ಅಮೂಲ್ ಮತ್ತು ನಂದಿನಿ ಸಂಸ್ಥೆಗಳ ಮಿಲನಕ್ಕೆ ಆಕ್ರೋಶ| ‘ಸೇವ್ ನಂದಿನಿ’ ಅಭಿಯಾನ ಶುರು ಮಾಡಿದ ಕನ್ನಡಿಗರು| ಅಣ್ಣಾವ್ರ ಜಾಹೀರಾತು ವಿಡಿಯೋ ವೈರಲ್
ಸಮಗ್ರ ನ್ಯೂಸ್: ಅಮೂಲ್ ಹಾಗೂ ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡಬಹುದು ಎಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಹೇಳಿದ್ದಾರೆ. ಆದರೆ ಇದಕ್ಕೆ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಕನ್ನಡಿಗರು ‘ಸೇವ್ ನಂದಿನಿ’ ಎನ್ನುವ ಅಭಿಯಾನ ಶುರು ಮಾಡಿದ್ದಾರೆ. ಇಂತಹ ಹೊತ್ತಲ್ಲೇ ಅಣ್ಣಾವ್ರು ಕಾಣಿಸಿಕೊಂಡಿದ್ದ ನಂದಿನಿ ಹಾಲಿನ ಜಾಹೀರಾತು ವಿಡಿಯೋ ವೈರಲ್ ಆಗಿದೆ. ಯಾವುದೇ ಉತ್ಪನ್ನ ತಯಾರಕರು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಜಾಹೀರಾತುಗಳ ಮೊರೆ ಹೋಗುತ್ತಾರೆ. ಗ್ರಾಹಕರನ್ನು ಸೆಳೆಯಲು










