ರಾಜ್ಯ

ಉಪರಾಷ್ಟ್ರಪತಿ ಸ್ಥಾನಕ್ಕೆ ಸಿ.ಪಿ ರಾಧಾಕೃಷ್ಣನ್ ಎನ್ ಡಿಎ ಅಭ್ಯರ್ಥಿ

ಸಮಗ್ರ ನ್ಯೂಸ್: ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಅಭ್ಯರ್ಥಿ ಆಯ್ಕೆ ಕುರಿತು ಸಭೆ ಸೇರಿದ್ದ ಬಿಜೆಪಿ ಸುದೀರ್ಘ ಚರ್ಚೆ ಬಳಿಕ ಅಭ್ಯರ್ಥಿ ಘೋಷಿಸಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಹೆಸರು ಘೋಷಿಸಲಾಗಿದೆ. ತಮಿಳುನಾಡು ಮೂಲದ ಸಿಪಿ ರಾಧಕೃಷ್ಣನ್ ಹೆಸರು ಘೋಷಣೆಗೆ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗಮನಸೆಳೆದಿದ್ದ ಸಿಪಿ ರಾಧಾಕೃಷ್ಣನ್ ಬಳಿಕ ಕೊಯಂಬತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜಕೀಯ ಜೀವನದ ನಿಸ್ವಾರ್ಥ

ಉಪರಾಷ್ಟ್ರಪತಿ ಸ್ಥಾನಕ್ಕೆ ಸಿ.ಪಿ ರಾಧಾಕೃಷ್ಣನ್ ಎನ್ ಡಿಎ ಅಭ್ಯರ್ಥಿ Read More »

ಸಿಎಂ ಸಿದ್ದರಾಮಯ್ಯ ಮೇಲೆ‌ ಕೊಲೆ ಆರೋಪ| ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಸೂಚನೆ

ಸಮಗ್ರ ನ್ಯೂಸ್: ಸೌಜನ್ಯ ಕೊಲೆ ಪ್ರಕರಣಕ್ಕೆ ಧ್ವನಿಯಾಗಿರುವ ಮಹೇಶ್‌ ಶೆಟ್ಟಿ ತಿಮರೋಡಿ ಅವರು ಸಿಎಂ ಸಿದ್ದರಾಮಯ್ಯ 24 ಕೊಲೆಗಳನ್ನು ಮಾಡಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದು, ಇದೀಗ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ತಿಮರೋಡಿಯನ್ನು ಬಂಧಿಸುವಂತೆ ಸೂಚನೆ ನೀಡಿದೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಮರೋಡಿಯವರ ವಿರುದ್ಧ ಒಂದೇ ದಿನದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದು, ಕೂಡಲೇ ಮಹೇಶ್ ಶೆಟ್ಟಿ ತಿಮ್ಮರೋಡಿಯ ಮೇಲೆ ಎಫ್‌ಐಆರ್ ದಾಖಲಿಸುವಂತೆ ಸದನದಲ್ಲಿಯೇ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ

ಸಿಎಂ ಸಿದ್ದರಾಮಯ್ಯ ಮೇಲೆ‌ ಕೊಲೆ ಆರೋಪ| ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಲು ಸೂಚನೆ Read More »

ಭಾರೀ ಮಳೆ ಹಿನ್ನಲೆ| ಹಲವು ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ಇಂದು ರಜೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕೆಲ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಇಂದು ಕೊಡಗು ಜಿಲ್ಲೆಯಾಧ್ಯಂತ ಆರೆಂಜ್ ಅಲರ್ಟ್ ನೀಡಲಾಗಿದೆ. ಜೋರು ಗಾಳಿ ಮಳೆಯ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಡಿಸಿ ವೆಂಕಟರಾಜಾ ಆದೇಶಿಸಿದ್ದಾರೆ. ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು

ಭಾರೀ ಮಳೆ ಹಿನ್ನಲೆ| ಹಲವು ಜಿಲ್ಲೆಗಳ ಶಾಲೆ ಕಾಲೇಜುಗಳಿಗೆ ಇಂದು ರಜೆ Read More »

ದ.ಕ‌‌ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನಲೆ| ಆ.18ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆ.18ರಂದು ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದ.ಕ‌‌ ಜಿಲ್ಲೆಯಾದ್ಯಂತ ಭಾರೀ ಮಳೆ ಹಿನ್ನಲೆ| ಆ.18ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಣೆ Read More »

