಗೂ ತೀವ್ರ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. IMD ಪ್ರಕಾರ, ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ಜೊತೆಗೆ, ಗಾಳಿಯ ವೇಗ ಗಂಟೆಗೆ […]

ಹವಾಮಾನ ವರದಿ| ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಮಳೆ ಸಾಧ್ಯತೆ Read More »

ಸೌಜನ್ಯ ‌ಅತ್ಯಾಚಾರ ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಆಗ್ರಹಿಸಿ ‘ಧರ್ಮಸ್ಥಳ ಚಲೋ’ಗೆ ನಿರ್ಣಯ

ಸಮಗ್ರ ನ್ಯೂಸ್: ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹಾಗೂ ತಪ್ಪಿತಸ್ಥರ ಶಿಕ್ಷೆಗೆ ಆಗ್ರಹಿಸಿ ಧರ್ಮಸ್ಥಳ ಚಲೊ ನಡೆಸಬೇಕು ಎಂಬ ನಿರ್ಣಯವನ್ನು ಸಮಾನ ಮನಸ್ಕರ ಸಭೆ ಕೈಗೊಂಡಿದೆ. ಈ ಪ್ರಕರಣದಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಚಿಂತಕರು, ರಂಗಕರ್ಮಿಗಳು ಹಾಗೂ ಹೋರಾಟಗಾರರು ಭಾಗವಹಿಸಿದ್ದರು. ಪ್ರಕರಣದ ಬಗ್ಗೆ ಚರ್ಚಿಸಿದ ಅವರು, ‘ಪಾದಯಾತ್ರೆ ಅಥವಾ ಬೈಕ್ ರ್‍ಯಾಲಿ ನಡೆಸಬೇಕು. ಧರ್ಮಸ್ಥಳದಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಬೇಕು. ಅದಕ್ಕೂ ಮೊದಲು ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಬೇಕು’

ಸೌಜನ್ಯ ‌ಅತ್ಯಾಚಾರ ಮತ್ತು ಕೊಲೆ ಪ್ರಕರಣ| ನ್ಯಾಯಕ್ಕಾಗಿ ಆಗ್ರಹಿಸಿ ‘ಧರ್ಮಸ್ಥಳ ಚಲೋ’ಗೆ ನಿರ್ಣಯ Read More »

ದಿ. ಸೌಜನ್ಯಳ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲು ಹೈಕೋರ್ಟ್ ಅಸ್ತು

ಸಮಗ್ರ ನ್ಯೂಸ್: ಕಳೆದ 13 ವರ್ಷಗಳ‌ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ‌ ಗ್ರಾಮದ ನೇತ್ರಾವತಿ ಸ್ನಾನಘಟ್ಟ ಬಳಿ ಅತ್ಯಾಚಾರಗೈದು ಕೊಲೆಯಾಗಿ ಹೋದ ವಿದ್ಯಾರ್ಥಿನಿ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ಶಾಂತಿಯುತ ಧರಣಿ, ಪ್ರತಿಭಟನೆ ನಡೆಸಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ. ಮಾ.18 ರಂದು ಸಂಜೆ 5.30 ಕ್ಕೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆ ನಿಲ್ಲಿಸುವಂತೆ ಶೇಷಾದ್ರಿಪುರಂ ಪೊಲೀಸರು ನೀಡಿದ್ದ ನೋಟಿಸ್‌ ರಿಟ್‌ ಅರ್ಜಿ ವಿಚೃಣೆ ಮಾಡಿದ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಆದೇಶ ನೀಡಿದ್ದಾರೆ.

ದಿ. ಸೌಜನ್ಯಳ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲು ಹೈಕೋರ್ಟ್ ಅಸ್ತು Read More »

