ರಾಜ್ಯ

ಕಡಬ ಪಟ್ಟಣ ಪಂಚಾಯತ್ ಚುನಾವಣೆ|‌ 8 ಸ್ಥಾನ ಗೆದ್ದು ಬೀಗಿದ ಕಾಂಗ್ರೆಸ್; 5 ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ

ಸಮಗ್ರ ನ್ಯೂಸ್: ತೀವ್ರ ಕುತೂಹಲ ಕೆರಳಿಸಿದ್ದ ಕಡಬ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಜಯಭೇರಿ ಬಾರಿಸಿದೆ. ಒಟ್ಟು 13 ವಾರ್ಡ್ಗಳ ಪೈಕಿ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದೆ. ಆಡಳಿತಾರೂಢ ಬಿಜೆಪಿಯು 5 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಶುಕ್ರವಾರ ಇಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ನಡೆದ ಎಣಿಕೆ ಪ್ರಕ್ರಿಯೆಯು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಆರಂಭದಿಂದಲೂ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣಿ ಕಂಡುಬಂದರೂ, ಅಂತಿಮವಾಗಿ ಕಾಂಗ್ರೆಸ್ ಮೇಲುಗೈ

ಕಡಬ ಪಟ್ಟಣ ಪಂಚಾಯತ್ ಚುನಾವಣೆ|‌ 8 ಸ್ಥಾನ ಗೆದ್ದು ಬೀಗಿದ ಕಾಂಗ್ರೆಸ್; 5 ಸ್ಥಾನಕ್ಕೆ ತೃಪ್ತಿ ಪಟ್ಟ ಬಿಜೆಪಿ Read More »

ಪ್ರಧಾನಿ, ಸಿಎಂ, ಸಚಿವರ ಬಂಧನವಾದ್ರೆ ಹುದ್ದೆಯಿಂದ ವಜಾ| ಐತಿಹಾಸಿಕ ಮಸೂದೆ ಮಂಡನೆಗೆ ಕೇಂದ್ರ ನಿರ್ಧಾರ

ಸಮಗ್ರ ನ್ಯೂಸ್: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಪ್ರಧಾನಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಪದಚ್ಯುತಗೊಳಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಆಡಳಿತದಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಮಹತ್ವದ ಹೆಜ್ಜೆಯಾಗಿ, ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಬಂಧಿಸಲ್ಪಟ್ಟ ಅಥವಾ ಬಂಧನಕ್ಕೊಳಗಾದ ಯಾವುದೇ ಪ್ರಧಾನಿ(ಪಿಎಂ), ಕೇಂದ್ರ ಸಚಿವರು ಅಥವಾ ರಾಜ್ಯ ಸಚಿವರನ್ನು(ಎಂಒಎಸ್) ಪದಚ್ಯುತಗೊಳಿಸುವ ಗುರಿಯನ್ನು ಹೊಂದಿರುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುವ ಯೋಜನೆಯನ್ನು ಭಾರತ ಸರ್ಕಾರ ಪ್ರಕಟಿಸಿದೆ. ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲಾಗುವ ನಿರೀಕ್ಷೆಯಿರುವ ಈ ಶಾಸನವು, ಗಂಭೀರ ಅಪರಾಧಗಳಿಗಾಗಿ

ಪ್ರಧಾನಿ, ಸಿಎಂ, ಸಚಿವರ ಬಂಧನವಾದ್ರೆ ಹುದ್ದೆಯಿಂದ ವಜಾ| ಐತಿಹಾಸಿಕ ಮಸೂದೆ ಮಂಡನೆಗೆ ಕೇಂದ್ರ ನಿರ್ಧಾರ Read More »

ಮಂಗಳೂರಿನಲ್ಲಿ ಸಂಜೆ ಬಳಿಕ ವಹಿವಾಟು ಇಲ್ಲದೆ ನಗರ ಸತ್ತುಹೋಗಿದೆ – ಡಿಸಿಎಂ

ಸಮಗ್ರ ನ್ಯೂಸ್: ಮಂಗಳೂರು ದೊಡ್ಡ ನಗರವಾಗಿ ಗುರುತಿಸಿಕೊಂಡಿದ್ದರೂ ಸಂಜೆ ಏಳು ಗಂಟೆ ಬಳಿಕ ಯಾವುದೇ ವ್ಯಾಪಾರ-ವಾಹಿವಾಟು ಚಟುವಟಿಕೆಗಳು ಇಲ್ಲದೆ ಸತ್ತು ಹೋಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಂಗಳವಾರ ಶಾಸನ ರಚನಾ ಕಲಾಪದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಅವರು ಮಂಡಿಸಿದ ಕೆರೆಗಳ ಸಂರಕ್ಷಣೆ ಹಿನ್ನೆಲೆ 2025ನೆ ಸಾಲಿನ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ವಿಧೇಯಕದ ಚರ್ಚೆಯಲ್ಲಿ ಉಪಮುಖ್ಯಮಂತ್ರಿ ಮಾತನಾಡಿದರು. ಮಂಗಳೂರಿನಲ್ಲಿ ಅತಿ ಹೆಚ್ಚು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಿವೆ. ಆದರೆ ಒಂದೇ ಒಂದು

