ಗೋಮಾಂಸ ತಿನ್ನದೇ ಬಕ್ರೀದ್ ಆಚರಿಸೋಣ; ಹಿಂದೂಗಳ ಭಾವನೆಗೆ ಬೆಲೆ ಕೊಡೋಣ – ಗೌರವಯುತ ಮಾತನ್ನಾಡಿದ ಸಂಸದ ಬದ್ರುದ್ದಿನ್ ಅಜ್ಮಲ್
ಸಮಗ್ರ ನ್ಯೂಸ್: ಲೋಕಸಭಾ ಸಂಸದ ಮತ್ತು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಹಾಗೂ ಸಂಸದ ಮೌಲಾನಾ ಬದ್ರುದ್ದೀನ್ ಅಜ್ಮಲ್, ಈದ್-ಉಲ್-ಅಧಾ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳನ್ನು ಗೌರವಿಸಿ ಗೋವುಗಳನ್ನು ಬಲಿ ನೀಡದಂತೆ ಅಸ್ಸಾಂನ ಮುಸ್ಲಿಮರಿಗೆ ತನ್ನ ಮನವಿಯನ್ನು ಮಾಡಿದ್ದಾರೆ. ಆರ್‌ಎಸ್ ಎಸ್ ನ ಕೆಲವರು ಹಿಂದೂ ದೇಶ ಮಾಡಲು ಪ್ರಯತ್ನಿಸುವ ಮೂಲಕ ಹಿಂದೂಸ್ತಾನವನ್ನು ಕೊನೆಗೊಳಿಸಲು ಬಯಸುತ್ತಿದ್ದಾರೆ. ಅವರ ಕನಸಿನಲ್ಲಿಯೂ ಹಿಂದೂ ದೇಶ ಆಗುವುದಿಲ್ಲ. ಅವರು ಈ ದೇಶದಲ್ಲಿ ಮುಸ್ಲಿಮರು ಮತ್ತು ಹಿಂದೂಗಳ ನಡುವಿನ ಏಕತೆಯನ್ನು ಒಡೆಯಲು