ರಾಜ್ಯದಲ್ಲಿ ಖೋಟಾನೋಟು ಜಾಲ ಬಯಲಿಗೆ| ಪೊಲೀಸ್ ಸಿಬ್ಬಂದಿಯೇ ಕೃತ್ಯದಲ್ಲಿ ಭಾಗಿ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಖೋಟಾ ನೋಟುಗಳು ಜಾಲ ಹೆಚ್ಚಾಗುತ್ತಲೇ ಇದ್ದು, ಇದೀಗ ರಾಯಚೂರಿನಲ್ಲಿ ಸಕ್ರಿಯವಾಗಿ ತೊಡಗಿದ್ದ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಓರ್ವ ಪಿಸಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಯಚೂರಿನ ಪಶ್ಚಿಮ ಠಾಣೆ ವ್ಯಾಪ್ತಿಯಲ್ಲಿ ಖೋಟಾ ನೋಟು ಮುದ್ರಿಸಲಾಗುತ್ತಿದೆ ಎಂದು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದು, ಈ ವೇಳೆ ಲಕ್ಷಾಂತರ ಮೌಲ್ಯದ ಖೋಟಾ ನೋಟು ಹಾಗೂ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಬಿಳಿ ಬಣ್ಣದ ಪೇಪರ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ.

ರಾಜ್ಯದಲ್ಲಿ ಖೋಟಾನೋಟು ಜಾಲ ಬಯಲಿಗೆ| ಪೊಲೀಸ್ ಸಿಬ್ಬಂದಿಯೇ ಕೃತ್ಯದಲ್ಲಿ ಭಾಗಿ Read More »

ಹೊಸಕೋಟೆ: ಮಗುವಿನ ಮುಂದೆ ವ್ಯಕ್ತಿಯೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ಹೊಸಕೋಟೆಯಲ್ಲಿ ನಡೆದಿದೆ. ಹಲ್ಲೆಯ ದೃಶ್ಯಗಳನ್ನು ಸೆರೆಹಿಡಿಯಾಗಿದ್ದು, ಇದೀಗ ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಹೊಸಕೋಟೆಯಲ್ಲಿ ಲತಾ ಯಾದವ್ ಎಂಬ ಮಹಿಳೆಯ ಮನೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಅವಮಾನಿಸಲಾಗಿದೆ. ಚಂದನ, ಭರತ್, ಶಿವು ಮತ್ತು ಇತರರು ಸೇರಿದಂತೆ ಆಕೆಯ ಕುಟುಂಬ ಸದಸ್ಯರು ಹಲ್ಲೆಯಲ್ಲಿ ಭಾಗಿಯಾಗಿರುವುದು ವಿಡಿಯೋದಲ್ಲಿ ಕಾಣಸಿಗುತ್ತದೆ. ವ್ಯಕ್ತಿಗೆ ದೈಹಿಕ ಹಿಂಸೆ, ಅವಮಾನ ಮತ್ತು ಮಾನಸಿಕ ಕಿರುಕುಳ ನೀಡಲಾಗಿದೆ ಎಂದು

ಹೊಸಕೋಟೆ: ಮಗುವಿನ ಮುಂದೆ ವ್ಯಕ್ತಿಯೊಬ್ಬರ ಮೇಲೆ ಅಮಾನವೀಯವಾಗಿ ಹಲ್ಲೆ Read More »

ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಪ್ರದೀಪ್ ಈಶ್ವರ್

ಸಮಗ್ರ ನ್ಯೂಸ್: ಕಾಂಗ್ರೆಸ್‌ ಪಕ್ಷದ ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಡೈಲಾಗ್‌ಗಳಿಂದಲೇ ಫೇಮಸ್‌ ಆದವರು. ಆದರೆ ಇದೀಗ ಸರ್ಕಾರದ ವಿಚಾರವಾಗಿ ಏಕವಚನದಲ್ಲಿ ಅವಾಜ್ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತಿ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು ಇದೇ ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್‌ ಕೂಡ ಇದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸರ್ಕಾರಿ ಕಾರ್ಯಕ್ರಮವು ರಾಜಕೀಯ ಕಿತ್ತಾಟದ ವೇದಿಕೆಯಾಗಿ ಬದಲಾಗಿದೆ. ಈ

ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಪ್ರದೀಪ್ ಈಶ್ವರ್ Read More »

‘ಮೇಡಂ’ ಅಂದ್ರೆ ಗೌರವ ಸೂಚಕ ಅಂದ್ಕೊಂಡ್ರಾ? ಇದರ‌ ನಿಜಾರ್ಥ ಗೊತ್ತಾದ್ರೆ ನೀವು ಹೌಹಾರೋದು ಪಕ್ಕಾ!! ಏನಿದು ‘ಮೇಡಂ’ ಕಹಾನಿ? ಇಲ್ಲಿದೆ ನೋಡಿ…