ಮಂಗಳೂರಿನಲ್ಲಿ ಸಂಜೆ ಬಳಿಕ ವಹಿವಾಟು ಇಲ್ಲದೆ ನಗರ ಸತ್ತುಹೋಗಿದೆ – ಡಿಸಿಎಂ Read More »

ಆ.19ರಿಂದ ಭಾರೀ ಚಳಿ ಕಾಡಲಿದೆಯಾ? ನಿಮ್ಮ ಮೊಬೈಲ್ ಗೆ ಬಂದ ವಾಟ್ಸ್ಯಾಪ್ ಸಂದೇಶದ ಅಸಲಿಯತ್ತೇನು?

ಸಮಗ್ರ ನ್ಯೂಸ್: ಆ. 18ರಂದು ಒಂದು ಮೆಸೇಜ್ ನಿಮ್ಮ ಮೊಬೈಲಿನ ವಾಟ್ಸ್ ಆಯಪ್ ಗೆ ಬಂದಿರಬಹುದು. ಅದರಲ್ಲಿ, ವಾತಾವರಣದಲ್ಲಿ ಶೀತದ ಪ್ರಮಾಣ ಹೆಚ್ಚಾಗಲಿದೆ. ಆ. 22ರ ತನಕ ಸಿಕ್ಕಾಪಟ್ಟೆ ಚಳಿ ಇರುತ್ತೆ. ಹಾಗಾಗಿ, ನೀವೆಲ್ಲರೂ ಆರೋಗ್ಯಕರ ಆಹಾರ ಸೇವಿಸಿ ಹಾಗೂ ಬೆಚ್ಚಗಿನ ವಾತಾವರಣದಲ್ಲಿ ಇರಿ ಎಂದು ತಿಳಿಸಲಾಗಿದೆ. ನಾಳೆಯಿಂದ ಆಗಸ್ಟ್ 22 ರವರೆಗೆ, ವಾತಾವರಣದಲ್ಲಿ ಕಳೆದ ವರ್ಷಕ್ಕಿಂತ ಹವಾಮಾನವು ತೀರಾ ಕಡಿಮೆಯಾಗಿರುತ್ತದೆ. ಇದನ್ನು ಆಲ್ಫೆಲಿಯನ್ ಸನ್ನಿವೇಶ ಎಂದು ಕರೆಯಲಾಗುತ್ತದೆ. ಇದು ನಾಳೆ ಬೆಳಿಗ್ಗೆ 5ರಿಂದ 7ರ ನಡುವೆ

ಆ.19ರಿಂದ ಭಾರೀ ಚಳಿ ಕಾಡಲಿದೆಯಾ? ನಿಮ್ಮ ಮೊಬೈಲ್ ಗೆ ಬಂದ ವಾಟ್ಸ್ಯಾಪ್ ಸಂದೇಶದ ಅಸಲಿಯತ್ತೇನು? Read More »

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ ಪ್ರಕಟ| ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಡೀಟೈಲ್ಸ್

ಸಮಗ್ರ ನ್ಯೂಸ್: ‌ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ ಪುರುಷರ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ತಂಡದ ನಾಯಕ ಶುಭ್ ಮನ್ ಗಿಲ್ ಕುರಿತು ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ತಂಡದ ಆಯ್ಕೆ ಸಭೆಯಲ್ಲಿ ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಟಿ20ಐ ನಾಯಕ ಸೂರ್ಯಕುಮಾರ್ ಯಾದವ್, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಉಪಸ್ಥಿತರಿದ್ದರು. ಬಿಸಿಸಿಐ ಆಯ್ಕೆದಾರರೊಂದಿಗೆ ನಡೆಸಿದ ಸಭೆಯ ನಂತರ ತಂಡವನ್ನು ಘೋಷಿಸಲಾಗಿದೆ. ಶುಭಮನ್ ಗಿಲ್ ಅವರನ್ನು ತಂಡದ ಉಪನಾಯಕರನ್ನಾಗಿ ಹೆಸರಿಸಲಾಗಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ ಪ್ರಕಟ| ಯಾರಿಗೆಲ್ಲಾ ಸ್ಥಾನ? ಇಲ್ಲಿದೆ ಡೀಟೈಲ್ಸ್ Read More »