ಭಾರೀ ಮಳೆ‌ ಹಿನ್ನಲೆ| ಚಿಕ್ಕಮಗಳೂರು ಜಿಲ್ಲೆಯ ‌ಈ ತಾಲೂಕಿನ ಶಾಲೆಗಳಿಗೆ ಆ.18ರಂದು ರಜೆ

ಸಮಗ್ರ ನ್ಯೂಸ್: ಕಾಫಿನಾಡು ಮಲೆನಾಡ ಭಾಗದಲ್ಲಿ ಭಾರೀ ಗಾಳಿ-ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಶಾಲೆಗಳಿಗೆ ಸೋಮವಾರ(ಆ.18) ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ಆದೇಶ ಹೊರಡಿಸಿದ್ದಾರೆ. ಕೊಪ್ಪ, ಶೃಂಗೇರಿ, ಮೂಡಿಗೆರೆ, ಎನ್‌ಆರ್ ಪುರ, ಕಳಸ ತಾಲೂಕಿನಲ್ಲಿ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು, ವಸ್ತಾರೆ, ಖಾಂಡ್ಯ, ಆವತಿ, ಜಾಗರ ಹೋಬಳಿಗೆ ನಾಳೆ ಒಂದು ದಿನ ರಜೆ ಘೋಷಿಸಲಾಗಿದೆ. ಇನ್ನು ಪಶ್ಚಿಮ ಘಟ್ಟ ಹಾಗೂ ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು,

ಭಾರೀ ಮಳೆ‌ ಹಿನ್ನಲೆ| ಚಿಕ್ಕಮಗಳೂರು ಜಿಲ್ಲೆಯ ‌ಈ ತಾಲೂಕಿನ ಶಾಲೆಗಳಿಗೆ ಆ.18ರಂದು ರಜೆ Read More »

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಭಾರೀ ಮಳೆ ಮುನ್ಸೂಚನೆ| ಕರಾವಳಿ‌ ಜಿಲ್ಲೆಗಳಿಗೆ ರೆಡ್ ಅಲರ್ಟ್

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆಗೆ ಆರೆಂಜ್ ಅಲರ್ಟ್ ಮತ್ತು ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ ಮತ್ತು ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ| ಭಾರೀ ಮಳೆ ಮುನ್ಸೂಚನೆ| ಕರಾವಳಿ‌ ಜಿಲ್ಲೆಗಳಿಗೆ ರೆಡ್ ಅಲರ್ಟ್ Read More »

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ

ಸಮಗ್ರ ನ್ಯೂಸ್: ಪ್ಲಾಸ್ಟಿಕ್ ನಿಷೇಧದ ಕುರಿತು ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯಾಪ್ತಿಯ ಅಂಗಡಿ ಕಟ್ಟಡಗಳ ಬಾಡಿಗೆದಾರರು, ವ್ಯಾಪಾರಸ್ಥರಿಗೆ ಮಾಹಿತಿ ನೀಡುವ ಸಭೆ ನಡೆಯಿತು. ಬೀಡಿ, ಸಿಗರೇಟ್, ಗುಟ್ಕಾ ಮಾರಾಟವನ್ನು ನಿಷೇಧಿಸಿರುವ ಬಗ್ಗೆ ತಿಳಿಸಲಾಯಿತು. ಎಲ್ಲ ಅಂಗಡಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ, ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಇರುವ ಪ್ಲಾಸ್ಟಿಕ್ ಮುಗಿಯುವವರೆಗೆ ಮಾರಾಟಕ್ಕೆ ಅಭ್ಯಂತರವಿಲ್ಲ. ಆದರೆ ಇಲ್ಲಿ ಶಾಶ್ವತವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವಂತಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ಕುಕ್ಕೆ ಸುಬ್ರಹ್ಮಣ್ಯ: ದೇವಸ್ಥಾನ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್, ಗುಟ್ಕಾ, ಸಿಗರೇಟ್ ಮಾರಾಟ ಸಂಪೂರ್ಣ ನಿಷೇಧ Read More »