ಸಮಗ್ರ ನ್ಯೂಸ್: ದೇಶದಲ್ಲಿ ಆಂಗ್ಲರ ಕೊಡುಗೆಯನ್ನು ಪ್ರಸಾದ ಎಂದು ಸ್ವೀಕರಿಸಿ ಶತಮಾನ ಕಳೆದಿದೆ. ಇಂಗ್ಲಿಷ್​ ಮಾತನಾಡಿದರಷ್ಟೇ ಮಹಾನ್​ ಸಾಧಕರು, ಅವರು ಆಕಾಶದಲ್ಲಿ ತೇಲಾಡುವವರು ಎಂದೋ ಅಂದುಕೊಂಡು ಆಗಿಬಿಟ್ಟಿದೆ. ಕನ್ನಡ ನಾಡಿನಲ್ಲಿಯೇ ಹುಟ್ಟಿ, ಕನ್ನಡದ ಮಣ್ಣಿನಲ್ಲಿಯೇ ಬೆಳೆದು, ಇಲ್ಲಿಯ ಅನ್ನ ತಿನ್ನುತ್ತಾ, ಇಲ್ಲಿಯದ್ದೇ ಹಣವನ್ನು ಸಂಪಾದನೆ ಮಾಡುತ್ತಿದ್ದವರು ಸ್ಟೈಲ್​ ಆಗಿ ‘ಕನಡ್​ ಗೊತ್ತಿಲ್​’ ಎಂದೋ ‘ಸಲಪ ಸಲಪ ಕನಡ ಗೊತು’ ಎಂದು ಸ್ಟೈಲ್​ ಆಗಿ ಹೇಳಿಬಿಟ್ಟರೆ ಸಾಕು ಹೆಚ್ಚಿನವರಿಗೆ ಅದು ಹೆಮ್ಮೆಯ ವಿಷಯವಾಗಿದೆ. ಇನ್ನು ಕೆಲವು ಅಪ್ಪ-ಅಮ್ಮಂದಿರು ತಮ್ಮ

‘ಮೇಡಂ’ ಅಂದ್ರೆ ಗೌರವ ಸೂಚಕ ಅಂದ್ಕೊಂಡ್ರಾ? ಇದರ‌ ನಿಜಾರ್ಥ ಗೊತ್ತಾದ್ರೆ ನೀವು ಹೌಹಾರೋದು ಪಕ್ಕಾ!! ಏನಿದು ‘ಮೇಡಂ’ ಕಹಾನಿ? ಇಲ್ಲಿದೆ ನೋಡಿ… Read More »

ಭೀಕರ ರಸ್ತೆ ಅಪಘಾತ| ಶಾಸಕ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರ

ಸಮಗ್ರ ನ್ಯೂಸ್: ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಅಪಘಾತಕ್ಕೀಡಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.‌ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ತಾಲೂಕಿನ ಜವನಗೊಂಡನಹಳ್ಳಿ ಸಮೀಪದಲ್ಲಿ ಲಮಾಣಿ ಅವರಿಗೆ ಸ್ಕೂಟರ್ ಡಿಕ್ಕಿಯಾಗಿದ್ದು, ಗಂಭೀರಗವಾಗಿ ಗಾಯಗೊಂಡಿದ್ದಾರೆ. ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯ, ಮೂತ್ರ ವಿಸರ್ಜನೆಗಾಗಿ ಕಾರಿನಿಂದ ಲಮಾಣಿ ಅವರು ಇಳಿದಾಗ ಅದೇ ವೇಳೆ ಬಂದಂತಹ ಸ್ಕೂಟರ್ ಡಿಕ್ಕಿ ಹೊಡೆದಿದೆ. ಆಗ ಅವರ ತಲೆ, ಕೈ, ಕಾಲುಗಳಿಗೆ ಪೆಟ್ಟಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಲಮಾಣಿ ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು,

ಭೀಕರ ರಸ್ತೆ ಅಪಘಾತ| ಶಾಸಕ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರ Read More »