ಧರ್ಮಸ್ಥಳ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ| ‘ಇದೊಂದು ವ್ಯವಸ್ಥಿತ ಷಡ್ಯಂತ್ರ’ ಎಂದ ಧರ್ಮಾಧಿಕಾರಿ

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಮತ್ತು ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ತಮ್ಮ ಮೊದಲ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. PTI ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಈ ಆರೋಪಗಳನ್ನು ‘ಆಧಾರರಹಿತ’ ಮತ್ತು ‘ವ್ಯವಸ್ಥಿತ ಷಡ್ಯಂತ್ರ’ ಎಂದು ಕರೆದಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಅವರು, ‘ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ. ಈ ರೀತಿಯ ಆರೋಪಗಳಿಂದ ನಮ್ಮ ಮನಸ್ಸಿಗೆ ತೀವ್ರ ನೋವಾಗಿದೆ.

ಧರ್ಮಸ್ಥಳ ಪ್ರಕರಣದಲ್ಲಿ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ| ‘ಇದೊಂದು ವ್ಯವಸ್ಥಿತ ಷಡ್ಯಂತ್ರ’ ಎಂದ ಧರ್ಮಾಧಿಕಾರಿ Read More »

ಧರ್ಮಸ್ಥಳ: ಆನೆ ಮಾವುತ ಹಾಗೂ ಸಹೋದರಿಯ ಜೋಡಿಕೊಲೆ ಪ್ರಕರಣ| ಕುಟುಂಬಸ್ಥರಿಂದ ಮತ್ತೆ ನ್ಯಾಯಕ್ಕಾಗಿ ಎಸ್ಐಟಿ ಗೆ ದೂರು

ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ 2012ರಲ್ಲಿ ನಡೆದಿದ್ದ ಆನೆಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಅವರ ಭೀಕರ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಬಂಧಿದೆ. ಈ ಪ್ರಕರಣದ ಬಗ್ಗೆ ಸ್ಪಷ್ಟತೆ ಸಿಗದೇ, ಆರೋಪಿಗಳು ಇಂದಿಗೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಮೃತರ ಕುಟುಂಬಸ್ಥರು ಈಗ ಮತ್ತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬೂರ್ಜೆ ಪ್ರದೇಶದಲ್ಲಿ ಈ ಅಮಾನುಷ ಎರಡು ಹತ್ಯೆ ನಡೆದಿತ್ತು. ಆ ಸಂದರ್ಭದಲ್ಲಿ, ನಾರಾಯಣ ಹಾಗೂ ಅವರ ಸಹೋದರಿ ಯಮುನಾ ಅವರನ್ನು ದುಷ್ಕರ್ಮಿಗಳು

ಧರ್ಮಸ್ಥಳ: ಆನೆ ಮಾವುತ ಹಾಗೂ ಸಹೋದರಿಯ ಜೋಡಿಕೊಲೆ ಪ್ರಕರಣ| ಕುಟುಂಬಸ್ಥರಿಂದ ಮತ್ತೆ ನ್ಯಾಯಕ್ಕಾಗಿ ಎಸ್ಐಟಿ ಗೆ ದೂರು Read More »

ನಟಿ ರಮ್ಯಾಗೆ ಅಶ್ಲೀಲ ಸಂದೇಶ| ಉಡುಪಿ ‌ಮೂಲದ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನಟಿ ರಮ್ಯಾ ದರ್ಶನ ಕುರಿತಂತೆ ಹಾಕಿದ ಪೋಸ್ಟ್ ಗೆ ಅಶ್ಲೀಲವಾಗಿ ಕಮೆಂಟ್ ಮಾಡಿದ ಉಡುಪಿ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬಂಧಿತರನ್ನು ಉಡುಪಿ ಮೂಲದವರಾದ ಸುಜನ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಸಿಸಿಬಿ ಪೊಲೀಸರು ಮಂಜುನಾಥ, ಭುವನ್ ಗೌಡ, ಪವನ್, ಓಬಣ್ಣ ಮತ್ತು ಗಂಗಾಧರ್ ಸೇರಿ ಒಟ್ಟು 9 ಯುವಕರನ್ನು ಬಂಧಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರೇಣುಕಾಸ್ವಾಮಿ ಕುಟುಂಬದ

ನಟಿ ರಮ್ಯಾಗೆ ಅಶ್ಲೀಲ ಸಂದೇಶ| ಉಡುಪಿ ‌ಮೂಲದ ಇಬ್ಬರು ಅರೆಸ್ಟ್ Read More »

ಧರ್ಮಸ್ಥಳ ಪ್ರಕರಣ| ತಮಿಳುನಾಡಿನಲ್ಲಿ ಗುಂಪೊಂದು ಮುಸುಕುಧಾರಿಯನ್ನು ಸಂಪರ್ಕಿಸಿತ್ತೇ? ಎಸ್ಐಟಿ ಅಧಿಕಾರಿಗಳ ಸ್ಪಷ್ಟನೆ ಏನು?