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈ ವಾರ ಸೂರ್ಯನು ಸ್ವಸ್ಥಾನಕ್ಕೆ ಬರಲಿದ್ದಾನೆ. ಶುಕ್ರನೂ ಚಂದ್ರನ ರಾಶಿಯನ್ನು ಪ್ರವೇಶಿಸಿದ್ದಾನೆ. ದೇವಿಯ ಉಪಾಸಕರಿಗೆ ಶುಭಕಾಲ. ವಾರಾಂತ್ಯದಲ್ಲಿ ಪ್ರಮಾಣಗಳನ್ನು ಇಟ್ಟುಕೊಳ್ಳದೇ, ಯಾವುದೇ ಮಹತ್ಕಾರ್ಯವನ್ನು ಆರಂಭಿಸದೇ ದೈವಬಲವನ್ನು ತಂದುಕೊಳ್ಳಿ. ಆ.17ರಿಂದ 24ರವರೆಗಿನ ನಿಮ್ಮ ರಾಶಿಗಳ ಫಲಾಫಲ ಈ ಕೆಳಗಿನಂತಿವೆ ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಯಾರು ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಗಳಿಸಿದ ಹಣವೂ ಗೊತ್ತಾಗದಂತೆ ಖಾಲಿಯಾಗಬಹುದು. ಯಾವ ಭಾವವೂ ಇಲ್ಲದೇ ಏನನ್ನೋ ಯೋಚಿಸುತ್ತಲೇ ಇರುವಿರಿ.

ದ್ವಾದಶ ರಾಶಿಗಳ ವಾರಭವಿಷ್ಯ Read More »

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ

ಸಮಗ್ರ ನ್ಯೂಸ್: ಸಮಗ್ರ ಮೀಡಿಯಾ ನೆಟ್ವರ್ಕ್ ಹಾಗೂ ಸಮಗ್ರ ಸಮಾಚಾರ.ಕಾಂ ಅರ್ಪಿಸುವ ಮುದ್ದು ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಇಂದು(ಆ.17) ಕೊನೆ ದಿನವಾಗಿದೆ. ನಿಮ್ಮ ಮೂರು ವರ್ಷದೊಳಗಿನ ಕಂದಮ್ಮಗಳ ಕೃಷ್ಣ ವೇಷದ ಫೋಟೋ ಹಾಗೂ ಜನನ ಪ್ರಮಾಣ ಪತ್ರ, ಸಂಪರ್ಕ ವಿಳಾಸವನ್ನು 91081 31193 ನಂಬರ್ ಗೆ ವಾಟ್ಸಾಪ್ ಮಾಡುವುದು. ಸ್ಪರ್ಧೆಗೆ ಪ್ರವೇಶ ಶುಲ್ಕ ₹100 ಆಗಿದ್ದು ಯುಪಿಐ ಮೂಲಕ ಪಾವತಿಸಬಹುದು. ಸ್ಪರ್ಧೆಯ ಫಲಿತಾಂಶ ಆ. 17ರಂದು ಪ್ರಕಟವಾಗಲಿದ್ದು, ಆಸಕ್ತರು ಈ ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸುವರೇ

ಸಮಗ್ರ ಸಮಾಚಾರ ಮುದ್ದು ಕೃಷ್ಣ ಫೋಟೋ ಸ್ಪರ್ಧೆ| ಫೋಟೋ ಕಳುಹಿಸಲು ಇಂದು(ಆ17) ಕೊನೆ ದಿನ Read More »

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ

ಸಮಗ್ರ ನ್ಯೂಸ್: ಭಾರಿ ಮಳೆಯಿಂದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ರೈಲು ನಿಲ್ದಾಣದ ನಡುವಿನ ಘಾಟ್ ಪ್ರದೇಶದ ರೈಲು ಮಾರ್ಗದ ಮೂರು ಕಡೆ ಶನಿವಾರ ಭೂ ಕುಸಿತ ಉಂಟಾದ ಪರಿಣಾಮ ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಸಂಜೆ 4.40ರ ವೇಳೆಗೆ ಸಿರಿಬಾಗಿಲು-ಎಡಕುಮೇರಿ, ಎಡಕುಮೇರಿ-ಕಡಗರವಳ್ಳಿ ಮತ್ತು ಕಡಗರವಳ್ಳಿ-ಡೋಣಿಗಲ್ ನಡುವಿನ ಕೆಲವೆಡೆ ಮಣ್ಣು ಮತ್ತು ಬಂಡೆಗಳು ಹಳಿಗಳ ಮೇಲೆ ಬಿದ್ದಿದೆ. ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07378) ಶನಿವಾರ ಪ್ರಯಾಣವನ್ನು ತೋಕೂರು, ಕಾರವಾರ, ಮಡಗಾಂವ್, ಲೋಂಡಾ

ಭಾರೀ ಮಳೆಯಿಂದ ಘಾಟ್ ನಲ್ಲಿ ಭೂಕುಸಿತ| ಸುಬ್ರಹ್ಮಣ್ಯ ರೋಡ್ – ಹಾಸನ ಮಾರ್ಗದಲ್ಲಿ ರೈಲು ಸಂಚಾರ ಬಂದ್| ಹಲವು ರೈಲುಗಳ ಮಾರ್ಗ ಬದಲಾವಣೆ Read More »