ಚಿಕ್ಕಮಗಳೂರು: ನಲ್ಲೂರಿಗೆ ಬಂದ ಒಂಟಿ ಸಲಗ|ಸ್ಥಳೀಯರಲ್ಲಿ ಮೂಡಿದೆ ಆತಂಕ

ಸಮಗ್ರ ನ್ಯೂಸ್: ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ನಲ್ಲೂರಿನಲ್ಲಿ ಒಂಟಿ ಸಲಗ ತಿರುಗಾಡಿದ ಘಟನೆ ಮಾ13 ರಂದು ರಾತ್ರಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು ನಗರದಿಂದ ಕೇವಲ 2 ಕಿ.ಮೀ. ದೂರದಲ್ಲಿಯೇ ಈ ಸಲಗ ಕಂಡು ಬಂದಿದ್ದು ಇದು ನಗರ ಪ್ರದೇಶಕ್ಕೆ ಪ್ರವೇಶಿಸಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ನಲ್ಲೂರಿನ ವಿವಿಧ ರಸ್ತೆಗಳಲ್ಲೂ ಆನೆ ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದು, ಮನೆಯಿಂದ ಹೊರಬರಲು ಹಿಂಜರಿದಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು

ಚಿಕ್ಕಮಗಳೂರು: ನಲ್ಲೂರಿಗೆ ಬಂದ ಒಂಟಿ ಸಲಗ|ಸ್ಥಳೀಯರಲ್ಲಿ ಮೂಡಿದೆ ಆತಂಕ Read More »

ಉದ್ಯೋಗ ಅಕಾಂಕ್ಷಿಗಳಿಗೆ ಶುಭಸುದ್ಧಿ |ತುಳುನಾಡಿನ ಮಣ್ಣಿನಲ್ಲಿ ಪ್ರತಿಷ್ಠಿತ ಸೂಪರ್ಮಾರ್ಕೆಟ್ ಕಂಪನಿಯ ನೇರಸಂದರ್ಶನ.

ಸಮಗ್ರ ನ್ಯೂಸ್: ಗಲ್ಫ್ ದೇಶದಲ್ಲಿ ಹೆಸರುವಾಸಿ ಆಗಿರುವ  _*ಒಮಾನ್*_ ಅನಿವಾಸಿ ಭಾರತೀಯರ ಹೆಮ್ಮೆಯ ದಿನಬಳಕೆ ವಸ್ತು ಖರೀದಿಯ ಹೆಸರಾಂತ ಸೂಪರ್ಮಾರ್ಕೆಟ್ ಸಂಸ್ಥೆಯಾದ ಮಾರ್ಕ್ ಅಂಡ್ ಸೇವ್ ಸೂಪರ್ಮಾರ್ಕೆಟ್ ಸಂಸ್ಥೆಯು ಇಧೇ  ಮೊದಲ ಬಾರಿಗೆ ತಮ್ಮ ಮೂಲ ಸಂಸ್ಥೆಯಲ್ಲಿನ ಉದ್ಯೋಗಾವಕಾಶಕ್ಕೆ ನೇರ ಸಂದರ್ಶನವನ್ನು ಮಂಗಳೂರಿನ ನೂರ್ ಇಂಟರ್ನ್ಯಾಷನಲ್ ಸಂಸ್ಥೆಯ ಕೇಂದ್ರ ಖಚೇರಿಯಲ್ಲಿ ಇಧೇ ಬರುವ (19/03/2025)ಬುಧವಾರದಂದು ನಡೆಸಲಿದೆ.  ಸೇಲ್ಸ್ ಹಾಗು ರೆಟೈಲ್  ಅಲ್ಲಿ ಅಥವಾ ಎಲೆಕ್ಟ್ರಾನಿಕ್ಸ್ ಗಾರ್ಮೆಂಟ್ಸ್ ಮೊಬೈಲ್ಸ್ ಹಣ್ಣಿ ಹಂಪಲು ತರಕಾರಿ ಅಥವಾ ಇನ್ನಿತರ ಮಾದ್ಯಮದಲ್ಲಿ ಅನುಭವವಿರುವ

ಉದ್ಯೋಗ ಅಕಾಂಕ್ಷಿಗಳಿಗೆ ಶುಭಸುದ್ಧಿ |ತುಳುನಾಡಿನ ಮಣ್ಣಿನಲ್ಲಿ ಪ್ರತಿಷ್ಠಿತ ಸೂಪರ್ಮಾರ್ಕೆಟ್ ಕಂಪನಿಯ ನೇರಸಂದರ್ಶನ. Read More »