ಸಮಗ್ರ ನ್ಯೂಸ್: ತಮಿಳುನಾಡಿನಲ್ಲಿದ್ದ ವೇಳೆ ಗುಂಪೊಂದು ತನ್ನನ್ನು ಸಂಪರ್ಕಿಸಿತ್ತು ಎಂದು ಸಾಕ್ಷಿ-ದೂರುದಾರ ಹೇಳಿಲ್ಲ ಎಂದು ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ‘ಸುವರ್ಣ ನ್ಯೂಸ್’ ನ ಅಂಗಸಂಸ್ಥೆ ‘ಕನ್ನಡಪ್ರಭ’ ವರದಿ ಮಾಡಿದೆ 2014ರ ನಂತರ ತಮಿಳುನಾಡಿನಲ್ಲಿದ್ದೆ. 2023ರಲ್ಲಿ ಒಂದು ಗುಂಪು ನನ್ನನ್ನು ಸಂಪರ್ಕಿಸಿತ್ತು. ಧರ್ಮಸ್ಥಳದಲ್ಲಿ ಶವ ಹೂತಿರುವ ಬಗ್ಗೆ ನನ್ನನ್ನು ಕೇಳಿತ್ತು. ನಾನು ಕಾನೂನು ಪ್ರಕಾರವೇ ಶವಗಳನ್ನು ಹೂತಿರುವುದಾಗಿ ಹೇಳಿದ್ದೇ. ಆದರೆ ಈ ಗುಂಪು ತಪ್ಪು ಹೇಳಿಕೆ ನೀಡುವಂತೆ ಒತ್ತಡ

ಧರ್ಮಸ್ಥಳ ಪ್ರಕರಣ| ತಮಿಳುನಾಡಿನಲ್ಲಿ ಗುಂಪೊಂದು ಮುಸುಕುಧಾರಿಯನ್ನು ಸಂಪರ್ಕಿಸಿತ್ತೇ? ಎಸ್ಐಟಿ ಅಧಿಕಾರಿಗಳ ಸ್ಪಷ್ಟನೆ ಏನು? Read More »

ರಾಜ್ಯಾದ್ಯಂತ ಭಾರೀ ವರ್ಷಧಾರೆ| ಹಲವು ಜಿಲ್ಲೆಗಳ ಶಾಲೆಗಳಿಗೆ ಇಂದೂ(ಆ.19) ರಜೆ ಘೋಷಣೆ| ಇನ್ನೆರಡು ದಿನವೂ ಮುಂದುವರಿಯಲಿದೆ ಮಳೆ

ಸಮಗ್ರ ನ್ಯೂಸ್: ಕೊಡಗು, ಮಲೆನಾಡು, ಉತ್ತರ ಕರ್ನಾಟಕ, ಕರಾವಳಿ ಸೇರಿ ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ತುಂಗಾ, ತುಂಗಭದ್ರಾ, ಶರಾವತಿ, ನೇತ್ರಾವತಿ, ಕೃಷ್ಣಾ ಸೇರಿ ಪ್ರಮುಖ ನದಿಗಳು ತುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಮಳೆಯ ಕಾರಣದಿಂದ ಸುಮಾರು 5 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದ್ದು, 150 ಮನೆ ಧರೆಗೆ ಉರುಳಿವೆ. ಹಂಪಿಯ ಸ್ಮಾರಕಗಳು, ಶೃಂಗೇರಿಯ ಕಪ್ಪೆ ಶಂಕರ ದೇಗುಲ, ಶ್ರೀರಂಗಪಟ್ಟಣದ ರಂಗನತಿಟ್ಟು ಪಕ್ಷಿಧಾಮ ಸೇರಿ ಹಲವು ಪ್ರವಾಸಿ ತಾಣಗಳು ಜಲಾವೃತಗೊಂಡಿವೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ

ರಾಜ್ಯಾದ್ಯಂತ ಭಾರೀ ವರ್ಷಧಾರೆ| ಹಲವು ಜಿಲ್ಲೆಗಳ ಶಾಲೆಗಳಿಗೆ ಇಂದೂ(ಆ.19) ರಜೆ ಘೋಷಣೆ| ಇನ್ನೆರಡು ದಿನವೂ ಮುಂದುವರಿಯಲಿದೆ ಮಳೆ Read More »